ಮಧ್ಯಯುಗದ ಯೂರೋಪ್
2. ಜ್ಞಾನ ರಚನೆಗೆ ಇರುವ ಅವಕಾಶಗಳು :
> ಮಧ್ಯಯುಗದ ಯೂರೋಪಿನ ಸಮಾಜದ ಸ್ಥಿತಿಗತಿಗಳು
> ಊಳಿಗ ಮಾನ್ಯ ಪದ್ಧತಿ ಅರ್ಥ
> ಊಳಿಗ ಮಾನ್ಯ ಪದ್ಧತಿಯ ವಿವಿಧ ರೂಪಗಳು
> ಊಳಿಗ ಮಾನ್ಯ ಪದ್ಧತಿಯ ಗುಣಗಳು ಮತ್ತು ದೋಷಗಳು
> ಊಳಿಗ ಮಾನ್ಯ ಪದ್ಧತಿಯ ಅವನತಿ
> ಪ್ರಸ್ತುತ ಜನತಂತ್ರ ವ್ಯವಸ್ಥೆಯೊಂದಿಗೆ ಊಳಿಗಮಾನ್ಯ ಪದ್ಧತಿ ಹೋಲಿಕೆ
> ಭೂ ಒಡೆತನದ ಹಕ್ಕನ್ನು (ಆಸ್ತಿಯ ಹಕ್ಕು) ಪಡೆಯುವ ಬಗೆ
> ವರ್ಗ ವ್ಯವಸ್ಥೆಯಲ್ಲಿನ ವ್ಯತ್ಯಾಸಗಳ ಅರಿವು.
3. ವಿಮರ್ಶಾಯುಕ್ತ ಶಿಕ್ಷಣ ಕ್ರಮ ಅಳವಡಿಕೆಗೆ ಇರುವ ಅವಕಾಶಗಳು
* ಮಧ್ಯಯುಗದ ಯೂರೋಪಿನಲ್ಲಿ ವರ್ಗ ವ್ಯವಸ್ಥೆಯಲ್ಲಿನ ತಾರತಮ್ಯವನ್ನು ವಿಮರ್ಶಾಯುಕ್ತವಾಗಿ ಅರ್ಥೈಸಿಕೊಳ್ಳುವುದು.
* ಇಂದಿನ ಪ್ರಜಾತಂತ್ರ ವ್ಯವಸ್ಥೆಯೇ ಊಳಿಗಮಾನ್ಯ ಪದ್ಧತಿಗಿಂತ ಅತ್ಯಂತ ಶ್ರೇಷ್ಠವಾದುದೆಂಬ ತೀರ್ಮಾನವನ್ನು ಕಂಡುಕೊಳ್ಳುವುದು.
* ಊಳಿಗಮಾನ್ಯ ಪದ್ಧತಿಯ ಅವನತಿಗೆ ಕಾರಣವಾದ ನಿರಂಕುಶ ರಾಜ ಪ್ರಭುತ್ವ, ಭಾಷೆ, ರಾಷ್ಟ್ರೀಯ ಮನೋಭಾವನೆಗಳನ್ನು ಚರ್ಚಿಸಿ ತೀರ್ಮಾನ ಕೈಗೊಳ್ಳುವುದು.
* ಊಳಿಗಮಾನ್ಯ ವ್ಯವಸ್ಥೆಯೊಳಗೆ ಉನ್ನತ ವರ್ಗಗಳಿಗೆ ದೊರೆಯುತ್ತಿದ್ದ ಸವಲತ್ತುಗಳ ಬಗ್ಗೆ ಚರ್ಚಿಸಿ ಇಲ್ಲಿನ ತಾರತಮ್ಯವನ್ನು ತಿರಸ್ಕರಿಸುವುದು.
* ಸಮಾಜದ ರಕ್ಷಣೆಗೆ ಊಳಿಗ ಮಾನ್ಯ ವ್ಯವಸ್ಥೆಯಲ್ಲಿ ತೆಗೆದುಕೊಳ್ಳುತ್ತಿದ್ದ ಕ್ರಮ ಹಾಗೂ ಈ ಕಾಲದ ಬಾರ್ಬೇರಿಯನ್ನರು ಅಟ್ಟಹಾಸವನ್ನು ಮಟ್ಟ ಹಾಕುವಲ್ಲಿ ವಹಿಸಿದ ಪಾತ್ರವನ್ನು ವಿಮರ್ಶಿಸುವುದು.
4. ಜ್ಞಾನದ ಪುನರ್ರಚನೆಗೆ ಇರುವ ಅವಕಾಶಗಳು
* ಕ್ರೌರ್ಯ, ಹಿಂಸೆ, ಅಶಾಂತಿ, ದಬ್ಬಾಳಿಕೆ, ಆಕ್ರಮಣಕಾರಿ ಅಂಶಗಳನ್ನು ತಿರಸ್ಕರಿಸಿ, ಸಹನೆ, ದಯೆ, ಶಾಂತಿ, ಸಮಾನತೆ ಎಂಬ ಸಮಾಜಮುಖಿಯಾದ ಮಾನವೀಯ ಮೌಲ್ಯಗಳ ಅರಿವು ತನ್ನದಾಗಿಸಿಕೊಳ್ಳುವುದು.
ಉದಾ : - ಅಮೇರಿಕಾದಲ್ಲಾದ ಜನಾಂಗೀಯ ಕಲಹ
- ಭಾರತದ ಸ್ಪೃಷ್ಯ, ಅಸ್ಪೃಷ್ಯ ತಾರತಮ್ಯ
- ಆಫ್ರಿಕಾದ ವರ್ಣ ವ್ಯತ್ಯಾಸ
* ಸಮಾಜ ಮತ್ತು ದೇಶದ ಕಣ್ಣು ತೆರೆಸುವಲ್ಲಿ ಸಾಹಿತ್ಯ ಮತ್ತು ಸಂಸ್ಕೃತಿಗಳು ವಹಿಸಿದ ಪಾತ್ರದ ಮಹತ್ವವನ್ನು ಸ್ವೀಕರಿಸಿ ತೀರ್ಮಾನಕ್ಕೆ ಬರುವುದು.
ಉದಾ : ಫ್ರಾನ್ಸ್, ಇಂಗ್ಲೆಂಡ್, ಜರ್ಮನಿ ಭಾಷೆ/ಸಾಹಿತ್ಯಗಳಲ್ಲಾದ ವಿಕಾಸ ವಚನಗಳು, ಕೀರ್ತನೆಗಳು/ದಾಸರ ಪದಗಳು, ಜನಪದ ಗೀತೆಗಳು, ಶಿಶುನಾಳ ಷರೀಪ ಮತ್ತು ಏಸುವಿನ ಜೀವನ ಸಂದೇಶ ಕುರಿತ ಸಾಹಿತ್ಯ ರಚನೆಗಳು.
* ವರ್ಗರಹಿತ ಸಮಾಜದ ಅನಿವಾರ್ಯತೆಯನ್ನು ಅರ್ಥೈಸಿಕೊಂಡು ಭಾರತದಂತಹ ರಾಷ್ಟ್ರಗಳಲ್ಲಿನ ಸ್ವಾತಂತ್ರ್ಯ ಸಮಾನತೆ, ಸಹೋದರತೆಯಂತಹ ಭಾವನೆಯನ್ನು ಬೆಳೆಸಿಕೊಳ್ಳುವುದು.
* ಉಳುವವನಿಗೆ ಭೂಮಿಯ ಒಡೆತನ ಬಂದಿರುವ ಹಿನ್ನಲೆಯಲ್ಲಿ ಊಳಿಗಮಾನ್ಯ ಪದ್ಧತಿಯಲ್ಲಿನ ಭೂ ಒಡೆತನದ ನಿಯಮವೂ ಕಾರಣವಾಗಿದೆ ಎಂಬ ನಿರ್ಣಯಕ್ಕೆ ಬರುವುದು.
5. ನಿರಂತರ ಹಾಗೂ ವ್ಯಾಪಕ ಮೌಲ್ಯ ಮಾಪನ ಅವಳಡಿಸಿಕೊಳ್ಳಲು ಇರುವ ಅವಕಾಶಗಳು
* ಊಳಿಗಮಾನ್ಯ ಪದ್ಧತಿ ವ್ಯವಸ್ಥೆಗೆ ಪೂರ್ವದಲ್ಲಿ ಬರ್ಬರ ಜನಾಂಗದ ಕ್ರೂರತನದಿಂದ ಕೂಡಿದ ದಾಳಿಕೋರತನವನ್ನು ಮೂಕಾಭಿನಯ ಮೂಲಕ ಅಂದಿನ ಸಮಾಜದ ಸ್ಥಿತಿಯನ್ನು ಪ್ರದರ್ಶಿಸುವುದು.
* ಸರ್ವ ಸಮಾನತೆಯನ್ನು ಬಿಂಬಿಸುವ ದೃಶ್ಯಾವಳಿಗಳನ್ನು ಒಳಗೊಂಡ ನಾಟಕಾಭಿನಯ.
* ಊಳಿಗಮಾನ್ಯ ಪದ್ಧತಿಯೊಳಗಿನ ವರ್ಗ ವ್ಯವಸ್ಥೆ ಮತ್ತು ಜನತಂತ್ರ ವ್ಯವಸ್ಥೆಯಲ್ಲಿನ ವರ್ಗರಹಿತ ಸಂದರ್ಭವನ್ನು ಗುಂಪು ಚರ್ಚೆ ಮೂಲಕ ತೀರ್ಮಾನ ಕೈಗೊಳ್ಳುವುದು.
* ಊಳಿಗ ಮಾನ್ಯ ಪದ್ಧತಿಯ ಗುಣದೋಷಗಳು ಮತ್ತು ಜನತಂತ್ರ ವ್ಯವಸ್ಥೆಯಲ್ಲಿನ ಗುಣ ದೋಷಗಳನ್ನು ಕುರಿತು ಚಾಟರ್್ ತಯಾರಿಕೆ.
* ಊಳಿಗ ಮಾನ್ಯ ವ್ಯವಸ್ಥೆಯನ್ನು ಕುರಿತ ಪ್ರಬಂಧ ರಚನೆ.
* ಊಳಿಗ ಮಾನ್ಯ ಪದ್ಧತಿಯ ವರ್ಗ ವ್ಯವಸ್ಥೆಯನ್ನು ಪ್ರತಿಬಿಂಬಿಸುವ ಚಿತ್ರಗಳ ರಚನೆ.
* ಸಂದರ್ಭೊಚಿತ ಮೌಖಿಕ/ಲಿಖಿತ ಪ್ರಶ್ನಾವಳಿಗಳು.
ಕಲಿಕೆಯನ್ನು ಅನುಕೂಲಿಸುವ ವಿಧಾನಗಳು
1 . ನಾಟಕ ಅಥವಾ ನಾಟಕಾಭಿನಯ ವಿಧಾನ
* ಊಳಿಗ ಮಾನ್ಯ ವ್ಯವಸ್ಥೆಯಲ್ಲಿನ ವರ್ಗ ಪದ್ಧತಿಯ ದೃಶ್ಯಾವಳಿ
* ಬರ್ಬರ ಜನಾಂಗದ ದಾಳಿಕೋರಿತನದ ದೃಶ್ಯಾವಳಿ ಕುರಿತು
2. ಕಥನ ವಿಧಾನ
* ಬರ್ಬರ ಜನಾಂಗದ ಆಕ್ರಮಣಕಾರಿ ನೀತಿ ಕುರಿತು ಕಥೆ ಹೇಳುವುದು ಹಾಗೆಯೇ ಊಳಿಗಮಾನ್ಯ ಪದ್ಧತಿಯನ್ನು ಕುರಿತು ಕಥೆ ಹೇಳುವುದು.
3. ಚರ್ಚಾ ವಿಧಾನ
* ಊಳಿಗಮಾನ್ಯ ವ್ಯವಸ್ಥೆಯ ಗುಣಾವಗುಣಗಳ ಗುಂಪು ಚರ್ಚೆ.
4. ಘಟಕ ಪದ್ಧತಿ - ಬರ್ಬರ ದಾಳಿ, ಊಳಿಗಮಾನ್ಯ ಪದ್ಧತಿಗಳು.
* ಊಳಿಗ ಮಾನ್ಯ ವ್ಯವಸ್ಥೆಯಲ್ಲಿನ ಗುಣದೋಷಗಳು.
* ಊಳಿಗ ಮಾನ್ಯ ವ್ಯವಸ್ಥೆಯ ಅವನತಿಗೆ ಕಾರಣ.
5. ವಿಶ್ಲೇಷಣಾ ವಿಧಾನ
* ಊಳಿಗಮಾನ್ಯ ವ್ಯವಸ್ಥೆ ಮತ್ತು ಜನತಂತ್ರ ವ್ಯವಸ್ಥೆಯ ಹೋಲಿಕೆ, ವ್ಯತ್ಯಾಸವನ್ನು ವಿಶ್ಲೇಷಿಸುವುದು.
6. ಸಂಪನ್ಮೂಲಗಳ ಕ್ರೂಢೀಕರಣ
* ಚಿತ್ರದಲ್ಲಿ ಚರಿತ್ರೆ
* ಯೂರೋಪಿನ ಮಧ್ಯಕಾಲೀನ ಇತಿಹಾಸ ಪಾಲಕ್ಷ, ಅಕಬರಾಲಿ
* ವಿಶ್ವಕೋಶ
* ವೀಕಿ ಪೀಡಿಯಾ, ಎನ್ಸೈಕ್ಲೋಪೀಡಿಯಾ
* ಅಂತರ್ಜಾಲ - Google ಬಳಕೆ
7. ಬಳಸಬಹುದಾದ ಬೋಧನೋಪಕರಣಗಳು
* ಬರ್ಬರ ಜನಾಂಗದ ದಾಳಿ ಕುರಿತ ಚಿತ್ರಪಟ
* ವರ್ಗ ವ್ಯವಸ್ಥೆಯ ಚಿತ್ರಗಳು
* ಭೂಮಾಲೀಕತ್ವದ ದಾಖಲಾತಿಗಳು (ಪಹಣಿ, ಪಟ್ಟಿ)
* ಯೂರೋಪ್ ಖಂಡ/ಪ್ರಪಂಚದ ಭೂಪಟ.
* ಪಠ್ಯ ಪುಸ್ತಕ
8. ಮನನ ಮಾಡಿಕೊಳ್ಳಲೇಬೇಕಾದ ಅಂಶಗಳು
* ಸಮಾನತೆ
* ಭ್ರಾತೃತ್ವ
* ಶ್ರಮ ಮತ್ತು ದುಡಿಮೆ
* ದಬ್ಬಾಳಿಕೆ ಮತ್ತು ಶೋಷಣೆ ವಿರುದ್ಧದ ಹೋರಾಟ
* ರಾಷ್ಟ್ರೀಯ ಪ್ರಜ್ಞೆ.
0 Comments: