Goslink

Goslink is providing you latest news, articles, reviews.

Friday, 1 January 2021

ಬೇಕಾಗಿದೆ ವಿದ್ಯಾರ್ಥಿಗಳಿಗೆ ಪ್ರಸ್ತುತ ವಿದ್ಯಮಾನಗಳ ಅರಿವು

  Govt Orders Link       Friday, 1 January 2021

                        

          ಬೇಕಾಗಿದೆ ವಿದ್ಯಾರ್ಥಿಗಳಿಗೆ ಪ್ರಸ್ತುತ ವಿದ್ಯಮಾನಗಳ ಅರಿವು

                                                                                                       - ವೆಂಕೋಬರಾವ್. ಎಂ.ಹೊಸಕೋಟೆ


ಸಮೂಹ  ಮಾಧ್ಯಮಗಳಿಂದು  ಆದ್ವಿತೀಯ ಸಾಧನೆಯ ಮಹಾಪೂರವೇ ಸರಿ. ವಿದ್ಯಾರ್ಥಿಗಳಿಂದು ಶಿಕ್ಷಕರ ನೆರವು ಪಡೆದು ಅವರ  ಮಾರ್ಗದರ್ಶನದಿಂದ  ಪ್ರಸ್ತುತ  ವಿದ್ಯಮಾನಗಳ ಬಗ್ಗೆ ತಿಳುವಳಿಕೆ  ಬೆಳಸಿಕೊಳ್ಳಬೇಕಾಗಿದೆ. ಶಾಲೆಗಳಲ್ಲಿನ ಗ್ರಂಥಾಲಯಗಳಿಂದ ಆಯಾ ದಿನಗಳಿಗೆ, ವಾರ ಅಥವಾ ತಿಂಗಳುಗಳಿಗೆ  ಅನುಗುಣವಾದ  ಮಾಸಿಕ  ಪತ್ರಿಕೆಗಳನ್ನು ಸಂಗ್ರಹಿಸಬೇಕು.  ಅಲ್ಲದೆ  ದೈನಂದಿನ ಪತ್ರಿಕೆಗಳಲ್ಲಿ ಬರುವ ವೈಜ್ಞಾನಿಕ ವಿಚಾರಧಾರೆಗಳನ್ನು ಸಂಗ್ರಹ ಮಾಡುವ ಕಡೆ ಗ್ರಂಥಾಲಯದ ಅಧಿಕಾರಿಗಳು ನಿಗಾವಹಿಸಬೇಕು.  ವಿಜ್ಞಾನ, ಸಾಹಿತ್ಯ, ಸಂಗೀತ ಮುಂತಾದ ವಿಷಯಗಳಿಗೆ ಸಂಬಂಧಿಸಿದ ಸಿ.ಡಿ., ಡಿ.ವಿ.ಡಿ., ವಿಡಿಯೋ ಟೇಪ್ಸ್, ಸಿನಿಮಾ, ಪಠ್ಯಪುಸ್ತಕಗಳು ಇವುಗಳನ್ನು ಸಂಗ್ರಹಿಸಿಡುವುದರಿಂದ ವಿದ್ಯಾರ್ಥಿಗಳು ತಮ್ಮ ಅಗತ್ಯಗಕ್ಕನುಗುಣವಾಗಿ  ಬಳಸಿಕೊಳ್ಳಬಹುದು.  ಅಲ್ಲದೆ ಇದನ್ನು ಕಲಿಕಾ ಚಟುವಟಿಕೆಯಾಗಿಯೂ ವಿದ್ಯಾರ್ಥಿಗಳಿಗೆ ನೀಡಬಹುದಾಗಿದೆ. 

ಮಣ್ಣಿನ ಸವೆತ, ಪ್ರವಾಹಗಳು, ಜ್ವಾಲಾಮುಖಿ, ಗ್ರಹ ಮತ್ತು ನಕ್ಷತ್ರಗಳ ಅನ್ವೇಷಣೆ, ರಸಾಯನಶಾಸ್ತ್ರ, ಜೀವಶಾಸ್ತ್ರ ಹಾಗೂ ಭೌತಶಾಸ್ತ್ರ, ಗಣಿತಶಾಸ್ತ್ರಗಳಲ್ಲಿನ ಇತ್ತೀಚಿನ ಪ್ರಯೋಗಗಳ ಬಗ್ಗೆ ಅಧ್ಯಯನ ಮಾಡುವುದು ಕಲೆ, ಸಾಹಿತ್ಯ, ವಾಸ್ತುಶಿಲ್ಪ, ಸಂಗೀತಗಳಲ್ಲಿನ ಶೋಧನೆಗಳು. ಸಮೂಹ ಮಾಧ್ಯಮ, ತಂತ್ರಜ್ಞಾನಗಳಲ್ಲಿ ಅವಿಷ್ಕಾರಗಳು ಮತ್ತು ವಿಜ್ಞಾನದ ವಿಶೇಷತೆಗಳೊಂದಿಗೆ ಪ್ರಕೃತಿ ಸತ್ಯಗಳನ್ನು ಅರಿಯುವಂತಹ ವಾತಾವರಣವನ್ನು ಶಾಲೆಗಳಲ್ಲಿ ಮತ್ತು ಮನೆಗಳಲ್ಲಿ ಮಕ್ಕಳಿಗೆ ಕಲ್ಪಿಸಿಕೊಡಬೇಕು. ಪ್ರಸ್ತುತ ವಿದ್ಯಮಾನಗಳ ಅರಿವು ಮಕ್ಕಳಿಗೆ ಹೊಸ ಹೊಸ ಪ್ರಯೋಗಗಳಿಗೆ, ಅನ್ವೇಷಣೆಗಳಿಗೆ ದಾರಿ ಮಾಡಿಕೊಡುತ್ತದೆ. ಶಾಲೆಗಳಲ್ಲಿ ಶಿಕ್ಷಕರಿಂದ ಹೊಸ ಹೊಸ ಪ್ರಯೋಗಗಳನ್ನು ಮಾಡಿತೋರಿಸುತ್ತಾ ಮಕ್ಕಳಲ್ಲಿ ಚೈತನ್ಯ ತುಂಬಬೇಕಾಗಿದೆ. ಈ ನಿಟ್ಟಿನಲ್ಲಿ ಶಾಲೆಗಳಲ್ಲಿ ಪ್ರಯೋಗಗಳು  ಕಡ್ಡಾಯವಾಗಿ  ಬೇಕಾಗಿದೆ.  ಏಕೆಂದರೆ ವಿದ್ಯಾರ್ಥಿಗಳಿಂದು ಪ್ರಸ್ತುತ ವೈಜ್ಞಾನಿಕ ವಿದ್ಯಮಾನಗಳ ಅರಿವಿನಿಂದ ಹೊಸ ಹೊಸ ಅವಿಷ್ಕಾರಗಳನ್ನು ಮಾಡುತ್ತಾ ಕಲಿಯಬಹುದಾಗಿದೆ. ಅಲ್ಲದೆ ವೈಜ್ಞಾನಿಕ ಅಂತಃಸತ್ವಗಳ ಅರಿವು ಮೂಡಿಸಿಕೊಳ್ಳಲು ಸಹಾಯಕವಾಗಿದೆ.

ಪ್ರಸ್ತುತ ವಿದ್ಯಾಮಾನಗಳ ವೈಜ್ಞಾನಿಕ ಪ್ರಯೋಜನವೇನು ?
* ವಿದ್ಯಾರ್ಥಿಗಳಲ್ಲಿ ಕುತೂಹಲ ಮನೋಭಾವನೆಯುಂಟಾಗುತ್ತದೆ. *ಹೊಸಚಿಂತನೆಗಳನ್ನು ಮುಕ್ತವಾಗಿ ಹೊರಹಾಕಲು ಸಹಾಯಕವಾಗಿದೆ.
* ಸಾಕ್ಷಿ ಆಧಾರಿತ ಮೂಲಭೂತ ಚಿಂತನೆಗೆ ಪ್ರೇರಕವಾಗುತ್ತದೆ. 
*ಸಂಗ್ರಹಿಸಿದ ಮಾಹಿತಿಗಳಲ್ಲಿ, ಸಂಬಂಧಿತ, ಸಂಬಂಧಿತವಲ್ಲದನ್ನುಬೇರ್ಪಡಿಸುವ ತಾಕರ್ಿಕ ಚಿಂತನೆಯುಂಟಾಗುತ್ತದೆ. 
* ಸೃಜನಾತ್ಮಕ ಚಿಂತನೆಗಳು, ಕಲಾತ್ಮಕವಾಗಿ ಮಾಡುವ ಕಾರ್ಯಗಳು, ಸಾರ್ವತ್ರಿಕ ವಿಚಾರಗಳ ಅರಿವುಂಟಾಗುತ್ತದೆ. 
* ಸಮಸ್ಯೆಗಳನ್ನು ಗುರುತಿಸುವುದು, ಸಂಶೋಧನೆಗಳನ್ನು ಕ್ರಮಬದ್ಧವಾಗಿ ಮಾಡಿ ನಿರ್ದಿಷ್ಟವಾದ ಉತ್ತರವನ್ನು ಕಂಡುಹಿಡಿಯುವುದು. 
* ಸಮಸ್ಯಾ ಪರಿಹಾರ ಚಟುವಟಿಕೆಯಲ್ಲಿ ಸಂಶೋಧನೆಯ ಉದ್ದಕ್ಕೂ ಮೌಲ್ಯೀಕರಿಸುವ ಕೌಶಲ್ಯವನ್ನು ವೃದ್ಧಿಸಿಕೊಳ್ಳುವುದು. 
* ವಿಭಿನ್ನ ಪರಾಮರ್ಶನ ಸಂಪನ್ಮೂಲಗಳನ್ನು ಬಳಸಿಕೊಳ್ಳುವ ಸಾಮಥ್ರ್ಯ ಬೆಳೆಯುವುದು. 
* ಓದುವಿಕೆ, ಬರವಣಿಗೆ, ಮೌಖಿಕ ಸಂವಹನ ಮತ್ತು ಆಲಿಸುವಿಕೆಯ ಕೌಶಲ್ಯಗಳು ವಿಕಾಸ ಹೊಂದುತ್ತದೆ. 
* ಸತತ ಪ್ರಯತ್ನ ಮಾಡುವ ಕೌಶಲ್ಯವನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳುವರು. 
* ಮಾಡುತ್ತಾ ಕಲಿಯುವ  ಮನೋಧೋರಣೆಯನ್ನು  ಬೆಳಸಿಕೊಳ್ಳುವರು. 
*  ಜೀವನದ  ಸಮಸ್ಯೆಗಳನ್ನು ಪ್ರಯೋಗಕ್ಕೊಡ್ಡಿ  ನೈಜ ತೀರ್ಮಾನಗಳನ್ನು ಕೈಗೊಳ್ಳಲು ಪೂರಕವಾಗಿದೆ. 
* ವಿದ್ಯಾರ್ಥಿಗಳಲ್ಲಿ ಕ್ರಿಯಾಶೀಲತೆ ಮತ್ತು ಆತ್ಮವಿಶ್ವಾಸಗಳು ಹೆಚ್ಚುತ್ತವೆ. 
* ವೈಚಾರಿಕ ಚಿಂತನೆ ವೈಜ್ಞಾನಿಕ ಮನೋಭಾವನೆಗಳಿಗೆ ದಾರಿ ಮಾಡಿಕೊಡುತ್ತದೆ.
* ಪರಸ್ಪರ ಚರ್ಚಿಸುವ, ವಿಮರ್ಶಾತ್ಮಕವಾಗಿ ಚಿಂತಿಸುವ ಮನೋಭಾವನೆಗಳು ವಿಕಾಸವಾಗುತ್ತದೆ. 
* ವಿದ್ಯಾರ್ಥಿಗಳು ಪ್ರಶ್ನಿಸುವ ಕೌಶಲ್ಯವನ್ನು ಬೆಳೆಸಿಕೊಂಡು, ಸತ್ಯಾಸತ್ಯತೆಯನ್ನು ಒಪ್ಪಿಕೊಳ್ಳುವರು. 
* ವಿಜ್ಞಾನದ ಆಳ-ಅಗಲ ಮತ್ತು ವೈಶಾಲ್ಯತೆಗಳ ಅರಿವು ದಿನೇ ದಿನೇ ವಿಕಾಸ ಹೊಂದುತ್ತದೆ. 
* ಬುದ್ಧಿವಿಕಾಸ, ಜ್ಞಾನವಿಕಾಸ, ವ್ಯಕ್ತಿತ್ವ ವಿಕಾಸಗಳು ವೃದ್ಧಿಗೊಂಡು ಕೌಶಲ್ಯಯುತ ಕಾರ್ಯಗಳ ಕಡೆ ಗಮನ ಹರಿಸಲು ಸಹಕಾರಿಯಾಗಿದೆ. 
* ನೋಡುತ್ತಾ ಕಲಿಯಲು, ವಿಷಯಗಳನ್ನು ಕ್ರಮಬದ್ಧವಾಗಿ ಕ್ರೋಡೀಕರಿಸುವ ಸಾಮಥ್ರ್ಯವನ್ನು ಬೆಳೆಸಿಕೊಳ್ಳಬಹುದಾಗಿದೆ. 
* ವಿದ್ಯಾರ್ಥಿಗಳಲ್ಲಿ ಆಸಕ್ತಿ, ಅಭಿರುಚಿಗಳು ವೃದ್ಧಿಗೊಂಡು ನವಸ್ಫೂರ್ತಿಯಿಂದ ಹೊಸತನ್ನು ಸೃಷ್ಟಿಸುವ ಸಾಮಥ್ರ್ಯವನ್ನು ತಮ್ಮದಾಗಿಸಿಕೊಳ್ಳುವರು.
ಹೀಗೆ ಪ್ರಸ್ತುತ ವಿದ್ಯಮಾನಗಳ ಅರಿವು, ಮಕ್ಕಳು ಪ್ರಕೃತಿ ಸತ್ಯಗಳು ಮತ್ತು ಮಾನವ ಜೀವನದ ದಿನನಿತ್ಯದ ವಾರ್ತೆಗಳನ್ನು ತಿಳಿದು ಭವಿಷ್ಯತ್ತಿನೆಡೆ ಚಿಂತಿಸಲು ದಾರಿದೀಪವಾಗಿದೆ.
logoblog

Thanks for reading ಬೇಕಾಗಿದೆ ವಿದ್ಯಾರ್ಥಿಗಳಿಗೆ ಪ್ರಸ್ತುತ ವಿದ್ಯಮಾನಗಳ ಅರಿವು

Previous
« Prev Post

No comments:

Post a comment