Goslink

Goslink is providing you latest news, articles, reviews.

Tuesday, 16 February 2021

ರಷ್ಯಾದ ಕ್ರಾಂತಿಯಲ್ಲಿ

  Govt Orders Link       Tuesday, 16 February 2021

ಕೆಳಗಿನ ಪ್ರಶ್ನೆಗಳಿಗೆ ಗುಂಪುಗಳಲ್ಲಿ ಚರ್ಚಿಸಿ ಉತ್ತರಿಸಿ :
1.
ರಷ್ಯಾದ ಕ್ರಾಂತಿಯಲ್ಲಿ ಲೆನಿನ್ನ ಪಾತ್ರವನ್ನು ವಿವರಿಸಿ.
ಲೆನಿನ್ ರೈತರು ಮತ್ತು ಕಾರ್ಮಿರಿಗೆ ಕ್ರಾಂತಿಕಾರಿ ಮಾರ್ಗದರ್ಶನವನ್ನು ನೀಡಿದರು. ಇದರಿಂದಾಗಿ ದುಡಿಯುವ ಜನ ಹೋರಾಟಗಳಲ್ಲಿ ಹೆಚ್ಚೆಚ್ಚು ತೊಡಗಿಸಿಕೊಂಡರು. ಇದೇ ಸಂದರ್ಭದಲ್ಲಿ ಲೆನಿನ್ ದೇಶ ಭ್ರಷ್ಟನಾಗಿದ್ದನು. ಮುಷ್ಕರಗಳ ತೀವ್ರತೆ ಹೆಚ್ಚಾಗಿ ರಷ್ಯಾದ ಕೊನೆಯ ದೊರೆ ಎರಡನೆಯ ನಿಕೋಲಸ್ನು ದೇಶ ತ್ಯಜಿಸಿ ಓಡಿಹೋದನು. ಇದನ್ನೇ 1917ರ 'ಫೆಬ್ರವರಿ ಕ್ರಾಂತಿ' ಎನ್ನುತ್ತಾರೆ. ಅಧಿಕಾರವನ್ನು ಉದಾರವಾದಿಗಳಾದ 'ಮೆನ್ಶವಿಕ್'ನು ಪಡೆದುಕೊಂಡರು. ಇವರು ರಷ್ಯಾವನ್ನು ಪ್ರಜಾಪ್ರಭುತ್ವ ಗಣರಾಜ್ಯವೆಂದು ಘೋಷಿಸಿದರು.

2. ರಷ್ಯಾದಲ್ಲಿ ಸ್ಟಾಲಿನ್ ಕೈಗೊಂಡ ಸುಧಾರಣಾ ಕ್ರಮಗಳು ಯಾವುವು ?
ಜೋಸೆಫ್ ಸ್ಟಾಲಿನ್ ರಷ್ಯಾವನ್ನು ಅಮೆರಿಕಕ್ಕೆ ಸವಾಲಾಗುವಂತೆ ನಿರ್ಮಾಣ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದನು. ಈತ ಜಾರಿಗೊಳಿಸಿದ ಪಂಚವಾಷರ್ಿಕ ಯೋಜನೆಗಳು ರಷ್ಯಾದ ಅಭಿವೃದ್ಧಿಯ ಪಥವನ್ನೇ ಬದಲಾಯಿಸಿತು.

3. ಪ್ರಥಮ ಮಹಾಯುದ್ಧಕ್ಕೆ ತತ್ಕ್ಷಣದ ಕಾರಣವನ್ನು ವಿವರಿಸಿ.
ಜುಲೈ 28 ರಂದು ಆಸ್ಟ್ರಿಯಾದ ರಾಜಕುಮಾರ ಆಕರ್್ಡ್ಯೂಕ್ ಫ್ರಾನ್ಸಿಸ್ ಫರ್ಡಿನೆಂಡ್ನ ಹತ್ಯೆಯಾಯಿತು. ಈ ಘಟನೆಯು ಆಸ್ಟ್ರೀಯಾ ಮತ್ತು ಸರ್ಬಿಯಾ ದೇಶಗಳ ನಡುವೆ ತಕ್ಷಣವೇ ಬಿಕ್ಕಟ್ಟನ್ನು ಸೃಷ್ಟಿಸಿತು. ಈ ಮೂಲಕ ಪ್ರಥಮ ಮಹಾಯುದ್ಧಕ್ಕೆ ತತ್ಕ್ಷಣದ ಕಾರಣವಾಯಿತು.

4.'ನಾಜಿ ಸಿದ್ಧಾಂತವು ಜರ್ಮನಿಯನ್ನು ಹಾಳು ಮಾಡಿತು' ಹೇಗೆ ವಿವರಿಸಿ.
ಜಗತ್ತಿನಲ್ಲಿ ಶ್ರೇಷ್ಟವಾದ ಜನಾಂಗವೆಂದರೆ ಆರ್ಯ ಜರ್ಮನ್ ಜನಾಂಗ. ಜಗತ್ತನ್ನುಆಳ್ವಿಕೆ ಮಾಡಲು ಕೇವಲ ಜರ್ಮನ್ನರು ಮಾತ್ರ ಯೋಗ್ಯರು. ಜನಾಂಗಗಳು ಕೇವಲ ಆಳಿಸಿಕೊಳ್ಳಲು ಮಾತ್ರ ಯೋಗ್ಯರು. ಜರ್ಮನ್ನರ ಎಲ್ಲಾ ಸಮಸ್ಯೆಗಳಿಗೆ ಯೆಹೂದಿಗಳೇ ಕಾರಣ.ಇವರು ಬದುಕಲು ಯೋಗ್ಯರಲ್ಲ ಎಂಬ ನಾಜಿ ಸಿದ್ಧಾಂತವು ಜರ್ಮನಿಯನ್ನು ಹಾಳು ಮಾಡಿತು'

5. ಎರಡನೆಯ ಮಹಾಯುದ್ಧಕ್ಕೆ ಕಾರಣಗಳಾವುವು?
ಮೊದಲ ಮಹಾಯುದ್ಧದ ಸೋಲು, ಅವಮಾನಕರ ಒಪ್ಪಂದಗಳು, ಅಪಾರವಾದ ನಷ್ಟಗಳ ಹಿನ್ನೆಲೆಯಲ್ಲಿ ಜರ್ಮನಿ ಮತ್ತು ಯುರೋಪಿನ ಹಲವು ದೇಶಗಳಲ್ಲಿ ರಾಷ್ಟ್ರೀಯವಾದದ ಉಗ್ರತೆ ತೀವ್ರಗೊಂಡಿತು. ಜರ್ಮನಿ ಮತ್ತು ಯುರೋಪಿನ ಇತರ ದೇಶಗಳಲ್ಲಿ ಬೃಹತ್ ಕೈಗಾರಿಕೋದ್ಯಮಿಗಳು ಉಗ್ರ ರಾಷ್ಟ್ರೀಯತೆಯನ್ನು ಬೆಳಸಲು ದೊಡ್ಡ ಪ್ರಮಾಣದಲ್ಲಿ ಹಣವನ್ನು ನೀಡಿದರು. ಇದನ್ನೇ ಬಳಸಿಕೊಂಡು ಸೇಡಿನ ಮತ್ತು ದುರಭಿಮಾನದ ಚಳುವಳಿಗಳು ಬೆಳೆದವು. ಜರ್ಮನಿಯಲ್ಲಿ ಹಿಟ ್ಲರ್ ಮತ್ತು  ಇಟಲಿಯಲ್ಲಿ ಮುಸೋಲಿನಿಯಂತಹ ಸರ್ವಾಧಿಕಾರಿಗಳು ಬೆಳೆದರು. ಪೂರ್ವ ಏಷ್ಯಾದಲ್ಲಿ ತನ್ನ ಸಾಮ್ರಾಜ್ಯವನ್ನು ವಿಸ್ತರಿಸಲು ಚೀನಾದ ಮೇಲೆ ಜಪಾನ್ ದಾಳಿಗಳನ್ನು ನಡೆಸುತ್ತಿತ್ತು. ಜರ್ಮನಿಯು ಪೋಲೆಂಡಿನ ಮೇಲೆ ದಾಳಿ ಮಾಡುವುದರೊಂದಿಗೆ ಪ್ರಾರಂಭವಾಯಿತು.

6. ಶೀತಲ ಸಮರ ಎಂದರೇನು ?
ಎರಡನೆಯ ಮಹಾಯುದ್ಧದ ನಂತರ ಜಾಗತಿಕವಾಗಿ ಎರಡು ಬಣಗಳ ನಡುವೆ ರಾಜಕೀಯ, ಆರ್ಥೀಕ, ಮಿಲಿಟರಿ ಮುಂತಾದ ವಿಷಯಗಳಲ್ಲಿ ಉದ್ಭವಿಸಿದ ನಿರಂತರ ಭಯ, ದ್ವೇಷ, ಅಸೂಯೆ ಮತ್ತು ಆತಂಕದ ಪರಿಸ್ಥಿತಿಯೇ ಶೀತಲ ಸಮರ.

7. ಚೀನಾ ಕ್ರಾಂತಿಯ ಪರಿಣಾಮಗಳಾವುವು ?
ಷಿಯಾಂಗ್-ಕೈ-ಷೇಕ್ನು ಸೋತು ತೈವಾನ್ಗೆ ಪಲಾಯನ ಮಾಡಿದನು. 1949ರ ಅಕ್ಟೋಬರ್ 1 ರಂದು ಜನತಾ ವಿಮೋಚನಾ ಸೈನ್ಯ ಪ್ರವೇಶಿಸಿತು.ಚೀನಾದಲ್ಲಿ ಪೀಕಿಂಗ್ (ಈಗಿನ ಬೀಜಿಂಗ್) ಜನತಾ ಗಣತಂತ್ರ ಸ್ಥಾಪನೆಯಾಯಿತು. ಮಾವೋತ್ಸೆ ತುಂಗ್ ಅದರ ಅಧ್ಯಕ್ಷನಾದನು.

8. ಅಮೆರಿಕಾವು ಆರ್ಥಿಕ ಮಹಾಕುಸಿತದಿಂದ ಹೇಗೆ ಹೊರ ಬಂದಿತು ವಿವರಿಸಿ.
1927ರಲ್ಲಿ ಉಂಟಾದ ಆರ್ಥಿಕ ಮಹಾಕುಸಿತ ದಿಂದಾಗಿ ಅಮೇರಿಕಾದಲಿ ್ಲನ ರಾಜಕೀಯದಲ್ಲಿ ಸಾಕಷ್ಟು ಬದಲಾವಣೆಯನ್ನು ತಂದಿತ್ತು.  ದ್ವಿತೀಯ ಮಹಾಯುದ್ಧದ ಸಮಯದಲ್ಲಿ ಜಪಾನ್ ಅಮೆರಿಕಾದ ನೌಕಾನೆಲೆ ಪಲರ್್ಹಾರ್ಬರ್ ಮೇಲೆ ದಾಳಿ ನಡೆಸಿತು. ಇದರಿಂದಾಗಿ ಅಮೆರಿಕಾ ಮಿತ್ರರಾಷ್ಟ್ರಗಳ ಪರವಾಗಿ ಯುದ್ಧ ಪ್ರವೇಶಿಸುವಂತಾಯಿತು. ಜನತೆಯನ್ನು ಸೈನ್ಯವಾಗಿ ರೂಸ್ವೆಲ್ಟ್ನು ಯುದ್ಧಕ್ಕೆ ಸನ್ನದ್ದಗೊಳಿಸಿದನು. ಮಹಿಳೆಯರಿಗೆ ಸಾರ್ವಜನಿಕ ಕ್ಷೇತ್ರದಲ್ಲಿ ದುಡಿಯಲು ಪ್ರೋತ್ಸಾಹಿಸಿದನು. ಅಮೆರಿಕಾ ಯುದ್ಧದಲ್ಲಿ ಜಯಗಳಿಸಿತು. ದ್ವಿತೀಯ ಮಹಾಯುದ್ಧ ನಡೆಯುತ್ತಿರುವಾಗಲೇ ವಿಶ್ವಸಂಸ್ಥೆಯ ಸ್ಥಾಪನೆಗೆ ಸಹಕರಿಸಿ, ಅದರ ಸ್ಥಾಪನೆಗೂ ಕಾರಣವಾಯಿತು. 1945ರ ನಂತರ ಅಮೆರಿಕಾ ಜಗತ್ತಿನ ಬಲಿಷ್ಟ ರಾಷ್ಟ್ರವಾಗಿ ಹೊರಹೊಮ್ಮಿದೆ.

logoblog

Thanks for reading ರಷ್ಯಾದ ಕ್ರಾಂತಿಯಲ್ಲಿ

Previous
« Prev Post

No comments:

Post a comment