Goslink

Goslink is providing you latest news, articles, reviews.

Saturday, 2 January 2021

ಕಲಿಯುವ ಮನಸ್ಸು

  Govt Orders Link       Saturday, 2 January 2021

                                                        


              ಕಲಿಯುವ ಮನಸ್ಸು

                                                                                                                                       - ಜಿ.ರಂಗನಾಥ್

ಶಾಲೆ ಪುನರಾರಂಭವಾದ ದಿನ ಅನೇಕ ತಂದೆತಾಯಂದಿರು ತಮ್ಮ ಬಾಳಿಗೆ ದೀಪವಾದ ಮಗುವಿಗೆ ಶುಭ ಹೇಳಿ ಶಾಲೆಗೆ ಕಳುಹಿಸಿದ್ದಾರೆ. ಕಲಿಸುವ ಧ್ಯೇಯ ಹೊತ್ತುನಿಂತ ಪ್ರತಿಶಾಲೆ ತನ್ನ  ಕಾಯಕದಲ್ಲಿ ತೊಡಗಿದೆ. ವೇಳಾಪಟ್ಟಿ, ಪಾಠಟಿಪ್ಪಣಿ, ಪಾಠಹಂಚಿಕೆ, ಪಾಠೋಪಕರಣ,  ಪಾಠಭೋಧನಾ  ಸಿದ್ಧಾಂತಗಳು,  ಸಿದ್ಧವಾಗಿ ಮಗುವಿಗೆ ಕಲಿಸುತ್ತಿವೆ. ಆದರೆ '' ಮಕ್ಕಳಿಗೆ ಕಲಿಯಲು ಆಸಕ್ತಿಯೇ ಇಲ್ಲ  ದೈಹಿಕವಾಗಿ ಶಾಲೆಯಲ್ಲಿದ್ದರೂ ಅವರ ಮನಸ್ಸು ಮಾತ್ರ ಬೇರೆಡೆಗೆ, ಬೇರೇನನ್ನೋ ಚಿಂತಿಸುತ್ತಿರುತ್ತದೆ. ಏಕೋ ಗೊತ್ತಾಗುತ್ತಿಲ್ಲ ಎಂದು  ಬಹಳ  ಜನ  ಅಭಿಪ್ರಾಯಪಡುತ್ತಾರೆ.  ಮನಶ್ಯಾಸ್ತ್ರಜ್ಞರು ಹೇಳುವಂತೆ   ಮನಸ್ಸು   ಸದಾ   ಚಿಂತನಾಶೀಲವಾಗಿರುತ್ತದೆ. ವೇಗವಾಗಿ ಚಲಿಸುವ ಶಕ್ತಿ ಹೊಂದಿರುತ್ತದೆ. ಹಾಗಾದರೆ ಅಂಥ ಮನಸ್ಸನ್ನು ಹಿಡಿದು ನಿಲ್ಲಿಸಿ ಕಲಿಯುವಂತೆ ಪ್ರೇರೇಪಿಸುವ ಕೆಲಸ ಹೇಗೆ ಮಾಡುವುದೆನ್ನುವುದೇ ನಮ್ಮ ಮುಂದಿರುವ ಪ್ರಶ್ನೆ. ಬೋಧನೆ ಹಾಗೂ ಕಲಿಕೆ ಒಂದು ಸಂಕೀರ್ಣ ಪ್ರಕ್ರಿಯೆ. ಈ ಹಂತದಲ್ಲಿ ಶಿಕ್ಷಕರು ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಅಂತಹ ಕೆಲವು ಸಮಸ್ಯೆಗಳೆಂದರೆ ಮಗುವನ್ನು ಕಲಿಕಾ ಪ್ರಕ್ರಿಯೆಯಲ್ಲಿ ತೊಡಗಿಸುವುದು ಹೇಗೆ?  ಅವರು  ಕಲಿಯುವಿಕೆಯಲ್ಲಿ  ಹೇಗೆ  ನಿರತರಾಗಬೇಕು? ಅವರು ಕಲಿಕಾ ವಿಧಾನವನ್ನು ಹೇಗೆ ರೂಢಿಸಿಕೊಳ್ಳಬೇಕು? ಅವರು ಧಾರಣಶಕ್ತಿಯನ್ನು ಹೇಗೆ ಉಳಿಸಿಕೊಳ್ಳಬೇಕು? ಅವರಲ್ಲಿ ಕೌಶಲಗಳು ಅಪೇಕ್ಷಣೀಯವಾದ ಹವ್ಯಾಸ ಹೇಗೆ ರೂಪುಗೊಳ್ಳಬೇಕು ಎಂಬೆಲ್ಲಾ ಸವಾಲುಗಳು ತರಗತಿ ಕೋಣೆಯಲ್ಲಿ ಏಳುವುದು ಸಹಜ.

ಈ ಸವಾಲುಗಳಿಗೆ ಪರಿಹಾರ ಹುಡುಕಲು ಶಿಕ್ಷಕರಾದವರು ಶೈಕ್ಷಣಿಕ ಮನಃಶಾಸ್ತ್ರದ ಅಧ್ಯಯನದಲ್ಲಿ ತೊಡಗಬೇಕಾಗುತ್ತದೆ. ಪಡೆದ ತರಬೇತಿ ಅವಧಿಗಿಂತ ವೃತ್ತಿನಿರತರಾದ ಮೇಲೆಯೇ ಇದರ ಅಗತ್ಯತೆ ಜಾಸ್ತಿಯಾಗುತ್ತದೆ. ಅಬ್ದುಲ್ ಕಲಾಂರವರು ತಮ್ಮ ಅದಮ್ಯ ಚೈತನ್ಯ ಪುಸ್ತಕದಲ್ಲಿ ಕಲಿಕೆಯು ಯೋಚಿಸುವ ಸ್ವಾತಂತ್ರ್ಯ ಮತ್ತು ಕಲ್ಪನೆಯ ಸ್ವಾತಂತ್ರ್ಯವನ್ನು  ಬಯಸುತ್ತದೆ  ಹಾಗು  ಇವೆರಡೂ  ಶಿಕ್ಷಕರಿಂದ  ಸುಲಭಸಾಧ್ಯವಾಗುತ್ತದೆ  ಎಂದಿದ್ದಾರೆ.  ಅಂತೆಯೇ ಶೈಕ್ಷಣಿಕ ಮನಶಾಸ್ತ್ರವು ಶಿಕ್ಷಕರಿಗೆ ಹೇಗೆ ಕಲಿಸಬೇಕು? ಏನನ್ನು ಕಲಿಸಬೇಕು? ಯಾವಾಗ ಕಲಿಸಬೇಕು? ಎಂಬುದನ್ನು ಕಲಿಸಿಕೊಡುತ್ತದೆ. 

ಈ ಕಲಿಯುವ ಮನಸ್ಸಿನ ಬಗ್ಗೆ ಗ್ರೀಕರ ಕಾಲದಿಂದಲೂ ಅಧ್ಯಯನಗಳಾಗಿವೆ. ಗ್ರೀಕ್ನ ಡೆಮಾಕ್ರಟೀಸ್ ಎಂಬುವನು ಮಗುವಿನಮನಸ್ಸಿನ ವಿಕಾಸದ ಮೇಲೆ ಮನೆಯ ಪ್ರಭಾವದ ಬಗ್ಗೆ ಅಧ್ಯಯನ
ಮಾಡಿದ್ದ. ಪ್ಲೇಟೊ, ಅರಿಸ್ಟಾಟಲ್ರು ಶಿಕ್ಷಣಕ್ಕೆ ಹೊಸ ರೂಪ ನೀಡಿದರೆ ಹರ್ಬಾರ್ಟ್, ರೂಸೊ, ಪ್ರೋಬೆಲ್, ಮಾಂಟೆಸೊರಿ, ಕಿಲ್ಪ್ಯಾಟ್ರಿಕ್, ಯಿ, ರಾಸ್ ರು ಶಿಕ್ಷಣ ಕ್ಷೇತ್ರದಲ್ಲಿ ಮನಶಾಸ್ತ್ರದ ಪಾರ್ತವನ್ನು ತಿಳಿದ್ದಾರೆ. ವಿದ್ಯಾರ್ಥಿಯ ಮನಸ್ಸನ್ನು ಅರಿತುಕೊಳ್ಳುವುದು ಕರ್ತವ್ಯವೆಂದು ಪೆಸ್ಟಾಲಜಿ ಎಂಬ ಶಿಕ್ಷಣತಜ್ಞ ಸಾರಿ  ಹೇಳಿದ್ದಾನೆ

ಶಿಕ್ಷಕರಾಗುವ ಸುಯೋಗ ಪಡೆದಿರುವ ನಾವೆಲ್ಲಾ ಕೇವಲ ಮಕ್ಕಳ ಹೆಸರು, ತಂದೆತಾಯಿ, ವಯಸ್ಸು, ಕಲಿಯುವಿಕೆ, ಗ್ರಹಿಕೆ ಬಗ್ಗೆ ತಿಳಿದರೆ ಸಾಲದು ಇಷ್ಟರಿಂದಲೇ ಮಗುವನ್ನು ಅರ್ಥಮಾಡಿಕೊಂಡಿದ್ದೇವೆ ಎಂದರೆ   ಪರಿಪೂರ್ಣವಾಗದು. ಮಗುವಿನ ಹಿನ್ನೆಲೆ, ಮಗುವಿನ ಇಷ್ಟ, ಸಾಮಥ್ರ್ಯ, ಆಸಕ್ತಿ ವಲಯ, ಆರೋಗ್ಯ, ಮಗುವಿನ ಗುರಿ, ಮಗುವಿಗೆ ಹೆಚ್ಚು ಸುಲಭದಲ್ಲಿ  ಅರ್ಥವಾಗುವ ವಿಧಾನ, ನಿರೀಕ್ಷೆ, ಮಗುವಿಗೆ ಗ್ರಹಿಕೆಯಲ್ಲಿರುವ  ತೊಡಕುಗಳು, ಕಲಿಕೆಗೆ ಕ್ಲಿಷ್ಟಕರವಾದ ಅಂಶಗಳು, ತಂದೆತಾಯಿ ಸ್ವಭಾವ,   ಮನೆಯಲ್ಲಿನ ವಾತಾವರಣ, ಮಗುವಿಗೆ ಯಾವುದರ ಬಗೆಗಾದರು ಭಯ ಇದೆಯಾ?, ಮಗುವಿನಲ್ಲಿ ಶಾಲೆ-ಶಿಕ್ಷಕರ ಬಗೆಗೆ ಯಾವ ಅಭಿಪ್ರಾಯವಿದೆ ಈ ಎಲ್ಲವನ್ನು ಅರ್ಥಮಾಡಿಕೊಂಡಾಗ ಮಾತ್ರ ಮಗುವಿನ ಕಲಿಕೆ ಸಾಕಾರಗೊಳ್ಳುತ್ತದೆ. ಕಲಿಯುವ ಮನಸ್ಸು ಜಾಗೃತಗೊಳ್ಳುತ್ತದೆ. ಇದರಿಂದ ಫಲಿತಾಂಶ ತನ್ನ ದಿಕ್ಕು ಬದಲಿಸುವುದರಲ್ಲಿ ಅನುಮಾನವಿಲ್ಲ.

ನಮ್ಮ ಶಾಲೆಗೆ ಬರುವ ಪ್ರತಿ ಮಗುವಿನ ಮನಸ್ಸನ್ನು ಕಲಿಯಲು ಪ್ರೇರೇಪಿಸಿ ಮಕ್ಕಳು ಪ್ರೀತಿಯಿಂದ ಓದು ಬರಹ ಲೆಕ್ಕಾಚಾರಗಳನ್ನು ಅರಿಯುವಂತೆ  ಮಾಡುವುದು  ನಮ್ಮ  ಕರ್ತವ್ಯವಾಗಬೇಕು.  ಈ ಸಂದರ್ಭದಲ್ಲಿ  ನಮ್ಮ  ಶಾಲೆಯ  ಕೆಲವು  ಉದಾಹರಣೆಗಳನ್ನು ಹೇಳಲೇಬೇಕು. ನಮ್ಮ ಶಾಲೆಯ ವಿದ್ಯಾಥರ್ಿನಿ ರಚನಾ ತರಗತಿಯಲ್ಲಿ ದಿನಾ ನಿದ್ದೆ ಮಾಡುತ್ತಾಳೆ. ಕೇಳಿದ ಪ್ರಶ್ನೆಗಳಿಗೆ ಉತ್ತರಿಸುವುದಿಲ್ಲ, 8ನೇ ತರಗತಿಯ ಪ್ರಶಾಂತ್ ಹೋಂವರ್ಕ್ ಮಾಡುವುದಿಲ್ಲ, ಇವನಿಗೆ ಓದಲು ಬರೆಯಲು ಬರುವುದೇ ಇಲ್ಲ. ವನಿತಳಿಗೆ ಶಿಕ್ಷಕರನ್ನು ಕಂಡರೆ ಭಯ, ಸುನಿತಾ ಪ್ರತಿದಿನ ಶಾಲೆಗೆ ತಡವಾಗಿ ಬರುತ್ತಾಳೆ. ಶ್ವೇತಾ ಯಾರನ್ನೋ ಪ್ರೀತಿಸಿ ತಾಯಿಯ ಮಾತನ್ನೇ ಕೇಳುವುದಿಲ್ಲ ಇವಳು ಮಧ್ಯಾನ್ಹದ ನಂತರ ಶಾಲೆಯಲ್ಲಿ ಇರುವುದೇ ಇಲ್ಲ ಇಂತಹ ಹತ್ತು ಹಲವು ಸಮಸ್ಯೆಗಳನ್ನು ಪ್ರತಿದಿನ ಕಾಣುತ್ತಿರುತ್ತೇವೆ. ಈ ಮಕ್ಕಳ ಬಗ್ಗೆ ಮನೆಯಲ್ಲಿ ಕಾಳಜಿ ವಹಿಸುವವರಿದ್ದರೆ ಅವರೇಕೆ ಹೀಗಾಗುತ್ತಿದ್ದರು. ಅವರಲ್ಲಿ ಕಲಿಯುವ ಮನಸ್ಸನ್ನು ಮೂಡಿಸಲು ಶಿಕ್ಷಕರೇ ಗಮನಹರಿಸಬೇಕು. ಇಂತಹ ಸಂದರ್ಭಗಳಲ್ಲಿ  ಮಕ್ಕಳೊಂದಿಗೆ  ಆಪ್ತಸಮಾಲೋಚನೆ  ಉತ್ತಮ ಮಾರ್ಗವೆನಿಸುತ್ತದೆ. ಮಕ್ಕಳು ಮತ್ತು ಪೋಷಕರೊಡನೆ ಆಪ್ತವಾಗಿ ಮಾತನಾಡಿ ಸಮಸ್ಯೆಗಳನ್ನು ಅರಿತು  ತಿಳಿಹೇಳುವುದರ  ಜೊತೆಗೆ ಕೆಲವು ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಶಾಲೆಯ ಪ್ರತಿಮಗು ಕಲಿಯುವ ಮನಸನ್ನು ಹೊಂದಿ ಸ್ವತ: ಕಲಿಯಲು ಪ್ರೇರೇಪಿಸುವುದು ನಮ್ಮ ಕರ್ತವ್ಯವಾಗಬೇಕು  
logoblog

Thanks for reading ಕಲಿಯುವ ಮನಸ್ಸು

Previous
« Prev Post

No comments:

Post a comment