Goslink

Goslink is providing you latest news, articles, reviews.

Wednesday, 10 February 2021

ಉತ್ತರ

  Govt Orders Link       Wednesday, 10 February 2021

 ಕೆಳಗಿನ ವಾಕ್ಯಗಳಲ್ಲಿ ಗುಂಪುಗಳಲ್ಲಿ ಚರ್ಚಿಸಿ
ಉತ್ತರ ಬರೆಯಿರಿ.
1. ಬ್ರಿಟಿಷ್ ಏಕರೂಪದ ಆಡಳಿತ ವ್ಯವಸ್ಥೆಯು ಭಾರತೀಯರಲ್ಲಿ ಹೇಗೆ ರಾಷ್ಟ್ರೀಯತೆಯನ್ನು ಬೆಳೆಸಿತು?
ಬ್ರಿಟಿಷರು ತಮ್ಮ ಒಡೆದು ಆಳುವ ನೀತಿ, ದತ್ತು ಮಕ್ಕಳಿಗೆ ಹಕ್ಕಿಲ್ಲ, ಸಹಾಯಕ ಸೈನ್ಯ ಪದ್ದತಿಯಂತಹ ಪ್ರಯೋಗಗಳಿಂದ ಭಾರತದ ಮೇಲೆ ನಿಯಂತ್ರಣವನ್ನು ಸಾಧಿಸುವಲ್ಲಿ ಯಶಸ್ವಿಯಾದರು. ಇದರಿಂದಾಗಿ ಇಡೀ ಭಾರತಕ್ಕೆ ಏಕರೂಪದ ಆಡಳಿತ ಜಾರಿಗೆ ಬಂದಿತು. ದೇಶದಲ್ಲಿ ಹಲವಾರು ಸಂಸ್ಥಾನಗಳು ಅಸ್ತಿತ್ವದಲ್ಲಿದ್ದರೂ ಅವುಗಳ ಮೇಲೆ ಸಹ ಬ್ರಿಟಿಷರು ನಿಯಂತ್ರಣ ಹೊಂದಿದ್ದರು. ಇದರಿಂದ ಆಡಳಿತ ವ್ಯವಸ್ಥೆಯಲ್ಲಿ ಏಕರೂಪತೆಯನ್ನು, ಕಾನೂನು ಸುವ್ಯವಸ್ಥೆಯನ್ನು ತರುವಲ್ಲಿ ಬ್ರಿಟಿಷರು ಸಫಲರಾದರು. ಇದರಿಂದ ದೇಶದಲ್ಲಿ ಸಮಾನತೆ ಮತ್ತು ಏಕರೂಪದ ಅಧಿಕಾರಶಾಹಿತ್ವ ಅಸ್ತಿತ್ವಕ್ಕೆ ಬಂದಿತು.

2.ಕೈಗಾರಿಕಾ ಕ್ರಾಂತಿಯಿಂದ ಭಾರತದಲ್ಲಾದ ಬದಲಾವಣೆಗಳೇನು?
18ನೆಯ ಶತಮಾನದಲ್ಲಿ ಇಂಗ್ಲೆಂಡಿನಲ್ಲಾದ ಕೈಗಾರಿಕಾ ಕ್ರಾಂತಿಯು ದೇಶೀ ಕೈಗಾರಿಕೆಗಳ ಮೇಲೆ ತೀವ್ರವಾಗಿ ಪರಿಣಾಮ ಬೀರಿತು. ಇದರಿಂದಾಗಿ ಐರೋಪ್ಯ ಮಾರುಕಟ್ಟೆಯಲ್ಲಿ ತೀವ್ರ ಅಂತರ ಉಂಟಾಗಿ ಅಸಮತೋಲನ ಬೆಳೆಯಿತು. ಒಂದು ಕಾಲದಲ್ಲಿ ಭಾರತದ ಸಿದ್ದವಸ್ತುಗಳ ರಫ್ತು ಸದಾಕಾಲ ಆಮದಿಗಿಂತ ಹೆಚ್ಚಾಗಿರುತ್ತಿತ್ತು. ಕೈಗಾರಿಕಾ ಕ್ರಾಂತಿಯಿಂದಾಗಿ ಉತ್ಪಾದನಾ ಕೇಂದ್ರವಾಗಿದ್ದ ಭಾರತ ಕೇವಲ ಕಚ್ಚಾ ವಸ್ತುಗಳನ್ನು ರಫ್ತು ಮಾಡುವ ಸ್ಥಿತಿ ತಲುಪಿತು. ಬ್ರಿಟಿಷರು ಸಿದ್ದವಸ್ತುಗಳನ್ನು ಭಾರತಕ್ಕೆ ತಂದು ಕಡಿಮೆ ಬೆಲೆಗೆ ಮಾರಲು ಪ್ರಾರಂಭಿಸಿದರು. ಯಂತ್ರಗಳ ಮೂಲಕ ಅತಿ ಕಡಿಮೆ ವೆಚ್ಚದಲ್ಲಿ ಉತ್ಪಾದಿಸಲ್ಪಟ್ಟ ಇಂಗ್ಲೆಂಡಿನ ಸರಕುಗಳೊಂದಿಗೆ ಭಾರತದ ಸರಕುಗಳು ಸ್ಪರ್ಧಿಸಲಾರದೆ ಸೋತವು. ಇದರಿಂದಾಗಿ ಕೈಗಾರಿಕೆಗಳು ತೀವ್ರ ನಷ್ಟವನ್ನು ಅನುಭವಿಸಿ, ಕಾಮರ್ಿಕರು ನಿರುದ್ಯೋಗಿಗಳಾದರು. ಇದು ಭಾರತದ ಅರ್ಥ ವ್ಯವಸ್ಥೆಯ ಮೇಲೆ ಗಂಭೀರವಾದ ಪರಿಣಾಮವನ್ನು ಬೀರಿತು.

3. ಮಹಲ್ವಾರಿ ಪದ್ದತಿ ಎಂದರೇನು?
ಈ ಪದ್ಧತಿಯನ್ನು ಆರ್. ಎಂ. ಬರ್ಡ್ ಮತ್ತು ಜೇಮ್ಸ್ ಥಾಮ್ಸನ್ ಪ್ರಯೋಗಿಸಿದರು. 'ಮಹಲ್' ಎಂದರೆ ತಾಲ್ಲೂಕು ಎಂದರ್ಥ. ಇಲ್ಲಿ ಕಂದಾಯ ವಸೂಲಿಗಾಗಿ ಜಮೀನ್ದಾರರ ಬದಲು ಮಹಲ್ದಾರರನ್ನು ನೇಮಿಸಲಾಯಿತು. ಮಹಲ್ದಾರರು ನಿಗಧಿತ ಕಂದಾಯವನ್ನು ಭೂ ಅಳತೆಯ ಆಧಾರದ ಮೇಲೆ ರೈತರಿಂದ ವಸೂಲಿ ಮಾಡಿ ಸರ್ಕಾರಕ್ಕೆ ನೀಡಬೇಕಾಗಿತ್ತು. ಜಮೀನ್ದಾರರುಗಳಂತೆಯೇ ಮಧ್ಯವತರ್ಿಗಳಾಗಿ ಕೆಲಸ ಮಾಡಿದ ಇವರು ಅಪಾರ ಸಂಪತ್ತನ್ನು ಕ್ರೂಢೀಕರಿಸಿ ರೈತರ ಶೋಷಣೆಗೆ ಕಾರಣರಾದರು.

4. ಬ್ರಿಟಿಷರು ಶಿಕ್ಷಣ ಕ್ಷೇತ್ರದಲ್ಲಿ ಕೈಗೊಂಡ ಸುಧಾರಣೆಗಳಾವುವು?
ಪರಂಪರಾನುಗತವಾಗಿ ಪಾಠಶಾಲೆಗಳು ಮತ್ತು ಮದರಸಾಗಳು ನೀಡುವ ಧಾರ್ಮಿಕ ಶಿಕ್ಷಣವು ಕೆಲವರಿಗಷ್ಠೆ ಸೀಮಿತವಾಗಿತ್ತು. ಇಂಗ್ಲಿಷರು ತಮ್ಮ ಅಸ್ತಿತ್ವವನ್ನು ಕಂಡುಕೊಳ್ಳಲು ಪಾಶ್ಚಾತ್ಯ ಶಿಕ್ಷಣ ನೀಡಬೇಕಿತ್ತು. ಇದರಿಂದಾಗಿ ಪಾಶ್ಚಿಮಾತ್ಯ ವಿಚಾರಗಳ ಪ್ರಯೋಗಗಳಿಂದ ಅರಿವುಂಟಾಯಿತು. ಕಂಪನಿಯು ಕ್ರಮಬದ್ದವಾದ ಶಿಕ್ಷಣವನ್ನು ಜಾರಿಗೊಳಿಸಿತು. ಲಾರ್ಡ್ ವಿಲಿಯಂ ಬೆಂಟಿಂಕನು ಮೆಕಾಲೆ ವರದಿಯಂತೆ ಇಂಗ್ಲಿಷ್ ಶಿಕ್ಷಣಕ್ಕೆ ಬುನಾದಿ ಹಾಕಿದನು. ಇದು ಆಂಗ್ಲ ಶಿಕ್ಷಣವನ್ನು ಬಲಪಡಿಸಿ ಪಾಶ್ಚಿಮಾತ್ಯ ಸಾಹಿತ್ಯದ ಮತ್ತು ವಿಚಾರಗಳ ಅಧ್ಯಯನವನ್ನು ಬೆಂಬಲಿಸಿತು.

5. 'ಸಾರಿಗೆ- ಸಂಪರ್ಕವು ಸ್ವಾತಂತ್ರ್ಯ ಚಳುವಳಿಯ ಮೂಲ'. ವಿವರಿಸಿ.
ಬ್ರಿಟಿಷರು ತಾವು ಹೋದಲ್ಲೆಲ್ಲಾ ಸಾರಿಗೆ ಮತ್ತು ಸಂಪರ್ಕವನ್ನು ತಮ್ಮ ಸ್ವಹಿತಾಸಕ್ತಿಗಾಗಿ ನಿಮರ್ಿಸಿಕೊಂಡರು. ಭಾರತದ ಮೂಲೆ ಮೂಲೆಗಳನ್ನು ಶೀಘ್ರವಾಗಿ ತಲುಪಲು ರಸ್ತೆ ಮತ್ತು ರೈಲಿನ ವ್ಯವಸ್ಥೆಯನ್ನು ಕಲ್ಪಿಸಲಾಯಿತು. 1853ರಲ್ಲಿ ಮುಂಬೈ-ಥಾಣಗಳ ನಡುವೆ ಪ್ರಥಮ ರೈಲು ಸಂಚಾರ ಪ್ರಾರಂಭವಾಯಿತು. ಮೂಲದಲ್ಲಿ ಈ ವ್ಯವಸ್ಥೆಗಳನ್ನು ಕಚ್ಚಾವಸ್ತು ಹಾಗೂ ಸಿದ್ಧವಸ್ತುಗಳ ಸಾಗಾಣಿಕೆ ಮತ್ತು ಸೇನೆಯು ಸಂಚರಿಸಲು ನಿಮರ್ಿಸಲಾಯಿತು. ಪರೋಕ್ಷವಾಗಿ ಇವು ದೇಶೀಯರನ್ನು ಸಂಘಟಿಸಲು, ಸಂಚರಿಸಲು ಸಹಾಯವಾಗಿ ಪರಸ್ಪರ ತಮ್ಮ ಸಮಸ್ಯೆಗಳನ್ನು ಹಂಚಿಕೊಳ್ಳಲು, ಪ್ರಚಾರಮಾಡಲು ಸಾಧ್ಯವಾಯಿತು. ಇದು ದೇಶೀಯರನ್ನು ಒಂದುಗೂಡಿಸಿ ರಾಷ್ಟ್ರೀಯತೆಗೆ ಕಾರಣವಾಯಿತು.

6.ಭಾರತದಲ್ಲಿ ಪತ್ರಿಕೋದ್ಯಮ ಆರಂಭಗೊಂಡು ಬೆಳೆದು ಬಂದ ರೀತಿಯನ್ನು ವಿವರಿಸಿ.
ಭಾರತದಲ್ಲಿ ಪತ್ರಿಕೋದ್ಯಮದ ಉಗಮ ಹಾಗೂ ಅದರ ಪಾತ್ರವು ಬಹುತೇಕವಾಗಿ ಸ್ವಾತಂತ್ರ್ಯ ಹೋರಾಟದ ಚರಿತ್ರೆಯೊಂದಿಗೆ ಬೆಸೆದು ಕೊಂಡಿದೆ. ಭಾರತದಲ್ಲಿ ನವಜಾಗೃತಿಯ ಉದಯಕ್ಕೆ ಅವುಗಳು ನಿರ್ವಹಿಸಿದ ಪಾತ್ರ ಅಮೋಘವಾಗಿದೆ. ಭಾರತದಲ್ಲಿ ಭಾಷಾ ಪತ್ರಿಕೆಗಳ ಪ್ರಾರಂಭವನ್ನು 1818ರಿಂದ ಕಾಣಬಹುದು. 'ದಿಗ್ಧರ್ಶನ' ಎಂಬ ಮಾಸ ಪತ್ರಿಕೆ, 'ಸಮಾಚಾರ ದರ್ಪಣ' ಎಂಬ ವಾರಪತ್ರಿಕೆ ಬಂಗಾಳಿ ಭಾಷೆಯಲ್ಲಿ ಹೊರಬಂದವು. ರಾಮ್ ಮೋಹನರಾಯರವರು 'ಸಂವಾದ ಕೌಮುಧಿ' ಎಂಬ ವಾರಪತ್ರಿಕೆಯನ್ನು ಆರಂಭಿಸಿದರು.

7.ರೈತವಾರಿ ಪದ್ಧತಿಯನ್ನು ಎಲ್ಲೆಲ್ಲಿ ಜಾರಿಗೆ ತರಲಾಯಿತು?
ಮದ್ರಾಸ್, ಮುಂಬೈ, ಸಿಂಧ್, ಬಿರಾರ್, ಅಸ್ಸಾಂ ಭಾಗಗಳಲ್ಲಿ ಜಾರಿಗೆ ತರಲಾಯಿತು.

8.ರೈತವಾರಿ ಪದ್ಧತಿಯ ಲಕ್ಷಣಗಳೇನು?
ಈ ಪದ್ಧತಿಯನ್ನು ಅಲೆಕ್ಸಾಂಡರ್ ರೀಡ್ ಪ್ರಯೋಗಿಸಿದರೆ ಥಾಮಸ್ ಮನ್ರೋ ಇದನ್ನು ಮುಂದುವರಿಸಿದನು. ಈ ಪದ್ಧತಿಯಲ್ಲಿ ಭೂಒಡೆತನದ ಹಕ್ಕನ್ನು ರೈತರು ಪಡೆದು ಕಂದಾಯವನ್ನು ಭೂಅಳತೆಯ ಆಧಾರದ ಮೇಲೆ ಪಾವತಿ ಮಾಡಬೇಕಿತ್ತು. ರೈತರು ಕಂದಾಯವನ್ನು ಕಟ್ಟಲು ವಿಫಲನಾದಾಗ ಭೂಮಿಯ ಹಕ್ಕನ್ನು ಕಳೆದುಕೊಳ್ಳುತ್ತಿದ್ದನು. ಆಗ ಭೂಮಿಯನ್ನು ಸರ್ಕಾರವು ಮಾರಾಟಮಾಡುವ ಅಧಿಕಾರವನ್ನು ಹೊಂದಿತ್ತು. ಈ ಪದ್ಧತಿಯ ಪ್ರಕಾರ ಜಮೀನುಗಳಿಗೆ ಸಂಬಂಧಿಸಿದ ವ್ಯಾಜ್ಯಗಳನ್ನು ಗ್ರಾಮಪಂಚಾಯಿತಿಯ ಬದಲು ನ್ಯಾಯಾಲಯಗಳಲ್ಲಿ ನಡೆಸಬೇಕಿತ್ತು.

9.ಜಮೀನ್ದಾರಿ ಪದ್ದತಿ ಎಲ್ಲೆಲ್ಲಿ ಜಾರಿಯಲ್ಲಿತ್ತು?
ಬಂಗಾಳ , ಬಿಹಾರ, ಒರಿಸ್ಸಾಗಳಲ್ಲಿ ಜಾರಿಯಲ್ಲಿತ್ತು.

10.ರಾಜರುಗಳ ಆಳ್ವಿಕೆಯ ಕಾಲದಲ್ಲಿದ ಜಮೀನ್ದಾರಿ ಪದ್ಧತಿಯನ್ನು ವಿವರಿಸಿ.
ರಾಜರುಗಳ ಆಳ್ವಿಕೆಯ ಕಾಲದಲ್ಲಿ ರಾಜರು ಕಂದಾಯ ವಸೂಲಾತಿಯ ಹಕ್ಕನ್ನು ಹೊಂದಿದ್ದರು ಕಂದಾಯವನ್ನು ರೈತರು ಬೆಳೆಸ ಬೆಳೆಯ ಪ್ರಮಾಣದ ಆಧಾರದಲ್ಲಿ ನಿಗಧಿಪಡಿಸಲಾಗುತ್ತಿತ್ತು. ಹರಾಜು  ಮಾಡುವ ಪದ್ಧತಿ ಜಾರಿಗೆ ಬಂದ ನಂತರದಲ್ಲಿ ಹರಾಜಾದ ಮೊತ್ತವನ್ನು ಹಳ್ಳಿಯು     ವಹಿಸಿಕೊಳ್ಳುತ್ತಿತ್ತು.  ಭೂ ಒಡೆತನವು ಹಳ್ಳಿಯಲ್ಲಿಯೇ ಉಳಿದಿತ್ತು.

11.ಭೂಕಂದಾಯ ವ್ಯವಸ್ಥೆಗೆ ಸಂಬಂಧಿಸಿದಂತೆ ಬ್ರಿಟಿಷರು ಹಲವು ಹೊಸಪದ್ಧತಿಗಳನ್ನು ಜಾರಿಗೆ ತರಲು ಕಾರಣವೇನು?
ಬ್ರಿಟಿಷರ ಮೂಲ ಉದ್ದೇಶವು ಲಾಭಗಳಿಸಿಕೊಳ್ಳುವುದ್ದಾದರಿಂದ ಆಡಳಿತವನ್ನು ಅವರ ಹಿತಾಸಕ್ತಿಗನುಗುಣವಾಗಿ ರೂಪಿಸಿಕೊಂಡರು. ಇದರಿಂದಾಗಿ ಭೂಕಂದಾಯ ವ್ಯವಸ್ಥೆಗೆ ಸಂಬಂಧಿಸಿದಂತೆ ಹಲವು ಹೊಸಪದ್ಧತಿಗಳನ್ನು ಇವರು ಜಾರಿಗೆ ತಂದರು.

12.ಬ್ರಿಟಿಷರು ಜಾರಿಗೆ ತಂದ ಭೂಕಂದಾಯ ವ್ಯವಸ್ಥೆಗಳು ಯಾವುವು?
ಜಮೀನ್ದಾರಿ ಪದ್ದತಿ, ರೈತವಾರಿ ಪದ್ಧತಿ ,ಮಹಲ್ವಾರಿ ಪದ್ಧತಿ.

13.ಕೈಗಾರಿಕೆಗಳಲ್ಲಿ ವಿದೇಶಿ ಬಂಡವಾಳ ಮತ್ತು ವಿದೇಶಿ ಮಾಲೀಕತ್ವ ಪರಿಣಾಮವೇನು?
ಕೈಗಾರಿಕೆಗಳಲ್ಲಿ ವಿದೇಶಿ ಬಂಡವಾಳ ಮತ್ತು ವಿದೇಶಿ ಮಾಲೀಕತ್ವ ಬಂದಿತು. ಇಂಗ್ಲೆಂಡಿನ ಕೈಗಾರಿಕಾ ಕ್ರಾಂತಿ ಮತ್ತು ತಾಂತ್ರಿಕತೆಯ ಬೆಳವಣಿಗೆಯ ಪರಿಣಾಮವಾಗಿ ಹತ್ತಿ ಬಟ್ಟೆ, ಸೆಣಬು ಮತ್ತು ಕಾಗದ ತಯಾರಿಕೆ, ಕಾಫಿ ತೋಟಗಳು, ಉದ್ಯಮಗಳು ನಿಧಾನವಾಗಿ ಬೆಳೆದವು. ದೇಶದ ಪ್ರಮುಖ ಪಟ್ಟಣಗಳಲ್ಲಿ ನವೀಕೃತ, ಯಾಂತ್ರಿಕತೆಯಿಂದ ಕೂಡಿರುವ ಕೈಗಾರಿಕೆಗಳು ಅಸ್ತಿತ್ವಕ್ಕೆ ಬಂದವು. ಭವಿಷ್ಯದಲ್ಲಿ ಇವುಗಳ ವ್ಯಾಪ್ತಿಯು ಹೆಚ್ಚಿತು.

logoblog

Thanks for reading ಉತ್ತರ

Previous
« Prev Post

No comments:

Post a comment