ಕೊಟ್ಟಿರುವ ನಾಲ್ಕು ಉತ್ತರಗಳಲ್ಲಿ ಸರಿಯಾದ ಉತ್ತರನ್ನು ಆರಿಸಿ ಬರೆಯಿರಿ.
1. ಎರಡು ಮಾತ್ರ್ರೆಗಳ ಕಾಲದಲ್ಲಿ ಉಚ್ಚರಿಸುವ ಅಕ್ಷರವನ್ನು ಹೀಗೆ ಕರೆಯುತ್ತೇವೆ :
ಎ) ಪ್ಲುತ ಬಿ) ಗುರು ಸಿ) ಲಘು ಡಿ) ಗಣ
2. ಕೈಯಾನು - ಪದವು ಈ ಸಮಾಸವಾಗಿದೆ :
ಎ) ಕ್ರಿಯಾಸಮಾಸ ಬಿ) ದ್ವಂದ್ವಸಮಾಸ ಸಿ) ಬಹುವ್ರೀಹಿಸಮಾಸ ಡಿ) ತತ್ಪುರುಷಸಮಾಸ
3. ಮಾದ್ರಮಾಗಧಯಾದವರು - ಇದು ಈ ಸಮಾಸಕ್ಕೆ ಉದಾಹರಣೆಯಾಗಿದೆ :
ಎ) ಅಂಶಿಸಮಾಸ ಬಿ) ತತ್ಪರುಷಸಮಾಸ ಸಿ) ದ್ವಿಗುಸಮಾಸ ಡಿ) ದ್ವಂದ್ವಸಮಾಸ.
4. ಹಸಾದ - ಪದದ ತತ್ಸಮ ರೂಪ :
ಎ) ವಿಷಾದ ಬಿ) ಹಸನಾದ ಸಿ) ಪಸಾದ ಡಿ) ಪ್ರಸಾದ.
5. ದೃಗುಜಲ - ಪದದ ಅರ್ಥ ಇದಾಗಿದೆ :
ಎ) ಕಣ್ಣನೀರು ಬಿ) ತಿಳಿನೀರು ಸಿ) ಮೃಗಗಳನೀರು ಡಿ) ಬಿಸಿನೀರು.
6. ಬಹುವ್ರೀಹಿ ಸಮಾಸಕ್ಕೆ ಈ ಪದವು ಉದಾಹರಣೆಯಾಗಿದೆ :
ಎ) ಹೊಗೆದೋರು ಬಿ) ಕೈಯಾನು ಸಿ) ರಾಜೀವಸಖ ಡಿ) ಬಾಯ್ದಂಬುಲ
7. ಭಾಮಿನಿ ಷಟ್ಪದಿಯಲ್ಲಿನ ಒಟ್ಟು ಮಾತ್ರೆಗಳ ಸಂಖ್ಯೆ :
ಎ) 108 ಬಿ) 102 ಸಿ) 64 ಡಿ) 144
8. ದನುಜರಿಪು - ಇದು ಈ ಸಮಾಸಕ್ಕೆ ಉದಾಹರಣೆಯಾಗಿದೆ :
ಎ) ಕ್ರಿಯಾಸಮಾಸ ಬಿ)ಬಹುವ್ರೀಹಿಸಮಾಸ ಸಿ) ದ್ವಂದ್ವಸಮಾಸ ಡಿ) ತತ್ಪುರುಷಸಮಾಸ
9. ಉಪಮಾನ ಉಪಮೇಯಗಳ ನಡುವೆ ಅಭೇದ ಸಂಬಂಧ ಕಲ್ಪಿಸುವ ಅಲಂಕಾರ :
ಎ) ಉಪಮಾಲಂಕಾರ ಬಿ) ರೂಪಕಾಲಂಕಾರ ಸಿ) ದೃಷ್ಟಾಂತಾಲಂಕಾರ ಡಿ) ಉತ್ಪ್ರೇಕ್ಷಲಾಂಕಾರ
10. ಗುರು-ಲಘು ಮೂರಿರಲು ಈ ಗಣವಾಗುತ್ತದೆ :
ಎ) 'ಬ-ಯ'ಗಣ ಬಿ) 'ಜ-ರ'ಗಣ ಸಿ) 'ಮ-ನ'ಗಣ ಡಿ) 'ಸ-ತ'ಗಣ
11. ಷಟ್ಪದಿಯಲ್ಲಿರುವ ವಿಧಗಳು :
ಎ) ಆರು ಬಿ) ಎಂಟು ಸಿ) ನಾಲ್ಕು ಡಿ) ಮೂರು
12. 'ಕೌಂತೇಯ' - ಪದವು ಈ ಅಕ್ಷರಗಣಕ್ಕೆ ಉದಾಹರಣೆಯಾಗಿದೆ :
ಎ) 'ಯ'ಗಣ ಬಿ) 'ಸ'ಗಣ ಸಿ) 'ತ'ಗಣ ಡಿ) 'ಭ'ಗಣ
13. ಒಂದು ಅಕ್ಷರವನ್ನು ಉಚ್ಛರಿಸುವ ಅವಧಿಗೆ ಹೀಗೆನ್ನುತ್ತಾರ :
ಎ) ಗಣ ಬಿ) ಮಾತ್ರೆ ಸಿ) ಯತಿ ಡಿ) ಪ್ರಾಸ
14. ಮೂರು-ನಾಲ್ಕು ಮಾತ್ರೆಗಳಿಂದ ಗಣವಿಭಜನೆಯನ್ನು ಮಾಡುವ ಷಟ್ಪದಿ :
ಎ) ವಾರ್ಧಕ ಬಿ) ಕುಸುಮ ಸಿ) ಭೋಗ ಡಿ) ಭಾಮಿನಿ
15. ಉರವಣಿಸು - ಈ ಪದದ ಅರ್ಥ :
ಎ) ಹೆಚ್ಚಾಗು ಬಿ) ಅವಸರ ಸಿ) ಮನಸ್ಸು ಡಿ) ಕಡಿಮೆಯಾಗು.
[ ಉತ್ತರಗಳು : 1. ಬಿ. ಗುರು 2. ಎ. ಕ್ರಿಯಾಸಮಾಸ 3. ಡಿ. ದ್ವಂದ್ವಸಮಾಸ 4.ಡಿ. ಪ್ರಸಾದ 5. ಎ. ಕಣ್ಣೀರು 6. ಸಿ. ರಾಜೀವಸಖ 7. ಬಿ. 102 8. ಬಿ. ಬಹುವ್ರೀಹಿಸಮಾಸ 9. ಬಿ. ರೂಪಕಾಲಂಕಾರ 10. ಸಿ. ಮ-ನ ಗಣ 11. ಎ. ಆರು 12. ಸಿ. 'ತ'ಗಣ 13. ಬಿ. ಮಾತ್ರೆ 14. ಖ. ಭಾಮಿನಿ 15. ಎ. ಹೆಚ್ಚಾಗು ]
ಮೊದಲೆರೆಡು ಪದಗಳಿಗಿರುವ ಸಂಬಂಧದಂತೆ ಮೂರನೇ ಪದಕ್ಕೆ ಸಂಬಂಧ ಬರೆಯಿರಿ :
1. ಕಂದಪದ್ಯ : ನಾಲ್ಕುಸಾಲು : : ಷಟ್ಪ್ಟದಿ :
2. ಋಣ : ಹಂಗು : : ರಣ :
3. ಲಕ್ಷ್ಮೀಶ : ವಾರ್ಧಕಷಟ್ಪದಿ : : ಕುಮಾರವ್ಯಾಸ :
4. ಷಟ್ಪದಿ : ಮಾತ್ರಾಗಣ : : ಚಂಪಕಮಾಲಾವೃತ್ತ :
5. ಇನತನೂಜ : ಬಹುವ್ರೀಹಿಸಮಾಸ : : ಮಾದ್ರಮಾಗಧಯಾದವರು :
6. ಲಕ್ಷ್ಮೀಶ : ಉಪಮಾಲೋಲ : : ಕುಮಾರವ್ಯಾಸ :
7. ಉವರ್ಿಯೊಳ್ : ಸಪ್ತಮಿವಿಭಕ್ತಿ : : ಸುಯಾಜಿಯಂ :
8. ಲಘು : ಒಂದುಮಾತ್ರೆ : : ಗುರು :
9. ಮುರಾರಿ : ಕೃಷ್ಣ : : ರವಿಸುತ :
10. ಹಸಾದ : ಪ್ರಸಾದ : : ದಾತಾರ :
[ ಉತ್ತರಗಳು : 1. ಆರುಸಾಲು 2. ಯುದ್ಧ 3. ಭಾಮಿನಿಷಟ್ಪದಿ 4. ಅಕ್ಷರಗಣ 5. ದ್ವಂದ್ವಸಮಾಸ 6.ರೂಪಕಸಾಮ್ರಾಜ್ಯಚಕ್ರವರ್ತಿ 7. ದ್ವಿತೀಯ 8. ಎರಡು ಮಾತ್ರೆ 9. ಕರ್ಣ 10. ದಾತೃ ]
No comments:
Post a comment