Goslink

Goslink is providing you latest news, articles, reviews.

Monday, 11 January 2021

ಎಮ್ಮನುಡಿ

  Govt Orders Link       Monday, 11 January 2021

                                              

         ಎಮ್ಮನುಡಿ

ಎಮ್ಮನುಡಿಗೇಳ್ಕನ್ನಡದ ಆದಿಮಹಾಕವಿ ಪಂಪನುಕ್ರಿ. ಶ. ಸುಮಾರು 941 ರಲ್ಲಿ ವೆಂಗಿಮಂಡಲದ ವೆಂಗಿಪಳು ಎಂಬ ಅಗ್ರಹಾರದಲ್ಲಿ ಜನಿಸಿದನು. ಪಂಪನು 'ವಿಕ್ರಮಾರ್ಜುನ ವಿಜಯ ಮತ್ತು ಆದಿ ಪುರಾಣ' ಎಂಬ ಮಹಾಕಾವ್ಯಗಳನ್ನು ರಚಿಸಿದ್ದಾನೆ. ಈತನಿಗೆ ಸರಸ್ವತೀ ಮಣಿಹಾರ, ಸಂಸಾರ ಸಾರೋದಯ, ಕವಿತಾ ಗುಣಾರ್ಣವ ಎಂಬ ಬಿರುದುಗಳು ಇದ್ದವು.

ಅ] ಒಂದು ವಾಕ್ಯದಲ್ಲಿ ಉತ್ತರಿಸಿ.

1. ಭೀಮನಿಗ ಪವನನಂದನನೆಂದು ಹೆಸರು ಬರಲು ಕಾರಣವೇನು?

ಪವನನ (ವಾಯುವಿನ) ವರಬಲದಿಂದ ಕುಂತಿಯಲ್ಲಿ ಜನಿಸಿದ್ದರಿಂದ ಭೀಮನಿಗೆ ಪವನನಂದನ ಎಂದು ಹೆಸರು ಬಂದಿತು.

2. ಘಟ ಸಂಭೂತ ಯಾರು?

ಘಟ ಸಂಭೂತ ಎಂದರೆ ದ್ರೋಣಾಚಾರ್ಯ.

3. ಗಾಂಡೀವಿ ಎಂದು ಅರ್ಜುನನ್ನು ಏಕ ಕರೆಯುತ್ತಾರೆ?

ಗಾಂಡೀವ ಎಂಬ ಬಿಲ್ಲನ್ನು ಹೊಂದಿರುವುದರಿಂದ ಅರ್ಜುನನ್ನು ಗಾಂಡೀವಿ ಎಂದು ಕರೆಯುತ್ತಾರೆ.

4. ಪಂಪ ಭಾರತದ ಇನ್ನೊಂದು ಹೆಸರೇನು?

ಪಂಪ ಭಾರತದ ಇನ್ನೊಂದು ಹೆಸರು 'ವಿಕ್ರಮಾರ್ಜುನ ವಿಜಯ'.

ಅ] ಎರಡು/ಮೂರು ವಾಕ್ಯಗಳಲ್ಲಿ ಉತ್ತರಿಸಿ.

1. ಸಂಧಿಯೇ ಉಚಿತವೆಂದು ಧೃತರಾಷ್ಟ್ರನು ಹೇಗ ಸಮರ್ಥಿಸಿದನು?

ಧೃತರಾಷ್ಟ್ರನು ದುರ್ಯೋಧನನನ್ನು ಕುರಿತು ನನಗೂ ಪಾಂಡುವಿಗೂ ವ್ಯತ್ಯಾಸವಿಲ್ಲ (ಭೇದವಿಲ್ಲ); ರಾಜ್ಯವನ್ನು ವಿಭಾಗ ಮಾಡಿ ಆಳೋಣ. ಆ ಪಾಂಡುವಿನ ಮಕ್ಕಳೂ ನಿನ್ನಲ್ಲಿ ಸರಿಯಾಗಿ ಹೊಂದಿಕೊಳ್ಳುವವರೇ; ಈ ಯುದ್ಧವು ನಿನ್ನಿಂದ ಆಯಿತು ಎಂದರೆ ನೀನು ಕೋಪಗೊಳ್ಳುತ್ತೀಯೇ; ಭೀಷ್ಮನಿಗೆೆ, ದ್ರೋಣನಿಗೆ, ಕರ್ಣನಿಗೆ ಗೆಲ್ಲಲು ಅಸಾಧ್ಯನಾದ ಆ ಅರ್ಜುನನ ಎದುರು ಯುದ್ಧ ಮಾಡುವವರು ಇನ್ನು ಯಾರು? ಸಂಧಿಯನ್ನು ಮಾಡೋಣ ಎಂದು ಹೇಳಿ ಸಂಧಿಯೇ ಉಚಿತವೆಂದು ಧೃತರಾಷ್ಟ್ರನು ಸಮರ್ಥಿಸಿದನು.

2. ದುರ್ಯೋಧನನಿಗೆ ಗಾಂಧಾರಿ ನೀಡಿದ ಉಪದೇಶವೇನು?

ಗಾಂಧಾರಿಯು ದುರ್ಯೋಧನನನ್ನು ಕುರಿತು ಕುರುವಂಶವೆಂಬ ತೋಟವು ಭೀಮನೆಂಬ ಮದದಿಂದ ಕುರುಡಾಗಿ ಸೊಕ್ಕೇರಿದ ಆನೆಯು ಕೋಪಿಸಿ ನುಗ್ಗಲು ಧ್ವಂಸವಾದಂತೆ ಆಯಿತು; ಪುಣ್ಯದಿಂದ ಒಂದು ದೊಡ್ಡ ಮರವು ಉಳಿಯುವಂತೆ ನೀನು ಉಳಿದೆ; ಇನ್ನು ಯುದ್ಧ ಮಾಡುವಂಥವರೂ ಇಲ್ಲ; ಮಗನೇ, ಮುದುಕರೂ ಕುರುಡರೂ ಎಂದು ಕಡೆಗಣಿಸದೆ ನಮ್ಮ ಮಾತನ್ನು ಕೇಳು, ಆಲೋಚಿಸು, ತಂದೆಯ ಮಾತಿಗೆ ಒಪ್ಪಿಗೆ ಕೊಡು ಎಂದು ಹೇಳುತ್ತಾಳೆ.

1. ಧೃತರಾಷ್ಟ್ರನು ಸಂದಿ ಮಾಡಿಕೊ ಎಂದು ದುರ್ಯೋಧನನಿಗೆ ಹೇಳಲು ಕಾರಣವೇನು?

ಧೃತರಾಷ್ಟ್ರನು ದುರ್ಯೋಧನನನ್ನು ಕುರಿತು ಮಗನೇ, ನನಗೂ ಪಾಂಡುವಿಗೂ ವ್ಯತ್ಯಾಸವಿಲ್ಲ (ಭೇದವಿಲ್ಲ); ರಾಜ್ಯವನ್ನು ವಿಭಾಗ ಮಾಡಿ ಆಳೋಣ. ಆ ಪಾಂಡುವಿನ ಮಕ್ಕಳೂ ನಿನ್ನಲ್ಲಿ ಸರಿಯಾಗಿ ಹೊಂದಿಕೊಳ್ಳುವವರೇ; ಈ ಯುದ್ಧವು ನಿನ್ನಿಂದ ಆಯಿತು ಎಂದರೆ ಇನ್ನು ಕೋಪಗೊಳ್ಳುತ್ತೀಯೇ; ಭೀಷ್ಮನಿಗೆ, ದ್ರೋಣನಿಗೆ, ಕರ್ಣನಿಗೆ ಗೆಲ್ಲಲು ಅಸಾಧ್ಯನಾದ ಆ ಅರ್ಜುನನಿಗೆದುರಾಗಿ ಯುದ್ಧ ಮಾಡುವವರು ಇನ್ನು ಯಾರಿದ್ದಾರೆ? ಸಂಧಿಯನ್ನು ಮಾಡೋಣ. ಹಗೆತನಕ್ಕ್ಕೆ ಒಂದು ಸ್ಥಳ; ಸ್ನೇಹಕ್ಕ್ಕೆ ಒಂದು ಸ್ಥಳ ಎಂದು ಇದೆಯೇ? ಆಲೋಚನೆ ಮಾಡು. 'ರಾಜರುಗಳಿಗೆ ಹಗೆತನವೂ ಸ್ನೇಹವೂ ಮಾಡಿದ ಕಾರ್ಯದಿಂದ ಉಂಟಾಗುತ್ತವೆ' ಎಂದು ಪ್ರಸಿದ್ಧವಾದ ಅರ್ಥಶಾಸ್ತ್ರದಲ್ಲಿ ಹೇಳಿಲ್ಲವೇ? ಮಿತ್ರರನ್ನೂ ಶತ್ರುಗಳನ್ನೂ ಉಂಟುಮಾಡುವ ಕಾರ್ಯವನ್ನು ಏಕೆ ಮಾಡುತ್ತೀಯೇ? ಮಗನೇ, ನಮಗೆ ನೀನೊಬ್ಬನಿದ್ದರೆ ಸಾಕು ಎಲ್ಲರೂ ಇದ್ದಂತೆಯೇ. ಇತರ ಮಕ್ಕಳು ಮಡಿದರೆಂದು ಮನದಲ್ಲಿ ದುಃಖವೇನೂ ಇಲ್ಲ. ಅದು ಹೇಗೆಂದರೆ ಹಗಲಿನಲ್ಲಿ ಸೂರ್ಯನೊಬ್ಬನಿದ್ದರೆ ಸಾಲದೆ; ಎಷ್ಟು ದೀಪಗಳು ಉರಿದರೇನು? ಆರಿ ಹೋದರೇನು? ದೀಪಗಳು ಸೂರ್ಯನಿಗಿಂತ ಮಿಗಿಲಾದ ಬೆಳಕು ನೀಡಬಲ್ಲವೇ? ಅದಲ್ಲದೆಯೂ ಪಾಂಡವರಾದರೆ ನನಗೆ ಪಾಂಡುರಾಜನಿಗೆ ಮಾಡಿದುದನ್ನೇ ಮಾಡುವರು. (ಹೇಳಿದಂತೆ ಕೇಳುವರು). ಹೇಳಿದ ಮಾತನ್ನು ಮೀರುವವರಲ್ಲ. ಅವರನ್ನು ನಾನು ಹೇಗಾದರೂ ಒಪ್ಪಿಸಿ, ನೀನು ಹೇಳಿದುದ್ದನ್ನು ಹೇಳಿಸುವೆನು. ಅದಕ್ಕೆ ಪ್ರತಿಭಟಿಸದೆ ಒಪ್ಪಿಕೋ, ನಿನ್ನನ್ನು ಕೈಯೊಡ್ಡಿ ಬೇಡುವೆನು ಎಂದು ಹೇಳುತ್ತಾನೆ.

2. ದುರ್ಯೋಧನನ ತಂದೆತಾಯಿಯರು ಅವನನ್ನು ಸಂಧಿಗಾಗಿ ಪ್ರಾರ್ಥಿಸಿದ ರೀತಿಯನ್ನು ವಿವರಿಸಿ.

ಧೃತರಾಷ್ಟ್ರನು ದುರ್ಯೋಧನನನ್ನು ಕುರಿತು ಮಗನೇ, ನನಗೂ ಪಾಂಡುವಿಗೂ ವ್ಯತ್ಯಾಸವಿಲ್ಲ (ಭೇದವಿಲ್ಲ); ರಾಜ್ಯವನ್ನು ವಿಭಾಗ ಮಾಡಿ ಆಳೋಣ.ಆ ಪಾಂಡುವಿನ ಮಕ್ಕಳೂ ನಿನ್ನಲ್ಲಿ ಸರಿಯಾಗಿ ಹೊಂದಿಕೊಳ್ಳುವವರೇ; ಈ ಯುದ್ಧವು ನಿನ್ನಿಂದ ಆಯಿತು ಎಂದರೆ ಇನ್ನು ಕೋಪಗೊಳ್ಳುತ್ತೀಯೇ; ಬಿಣಂಷಂಚಿ.ಗೆ, ದ್ರೋಣನಿಗೆ, ಕರ್ಣನಿಗೆ ಗೆಲ್ಲಲು ಅಸಾಧ್ಯನಾದ ಆ ಅರ್ಜುನನಲ್ಲಿ ಕೋಪಿಸಿ ಯುದ್ಧ ಮಾಡುವವರು ಇನ್ನು ಯಾರು? ಸಂಧಿಯನ್ನು ಮಾಡೋಣ. ಮಗನೇ, ನಮಗೆ ನೀನೊಬ್ಬನಿದ್ದರೆ ಸಾಕು ಎಲ್ಲರೂ ಇದ್ದಂತೆಯೇ. ಇತರ ಮಕ್ಕಳು ಮಡಿದರೆಂದು ಮನದಲ್ಲಿ ದುಃಖವೇನೂ ಇಲ್ಲ. ಅದು ಹೇಗೆಂದರೆ ಹಗಲಿನಲ್ಲಿ ಸೂರ್ಯನೊಬ್ಬನಿದ್ದರೆ ಸಾಲದೆ; ಎಷ್ಟು ದೀಪಗಳು ಉರಿದರೇನು? ಆರಿ ಹೋದರೇನು? ಪ್ರತಿಭಟಿಸದೆ ಸಂಧಿಗೆ ಒಪ್ಪಿಕೋ, ನಿನ್ನನ್ನು ಕೈಯೊಡ್ಡಿ ಬೇಡುವೆನು ಎಂದು ಹೇಳುತ್ತಾನೆ.ಧೃತರಾಷ್ಟ್ರನು  ಆ ಮಾತಿಗೆ ಬೆಂಬಲವಾಗಿ ಗಾಂಧಾರಿಯು ದುರ್ಯೋಧನನ್ನು ಕುರಿತು ಕುರುವಂಶವೆಂಬ ತೋಟವು ಭೀಮನೆಂಬ ಮದದಿಂದ ಕುರುಡಾಗಿ ಸೊಕ್ಕೇರಿದ ಆನೆಯು ಕೋಪಿಸಿ ನುಗ್ಗಲು ಧ್ವಂಸವಾದಂತೆ ಆಯಿತು; ಪುಣ್ಯದಿಂದ ಒಂದು ದೊಡ್ಡ ಮರವು ಉಳಿಯುವಂತೆ ನೀನು ಉಳಿದೆ; ಇನ್ನು ಯುದ್ಧ ಮಾಡುವಂಥವರೂ ಇಲ್ಲ; ಮಗನೇ, ಮುದುಕರೂ ಕುರುಡರೂ ಎಂದು ಭಾವಿಸದೆ ನಮ್ಮ ಮಾತನ್ನು ಕೇಳು, ಆಲೋಚಿಸು, ತಂದೆಯ ಮಾತಿಗೆ ಒಪ್ಪಿಗೆ ಕೊಡು ಎಂದು ಹೇಳುತ್ತಾಳೆ. ಹೀಗೆ ದುರ್ಯೋಧನನ ತಂದೆತಾಯಿಯರು ನನ್ನು ಸಂಧಿಗಾಗಿ ಪ್ರಾರ್ಥಿಸಿದರು.

ಈ] ಸಂದರ್ಭ ಸಹಿತ ಸ್ವಾರಸ್ಯ ವಿವರಿಸಿ.

1. ಎನಗಂ ಪಾಂಡುಗಮಿಲ್ಲ ಭೇದಂ

ಆಯ್ಕೆ:- ಈ ವಾಕ್ಯವನ್ನು ಆದಿ ಮಹಾಕವಿ ಪಂಪನು ರಚಿಸಿರುವ 'ವಿಕ್ರಮಾರ್ಜುನ ವಿಜಯ' ಕೃತಿಯಿಂದ ಆಯ್ದ 'ಎಮ್ಮನುಡಿಗೇಳ್' ಎಂಬ ಪದ್ಯಭಾಗದಿಂದ ಆರಿಸಲಾಗಿದೆ.

ಸಂದರ್ಭ:- ದುರ್ಯೋಧನನು ತನ್ನ ಬಳಿಗೆ ಬಂದ ಮಾತಾಪಿತೃಗಳಿಗೆ (ಧೃತರಾಷ್ಟ್ರ ಮತ್ತು ಗಾಂಧಾರಿಗೆ) ವಿನಯದಿಂದ ನಮಸ್ಕರಿಸಿ ತಲೆಬಾಗಿದ ಸಂದರ್ಭದಲ್ಲಿ ದುರ್ಯೋಧನನಿಗೆ ಧೃತರಾಷ್ಟ್ರನು ಈ ಮಾತನ್ನು ಹೇಳುತ್ತಾನೆ.

ಸ್ವಾರಸ್ಯ:- ಧೃತರಾಷ್ಟ್ರನು ದುರ್ಯೋಧನನ್ನು ಕುರಿತು ನನಗೂ ಪಾಂಡುವಿಗೂ ವ್ಯತ್ಯಾಸವಿಲ್ಲ (ಭೇದವಿಲ್ಲ); ರಾಜ್ಯವನ್ನು ವಿಭಾಗ ಮಾಡಿ ಆಳೋಣ. ಸಂಧಿಯನ್ನು ಮಾಡೋಣ ಎಂದು ಸ್ವಾರಸ್ಯಪೂರ್ಣವಾಗಿ ಹೇಳುತ್ತಾನೆ.

2. ಈ ಕಲಹಮುಂ ನಿನ್ನಿಂದಮಾಯ್ತೆಂದೊಡಿಂ ಮುನಿವೈ

ಸಂದರ್ಭ:- ದುರ್ಯೋಧನನು ತನ್ನ ಬಳಿಗೆ ಬಂದ ಮಾತಾಪಿತೃಗಳಿಗೆ (ಧೃತರಾಷ್ಟ್ರ ಮತ್ತು ಗಾಂಧಾರಿ) ವಿನಯದಿಂದ ನಮಸ್ಕರಿಸಿ ತಲೆಬಾಗಿದ ಸಂದರ್ಭದಲ್ಲಿ ದುರ್ಯೋಧನನಿಗೆ ಧೃತರಾಷ್ಟ್ರನು ಈ ಮಾತನ್ನು ಹೇಳುತ್ತಾನೆ.

ಸ್ವಾರಸ್ಯ:- ಧೃತರಾಷ್ಟ್ರನು ದುರ್ಯೋಧನನ್ನು ಕುರಿತು ರಾಜ್ಯವನ್ನು ವಿಭಾಗ ಮಾಡಿ ಆಳೋಣ. ಆ ಪಾಂಡುವಿನ ಮಕ್ಕಳೂ ನಿನ್ನಲ್ಲಿ ಸರಿಯಾಗಿ ಹೊಂದಿಕೊಳ್ಳುವವರೇ; ಈ  ಯುದ್ಧವು ನಿನ್ನಿಂದ ಆಯಿತು ಎಂದರೆ ಇನ್ನು ಕೋಪಗೊಳ್ಳುತ್ತೀಯೆ ಎಂದು ಸ್ವಾರಸ್ಯಪೂರ್ಣವಾಗಿ ಹೇಳುತ್ತಾನೆ.

3. ಪಗೆಗೆ ಕಣಿಯೊಂದುಂಟೇ

ಸಂದರ್ಭ:- ಧೃತರಾಷ್ಟ್ರನು ದುರ್ಯೋಧನನಿಗೆ ಪಾಂಡವರೊಡನೆ ಸಂಧಿ ಮಾಡಿಕೊಳ್ಳೋಣ ಯುದ್ಧ ಮಾಡುವುದು ಬೇಡ ಎಂದು ಬುದ್ಧಿವಾದವನ್ನು ಹೇಳುವ ಸಂದರ್ಭದಲ್ಲಿ ಈ ಮಾತನ್ನು ಹೇಳುತ್ತಾನೆ.

ಸ್ವಾರಸ್ಯ :- ಧೃತರಾಷ್ಟ್ರನು ದುರ್ಯೋಧನನ್ನು ಕುರಿತು ಮಗನೇ, ದ್ವೇಷಕ್ಕೆ ಒಂದು ಸ್ಥಳ; ಸ್ನೇಹಕ್ಕೆ ಒಂದು ಸ್ಥಳ ಎಂದು ಇದೆಯೇ? ಆಲೋಚನೆ ಮಾಡು ಎಂದು ಸ್ವಾರಸ್ಯಪೂರ್ಣವಾಗಿ ಹೇಳುತ್ತಾನೆ.

4. ಪಗೆಯುಂ ನಣ್ಪುಂ ಕಯ್ಕೊಂಡ ಕಜ್ಜದಿನಲ್ತೆ

ಸಂದರ್ಭ :- ಧೃತರಾಷ್ಟ್ರನು ದುರ್ಯೋಧನನಿಗೆ ಪಾಂಡವರೊಡನೆ ಸಂಧಿ ಮಾಡಿಕೊಳ್ಳೋಣ ಯುದ್ಧ ಮಾಡುವುದು ಬೇಡ ಎಂದು ಬುದ್ಧಿವಾದವನ್ನು ಹೇಳುವ ಸಂದರ್ಭದಲ್ಲಿ ಈ ಮಾತನ್ನು ಹೇಳುತ್ತಾನೆ.

ಸ್ವಾರಸ್ಯ :- ಧೃತರಾಷ್ಟ್ರನು ದುರ್ಯೋಧನನ್ನು ಕುರಿತು ರಾಜರುಗಳಿಗೆ ಹಗೆತನವೂ ಬಾಂಧವ್ಯವೂ ಮಾಡಿದ ಕಾರ್ಯದಿಂದ ಉಂಟಾಗುತ್ತವೆ ಎಂದು ಪ್ರಸಿ ದ್ಧವಾದ ತಿಶಾಸ್ತ್ರದಲ್ಲಿ ಹೇಳಿಲ್ಲವೇ? ಎಂದು ಸ್ವಾರಸ್ಯಪೂರ್ಣವಾಗಿ ಹೇಳುತ್ತಾನೆ.

5. ಪಗಲೆನಿತಾನುಂ ದೀವಿಗೆಗಳುರಿದೊಡೇಮ್.

ಸಂದರ್ಭ :- ಧೃತರಾಷ್ಟ್ರನು ದುರ್ಯೋಧನನಿಗೆ ಪಾಂಡವರೊಡನೆ ಸಂಧಿ ಮಾಡಿಕೊಳ್ಳೋಣ ಯುದ್ಧ ಮಾಡುವುದು ಬೇಡ ಎಂದು ಬುದ್ಧಿವಾದವನ್ನು ಹೇಳುವ ಸಂದರ್ಭದಲ್ಲಿ ಈ ಮಾತನ್ನು ಹೇಳುತ್ತಾನೆ.

ಸ್ವಾರಸ್ಯ :- ಧೃತರಾಷ್ಟ್ರನು ದುರ್ಯೋಧನನನ್ನು ಕುರಿತು ಮಗನೇ, ನಮಗೆ ನೀನೊಬ್ಬನಿದ್ದರೆ ಸಾಕು ಎಲ್ಲರೂ ಇದ್ದಂತೆಯೇ. ಇತರ ಮಕ್ಕಳು ಮಡಿದರೆಂದು ಮನದಲ್ಲಿ ದುಃಖವೇನೂ ಇಲ್ಲ. ಅದು ಹೇಗೆಂದರೆ ಹಗಲಿನಲ್ಲಿ ಸೂರ್ಯನೊಬ್ಬನಿದ್ದರೆ ಸಾಲದೆ; ಎಷ್ಟು ದೀಪಗಳು ಉರಿದರೇನು? ಆರಿ ಹೋದರೇನು? ದೀಪಗಳು ಸೂರ್ಯನಿಗಿಂತ ಮಿಗಿಲಾದ ಬೆಳಕು ನೀಡಬಲ್ಲವೇ ಎಂದು ಸ್ವಾರಸ್ಯಪೂರ್ಣವಾಗಿ ಹೇಳುತ್ತಾನೆ.

6. ಪೆರ್ಮರನುಳಿವಂತೆ ನೀನುಳಿದೆ

ಸಂದರ್ಭ :- ಧೃತರಾಷ್ಟ್ರನು ದುರ್ಯೋಧನನಿಗೆ ಪಾಂಡವರೊಡನೆ ಸಂಧಿ ಮಾಡಿಕೊಳ್ಳೋಣ ಯುದ್ಧ ಮಾಡುವುದು ಬೇಡ

ಎಂದು ಬುದ್ಧಿವಾದವನ್ನು ಹೇಳುವ ಸಂದರ್ಭದಲ್ಲಿ ಧೃತರಾಷ್ಟ್ರನ ಆ ಮಾತಿಗೆ ಬೆಂಬಲವಾಗಿ ಗಾಂಧಾರಿಯು ಈ ಮಾತನ್ನು ಹೇಳುತ್ತಾಳೆ.

ಸ್ವಾರಸ್ಯ :- ಗಾಂಧಾರಿಯು ದುರ್ಯೋಧನನ್ನು ಕುರಿತು ಕುರುವಂಶವೆಂಬ ತೋಟವು ಭೀಮನೆಂಬ ಮದದಿಂದ ಕುರುಡಾಗಿ ಸೊಕ್ಕೇರಿದ ಆನೆಯು, ಕೋಪಿಸಿ ನುಗ್ಗಲು ಧ್ವಂಸವಾದಂತೆ ಆಯಿತು; ಪುಣ್ಯದಿಂದ ಒಂದು ದೊಡ್ಡ ಮರವು ಉಳಿಯುವಂತೆ ನೀನು ಉಳಿದೆ ಎಂದು ಸ್ವಾರಸ್ಯಪೂರ್ಣವಾಗಿ ಹೇಳುತ್ತಾಳೆ.

3. ವಿಗ್ರಹಿಸಿ ಸಮಾಸದ ಹೆಸರು ತಿಳಿಸಿ.

ಪೆರ್ಮಗ = ಪಿರಿಯವನು + ಮಗ - ಕರ್ಮಧಾರಯ ಸಮಾಸ

ಘಟಸಂಭೂತ = ಘಟದಲ್ಲಿ ಸಂಭವಿಸಿದವನು ಯಾರೋ ಅವನು (ದ್ರೋಣಾಚಾರ್ಯ) - ಬಹುವ್ರೀಹಿ ಸಮಾಸ

ಗಾಂಡಿವಿ = ಗಾಂಡೀವ ಎಂಬ ಬಿಲ್ಲನ್ನು ಹೊಂದಿರುವವನು ಯಾರೋ ಅವನು (ಅರ್ಜುನ) - ಬಹುವ್ರೀಹಿ ಸಮಾಸ

ಪವನನಂದನ = ಪವನನ ನಂದನನು ಯಾರೋ ಅವನು (ಭೀಮ) - ಬಹುವ್ರೀಹಿ ಸಮಾಸ

ಮದಾಂಧ = ಮದದಿಂದ ಅಂಧನಾದವನು ಯಾರೋ ಅವನು - ಬಹುವ್ರೀಹಿ ಸಮಾಸ

ಪೆರ್ಮರ = ಪಿರಿದು + ಮರ - ಕರ್ಮಧಾರಯ ಸಮಾಸ

|] ಕೊಟ್ಟಿರುವ ನಾಲ್ಕು ಉತ್ತರಗಳಲ್ಲಿ ಸರಿಯಾದ ಉತ್ತರ ಆರಿಸಿ ಬರೆಯಿರಿ.

1. ' ಪವನ ನಂದನ ' - ಈ ಪದವು ಈ ನಾಮಪದಕ್ಕೆ ಉದಾಹರಣೆಯಾಗಿದೆ.

ಎ) ರೂಢನಾಮ   ಬಿ) ಅಂಕಿತನಾಮ  ಸಿ) ಭಾವನಾಮ  ಡಿ) ಅನ್ವರ್ಥಕ ನಾಮ

2. 'ಕಾರ್ಯ ' ಎಂಬ ಪದವು ಈ ವ್ಯಾಕರಣಾಂಶಕ್ಕೆ ಸೇರುತ್ತದೆ.

ಎ) ತತ್ಸಮ ಬಿ) ತದ್ಭವ  ಸಿ) ಸಜಾತಿಯ ಒತ್ತಕ್ಷರ ಡಿ) ದ್ವಿರುಕ್ತಿ

3. 'ಪೆರ್ಮಗ' ಎಂಬುದು ಈ ಸಮಾಸಕ್ಕೆ ಉದಾಹರಣೆಯಾಗಿದೆ.

ಎ) ಕರ್ಮಧಾರೆಯಸಮಾಸ  ಬಿ) ದ್ವಿಗುಸಮಾಸ  ಸಿ) ಬಹುವ್ರೀಹಿಸಮಾಸ ಡಿ) ಕ್ರಿಯಾಸಮಾಸ

4. 'ಮದಾಂಧ- ಇಲ್ಲಿರುವ ಸಂಧಿ

ಎ) ಸವರ್ಣದೀರ್ಘಸಂಧಿ ಬಿ) ಗುಣಸಂಧಿ ಸಿ)ವೃದ್ಧಿಸಂಧಿ  ಡಿ) ಯಣ್ಸಂಧಿ   5. 'ಭೇದಮ್'

ಪದದಲ್ಲಿರುವ ವಿಭಕ್ತಿ ಪ್ರತ್ಯಯ

ಎ) ಪ್ರಥಮ   ಬಿ) ದ್ವಿತೀಯ  ಸಿ) ತೃತೀಯ  ಡಿ) ಸಪ್ತಮಿ

6. 'ಗಾಂಡಿವಿಯೊಳ್ ' - ಪದದ ಹೊಸಗನ್ನಡ ರೂಪ

ಎ) ಗಾಂಡೀವಿಯಲ್ಲಿ    ಬಿ) ಗಾಂಡೀವಿಯ    ಸಿ) ಗಾಂಡೀವಿಗೆ    ಡಿ) ಗಾಂಡೀವಿಯಿಂದ   

7. ಖ್ಯಾತ ಕರ್ನಾಟಕಗಳ ಸಂಖ್ಯೆ               

ಎ) 6    ಬಿ) 8    ಸಿ) 7    ಡಿ) 5   

8. 'ಘಟ' ಪದದ ಅರ್ಥ

ಎ) ಗಡಿಗೆ   ಬಿ) ಘಂಟೆ   ಸಿ) ಗೃಹ   ಡಿ) ಗಜ

9. ಗುರು ಲಘು ಮೊದಲ್ಲಿ ಬರಲು

ಎ) ಭ-ಯ ಗಣ   ಬಿ) ಜ-ರ ಗಣ ಸಿ) ಸ-ತ ಗಣ ಡಿ) ಮ-ನ ಗಣ

10. ಪ್ರಾಸಾಕ್ಷರದ ಹಿಂದಿನ ಅಕ್ಷರ ಹ್ರಸ್ವವಾಗಿದ್ದರೆ ಇದನ್ನು ಈ ಆದಿಪ್ರಾಸವೆನ್ನುವರು :

ಎ) ಗಜಪ್ರಾಸ   ಆ) ಹಯಪ್ರಾಸ  ಇ) ವೃಷಭಪ್ರಾಸ ಈ) ಸಿಂಹಪ್ರಾಸ

11. ಕಾವ್ಯವನ್ನು ಓದುವಾಗ ಅರ್ಥಕ್ಕೆ ಲೋಪ ಬಾರದಂತೆ ಉಸಿರು ನಿಲ್ಲಿಸುವುದಕ್ಕೆ :

ಎ) ಪ್ರಾಸ  ಬಿ) ಯತಿ   ಸಿ) ಗಣ  ಡಿ) ಅಲಂಕಾರ

12. ಪದ್ಯದ ಪ್ರತಿ ಸಾಲಿನ ಒಂದು ಮತ್ತು ಎರಡನೆ ಸ್ವರಗಳ ನಡುವೆ ಒಂದೇ ಜಾತಿಯ ವ್ಯಂಜನ ಬರುವುದು :

ಎ) ಒಳಪ್ರಾಸ   ಬಿ) ಮಧ್ಯಪ್ರಾಸ   ಸಿ) ಆದಿಪ್ರಾಸ  ಡಿ) ಮಧ್ಯಪ್ರಾಸ

13. ' ನಜಭಜಜಜರ ' ಗಣ ವಿನ್ಯಾಸ ವಿರುವ ವೃತ್ತ :

ಎ) ಮತ್ತೇಭವಿಕ್ರೀಡಿತ  ಬಿ) ಉತ್ಪಲಮಾಲೆ  ಸಿ) ಚಂಪಕಮಾಲೆ ಡಿ) ಸ್ರಗ್ದರೆ

14. ' ದೀವಿಗ ' ಪದದ ತದ್ಭವ ರೂಪ :

ಎ) ದೀಪ  ಬಿ) ಪಂಜು  ಸಿ) ದೀಪಿಕಾ  ಡಿ) ದೇವಿಗೆ

[ಉತ್ತರಗಳು : 1. ಅನ್ವರ್ಥನಾಮ  2. ತತ್ಸಮ  3. ಕರ್ಮಧಾರೆಯ 4. ಸವರ್ಣದೀರ್ಘ ಸಂಧಿ  5. ಪ್ರಥಮ 6. ಗಾಂಡೀವಿಯಲ್ಲಿ  7. 06 8. ಗಡಿಗೆ  9. ಭ-ಯ ಗಣ 10. ಸಿಂಹಪ್ರಾಸ 11. ಬಿ. ಯತಿ  12. ಆದಿಪ್ರಾಸ 13. ಚಂಪಕಮಾಲೆ  14. ದೀಪಿಕಾ]

logoblog

Thanks for reading ಎಮ್ಮನುಡಿ

Previous
« Prev Post

No comments:

Post a comment