Goslink

Goslink is providing you latest news, articles, reviews.

Tuesday, 2 February 2021

ಉಷ್ಣ

  Govt Orders Link       Tuesday, 2 February 2021

                                                                            7. ಉಷ್ಣ :
1. ಉಷ್ಣ ಎಂಜಿನ್ ಎಂದರೇನು?

ಉಷ್ಣ ಶಕ್ತಿಯನ್ನು ಯಾಂತ್ರಿಕ ಶಕ್ತಿಯನ್ನಾಗಿ ಪರಿವರ್ತಿಸುವ ಸಾಧನ.

2. ಹಬೆ ಎಂಜಿನ್ ನನ್ನು ಆವಿಷ್ಕರಿಸಿದ ವಿಜ್ಞಾನಿ ಯಾರು?
ಜೇಮ್ಸ್ ವ್ಯಾಟ್

3. ಬಹಿರ್ದಹನ ಎಂಜಿನ್ ಎಂದರೇನು? ಉದಾ.ಕೊಡಿ
ದಹನ ಕ್ರಿಯೆ ಸಿಲಿಂಡರ್ನ ಹೊರಭಾಗದಲ್ಲಿ ನಡೆಯುವ ಎಂಜಿನ್, ಉದಾ: ಹಬೆ ಎಂಜಿನ್.

4. ಅಂತರ್ದಹನ ಎಂಜಿನ್ ಎಂದರೇನು ಉದಾ.ಕೊಡಿ.
ದಹನ ಕ್ರಿಯೆ ಎಂಜಿನ್ ನ ಒಳಭಾಗದಲ್ಲಿ ನಡೆಯುವ ಎಂಜಿನ್. ಉದಾ: ಪೆಟ್ರೋಲ್ ಎಂಜಿನ್ ಮತ್ತು ಡೀಸೆಲ್ ಎಂಜಿನ್.

5. ಎಂಜಿನ್ ಗಳಲ್ಲಿ ವಕ್ರದಂಡದ ಕೆಲಸವೇನು?
ರೇಖೀಯ ಚಲನೆಯನ್ನು ಭ್ರಮಣೀಯ ಚಲನೆಯನ್ನಾಗಿ ಪರಿವರ್ತಿಸುತ್ತದೆ.

                                                                            8. ಬೆಳಕು :
1. ರೋಹಿತ ಎಂದರೇನು?
ಸಂಕೀರ್ಣ ಬೆಳಕಿನಿನಂದ ಪಡೆದ ಏಳು ಕಿರಣ ಬಣ್ಣಗಳ ಶ್ರೇಣಿಗೆ ರೋಹಿತ ಎನ್ನುವರು

2. ರೋಹಿತ ದರ್ಶಕ ಎಂದರೇನು?
ಸಂಕೀರ್ಣ ಬೆಳಕಿನಿಂದ ಶುದ್ಧ ಬೆಳಕನ್ನು ಪಡೆಯುವ ಸಾಧನಕ್ಕೆ ರೋಹಿತ ದರ್ಶಕ ಎನ್ನುವರು.

3. ಬೆಳಕಿನ ವರ್ಣವಿಭಜನೆಗೆ ಪ್ರಮುಖ ಕಾರಣವನ್ನು ತಿಳಿಸಿ.
ಒಂದು ಮಾಧ್ಯಮದ ವಕ್ರೀಭವನ ಸೂಚ್ಯಂಕವು ಬೇರೆ ಬೇರೆ ಬಣ್ಣಗಳಿಗೆ ಬೇರೆ ಬೇರೆಯಾಗಿರುವುದು.

4. ರೋಹಿತದಲ್ಲಿ ಹೆಚ್ಚು ಮತ್ತು ಕಡಿಮೆ ಬಾಗುವ ಬಣ್ಣ ಯಾವುವು?
ಹೆಚ್ಚು ಬಾಗುವ ಬಣ್ಣ - ನೇರಳೆ,     ಕಡಿಮೆ ಬಾಗುವ ಬಣ್ಣ - ಕೆಂಪು

5. ರೋಹಿತದರ್ಶಕದಲ್ಲಿ ಬಣ್ಣಗಳ ಅಧಿವ್ಯಾಪನೆ ಕಡಿಮೆ ಮಾಡಲು ಬಳಸುವ ಸಾಧನ ಯಾವುದು?  
ಮಸೂರ (ಸಮಾಂತರಕ)

6. ರಾಷ್ಟ್ರೀಯ ವಿಜ್ಞಾನ ದಿನವನ್ನು ಎಂದು ಆಚರಿಸಲಾತ್ತದೆ?
ಫೆಬ್ರವರಿ , 28.

7. ದ್ರವ್ಯಗಳನ್ನು ಸಂಯೋಜಿಸಿರುವ ಅಣು ಸಂರಚನೆಯಲ್ಲಿ ಬಳಸುವ ಪರಿಣಾಮ ಯಾವುದು?
ರಾಮನ್ ಪರಿಣಾಮ

                                                                            9. ಶಬ್ಧ :
1. ಶ್ರವಣಾತೀತ ತರಂಗಗಳು ಎಂದರೇನು?
20000 ಹಟ್ಜರ್ (20ಞ ಊದ) ಗಳಿಗಿಂತ ಹೆಚ್ಚಿನ ಆವೃತ್ತಿ ಹೊಂದಿರು ಶಬ್ಧದ ತರಂಗಗಳು.

2. ಶ್ರವಣಾತೀತ ಕ್ರಮವೀಕ್ಷಕ ಎಂದರೇನು?
ಶ್ರವಣಾತೀತ ತರಂಗಗಳನ್ನು ಬಳಸಿಕೊಂಡು ಮಾನವನ ದೇಹದ ಆಂತರಿಕ ಭಾಗಗಳ ಚಿತ್ರಣಗಳನ್ನು ಪಡೆಯುವ ಸಾಧನ.

3. ಸೋನಾರ್ ಎಂದರೇನು?
ಶ್ರವಣಾತೀತ ತರಂಗಗಳನ್ನು ಬಳಸಿಕೊಂಡು ಜಳಂತಗರ್ಾಮಿಗಳ ವೇಗ, ಜಲಗತ ವಸ್ತುಗಳ ದೂರ, ದಿಕ್ಕು ಮತ್ತು ಕಾಲ ವಸ್ನು ಅಳೆಯುವ ಸಾಧನ.  ( ಶಬ್ಧ ಪ್ರಸರಣದಿಂದ ವ್ಯಾಪ್ತಿ ನಿರ್ಧಾರ )

4. ಡಾಪ್ಲರ್ ಪರಿಣಾಮ ತಿಳಿಸಿ.
ಶಬ್ಧ ತರಂಗಗಳ ಆಕರ ಮತ್ತು ವೀಕ್ಷಕರ ನಡುವಿನ ಸಾಪೇಕ್ಷ ಚಲನೆಯಿಂದಾಗಿ ತರಂಗಗಳ ಆವೃತ್ತಿಯಲ್ಲಿ ತೋರಿಕೆಯ ಬದಲಾವಣೆ ಆಗುತ್ತದೆ. ಇದನ್ನು ಡಾಪ್ಲರ್ ಪರಿಣಾಮ ಎನ್ನುವರು.

5. ಡಾಪ್ಲರ್ ಪರಿಣಾಮದ ಉಪಯೋಗ ತಿಳಿಸಿ.
* ಜಲಂತಾರ್ಗಾಮಿಗಳ ವೇಗ, * ಕೃತಕ ಉಪಗ್ರಹಗಳ ಜಾಡನ್ನು ಪತೆ ಹಚ್ಚುವುದು, * ವಾಹನಗಳ ವೇಗದ ಮಿತಿಯನ್ನು ತೀಲಿಯಲು ರೆಡಾರ್ ಗನ್ನಲ್ಲಿ ಬಳಕೆ, * ನಕ್ಷತ್ರಗಳ ಅಧ್ಯಯನ, * ಗ್ರಹ ಮತ್ತು ನಕ್ಷತ್ರಗಳ ಚಲನೆ ಮತ್ತು ಪರಿಭ್ರಮಣೆ * ಗೆಲಾಕ್ಸಿಗಳ ಜವವನ್ನು ಅಂದಾಜು ಮಾಡಲು.

                                                                        10. ವಿಶ್ವ;
1. ಸೂರ್ಯನಿಂದ ಬೆಳಕು ಭೂಮಿಗೆ ಬರಲು ತೆಗೆದಕೊಳ್ಳುವ ಕಾಲ ಎಷ್ಟು?    
8.2 ನಿಮಿಷಗಳು

2. ಕರೋನ ಎಂದರೇನು?
ಸೌರವಾತಾವರಣದಲ್ಲಿ ವರ್ಣಮಂಡಲದಿಂದ ಆಚೆಗಿರುವ ಪ್ರದೇಶವನ್ನು ಕರೋನ ಎನ್ನುವರು,ಇದನ್ನು ಸಂಪೂರ್ಣ ಸೂರ್ಯ ಗ್ರಹಣದ ಸಂದರ್ಭದಲ್ಲಿ ವೀಕ್ಷಿಸಬಹುದು.

3. ದೀಪ್ತತೆ ಎಂದರೇನು?
ಸೂರ್ಯ ಅಥವಾ ನಕ್ಷತ್ರಗಳು ಒಂದು ಸೆಕೆಂಡಿಗೆ ಹೊರಹಮ್ಮಿಸುವ ಒಟ್ಟು ಶಕ್ತಿ.

4. ವರ್ಣಮಂಡಲ ಎಂದರೇನು?  
ತೇಜೋಮಂಡಲದ ಮೇಲುಗಡೆಯ ಪ್ರದೇಶ.

5. ಕಣಗಟ್ಟುಗಳು ಎಂದರೇನು?
ಸೂರ್ಯನ ಮೇಲ್ಮೈನಲ್ಲಿ ಕಂಡುಬರುವ ಕಾಳುಕಾಳಾದ ರಚನೆ.

6. ಸ್ಪಿಕ್ಯೂಲ್ಗಳು ಎಂದರೇನು?
ಸೂರ್ಯನ ಮೇಲ್ಮೈ ಮೇಲೆ ಕಂಡುಬರುವ ದಾರದಂತಹ ಎಳೆಗಳು.

7. ಕಾಂತಿಮಾನ ಎಂದರೇನು?  
ನಕ್ಷತ್ರಗಳ ಗೋಚರ ಪ್ರಕಾಶತೆಯನ್ನು ಅಳೆಯುವ ಮಾನ.

8. ತೇಜೋಮಂಡಲ ಎಂದರೇನು?
ಸೂರ್ಯನ ದೃಗ್ಗೋಚರ ಬಿಲ್ಲೆಗೆ ತೇಜೋಮಂಡಲ ಎನ್ನುವರು.

9. ಗೆಲಾಕ್ಸಿ ಎಂದರೇನು?  
ಬೃಹತ್ ಗಾತ್ರದ ನಕ್ಷತ್ರಗಳ ಒಟ್ಟು ಸಮೂಹಕ್ಕೆ ಗೆಲಾಕ್ಸಿ ಎನ್ನುವರು.

10. ಸೂರ್ಯನ ಅಗಾಧ ಶಕ್ತಿಗೆ ಕಾರಣವಾದ ಕ್ರಿಯೆಗಳನ್ನು ಹೆಸರಿಸಿ.
ಉಷ್ಣ ಬೈಜಿಕ ಸಮ್ಮಿಲನ ಕ್ರಿಯೆ ಅಥವಾ ಪ್ರೋಟಾನ್ - ಪ್ರೋಟಾನ್ ಸರಪಳಿ ಕ್ರಿಯೆ ಮತ್ತು ಕಾರ್ಬನ್ ಚಕ್ರ

11. ಚಂದ್ರಶೇಖರ ಮಿತಿ ಯ ಮೌಲ್ಯ ಎಷ್ಟು?  
1.4 ಸೌರರಾಶಿ

12. ಸೂರ್ಯನ ಮೇಲ್ಮೈ ತಾಪ ಎಷ್ಟು?  
6000 ಕೆಲ್ವಿನ್

13. ಸೌರಕಲೆಗಳು ಎಂದರೇನು?
ಸೂರ್ಯನ ಮೇಲ್ಮೈನಲ್ಲಿ ಕಂಡುಬರುವ ಅನಿಯತ ಕಪ್ಪು ಮಚ್ಚೆಗಳನ್ನು ಸೌರಕಲೆ ಎನ್ನುವರು. ಇಲ್ಲಿ ತಾಪ ಸುಮಾರು 4000 ಕೆಲ್ವಿನ್ ಇರುತ್ತದೆ. ಇದಕ್ಕೆ ಕಾರಣ ಸೂರ್ಯನ ಗರ್ಭದಲ್ಲಿ ನಡೆಯುವ ಕಾಂತೀಯ ಚಟುವಟಿಕೆಗಳು.

14. ಸೂರ್ಯನಂತಹ ನಕ್ಷತ್ರದ ಕೊನೆಯ ಹಂತ ಯಾವುದು?   
ಕೃಷ್ಣಕುಬ್ಜ

15. ಸೂರ್ಯನರಾಶಿಗಿಂತ ಕಡಿಮೆ ರಾಶಿ ಹೊಂದಿರುವ (1.4 ಸೌರರಾಶಿಗಿಂತ ಕಡಿಮೆ) ನಕ್ಷತ್ರಗಳ ಕೊನೆಯ ಹಂತ ಯಾವುದು?
ಶ್ವೇತಕುಬ್ಜ

16. ಸೂರ್ಯನರಾಶಿಗಿಂತ 10 ಪಟ್ಟು ಅಥವಾ ಅದಕ್ಕಿಂತ ಹೆಚ್ಚು ರಾಶಿ ಹೊಂದಿರುವ ನಕ್ಷತ್ರಗಳ ಕೊನೆಯ ಹಂತ ಯಾವುದು?
ಕಪ್ಪುಕುಳಿ ಅಥವಾ ಕಪ್ಪುರಂಧ್ರ ಅಥವಾ ಬ್ಲ್ಯಾಕ್ ಹೋಲ್.

17. ಕಪ್ಪುಕುಳಿ ಇರುವಿಕೆಗೆ ಕಾರಣವಾದ ಅಂಶ ಯಾವುದು?
ಅದು ಇತರ ಕಾಯಗಳ ಮೇಲೆ ಹಾಕುವ ಗುರುತ್ವದಿಂದ.

18. ನಾಕ್ಷತ್ರಿಕ ವಿಕಾಸದ ಕೊನೆಯ ಮೂರು ಹಂತಗಳಾವುವು?
* ಕೃಷ್ಣಕುಬ್ಜ  ( 1.4 ಸೌರರಾಶಿಯಷ್ಟು )   
* ನ್ಯೂಟ್ರಾನ್ ನಕ್ಷತ್ರ ( ಸೌರರಾಶಿಗಿಂತ 5 ಪಟ್ಟು ಅಧಿಕ )
* ಕಪ್ಪುಕುಳಿ ( ಸೂರ್ಯನಿಗಿಂತ ಹತ್ತು ಪಟ್ಟು ಅಥವಾ ಅಧಿಕ ರಾಶಿ )

19. ನಕ್ಷತ್ರ ವಿಕಾಸದ ನಾಲ್ಕು ಹಂತಗಳನ್ನು ಹೆಸರಿಸಿ.
* ಆದಿ ನಕ್ಷತ್ರ    * ಸ್ಥಿರಸ್ಥಿತಿ ನಕ್ಷತ್ರ(ಕೆಂಪುದೈತ್ಯ)    * ಸೂಪರ್ ನೋವಾ    * ನ್ಯೂಟ್ರಾನ್ ನಕ್ಷತ್ರ

20. ಹಬಲ್ಲನ ನಿಯಮ ತಿಳಿಸಿ.
ಆಕಾಶ ಕಾಯಗಳು ನಮ್ಮಿಂದ ದೂರ ಸರಿಯುವ ವೇಗವು ಅವು ನಮ್ಮಿಂದ ಇರುವ ದೂರಕ್ಕೆ ನೇರ ಅನುಪಾತದಲ್ಲಿವೆ.

21. ಯುಗ್ಮತಾರೆಗೆ ಉದಾ.ಕೊಡಿ.  

ಲುಬ್ಧಕ

22. ನಮ್ಮ ಗೆಲಾಕ್ಸಿ ಹೆಸರು ಮತ್ತು ಆಕಾರವನ್ನು ಹೆಸರಿಸಿ  

ಆಕಾಶಗಂಗೆ (ಹಾಲುಹಾದಿ, ಮಿಲ್ಕಿವೇ), ಸುರುಳಿಯಾಕಾರದಲ್ಲಿದೆ.
 

logoblog

Thanks for reading ಉಷ್ಣ

Previous
« Prev Post

No comments:

Post a comment