ವಿದೇಶಾಂಗ ನೀತಿ ಎಂದರೇನು?
ಒಂದು ರಾಷ್ಟ್ರವು ಅನ್ಯರಾಷ್ಟ್ರಗಳೊಡನೆ ವ್ಯವಹರಿಸುವಾಗ ಅನುಕರಿಸುವ ನೀತಿಯೇ ವಿದೇಶಾಂತ ನೀತಿ.
2)ವಿದೇಶಾಂಗ ನೀತಿಯು ರಾಷ್ಟ್ರದ ಅಭಿವೃದ್ಧಿಗೆ ಸಹಕಾರಿ ಹೇಗೆ?
ಯಾವುದೇ ಪ್ರಾಕೃತಿಕ ಸಂಪತ್ತು, ಪರಿಣಿತ ಭೌದ್ಧಿಕ ಮತ್ತು ಔದ್ಯೋಗಿಕ ಸಾಮರ್ಥ್ಯ, ತಾಂತ್ರಿಕ ಸಾಮರ್ಥ್ಯ, ಬಲಾಢ್ಯ ಸೈನಿಕ ಬಲ, ವಿಪುಲ ಜನಸಂಖ್ಯೆ ಮುಂತಾದವುಗಳೊಂದಿಗೆ ಉತ್ತಮ ವಿದೇಶಾಂಗಗಳೊಂದಿಗೆ ಉತ್ತಮ ಸಂಬಮ್ಧ ಇಲ್ಲದಿದ್ದರೆ ರಾಷ್ಟ್ರದ ಪ್ರಗತಿ ಕುಂಠಿತವಾಗುತ್ತದೆ.
3)ಭಾತರದ ವಿದೇಶಾಂಗ ನೀತಿಯ ಗುರಿಗಳಾವುವು?
*ರಾಷ್ಟ್ರದ ಭದ್ರತೆ
*ರಾಷ್ಟ್ರದ ಆರ್ಥಿಕ ಸಂವರ್ಧನೆ
*ನಮ್ಮ ದೇಶದ ಸಾಂಸ್ಕೃತಿಕ ಮೌಲ್ಯಗಳನ್ನು ಬೇರೆ ದೇಶದಲ್ಲಿ ಬಿತ್ತರಿಸುವುದು.
*ಮಿತ್ರ ರಾಷ್ಟ್ರಗಳನ್ನು ಹೆಚ್ಚಿಸಿಕೊಂಡು ವಿರೋಧಿರಾಷ್ಟ್ರಗಳನ್ನು ನಿರ್ಬಂದಿಸುವುದು ಅಥವಾ ಹತ್ತಿಕ್ಕುವುದು
*ವಿಶ್ವಶಾಂತಿ ಹಾಗೂ ಸಹಬಾಳ್ವೆಯನ್ನು ಸಾಧಿಸುವುದು
4)ವಸಾಹತುಶಾಹಿತ್ವವನ್ನು ಭಾರತವು ವಿರೋಧಿಸಲು ಕಾರಣಗಳೇನು?
ವಸಾಹತು ಶಾಹಿತ್ವವನ್ನು ವಿರೋಧಿಸಲು ಸ್ವತಂತ್ರಗಳಿಸಿಕೊಂಡ ಭಾರತ ಸ್ವಾಭಾವಿಕವಾಗಿ ಪ್ರಪಂಚದ ಯಾವುದೇ ಮೂಲೆಯಲ್ಲಿ ವಸಾಹತು ಶಾಹಿತ್ವ ಇರಕೂಡದು ಎಂದು ಪ್ರತಿಪಾದಿಸಿದೆ. ಆದ್ದರಿಂದ ಭಾರತದ ವಿದೇಶಾಂಗ ನೀತಿಯಲ್ಲಿ ವಸಾಹತು ಶಾಹಿತ್ವಕ್ಕೆ ವಿರೋಧ ವ್ಯಕ್ತಗೊಂಡಿದೆ.
5)ಪಂಚಶೀಲ ತತ್ವಗಳಾವುವು?
*ಪರಸ್ಪರ ರಾಷ್ಟ್ರಗಳ ಪ್ರಾದೇಶಿಕ ಹಾಗೂ ಸಾರ್ವಭೌಮತೆಗೆ ಗೌರವ
*ಪರಸ್ಪರ ಆಕ್ರಮಣ ಮಾಡದಿರುವುದು.
*ಆಂತರಿಕ ವ್ಯವಹಾರಗಳಲ್ಲಿ ಪರಸ್ಪರ ಹಸ್ತಕ್ಷೇಪ
*ಪರಸ್ಪರ ಸಹಕಾರ ಮತ್ತು ಸಮಾನತೆ
*ಶಾಂತಿಯುತ ಸಹಬಾಳ್ವೆ
6)ಪ್ರಚಲಿತ ಜಗತ್ತಿಗೆ ನಿಶಸ್ತ್ರೀಕರಣ ಅತೀ ಅಗತ್ಯ ಎಂದು ಭಾರತ ಏಕೆ ಪ್ರತಿಪಾದಿಸುತ್ತದೆ? ವಿವರಿಸಿ.
ಭಾರತ ಶಾಂತಿಪ್ರಿಯ ರಾಷ್ಟ್ರವಾಗಿದ್ದು ಗುಣಾತ್ಮಕ ಹಾಗೂ ಗಾತ್ರದ ಪರಿಮಿತಿಯಲ್ಲಿನ ನಿಶ್ಶಸ್ತ್ರೀಕರಣವನ್ನು ಪ್ರತಿಪಾದಿಸುತ್ತದೆ. ಶಾಂತಿ ಸೌಹಾರ್ದತೆಗೆ ಒತ್ತು ನೀಡಿದ ಭಾರತದ ಪ್ರಧಾನಿ ನೆಹರೂರವರ ಕಾಲದಲ್ಲಿ ಸಹಜವಾಗಿಯೇ ನಿಶ್ಶಸ್ತ್ರೀಕರಣಕ್ಕೆ ಬೆಂಬಲವನ್ನು ಸೂಚಿಸಿತು. ಸಂಪೂರ್ಣ ನಿಶ್ಯಶ್ತ್ರೀಕರಣ ಸಾಧ್ಯವಾಗದ ವಿಚಾರವಾಗಿದೆ. ಏಕೆಂದರೆ ಪ್ರತಿಯೊಂದು ರಾಷ್ಟ್ರಕ್ಕೂ ತನ್ನದೇ ಆದ ರಕ್ಷಣಾವ್ಯೂಹ ಅತ್ಯಗತ್ಯ. ಆದರೂ ಭಾರತ ವಿಶ್ವಶಾಂತಿ ಹಾಗೂ ಸಹಬಾಳ್ವೆಗೆ ಪೂರಕವಾದ ವಿದೇಶಾಂತ ನೀತಿಗೆ ವಿಶೇಷವಾಗಿ ಒತ್ತು ನೀಡಿದೆ.
No comments:
Post a comment