Goslink

Goslink is providing you latest news, articles, reviews.

Wednesday, 17 February 2021

ದೇಶದ

  Govt Orders Link       Wednesday, 17 February 2021
ದೇಶದ ಐಕ್ಯತೆಗೆ ಮಾರಕ ಹೇಗೆ ?
*ಧರ್ಮದ ಆಧಾರದಲ್ಲಿ ಸಮಗ್ರ ಸಮಾಜದ ವಿಭಜನೆ ಹಾಗೂ ಆ ನೆಲೆಯಲ್ಲಿ ಗುರುತಿಸಿಕೊಂಡು ಪರಸ್ಪರ ವಿರುದ್ಧ ಹಿತಾಸಕ್ತಿಗಳನ್ನು ಬೆಳೆಸಿಕೊಳ್ಳುವುದೇ ಕೋಮುವಾದ.
*ಇದು ಸಾಮಾಜಿಕವಾಗಿ ಭಿನ್ನತೆ, ಪರಸ್ಪರ ಅಪನಂಬಿಕೆ ಹಾಗೂ ಭಯದ ವಾತಾವರಣವನ್ನು ಸೃಷ್ಟಿಸುತ್ತದೆ.
*ಇದು ಸಮಾಜದಲ್ಲಿ ಗುಂಪುಗಾರಿಕೆ, ಆರ್ಥಿಕ ವೈಷಮ್ಯ ಮತ್ತು ರಾಜಕೀಯ ಪೈಪೋಟಿಯನ್ನು ಉಂಟುಮಾಡುತ್ತದೆ.
*ಇದು ಸಮಾಜದ ನೆಮ್ಮದಿಯನ್ನು ಕೆಡಿಸುವುದಲ್ಲದೆ ವ್ಯಕ್ತಿಗಳ ಜೀವ ಹಾಗೂ ಸೊತ್ತುಗಳ ನಾಶಕ್ಕೂ ಕಾರಣವಾಗಿದೆ.
*ಇದು ಗುಂಪುಗಳ ಮಧ್ಯೆ ಪರಸ್ಪರ ದೋಷಾರೋಪಣೆ ದೈಹಿಕ ಹಲ್ಲೆ ಮುಂತಾದ ಅನಗತ್ಯ ತೊಂದರೆಗಳಿಗೂ ಕಾರಣವಾಗುತ್ತದೆ.
*ಭಾರತದ ಮಟ್ಟಿಗೆ ಈ ಕೋಮುವಾದ ರಾಷ್ಟ್ರೀಯ ಏಕತೆ ಹಾಗೂ ಸಮಗ್ರತೆಯನ್ನು ಭಂಗ ಪಡಿಸುವ ಅಪಾಯ ತಂದೊಡ್ಡುವ ಶಕ್ತಿಯಾಗಿದೆ.
ಆದ್ದರಿಂದ ಕೋಮುವಾದ ಅಥವಾ ಮತೀಯವಾದ ದೇಶದ ಐಕ್ಯತೆಗೆ ಮಾರಕ ಎಂದು ಹೇಳಬಹುದು.

2)ಪ್ರಾದೇಶಿಕವಾದವು ದೇಶದ ಅಭಿವೃದ್ಧಿಗೆ ಮಾರಕವಾಗುತ್ತದೆ. ಚರ್ಚಿಸಿ.
*ಒಂದು ನಿರ್ಧಿಷ್ಟ ಜನಸಮುದಾಯ ತಾವು ವಾಸಿಸುವ ಪ್ರದೇಶವನ್ನೇ ಅತ್ಯಂತ ಗಾಢವಾಗಿ ಪ್ರೀತಿಸಿ ಕೇವಲ ಆ ಭಾಗದ ಬಗ್ಗೆಯೇ ಅತಿಯಾದ ಅಭಿಮಾನವನ್ನು ಬೆಳೆಸಿಕೊಂಡರೆ ಅದನ್ನು ಪ್ರಾದೇಶಿಕವಾದ ಎನ್ನುವರು.
*ಪ್ರಾದೇಶಿಕ ಮನೋಭಾವ ತೀರಾ ಹೆಚ್ಚು ಎನಿಸಿದರೆ ಅದು ರಾಷ್ಟ್ರದ ಏಕತೆ ಹಾಗೂ ಹಿತಾಸಕ್ತಿಗಳಿಗೆ ಧಕ್ಕೆ ಒದಗಿಸುತ್ತವೆ.
*ಪ್ರಾದೇಶಿಕವಾದವನ್ನು ವೈಭವೀಕರಿಸುವುದರಿಂದ ದೇಶದ ಏಕತೆಗೆ ಹಾಗೂ ಅಭಿವೃದ್ಧಿಗೆ ತೊಡಕುಂಟಾಗುತ್ತದೆ.
*ಪ್ರಾದೇಶಿಕವಾದವು ಅಂತರರಾಜ್ಯ ಗಡಿ ಸಮಸ್ಯೆ, ಅಂತರರಾಜ್ಯ ನದಿ ನೀರಿನ ಸಮಸ್ಯೆಯನ್ನು ಉಂಟುಮಾಡುತ್ತದೆ.
ಈ ಮೇಲಿನ ಅಂಶಗಳಿಂದ ಪ್ರಾದೇಶಿಕವಾದವು ದೇಶದ ಅಭಿವೃದ್ಧಿಗೆ ಮಾರಕ ಎಂದು ಹೇಳಬಹುದು.

3)ಸಾಕ್ಷರತೆಯನ್ನು ವೃದ್ಧಿಸಲು ಕೈಗೊಂಡಿರುವ ಕ್ರಮಗಳಾವುವು?
*2001 ರಿಂದ ಇಡೀ ದೇಶಾದ್ಯಂತ 6 ರಿಂದ 14 ವರ್ಷದ ಮಕ್ಕಳಿಗೆ ಶಿಕ್ಷಣದ ವ್ಯವಸ್ಥೆಗಾಗಿ ಸರ್ವ ಶಿಕ್ಷಣ ಅಭಿಯಾನ ಕಾರ್ಯಕ್ರಮವನ್ನು ಜಾರಿಗೆ ತರಲಾಗಿದೆ. ಇದರಲ್ಲಿ ವಿಕಲ ಚೇತನರ ಶಿಕ್ಷಣ ಮತ್ತು ಮಹಿಳಾ ಶಿಕ್ಷಣ ಹಾಗೂ ಮಹಿಳಾ ಜಾಗೃತಿಗೆ ಕೂಡ ಆದ್ಯತೆ ನೀಡಲಾಗಿದೆ.
*ಅನಕ್ಷರಸ್ಥರನ್ನು ಸಾಕ್ಷರರನ್ನಾಗಿ ಮಾಡಲು ಭಾರತ ಸರ್ಕಾರವು 1988ರಲ್ಲಿ 'ರಾಷ್ಟ್ರೀಯ ಸಾಕ್ಷರತೆ ಮಿಷನ್' ಸ್ಥಾಪಿಸಿದೆ.
*'ಸಾಕ್ಷರ ಭಾರತ' ಎಂಬ ಕಾರ್ಯಕ್ರಮದ ಮೂಲಕ ಅನಕ್ಷರತೆಯನ್ನು ಹೋಗಲಾಡಿಸಲು ಕ್ರಮ ಕೈಗೊಂಡಿದೆ.
*ಸಂವಿಧಾನದ 21ನೇ ವಿಧಿಯನ್ವಯ ಶಿಕ್ಷಣದ ಹಕ್ಕನ್ನು ಮೂಲಭೂತ ಹಕ್ಕಾಗಿ ಪರಿಗಣಿಸಿದೆ.
*2009ರಲ್ಲಿ ದೇಶದಾದ್ಯಂತ ಶಿಕ್ಷಣ ಹಕ್ಕು ಕಾಯ್ದೆಯನ್ನು (ಖಖಿಇ-2009) ಜಾರಿಗೊಳಿಸಿ, 6 ರಿಂದ 14 ವರ್ಷವಯೋಮಾನದವರಿಗೆ ಶಿಕ್ಷಣವನ್ನು ಕಡ್ಡಾಯಗೊಳಿಸಿವೆ.

4)ಮಹಿಳೆಯರ ಸ್ಥಾನಮಾನ ಉತ್ತಮ ಪಡಿಸಲು ನಿಮ್ಮ ಸಲಹೆಗಳೇನು?
*ಮಹಿಳೆಯರ ಶಿಕ್ಷಣ ಮತ್ತು ಅಭಿವೃದ್ಧಿಯನ್ನು ಉತ್ತಮ ಪಡಿಸಲು ಸರ್ಕಾರವು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯನ್ನು ಪ್ರಾರಂಭಿಸಿದೆ.
*ಮಹಿಳೆಯರ ಸಬಲೀಕರಣಕ್ಕಾಗಿ ಮಹಿಳಾ ಶಿಕ್ಷಣ ಬಾಲ್ಯವಿವಾಹ ನಿಷೇಧ ಕಾಯ್ದೆ, ವರದಕ್ಷಿಣೆ ನಿಷೇಧ ಕಾಯ್ದೆ, ಮುಂತಾದ ಕಾರ್ಯಕ್ರಮಗಳನ್ನು ರೂಪಿಸಿದೆ.
*ಕರ್ನಾಟಕ ಸರ್ಕಾರವು 'ಸ್ತ್ರೀ ಶಕ್ತಿ' ಎಂಬ ಕಾರ್ಯಕ್ರಮವನ್ನು ರೂಪಿಸಿ, ಗ್ರಾಮಾಂತರ ಮಹಿಳೆಯರ ವಿಕಾಸಕ್ಕೆ ಪ್ರಯತ್ನಿಸಿದ್ದಾರೆ.
*ಮಹಿಳೆಯರ ಸ್ವ-ಉದ್ಯೋಗಕ್ಕಾಗಿ ಸಾಲ ಸೌಲಭ್ಯ ಮತ್ತು ಸಬ್ಸಿಡಿ ನೀಡುವಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.
*ಮಹಿಳಾ ಮಂಡಲಗಳು ಯುವತಿ ಮಂಡಲಗಳು ಸ್ತ್ರೀ ಶಕ್ತಿ ಸಂಘಗಳು, ಸ್ವಸಹಾಯ ಸಂಘಗಳು, ಮಹಿಳಾ ಸಹಕಾರಿ ಸಂಘಗಳು ಸ್ತ್ರೀಯರ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾಗಿ ಕಾರ್ಯನಿರ್ವಹಿಸುತ್ತಿವೆ.
*ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಮಹಿಳಾ ಆಯೋಗಗಳನ್ನು ರಚಿಸಿದ್ದು, ಮಹಿಳೆಯರ ದೂರು ದುಮ್ಮಾನಗಳನ್ನು ಇವು ಪರಿಶೀಲಿಸಿ ನ್ಯಾಯ ಒದಗಿಸಿಕೊಡುತ್ತಿವೆ.
*ಗ್ರಾಮ ಪಂಚಾಯ್ತಿ ಹಂತದಿಂದ ಸಂಸತ್ತಿನವರೆಗೂ ರಾಜಕೀಯದಲ್ಲಿ ಮಹಿಳಾ ಮೀಸಲಾಗಿ ನೀಡುವಂತಹ ಪ್ರಯತ್ನ ನಡೆಯುತ್ತಿದ್ದು, ಕರ್ನಾಟಕದಲ್ಲಿ ಈಗಾಗಲೇ ಸ್ಥಳೀಯ ಸಂಸ್ಥೆಗಳಲ್ಲಿನ ಮಹಿಳಾ ಮೀಸಲಾತಿಯನ್ನು ಶೇ. 33ರ ಪ್ರಮಾಣದಲ್ಲಿ ಅನುಷ್ಠಾನಗೊಳಿಸಲಾಗಿರುತ್ತದೆ.
*ಸರ್ಕಾರಿ ಉದ್ಯೋಗಗಳಲ್ಲಿ ಕೂಡಾ ಮಹಿಳೆಯರಿಗೆ ನಿಗಧಿತ ಪ್ರಮಾಣದ ಮೀಸಲಾತಿಯನ್ನು ನೀಡಲಾಗುತ್ತದೆ.

5)ದೇಶದ ಜನಸಂಖ್ಯೆಯನ್ನು ಮಾನವ ಸಂಪನ್ಮೂಲವೆಂದು ಪರಿಗಣಿಸಬಹುದಾಗಿದೆ. ಇದನ್ನು ಸಮರ್ಥಿಸಿ.
*ಭಾರತದ ಅಪಾರ ಜನಸ್ತೋಮವನ್ನು ರಾಷ್ಟ್ರೀಯ ಪ್ರಗತಿಗೆ ಅವಶ್ಯಕವಾದ ಮಾನವ ಸಂಪನ್ಮೂಲವನ್ನಾಗಿ ಪರಿವರ್ತಿಸುವ ಎಲ್ಲಾ ಸಾಧ್ಯತೆಗಳನ್ನೂ ಹೊಂದಿದೆ.
*ರಾಷ್ಟ್ರೀಯ ಮಟ್ಟದ ಯೋಜನೆಗಳು ಪ್ರಕೃತಿ ಸಂಪತ್ತು ಹಾಗೂ ಮಾನವ ಸಂಪನ್ಮೂಲಗಳನ್ನು ಸರಿಯಾದ ರೀತಿಯಲ್ಲಿ ಹೊಂದಾಣಿಕೆಯೊಂದಿಗೆ ಉಪಯೋಗಿಸಿಕೊಳ್ಳಲು ಮಾನವ ಸಂಪನ್ಮೂಲ ಇಲಾಖೆಯನ್ನು ಸ್ಥಾಪಿಸಲಾಗಿದೆ.
*ದೇಶದ ಪ್ರಗತಿ ಎನ್ನುವುದು ಹೆಚ್ಚೆಚ್ಚು ಜನತೆಯ ಪಾಲ್ಗೊಳ್ಳುವಿಕೆಯ ಮುಖಾಂತರ ಆಗಬೇಕಾಗಿದೆ. ಆದ್ದರಿಂದ ಜನಸಂಖ್ಯೆಯನ್ನು ಒಂದು ಹೊರೆ ಎನ್ನದೆ ಪೂರಕ ಆಸ್ತಿ ಎಂದು ಪರಿಗಣಿಸಬಹುದಾಗಿದೆ.

6)ಕರ್ನಾಟಕದಲ್ಲಿ ರಾಜ್ಯದಲ್ಲಿ ಬಡತನ ನಿವಾರಣೆಗಾಗಿ ರೂಪಿಸಿರುವ ಯೋಜನೆಗಳನ್ನು ವಿವರಿಸಿ.
*ಬಡ ಕುಟುಂಬಗಳಿಗೆ ಬಿಪಿಎಲ್ ಕಾರ್ಡುಗಳನ್ನು ವಿತರಿಸಲಾಗಿದೆ.
*ಪಂಚವಾಷರ್ಿಕ ಯೋಜನೆಗಳ ಮೂಲಕ ಬಡತನ ನಿರ್ಮೂಲನೆ ಹಾಗೂ ತಲಾ ಆದಾಯದ ಹೆಚ್ಚಳಕ್ಕೆ ಪ್ರಯತ್ನಿಸಲಾಗಿದೆ.
*ಜವಾಹರ ರೋಜ್ಗಾರ್ ಯೋಜನೆ, ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ, ಪ್ರಧಾನ ಮಂತ್ರಿ ಗ್ರಾಮೋದಯ ಯೋಜನೆಗಳನ್ನು ಜಾರಿಗೆ ತರಲಾಗಿದೆ.
*ದೇಶದ ಜನಸಂಪತ್ತು ಹಾಗೂ ನೈಸಗರ್ಿಕ ಸಂಪತ್ತಿನ ಸದ್ಬಳಕೆ ಕ್ರಮ ಕೈಗೊಳ್ಳಲಾಗಿದೆ.

7)ಕಳ್ಳ ಸಾಗಾಣಿಕೆ ಎಂದರೇನು? ನಿಯಂತ್ರಣಕ್ಕೆ ನಿಮ್ಮ ಸಲಹೆಗಳೇನು?
ಯಾವುದೇ ಆಮದು ಸುಂಕವನ್ನು ಸರ್ಕಾರಕ್ಕೆ ನೀಡದೆ ಗುಪ್ತವಾಗಿ ವಿದೇಶಗಳಿಂದ ವಸ್ತುಗಳನ್ನು ತರಿಸಿಕೊಳ್ಳುವುದನ್ನು ಕಳ್ಳಸಾಗಾಣಿಕೆ ಎನ್ನುವರು.
ಕಳ್ಳ ಸಾಗಾಣಿಕೆ ನಿಯಂತ್ರಣಕ್ಕೆ ಕ್ರಮಗಳು:-
1)ದೇಶದೊಳಗೆಯೇ ಪರ್ಯಾಯ ವಸ್ತುಗಳ ಪೂರೈಕೆಗೆ ಕ್ರಮ
2)ರಾಷ್ಟ್ರ್ರದ ಆಂತರಿಕ ಮಾರುಕಟ್ಟೆಯಲ್ಲಿ ಬೆಲೆಯನ್ನು ನಿಯಂತ್ರಿಸುವುದು.
3)ಸುಯೋಗ್ಯ ಆಮದು ರಫ್ತು ಧೋರಣೆ
4)ಕಟ್ಟುನಿಟ್ಟಿನ ಕರಾವಳಿ ಗಸ್ತು ಪಡೆಯ ಕಾರ್ಯಾಚರಣೆ
5)ಆರ್ಥಿಕ ಅಪರಾಧಕ್ಕೆ ಕಠಿಣ ಶಿಕ್ಷೆ
6)ಅಂತರರಾಷ್ಟ್ರೀಯ ಹಾಗೂ ಆಂತರಿಕ ರಾಜ್ಯಗಳ ಪರಸ್ಪರ ವ್ಯಾಪಾರ ಒಪ್ಪಂದ
7)ಕಳ್ಳ ಸಾಗಾಣಿಕೆಯ ವಸ್ತುಗಳನ್ನು ಸಾಮಾಜಿಕವಾಗಿ ಬಹಿಷ್ಕರಿಸುವುದು.

8)ಲಾಭ ಬಡುಕತನದಿಂದ ಉತ್ಪಾದಕ ಮತ್ತು ಗ್ರಾಹಕನಿಗೆ ನಷ್ಟವಾಗುತ್ತದೆ ಈ ಹೇಳಿಕೆಯನ್ನು ಹೇಗೆ ಸಮರ್ಥಿಸುತ್ತೀರಿ?
ಜನಸಾಮಾನ್ಯರ ಅಥವಾ ಬಳಕೆದಾರರಿಂದ ಅತ್ಯಂತ ಹೆಚ್ಚಿನ ಲಾಭಗಳಿಸುವ ಧೋರಣೆಯನ್ನು ಲಾಭ ಬಡಕುತನ     ಅಥವಾ ಲಾಭಕೋರತನ ಎನ್ನುತ್ತಾರೆ.
1) ಇದು ಆರ್ಥಿಕ ಅಸಮಾನತೆ ಹಾಗೂ ಬಡತನ ಹೆಚ್ಚಾಗಲು ಕಾರಣವಾಗುತ್ತದೆ
2) ಇದು ಸಮಾಜದಲ್ಲಿ ಅಪರಾಧಗಳ ಏರಿಕೆಗೆ ಕಾರಣವಾಗಿದೆ.
3) ಆರ್ಥಿಕ ರಂಗದಲ್ಲಿ ಲಾಭ ಬಡುಕತನ ಅನೈತಿಕ ವ್ಯಾಪಾರ ವಹಿವಾಟಿಗೆ ಪ್ರಚೋದನೆ ನೀಡುತ್ತದೆ.
4) ಲಾಭಕೋರತನದಿಂದ ಬೆಲೆ ಏರಿಕೆ ಸತತವಾಗಿ ನಡೆದು ಹಣದುಬ್ಬರಕ್ಕೂ ಎಡೆಮಾಡಿಕೊಡುತ್ತದೆ.
5) ಬೆಲೆಗಳ ಮೇಲೆ ಹತೋಟಿ ಇಲ್ಲದೆ ಇರುವುದು ಮಿತಿಮೀರಿದ ಲಾಭಕೋರತನಕ್ಕೆ ಮುಖ್ಯ ಕಾರಣ
6) ಉತ್ಪಾದಕರು ಅದರಿಂದಲೂ ಹೆಚ್ಚಾಗಿ ವಿತರಕರು ಬಹುವಾಗಿ ಲಾಭದ ಪರಿಮಿತಿ ಹೊಂದುವುದರಿಮ್ದ ಈ ಲಾಭ ಬಡುಕುತನ ಹೆಚ್ಚುವಂತಾಗಿದೆ.
 
logoblog

Thanks for reading ದೇಶದ

Previous
« Prev Post

No comments:

Post a comment