Goslink

Goslink is providing you latest news, articles, reviews.

Thursday, 4 February 2021

ಭಾರತ

  Govt Orders Link       Thursday, 4 February 2021

 ಅಧ್ಯಾಯ - 1

ಭಾರತಕ್ಕೆ ಯುರೋಪಿಯನ್ನರ ಆಗಮನ
ಮುಖ್ಯಾಂಶಗಳು:
*ಪ್ರಾಚೀನ ಕಾಲದಿಂದಲೂ ಭಾರತದ ಸಾಂಬಾರು ಪದಾರ್ಥಗಳಿಗೆ ಯೂರೋಪಿನ ಜನರಿಂದ ಅಪಾರ ಬೇಡಿಕೆಯಿದ್ದು, ಗ್ರೀಕ್ ಮತ್ತು ರೋಮನ್ ಸಾಮ್ರಾಜ್ಯಗಳಿಗೆ ರಪ್ತು ಮಾಡಲಾಗುತಿತ್ತು
*ಮಧ್ಯ ಕಾಲದಲ್ಲಿ ಯೂರೋಪ್ ಮತ್ತು ಏಷ್ಯಾದ ನಡುವಿನ ವ್ಯಾಪರಗಳು ಪರ್ಷಿಯನ್ ಕೊಲ್ಲಿ, ಕೆಂಪುಸಮುದ್ರ ಮತ್ತು ಭಾರತದ ಫ್ರಾಂಟಿಯರ್ ಕಣಿವೆಗಳ ಮೂಲಕ ನಡೆಯುತಿತ್ತು.
*ಇಟಲಿಯು ತನ್ನ ಸಂಪದ್ಭರಿತ ನಗರಗಳಿಗೆ ಭಾರತದ ಸಾಂಬಾರು ಪದಾರ್ಥಗಳ ವಿತರಣೆ ಮಾಡುವ ಕೇಂದ್ರವಾಯಿತು.
*ಇಟಲಿಯ ಏಕಸ್ವಾಮ್ಯವನ್ನು ಮುರಿಯಲು ಪಶ್ಚಿಮ ಯೂರೋಪಿನ ದೇಶಗಳು ಅಟ್ಲಾಂಟಿಕ್ ಸಾಗರದ ಮೂಲಕ ಒಂದು ಪಯರ್ಾಯ ವ್ಯಾಪಾರ ಮಾಗವನ್ನು ಹುಡುಕುವ ಪ್ರಯತ್ನದಲ್ಲಿದ್ದವು.
*ಐರೋಪ್ಯದ ಇತರ ದೇಶಗಳು ಹೊಸ ಭೂ ಪ್ರದೇಶಗಳನ್ನು  ಹುಡುಕುವ  ನಾವಿಕರ ಸಾಹಸಕ್ಕೆ ಪ್ರೋತ್ಸಾಹ ನೀಡಿದವು.
*ಪೋರ್ಚುಗೀಸ್ ನಾವಿಕ ವಾಸ್ಕೊಡಗಾಮನು 1498 ರಲ್ಲಿ ಭಾರತದೊಂದಿಗೆ ಮರು ವ್ಯಾಪಾರ ಸಂಬಂಧವನ್ನು ಸ್ಥಾಪಿಸಿದ ಐರೋಪಿಯನ್ನರಲ್ಲಿ ಮೊದಲಿಗನಾದನು.
*17ನೇ ಶತಮಾನದಲ್ಲಿ ಭಾರತದೊಳಗೆ ಡಚ್ ಮತ್ತು ಇಂಗ್ಲಿಷರ ಪ್ರವೇಶವಾಯಿತು. ವ್ಯಾಪರದ ಏಕಸ್ವಮ್ಯತೆಗಾಗಿ ಹೊಡೆದಾಡಿದ ಇಂಗ್ಲಿಷರು ಪೋರ್ಚುಗೀಸರನ್ನು ಡಚ್ಚರನ್ನು ಸೋಲಿಸಿದರು. 18ನೇ ಶತಮಾನದ ಕೊನೆಯಲ್ಲಿ ಡಚ್ಚರನ್ನು ಉಪಖಂಡದಿಂದ ಹೊರಹಾಕಿದರು. ಕ್ರಮೇಣವಾಗಿ ಮದ್ರಾಸ್ ,ಮುಂಬೈ ಮತ್ತು ಕಲ್ಕತ್ತಾಗಳಲ್ಲಿ ತಮ್ಮ ವ್ಯಾಪ್ತಿಯನ್ನು ವಿಸ್ತರಿಸಿಕೊಂಡ ಬ್ರಿಟಿಷರು ಈ ಸ್ಥಳಗಳನ್ನು ತಮ್ಮ ವ್ಯಾಪಾರ ಕೇಂದ್ರಗಳನ್ನಾಗಿ ಮಾಡಿಕೊಂಡರು.  
*1600 ರಲ್ಲಿ ಇಂಗ್ಲೆಂಡಿನಲ್ಲಿ ಸ್ಥಾಪಿಸಲಾದ ಈಸ್ಟ್ ಇಂಡಿಯಾ ಕಂಪನಿಯು ತನ್ನ ವಿಶಾಲವಾಗುತ್ತಿರುವ ವ್ಯಾಪಾರವನ್ನು  ವ್ಯವಸ್ಥಿತಗೊಳಿಸಿಕೊಳ್ಳುತ್ತಿದ್ದ ಹಾಗೇಯ ಭಾರತದಲ್ಲಿ ಇಂಗ್ಲಿಷ್ ರಾಜ್ಯದ ಕನಸನ್ನು ಕಾಣತಿತ್ತು
*18ನೇ ಶತಮಾನದಲ್ಲಿ ಉಂಟಾದ ಪ್ರಕ್ಷುಬ್ದ ಸಮಯದಲ್ಲಿ ಬಹಳ ಚತುರತೆಯಿಂದ ಕುಟಿಲತೆಯಿಂದ ಉಪಯೋಗಿಸಿಕೊಂಡ  ಬ್ರಿಟಿಷರು ತಮ್ಮ ಸಾಮ್ರಾಜ್ಯ ಸ್ಥಾಪನೆಗೆ ಮುಂದಾದಾಗ ನವಾಬ ಸಿರಾಜುದ್ದೌಲನಿಂದ ಮೊದಲಾಗಿ  ಟಿಪ್ಪು ಸಹಿತ ಅನೇಕರು ಅವರ ವಿರುದ್ಧ ಹೋರಾಡಿದರು.
*ಮೊದಲನೇ ಕರ್ನಾಟಿಕ್ , ಎರಡನೇ ಕರ್ನಾಟಿಕ್ , ಮೂರನೆಯ ಕರ್ನಾಟಿಕ್ , ಕದನಗಳಲ್ಲದೆ,1755ರಲ್ಲಿ ಪ್ಲಾಸಿ ಕದನ ,1764 ರಲ್ಲಿ ನಡೆದ ಬಕ್ಸಾರ್ ಕದನಗಳ ವಿಜಯ ಬ್ರಿಟಿಷರು ಭಾರತದಲ್ಲಿ ನೆಲೆಯೂರಲು ಸಹಾಯಕವಾದವು.

ಪ್ರಮುಖ ವ್ಯಕ್ತಿಗಳು    ಅನ್ವರುದ್ದೀನ್        
ಕರ್ನಾಟಿಕ್ನ ನವಾಬ     ಸಿರಾಜುದ್ದೌಲ         
ಬಂಗಾಳದ ನವಾಬ      ರಾಬರ್ಟ್ ಕ್ಲವ್        

(ಚಿ) ಬ್ರಿಟಿಷ್ ಭಾರತ ಸೃಷ್ಟಿಗೆ ಕಾರಣವಾದಂತಹ ಪ್ರಥಮ ಬ್ರಿಟಿಷ್ ಅಧಿಕಾರಿ
(ಛ) ದ್ವಿ-ಸರ್ಕಾರವನ್ನು ಜಾರಿಗೆ ತಂದವರು
(ಛಿ) ಬಂಗಾಳದ ಮೊದಲ ಗವರ್ನರ್

ಡೂಪ್ಲೆ ಇವರು ಭಾರತದಲ್ಲಿನ ಫ್ರೆಂಚ್ ಅಧಿಪತ್ಯಗಳ ಮೇಲಿನ ಗೌರ್ನರ್ ಜನರಲ್ ಆಗಿ 1942ರಲ್ಲಿ ನೇಮಕ.
ವಾಸ್ಕೋಡಿಗಾಮ     ಪೋರ್ಚುಗೀಸ್ ನಾವಿಕ. ಭಾರತದೊಂದಿಗೆ ಮರು ವ್ಯಾಪಾರ ಸಂಬಂಧವನ್ನು ಸ್ಥಾಪಿಸಿದ ಮೊದಲಿಗ ಯುರೋಪಿಯನ್. ಭಾರತಕ್ಕೆ ಜಲಮಾರ್ಗ ಕಂಡುಹಿಡಿದ ಮೊದಲ ಯುರೋಪ್ ನಾವಿಕ.
ಸರ್ ಐರ್ ಕೂಟ್     ಮೂರನೇ ಕಾರ್ನಾಟಿಕ್ ಕದನದಲ್ಲಿ ಬ್ರಿಟಿಷ್ ಕಮಾಂಡರ್
ಫರೂಕ್ ಸಿಯಾ    17ನೇ ಶತಮಾನದ ಆರಂಭದಲ್ಲಿ ಕಲ್ಕತ್ತಾದ ಸಮೀಪದ ಕೆಲವು ಹಳ್ಳಿಗಳನ್ನು ಬ್ರಿಟಿಷರಿಗೆ ಹತ್ತಿಯಾಗಿ ನೀಡಿದ ಮೊಘಲ್ ಚಕ್ರವರ್ತಿಜಹಂಗೀರ್        ಬ್ರಿಟಿಷ್ ಈಶ್ಟ್ ಇಂಡಿಯಾ ಕಂಪನಿಗೆ ವ್ಯಾಪಾರ ಮಾಡಲು ಅನುಮತಿ ನೀಡಿದ  ಮೊಘಲ್ ಚರ್ಕವರ್ತಿ

ವರ್ಷಗಳು ಮತ್ತು ಘಟನೆಗಳು:
ಕ್ರಿ.ಶ. 1453      ಆಟೋಮನ್ ಟರ್ಕರು ಕಾನ್ಸ್ಟ್ಯಾಂಟಿನೋಪಲ್ ನಗರವನ್ನು ವಶಪಡಿಸಿಕೊಂಡರು.
ಕ್ರಿ.ಶ. 1498     ಪೋರ್ಚುಗೀಸ್ ನಾವಿಕ ವಾಸ್ಕೋಡಿಗಾಮ 1498 ರಲ್ಲಿ ಭಾರತದ ಪಶ್ಚಿಮ ತೀರದ ಕಲ್ಲಿಕೋಟೆಗೆ ಬಂದಿಳಿದರು.
ಕ್ರಿ.ಶ. 1600     ಈಸ್ಟ್ ಇಂಡಿಯಾ ಕಂಪನಿಯನ್ನು ಇಂಗ್ಲೆಂಡಿನಲ್ಲಿ ಸ್ಥಾಪಿಸಲಾಯಿತು.
ಕ್ರಿ.ಶ. 1602     ಯುನೈಟೆಡ್ ಈಸ್ಟ್ ಇಂಡಿಯಾ ಕಂಪನಿ ನೆದರ್ಲ್ಯಾಂಡ್ ನಲ್ಲಿ ಸ್ಥಾಪಿಸಲಾಯಿತು.
ಕ್ರಿ.ಶ. 1619     ಮೊಘಲ್ ಚಕ್ರವರ್ತಿ ಜಹಂಗೀರನು ಈಸ್ಟ್ ಇಂಡಿಯಾ ಕಂಪನಿಗೆ ವ್ಯಾಪಾರ ಮಾಡಲು ಅನುಮತಿ ನೀಡಿದನು.
ಕ್ರಿ.ಶ. 1639     ಇಂಗ್ಲೀಷರು ತಮ್ಮ ಮೊದಲ ಸರಕು ಕೋಠಿಯನ್ನು ಮದ್ರಾಸಿನಲ್ಲಿ ಸ್ಥಾಪಿಸಿದರು.
ಕ್ರಿ.ಶ. 1664     ಫ್ರೆಂಚ್ ಈಸ್ಟ್ ಇಂಡಿಯಾ ಕಂಪನಿ ಫ್ರಾನ್ಸ್ನಲ್ಲಿ ಸ್ಥಾಪನೆಗೊಂಡಿತು.
ಕ್ರಿ.ಶ. 1757     ಪ್ಲಾಸಿ ಕದನ
ಕ್ರಿ.ಶ. 1767     ರಾಬರ್ಟ್ ಕ್ಲೈವ್ ಇಂಗ್ಲೆಂಡಿಗೆ ಹಿಂದಿರುಗಿದನು.
ಕ್ರಿ.ಶ. 1767     ಡೂಪ್ಲೆ ಭಾರತದಲ್ಲಿನ ಫ್ರೆಂಚ್ ಅಧಿಪತ್ಯಗಳ ಮೇಲಿನ ಗೌರ್ನರ್ ಜನರಲ್ ಆಗಿ ನೇಮಕಗೊಂಡನು.
ಕ್ರಿ.ಶ. 1746      ಮದ್ರಾಸ್ ಕದನ
ಕ್ರಿ.ಶ. 1764      ಬಕ್ಸಾರ್ ಕದನ

logoblog

Thanks for reading ಭಾರತ

Previous
« Prev Post

No comments:

Post a comment