Goslink

Goslink is providing you latest news, articles, reviews.

Friday, 19 February 2021

ಕೋಮುವಾದ

  Govt Orders Link       Friday, 19 February 2021


)ಕೋಮುವಾದ ಎಂದರೇನು?
ಧರ್ಮದ ಆಧಾರದಲ್ಲಿ ಸಮಗ್ರ ಸಮಾಜದ ವಿಭಜನೆ ಹಾಗೂ ಆ ನೆಲೆಯಲ್ಲೇ ಗುರುತಿಸಿಕೊಂಡು ಪರಸ್ಪರ  ವಿರುದ್ಧ  ಹಿತಾಸಕ್ತಿಗಳನ್ನು ಬೆಳೆಸಿಕೊಳ್ಳುವುದನ್ನು ಕೋಮುವಾದ ಅಥವಾ ಮತೀಯವಾದ ಎನ್ನುವರು.

2) ಪ್ರಾದೇಶಿಕವಾದ ಎಂದರೇನು?
 ಒಂದು ನಿರ್ಧಿಷ್ಟ ಜನಸಮುದಾಯ ತಾವು ವಾಸಿಸುವ ಪ್ರದೇಶವನ್ನೇ ಅತ್ಯಂತ ಗಾಢವಾಗಿ ಪ್ರೀತಿಸಿ, ಕೇವಲ ಆ  ಭಾಗ್ಯದ ಬಗ್ಗೆಯೇ ಅತಿಯಾದ ಅಭಿಮಾನವನ್ನು ಬೆಳೆಸಿಕೊಳ್ಳುವುದಕ್ಕೆ ಪ್ರಾದೇಶಿಕವಾದ ಎನ್ನುವರು.

3) ಭ್ರಷ್ಟಾಚಾರ ಎಂದರೇನು?
 ಎಲ್ಲಾ ವಿಧಿವಿಧಾನಗಳನ್ನು ಬದಿಗೆ ಸರಿಸಿ ಸ್ವಾರ್ಥದ ದೃಷ್ಟಿಯಿಂದ ಸ್ವಂತ ಲಾಭಕ್ಕಾಗಿ ಅಧಿಕಾರ ದುರುಪಯೋಗ  ಮಾಡಿಕೊಳ್ಳುವುದನ್ನು ಭ್ರಷ್ಟಾಚಾರ ಎನ್ನುವರು.

4) ಲಾಭ ಬಡುಕತನ ಎಂದರೇನು?
 ಜನಸಾಮಾನ್ಯರ ಅಥವಾ ಬಳಕೆದಾರದಿಂದ ಅತ್ಯಂತ ಹೆಚ್ಚಿನ ಲಾಭಗಳಿಸುವ ಧೋರಣೆಯನ್ನು ಲಾಭ ಬಡುಕುತನ  ಅಥವಾ ಲಾಭಕೋರತನ ಎನ್ನುವರು.

5) 'ಸಾಕ್ಷರ ಭಾರತ' ಕಾರ್ಯಕ್ರಮವನ್ನು ಯಾವ ಉದ್ದೇಶಕ್ಕೆ ಪ್ರಾರಂಭಿಸಲಾಗಿದೆ?
 ಅನಕ್ಷರತೆಯನ್ನು ಹೋಗಲಾಡಿಸಲು.

6) ಬಡತನ ಎಂದರೇನು?
 ಜನರು ಸರಿಯದ ಆಹಾರ, ಬಟ್ಟೆ, ವಸತಿ ಹಾಗೂ ಮೂಲಭೂತ ಸೌಕರ್ಯಗಳನ್ನು ಹೊಂದದೇ ಪಡುವ  ಕಷ್ಟವನ್ನು  ಬಡತನ ಎನ್ನುವರು.

7) ಭ್ರಷ್ಟಾಚಾರದ ಪರಿಧಿಯೊಳಗೆ ಬರುವ ಆಚರಣೆಗಳು ಯಾವುವು?
 1) ಲಂಚಗುಳಿತನ  2) ಸ್ವಜನ ಪಕ್ಷಪಾತ  3) ಜಾತೀಯತೆ
4) ನಿಧಾನ ದ್ರೋಹ 5) ತೆರಿಗೆ ಕಳ್ಳತನ   6) ಅಕ್ರಮ ದಾಸ್ತಾನು
7) ಕಳ್ಳ ಸಾಗಾಣಿಕೆ  8) ಆರ್ಥಿಕ ಸಾಗಾಣಿಕೆ  9) ಮೋಸಗಾರಿಕೆ
10) ವಿದೇಶಿ ವಿನಿಮಯದ ಕಾನೂನು ಉಲ್ಲಂಘನೆ   11) ಔದ್ಯೋಗಿಕ ವಂಚನೆ

8) ಭಾರತದಲ್ಲಿ ಜನಸಂಖ್ಯಾ ಹೆಚ್ಚಳಕ್ಕೆ ಕಾರಣವಾದ ಅಂಶಗಳಾವುವು?
1) ಜನನ ಪ್ರಮಾಣದಲ್ಲಿ ಮಿತಿ ಮೀರಿದ ಹೆಚ್ಚಳ
2) ಮರಣದ ಪ್ರಮಾಣದಲ್ಲಿ ಇಳಿಕೆ
3) ಜೀವಿತ ಕಾಲಮಾನದಲ್ಲಿ ಗಣನೀಯ ಪ್ರಮಾಣದ ಏರಿಕೆ
4) ಶಿಶು ಮರಣದ ನಿಷ್ಪತ್ತಿಯಲ್ಲಿ ಕಡಿತ

9) ಜನಸಂಖ್ಯಾ ಹೆಚ್ಚಳದಿಂದ ಉಂಟಾಗಿರುವ ಸಮಸ್ಯೆಗಳಾವುವು?
1) ನಿರುದ್ಯೋಗ
2) ಅನಕ್ಷರತೆ
3) ಬಡತನ
4) ವಸತಿ ಸೌಲಭ್ಯ ಹಾಗೂ ಆರೋಗ್ಯ ಸಮಸ್ಯೆ
5) ನೀರಿನ ಪೂರೈಕೆಯಲ್ಲಿ ಕೊರತೆ ಮುಂತಾದವು.

10)  ಜನಸಂಖ್ಯಾ ಹೆಚ್ಚಳದಿಂದಾಗುವ ಸಮಸ್ಯೆಯನ್ನು ಪರಿಹರಿಸುವ ಮಾರ್ಗೊಪಾಯಗಳಾವುವು?
*ಅಕ್ಷರ ಪ್ರಸರಣ
*ತಾಂತ್ರಿಕ ಶಿಕ್ಷಣ
*ಕೃಷಿ ಅಭಿವೃದ್ಧಿ
*ಕೈಗಾರಿಕಾ ಪ್ರಗತಿ
*ರಫ್ತು ಹೆಚ್ಚಳ
*ಪಟ್ಟಣ ಮತ್ತು ಗ್ರಾಮಾಂತರ ಪ್ರದೇಶದಲ್ಲಿ ಉದ್ಯೋಗಗಳ ಸೃಷ್ಟಿ

11) ಲಾಭ ಬಡುಕತನಕ್ಕೆ ಕಾರಣವಾಗಿರುವ ಅಂಶಗಳನ್ನು ಹೆಸರಿಸಿ.
 ಏಕಸ್ವಾಮ್ಯ ವ್ಯವಸ್ಥೆ
 ಬಹುರಾಷ್ಟ್ರಿಯ ಕಂಪನಿಗಳ ವ್ಯಾಪಕತೆ
 ಅನಾರೋಗ್ಯಕರ ಮಾರುಕಟ್ಟೆ ನಿಯಮಗಳು
 ಅಕ್ರಮ ದಾಸ್ತಾನು
 ಕಳ್ಳ ವ್ಯಾಪಾರ
 ಬೆಲೆಯ ಬಗ್ಗೆ ಸರಿಯಾದ ನಿಯಂತ್ರಣ ಇಲ್ಲದಿರುವುವಿಕೆ

12) ಲಾಭಕೋರತನವನ್ನು ನಿಯಂತ್ರಿಸಬಹುದಾದ ಕೆಲವು ಪರಿಹಾರ ಕ್ರಮಗಳನ್ನು ಹೆಸರಿಸಿ.
 ಕಟ್ಟುನಿಟ್ಟಿನ ಸರಕಾರಿ ನಿಯಂತ್ರಣ
 ಬೆಲೆ ಸೂಚ್ಯಾಂಕಗಳ ಪರಿಶಿಲನೆ
 ಸಹಕಾರೀ ಮಾರುಕಟ್ಟೆಗಳ ವಿಸ್ತರಣೆ
 ಸರಿಯಾದ ತೆರಿಗೆ ಧೋರಣೆ

13) ಸಮಾಜದ ಆರ್ಥಿಕ ಅಸಮಾನತೆಗೆ ಕಾರಣವಾದ ಅಂಶಗಳನ್ನು ಹೆಸರಿಸಿ.
 ಖಾಸಗಿ ಕ್ಷೇತ್ರದ ಅತ್ಯಂತ ಹೆಚ್ಚಿನ ಮೊತ್ತದ ವೇತನ ಶ್ರೇಣಿ
 ಬಹುರಾಷ್ಟ್ರೀಯ ಕಂಪನಿಗಳ ಕಾರ್ಯಕ್ಷೇತ್ರ
 ಶ್ವೇತಧಾರಿ ಅಂದರೆ ಮೇಲುಸ್ತರದ ನೌಕರಿಗಳು
 ಲಾಭ ಬಡುಕತನ ಮತ್ತು ಭ್ರಷ್ಟಾಚಾರ

14) ಅನಕ್ಷರತೆಗೆ ಕಾರಣಗಳಾವುವು?
 ಬಡತನ
ವಲಸೆ ಹೋಗುವಿಕೆ
ಬಾಲ ಕಾಮರ್ಿಕ ಪದ್ಧತಿ
ಬಾಲ್ಯ ವಿವಾಹ
ಚಿಕ್ಕ ಮಕ್ಕಳ ಲಾಲನೆ ಪಾಲನೆಗೆ ಹಿರಿಯ ಮಕ್ಕಳನ್ನು ಬಳಸಿಕೊಳ್ಳುವುದು.
ಶಿಕ್ಷಣ ಕೊಡಿಸಬೇಕೆಂಬ ಆಸಕ್ತಿಯ ಕೊರತೆ

15) ಬಡತನವನ್ನು ಹೋಗಲಾಡಿಸಲು ಭಾರತ ಸರ್ಕಾರವು ಜಾರಿಗೆ ತಂದಿರುವ ಯೋಜನೆಗಳಾವುವು?
 ಜವಾಹರ ರೋಜ್ಗಾರ್ ಯೋಜನೆ
 ಪ್ರಧಾನಮಂತ್ರಿ ಗ್ರಾಮೋದಯ ಯೋಜನೆ

16) ನೆನಪಿನಲ್ಲಿಡಬೇಕಾದ ಅಂಶಗಳು
1956 - ಭಾಷಾವಾರು ಪ್ರಾಂತ್ಯ ವಿಭಜನೆ
2001 - ಸಾಕ್ಷರತೆಯ ಪ್ರಮಾಣ 66%
2011 -  ಸಾಕ್ಷರತೆಯ ಪ್ರಮಾಣ 74%
2001 -  ಸರ್ವಶಿಕ್ಷಣ ಅಭಿಯಾನ್
1988 -  ರಾಷ್ಟ್ರಯ ಸಾಕ್ಷರತಾ ಮಿಷನ್
2009 - 21ನೇ ವಿಧಿಯನ್ವಯ ಶಿಕ್ಷಣ ಹಕ್ಕು ಕಾಯ್ದೆ
1991 - 2001 - ದೇಶದ ಜನಸಂಖ್ಯೆ 84 ದಶಲಕ್ಷ ಕೋಟಿಯಿಂದ 102.7 ದಶಲಕ್ಷ ಕೋಟಿಗೆ ಏರಿತು.
2011 - ಜನಗಣತಿ ಪ್ರಕಾರ ಜನಸಂಖ್ಯೆ 121 ಕೋಟಿ
ಜಯಪ್ರಕಾಶ ನಾರಾಯಣ ಹಾಗೂ ಅಣ್ಣಾ ಹಜಾರೆ - ಭ್ರಷ್ಟಾಚರ ನಿರ್ಮೂಲನೆ
ಕರ್ನಾಟಕ - ಸ್ಥಳೀಯ ಸಂಸ್ಥೆಗಳಲ್ಲಿನ ಚುನಾವಣೆಯಲ್ಲಿ ಮಹಿಳಾ ಮೀಸಲಾಗಿತಿಯನ್ನು ಶೇ. 33 ರ ಪ್ರಮಾಣದಲ್ಲಿ  ಅನುಷ್ಠಾನಗೊಳಿಸಲಾಗಿದೆ

logoblog

Thanks for reading ಕೋಮುವಾದ

Previous
« Prev Post

No comments:

Post a comment