Goslink

Goslink is providing you latest news, articles, reviews.

Tuesday, 5 January 2021

ಒಂದು ವೈಜ್ಞಾಶಿಕ್ಷಣದ ಭಾಷೆ ಮತ್ತು ಬುದ್ಧಿವಂತಿಕೆ ಒಂದು ವೈಜ್ಞಾನಿಕ ವಿಶ್ಲೇಷಣೆ

  Govt Orders Link       Tuesday, 5 January 2021

 

ಒಂದು ವೈಜ್ಞಾಶಿಕ್ಷಣದ ಭಾಷೆ ಮತ್ತು ಬುದ್ಧಿವಂತಿಕೆ ಒಂದು ವೈಜ್ಞಾನಿಕ ವಿಶ್ಲೇಷಣೆ

ಕರ್ನಾಟಕದಲ್ಲಿ ಪ್ರತಿವರ್ಷ ಎಸ್ಎಸ್ಎಲ್ ಸಿ ಮತ್ತು ಇಯುಸಿ ಪರೀಕ್ಷೆಗಳ ಶೇಕಡಾವಾರು ಉತ್ತೀರ್ಣ ಮತ್ತು ಅಂಕಗಳಿಕೆಯಲ್ಲಿ ಬೆಂಗಳೂರಿಗಿಂತ ಗ್ರಾಮಾಂತರ ವಿದ್ಯಾರ್ಥಿಗಳು ಮೇಲುಗೈ

ಪಡೆಯುತ್ತಿದ್ದಾರೆ. ನಗರ ಪ್ರದೇಶಗಳ ಮಕ್ಕಳು ಇಂಗ್ಲಿಷ್ ನಲ್ಲಿ ಸಲೀಸಾಗಿ ಮಾತನಾಡುತ್ತಾರೆ,ಆದರೆ ನಿಜವಾದ ಬುದ್ಧಿವಂತಿಕಂಯಲ್ಲಿ ಅವರು ಹಿಂದುಳಿದಿದ್ದಾರೆ. ಇತ್ತೀಚೆಗೆ ವಿದ್ಯಾರ್ಥಿಗಳ ಗುಣಮಟ್ಟ ಕಡಿಮೆಯಾಗುತ್ತಿದೆ ಎಂದು ವಿದ್ಯಾಕ್ಷೇತ್ರದ ತಜ್ಞರು ,ದೇಶದ ಪ್ರಮುಖವಿಜ್ಞಾನಿ ಸಮುದಾಯ ಮುಂತಾದವರು ಹೇಳುತ್ತಿದ್ದಾರೆ. ಇದಕ್ಕೆ ಕಾರಣ ನೋಡೋಣ.


* ಶಿಕ್ಷಣದ ಉದ್ದೇಶ ಮಕ್ಕಳು ವಿವಿಧ ವಿಷಯಗಳಲ್ಲಿ ಬುದ್ಧಿವಂತರಾಗುವುದು.

* ಶಿಕ್ಷಣವೆಂದರೆ ಮಕ್ಕಳು ತಾವು ನೋಡಿದ, ಓದಿದ ಹಾಗೂ ಕೇಳಿದ ವಿಷಯಗಳನ್ನು ನೆನಪಿನಲ್ಲಿ ಇಟ್ಟುಕೊಳ್ಳುವುದು

* ಈಗಾಗಲೇ ಕಲಿತ ವಿಷಯಗಳ ಬಗ್ಗೆ ಇನ್ನೂ ಹೆಚ್ಚಿನ ವಿಚಾರಗಳನ್ನು ತಿಳಿಯಬೇಕೆಂಬ ಆಸಕ್ತಿ ತೋರಿಸುವುದು

* ಅಗತ್ಯವಾದಾಗಲೆಲ್ಲಾ ನೆನಪಿನಲ್ಲಿನ ವಿಷಯಗಳನ್ನು ಮನಸ್ಸಿಗೆ ತಂದುಕೊಂಡು ಅವುಗಳ ಬಗ್ಗೆ ಆಲೋಚಿಸುವುದು

* ತಾವು ತಿಳಿದ ವಿಚಾರಗಳನ್ನು ಮನಸ್ಸಿಗೆ ತಂದುಕೊಂಡು ಅವುಗಳನ್ನು ಮಥಿಸಿ ಹೊಸ ವಿಚಾರಗಳನ್ನು ಕಂಡುಕೊಳ್ಳುವುದು.* ಇದು ಎಲ್ಲರೂ ಅಪೇಕ್ಷಿಸುವ, ಎಲ್ಲರಲ್ಲೂ ನಿರೀಕ್ಷಿಸುವ, ನಿಜವಾದ 


ಬುದ್ಧಿಶಕ್ತಿಯ ಬೆಳವಣಿಗೆ ಮತ್ತು ವ್ಯಕ್ತಿತ್ವದ ಪ್ರಧಾನ ಅಂಶಗಳು. ವಿಶ್ವಾದ್ಯಂತ ಮನಶಾಸ್ತ್ರಜ್ಞರು ಫಲಿತಾಂಶವೆಂದರೆ

 * ಮೆದುಳು ಸಂಬಂಧದ ಬುದ್ಧಿವಂತಿಕೆಯ ಮೇಲ್ಕಂಡ ಈ 4 ಪ್ರವೃತ್ತಿಗಳು 12 ವರ್ಷಗಳೊಳಗಾಗಿ ಮಾತ್ರ ಬರುತ್ತದೆ, ಅನಂತರದಲ್ಲಿ ಅಲ್ಲ.

* ಇಂತಹ ಪ್ರವೃತ್ತಿ ಬೆಳೆಸಿಕೊಳ್ಳುವ ಮಕ್ಕಳು ಮಾತ್ರ ಮುಂದೆ ಯಾವುದನ್ನಾದರೂ ಚೆನ್ನಾಗಿ ಕಲಿಯಬಲ್ಲರು ಮತ್ತು ಬುದ್ಧಿವಂತರಾಗಬಲ್ಲರು.

* ಆದ್ದರಿಂದ ಮಕ್ಕಳು ನಿಜವಾಗಿ ಬುದ್ಧಿವಂತರಾಗಲು 12 ವರ್ಷಗಳೊಳಗಿನ ವಿದ್ಯಾಭ್ಯಾಸ ಮತ್ತು ವಿದ್ಯಾಭ್ಯಾಸದ ಭಾಷೆ ಬಹುಮುಖ್ಯವಾದುದು.

* ಅಲ್ಲಿಯವರೆಗಿನ ಶಿಕ್ಷಣದ ಭಾಷೆ ಮತ್ತು ಮಾಧ್ಯಮ ಮಾತೃಭಾಷೆಯಾಗಿರಬೇಕು 

* ಬಹುಮುಖ್ಯವಾಗಿ, ಕಲಿಕೆಯ ಭಾಷೆಯು ವೈಜ್ಞಾನಿಕ, ಅಸಂದಿಗ್ಧ,ಸಂಬದ್ಧ ರಚನೆಯ ಹಾಗೂ ಧ್ವನ್ಯಾತ್ಮಕ ಭಾಷೆಯಾಗಿರಬೇಕು.

* ಭಾರತೀಯ ಭಾಷೆಗಳು ಅತ್ಯಂತ ವೈಜ್ಞಾನಿಕ, ಧ್ವನ್ಯಾತ್ಮಕ; ಉಚ್ಚಾರಣೆ ಮತ್ತು ಬರವಣಿಗೆಗಳ ನಡುವೆ ಅವಿನಾಭಾವ ಸಂಬಂಧವಿದೆ.

* ಇಂಗ್ಲಿಷ್ ಆದರೋ ಅತ್ಯಂತ ಅವೈಜ್ಞಾನಿಕ, ಸಂದಿಗ್ಧಮಯ, ಅಸಂಬದ್ಧ ರಚನೆಯ ಹಾಗೂ ಧ್ವನ್ಯಾತ್ಮಕವಲ್ಲದ ಭಾಷೆ.

* ಭಾರತೀಯ ಭಾಷೆಗಳ ಗುಣ ಮತ್ತು ಇಂಗ್ಲಿಷ್ ಭಾಷೆಯ ಅವಗುಣಗಳನ್ನು ಇಂಗ್ಲಿಷ್ ಮಾತೃಭಾಷೆಯುಳ್ಳವರೂ ಸೇರಿ ವಿಶ್ವದ ಅನೇಕ ಪ್ರತಿಷ್ಠಿತ ವಿಜ್ಞಾನಿಗಳು ಮತ್ತು ವಿದ್ವಾಂಸರು ಹೇಳಿದ್ದಾರೆ.

* ಬರವಣಿಗೆಗೂ ಉಚ್ಚಾರಣೆಗೂ ಸಂಬಂಧವಿಲ್ಲದ ಇಂಗ್ಲಿಷ್ ಪದಗಳ ಸ್ಲೆಲಿಂಗುಗಳ ಮತ್ತು ಗೊಂದಲಕ್ಕೆ ದೂಡುವ ವಾಕ್ಯರಚನೆಗಳ ಸುಳಿಯಲ್ಲಿ ಸಿಕ್ಕಿ ಆರಂಭದಲ್ಲೇ ಇಂಗ್ಲಿಷ್ ವಿದ್ಯಾಭ್ಯಾಸಕ್ಕೆ ದೂಡಲ್ಪಟ್ಟ ನೂರಕ್ಕೆ ತೊಂಬತ್ತು ಮಂದಿ ಮಕ್ಕಳಿಗೆ ಸಂಬಂಧಿಸಿದಂತೆ, ಅವರ ಮನಸ್ಸು ಅರಳದು ಹಾಗೂ ಅವರಿಗೆ ಕಲಿಕೆಯಲ್ಲಿ ಆಸಕ್ತಿ ಹುಟ್ಟದು* ಅವರು ವಿಷಯಗಳನ್ನು ಚೆನ್ನಾಗಿ ಗಹ್ರಿಸಲಾರರು ಮತ್ತು ಗಹ್ರಿಸಿದವಿಷಯಗಳನ್ನು ಕುರಿತು ಸರಿಯಾಗಿ ಚೆಂತನೆ ನಡೆಸಲಾರರು

* ಇದರಿಂದ ಅವರು ಉರುಹೊಡೆಯುವ ಯಂತ್ರಗಳಾಗುತ್ತಾರೆ; ಸ್ವಂತಿಕೆಯಿಂದ ದೂರವಾಗುತ್ತಾರೆ; ಸೃಜನಾತ್ಮಕಶಕ್ತಿ ಅವರಲ್ಲಿ ಮೂಡುವುದಿಲ್ಲ.

* ಭಾರತೀಯ ಭಾಷೆಗಳೆಲ್ಲವೂ ಒಂದೇ ಸಂವಿಧಾನದ, ಲಿಪಿ ವ್ಯತ್ಯಾಸವಾದರೂ ಸಮಾನ ಅಕ್ಷರಮಾಲೆಯ ಧ್ವನ್ಯಾತ್ಮಕ ಭಾಷೆಗಳು.

ಮೇಲ್ಕಂಡ ಎಲ್ಲ ವೈಜ್ಞಾನಿಕ ಹಾಗೂ ವ್ಯಾವಹಾರಿಕ ಅಂಶಗಳ ಪ್ರಕಾರ

* ಭಾರತದಲ್ಲಿ ಮಕ್ಕಳಿಗೆ 12 ವರ್ಷಗಳಾಗುವವರೆಗೆ ಅಂದರೆ ಪ್ರಾಥಮಿಕ ವಿದ್ಯಾಭ್ಯಾಸಕ್ಕೆ ಮಾತೃಭಾಷೆ ಅಥವಾ ಪ್ರಾದೇಶಿಕ ಭಾಷೆ ಮಾತ್ರ ಯೋಗ್ಯವಾದುದು. ಕರ್ನಾಟಕದಲ್ಲಿ ಪ್ರಾಥಮಿಕ ಶಿಕ್ಷಣದ ಭಾಷೆ ಕನ್ನಡವೇ ಆಗಿರಬೇಕು ಮೇಲ್ಕಂಡ ಎಲ್ಲ ವೈಜ್ಞಾನಿಕ ಹಾಗೂ ವ್ಯಾವಹಾರಿಕ ಅಂಶಗಳ ಪ್ರಕಾರ, ಭಾರತದಲ್ಲಿ ಮಕ್ಕಳಿಗೆ 12 ವರ್ಷಗಳಾಗುವವರೆಗೆ ಅಂದರೆ ಪ್ರಾಥಮಿಕ ವಿದ್ಯಾಭ್ಯಾಸಕ್ಕೆ ಮಾತೃಭಾಷೆ ಅಥವಾ ಪ್ರಾದೇಶಿಕ ಭಾಷೆ ಮಾತ್ರ ಯೋಗ್ಯವಾದುದು. ಕರ್ನಾಟಕದಲ್ಲಿ ಪ್ರಾಥಮಿಕ ಶಿಕ್ಷಣದ ಭಾಷೆ ಕನ್ನಡವೇ ಆಗಿರಬೇಕು.

* ಪ್ರಾಥಮಿಕ ಶಿಕ್ಷಣಕ್ಕಂತೂ ಇಂಗ್ಲಿಷ್ ಸರ್ವಥಾ ಯೋಗ್ಯವಲ್ಲ

* ಇಂಗ್ಲಿಷ್ ಮಾತೃಭಾಷೆಯಾಗಿದ್ದರೂ ಪರದೇಶದ ಮಕ್ಕಳು,ವಿಜ್ಞಾನಿಗಳು, ಇಂಜಿನಿಯರುಗಳು ಮುಂತಾದವರು ನಿಜವಾದ ಬುದ್ಧಿವಂತಿಕೆಯಲ್ಲಿ ನಮ್ಮವರಿಗಿಂತ ಹಿಂದುಳಿದಿದ್ದಾರೆ ಎಂಬುದು ಎಲ್ಲರಿಗೂ ತಿಳಿದಿರುವ ವಾಸ್ತವ ಸಂಗತಿ.

* ಪ್ರಾಥಮಿಕ ಹಂತದಲ್ಲಿ (12 ವರ್ಷದವರೆಗೆ) ಇಂಗ್ಲಿಷ್ಗಿಂತಲೂ ಅತ್ಯಂತ ವೈಜ್ಞಾನಿಕ ಭಾಷೆಯಾದ ಕನ್ನಡದಲ್ಲಿ ವಿದ್ಯಾಭ್ಯಾಸ ಮಾಡುವ ಮಕ್ಕಳು ವಿಷಯಗಳನ್ನು ಅರಿಯುವ, ಕಲಿಯುವ ವಿಷಯಗಳ ಬಗ್ಗೆಆಲೋಚಿಸುವ, ಅವುಗಳನ್ನು ಸ್ವಂತ ವಾಕ್ಯಗಳಲ್ಲಿ ಬರೆಯುವ ಪ್ರವೃತ್ತಿಹಾಗೂ ಶಕ್ತಿಯನ್ನು ಬೆಳೆಸಿಕೊಂಡಿರುತ್ತಾರೆ

* ಇಂಗ್ಲಿಷ್ ಅನಿವಾರ್ಯ ಮತ್ತು ಅತ್ಯಗತ್ಯವಾದ್ದರಿಂದ ಮಕ್ಕಳು ಅನಂತರದಲ್ಲಿ ಅಂದರೆ 5ನೆಯ ತರಗತಿಯಿಂದ ಇಂಗ್ಲಿಷನ್ನು ಕಲಿಯುವಾಗ, ಸ್ಪೆಲಿಂಗುಗಳ ಕಲಿಕೆಯ ಅನಿವಾರ್ಯತೆಯನ್ನು ಅರಿತು ಅದಕ್ಕೆ ಬೇಕಾದಷ್ಟು ಮಾತ್ರ ಬುದ್ಧಿಯನ್ನು ನೀಡುತ್ತಾರೆ. ಆದ್ದರಿಂದ ಬುದ್ಧಿಶಕ್ತಿಯ ಇತರ ಚಟುವಟಿಕೆಗಳಿಗೆ ತೊಂದರೆಯಾಗುವುದಿಲ್ಲ,ಕೇವಲ ಉರುಹೊಡೆಯುವ ಯಂತ್ರಗಳಾಗುವುದಿಲ್ಲ; ವಿಷಯಗ್ರಹಣೆಯ ಪ್ರವೃತ್ತಿಯನ್ನು ಇಲ್ಲೂ ತೊಡಗಿಸುತ್ತಾರೆ ಅವರು ಕಲಿಯುವ ಇಂಗ್ಲೀಷ್ ಚೆನ್ನಾಗಿರುತ್ತದೆ ಮತ್ತು ಅರ್ಥಪೂರ್ಣವಾಗಿರುತ್ತದೆ. ಐದನೆಯ ತರಗತಿಯಿಂದ ಇಂಗ್ಲಿಷ್ ಭಾಷೆಯನ್ನು ಸರಿಯಾಗಿ, ಸಂಭಾಷಣಾತ್ಮಕವಾಗಿ ಮತ್ತು ವ್ಯಾವಹಾರಿಕವಾಗಿ ಹೇಳಿಕೊಡಬೇಕು. ಇದಕ್ಕಾಗಿ ಅಧ್ಯಾಪಕರಿಗೆ ಸೂಕ್ತ ಶಿಕ್ಷಣ ಮತ್ತು ತರಬೇತಿಯನ್ನು ಕೊಡಬೇಕು ಈ ಮೇಲ್ಕಂಡ ವೈಜ್ಞಾನಿಕ ವಿಚಾರಗಳನ್ನು ಕುರಿತು ಕನ್ನಡದ ಮಕ್ಕಳ ಹಿತಾಸಕ್ತಿಗೆ ಬದ್ಧರಾದ ತಜ್ಞರು ಬರೆದ ಲೇಖನಗಳನ್ನು ಒಳಗೊಂಡ ಪುಸ್ತಕ `ಶಿಕ್ಷಣದ ಭಾಷೆ ಮತ್ತು ಬುದ್ಧಿವಂತಿಕೆ' ಎಂಬ ಪುಸ್ತಕವನ್ನು ನವಕರ್ನಾಟಕ ಪಬ್ಲಿಕೇಷನ್ಸ್ ಅವರು ಪ್ರಕಟಿಸಿದ್ದಾರೆ.

logoblog

Thanks for reading ಒಂದು ವೈಜ್ಞಾಶಿಕ್ಷಣದ ಭಾಷೆ ಮತ್ತು ಬುದ್ಧಿವಂತಿಕೆ ಒಂದು ವೈಜ್ಞಾನಿಕ ವಿಶ್ಲೇಷಣೆ

Previous
« Prev Post

No comments:

Post a comment