Goslink

Goslink is providing you latest news, articles, reviews.

Friday, 29 January 2021

ಸಂಕಲ್ಪಗೀತೆ

  Govt Orders Link       Friday, 29 January 2021

 ಪದ್ಯಪಾಠ-5

ಸಂಕಲ್ಪಗೀತೆ

* ಇವರು ಕ್ರಿ.ಶ.1926 ರಲ್ಲಿ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದಲ್ಲಿ ಜನಿಸಿದರು.  ನಿಧನ: 23-12-2013

* ಇವರ ಪೂರ್ಣ ಹೆಸರು: ಗುಗ್ಗರಿ ಶಾಂತವೀರಪ್ಪ ಶಿವರುದ್ರಪ್ಪ.

* ಇವರ ಪ್ರಮುಖ ಕೃತಿಗಳೆಂದರೆ; 'ಸಾಮಗಾನ', 'ಚೆಲುವು-ಒಲವು', 'ದೇವಶಿಲ್ಪಿ', 'ದೀಪದ ಹೆಜ್ಜೆ', 'ಅನಾವರಣ', 'ವಿಮರ್ಶೆಯ ಪೂರ್ವ ಪಶ್ಚಿಮ', 'ಮಾಸ್ಕೋದಲ್ಲಿ ಇಪ್ಪತ್ತೆರಡು ದಿನಗಳು', 'ಸೌಂದರ್ಯ ಸಮೀಕ್ಷೆ'.

* ಇವರಿಗೆ ದೊರೆತಿರುವ ಪ್ರಮುಖ ಪ್ರಶಸ್ತಿಗಳೆಂದರೆ;

1) 'ಕಾವ್ಯಾರ್ಥ ಚಿಂತನ' ಕೃತಿಗೆ ಕೇಂದ್ರಸಾಹಿತ್ಯ ಅಕಾಡೆಮಿ ಪ್ರಶಸ್ತಿ.

2) ಕನ್ನಡ ವಿಶ್ವವಿದ್ಯಾನಿಲಯದ 'ನಾಡೋಜ' ಪ್ರಶಸ್ತಿ.

3) ಬೆಂಗಳೂರು ಮತ್ತು ಕುವೆಂಪು ವಿಶ್ವವಿದ್ಯಾನಿಲಯಗಳ 'ಗೌರವ ಡಿ.ಲಿಟ್' ಪ್ರಶಸ್ತಿ.

4) 'ರಾಷ್ಟ್ರಕವಿ' ಪ್ರಶಸ್ತಿ.

5) 1992 ರಲ್ಲಿ ದಾವಣಗೆರೆಯಲ್ಲಿ ನಡೆದ 61ನೆಯ ಅಖಿಲಭಾರತ ಕನ್ನಡ ಸಾಹಿತ್ಯಸಮ್ಮೇಳನದ ಅಧ್ಯಕ್ಷರಾಗಿದ್ದರು.

ಅ] ಒಂದು ವಾಕ್ಯದಲ್ಲಿ ಉತ್ತರಿಸಿ.

1. ಯಾವುದನ್ನು ಎಚ್ಚರದಲಿ ಮುನ್ನಡೆಸಬೇಕು?

ಬಿರುಗಾಳಿಗೆ ಹೊಯ್ದಾಡುವ ಹಡಗನ್ನು ಎಚ್ಚರದಲ್ಲಿ ಮನ್ನಡೆಸಬೇಕು.

2. ನದೀಜಲಗಳು ಏನಾಗಿವೆ?

ನದೀಜಲಗಳು ಕಲುಷಿತವಾಗಿವೆ.

3. ಯಾವುದಕ್ಕೆ ಮುಂಗಾರಿನ ಮಳೆಯಾಗಬೇಕು?

ಕಲುಷಿತವಾಗಿರುವ ನದೀಜಲಗಳಿಗೆ ಮುಂಗಾರಿನ ಮಳೆಯಾಗಬೇಕು.

4. ಕಾಡುಮೇಡುಗಳ ಸ್ಥಿತಿ ಹೇಗಿದೆ?

ಕಾಡುಮೇಡುಗಳು ಬರಡಾಗಿವೆ.

5. ಯಾವ ಎಚ್ಚರದೊಳು ಬದುಕಬೇಕಿದೆ?

ಮತಗಳೆಲ್ಲವೂ ಪಥಗಳು ಎನ್ನುವ ಎಚ್ಚರದೊಳು ಬದುಕಬೇಕಿದೆ.

ಆ] ಮೂರು-ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿ.

1. ಹಡಗನ್ನು ಯಾವುದರ ಬೆಳಕಿನಲ್ಲಿ ಮುನ್ನಡೆಸಬೇಕಿದೆ?

ನಮ್ಮ ಬದುಕಿನ ಸುತ್ತಮುತ್ತಲು ಕವಿದಿರುವ ಕತ್ತಲೆಯನ್ನು ಕಳೆಯಲು ಪ್ರೀತಿಯೆಂಬ ಹಣತೆಯನ್ನು ಹಚ್ಚಬೇಕು.ಸಂಸಾರ ಸಾಗರದಲ್ಲಿ ಬಿರುಗಾಳಿಗೆ ಸಿಲುಕಿ ಹೊಯ್ದಾಡುತ್ತಿರುವ ಬದುಕೆಂಬ ಹಡಗನ್ನು ಜ್ಞಾನದೀವಿಗೆಯ ಮೂಲಕ ಎಚ್ಚರಿಕೆಯಿಂದ ಮುನ್ನಡೆಸಬೇಕಿದೆ.

2. ಕಾಡುಗಳಿಗ ಹೇಗ ಮುಟ್ಟಬೇಕಿದೆ?

ಋತುಗಳ ರಾಜನಾದ ವಸಂತನು ಬರಡಾಗಿರುವ ಕಾಡುಗಳು ಹಚ್ಚಹಸಿರಿನಿಂದ ಕಂಗೊಳಿಸುವಂತೆ ಮುಟ್ಟಬೇಕಿದೆ.ವಸಂತನ ಆಗಮನದಿಂದ ಬರಡಾಗಿರುವ ಕಾಡಿನಲ್ಲಿ ಮರಗಿಡಗಳು ಚಿಗುರಿ ಪ್ರಕೃತಿಗೆ ನವಚೈತನ್ಯ ಮೂಡಬೇಕಿದೆ ಎಂಬುದು ಕವಿಯ ಆಶಯವಾಗಿದೆ.

3. ಹೊಸ ಭರವಸೆಗಳನ್ನು ಮೂಡಿಸಿ ಯಾವುದರ ನಡುವೆ ಸೇತುವೆಯಾಗಬೇಕಿದೆ?

ಭಾಷೆ, ಜಾತಿ, ಮತಧರ್ಮಗಳ ಭೇದಭಾವದಿಂದ ಮನುಜರ ನಡುವೆ ಅಡ್ಡಗೋಡೆಗಳು ನಿಮರ್ಾಣವಾಗಿವೆ. ಸ್ನೇಹ, ಪ್ರೀತಿ, ನಂಬಿಕೆಯ ಮೂಲಕ ಮನುಜರ ನಡುವಿನ ಈ ಅಡ್ಡಗೋಡೆಗಳನ್ನು ಕೆಡವಬೇಕು.ಬದುಕಿನಲ್ಲಿ ಹೊಸ ಭರವಸೆಗಳನ್ನು ಮೂಡಿಸಿ ಮನುಜ ಮನುಜರ

ನಡುವೆ ಸೇತುವೆಯಾಗಬೇಕಿದೆ.

4. ನಾಳಿನ ಕನಸನ್ನು ಬಿತ್ತಬೇಕಾದರೆ ನಾವು ಹೇಗೆ ಬದುಕಬೇಕು?

ಎಲ್ಲ ಮತಧರ್ಮಗಳು ದಾರಿ ತೋರಿಸುವ ದೀಪಗಳಾಗಿರುವುದರಿಂದ ಎಲ್ಲಾ ಮತಗಳನ್ನು ಪುರಸ್ಕರಿಸುವ ಎಚ್ಚರಿಕೆಯಲ್ಲಿ ನಾವು ಬದುಕಬೇಕು.ಭಯ ಮತ್ತು ಸಂಶಯಗಳಿಂದ ಮಸುಕಾಗಿರುವ ಮನದ ಕಣ್ಣಿನಲ್ಲಿ ಭವಿಷ್ಯದ ಕನಸ್ಸನ್ನು ಬಿತ್ತುತ್ತ ಬದುಕು ನಡೆಸಬೇಕು.

ಇ] ಎಂಟು-ಹತ್ತು ವಾಕ್ಯಗಳಲ್ಲಿ ಉತ್ತರಿಸಿ.

1. ನಾವು ಯಾವ ಸಂಕಲ್ಪ ಕೈಗೊಳ್ಳಬೇಕೆಂಬುದು ಕವಿ ಶಿವರುದ್ರಪ್ಪನವರ ಆಶಯ?

ನಮ್ಮ ಸುತ್ತಲೂ ಹಬ್ಬಿರುವ ದ್ವೇಷದ ಕತ್ತಲೆಯನ್ನು ಕಳೆಯಲು, ಪ್ರೀತಿಯ ದೀಪವನ್ನು ಹಚ್ಚುವ, ಸಂಸಾರ ಸಾಗರದಲ್ಲಿ ಬಿರುಗಾಳಿಗೆ ಸಿಲುಕಿ ಹೊಯ್ದಾಡುತ್ತಿರುವ ಬದುಕೆಂಬ ಹಡಗನ್ನು ಎಚ್ಚರದಲ್ಲಿ ಮುನ್ನಡೆಸುವ, ಪರಿಸರ ಮಾಲಿನ್ಯದಿಂದ ಕಲುಷಿತವಾಗಿರುವ ನದೀಜಲಗಳಿಗೆ ಶುದ್ಧೀಕರಿಸುವ ಮುಂಗಾರಿನ ಮಳೆಯಂತಹ ಪರಿಸರ ಪ್ರೇಮಿಯಾಗುವ, ಬರಡಾಗಿರುವ ಕಾಡುಮೇಡುಗಳು ಹಚ್ಚಹಸಿರಿನಿಂದ ಕಂಗೊಳಿಸಿ, ಸಮೃದ್ಧವಾಗುವಂತಹ ವಸಂತಕಾಲವಾಗುವ, ಅತ್ಯಾಚಾರ, ಅನಾಚಾರ, ಭ್ರಷ್ಟಾಚಾರ, ಅಸ್ಪೃಶ್ಯತೆ, ಅಸಮಾನತೆಗಳಿಂದ ಅಧಃಪತನಗೊಂಡಿರುವ ಸಮಾಜವನ್ನು ಹೊಸ ಭರವಸೆಗಳ ಮೂಲಕ ಮೇಲೆತ್ತುವ, ಭಾಷೆ, ಜಾತಿ, ಮತ, ಧರ್ಮಗಳ ಭೇದಭಾವದಿಂದ ಮನುಜ ಮನುಜರ ನಡುವೆ ಉಂಟಾಗಿರುವ ಅಸಮಾನತೆಯ ಅಡ್ಡಗೋಡೆಗಳನ್ನು ಕೆಡಹಿ, ಸಮಾನತೆಯ ಮನೋಭಾವನೆಯನ್ನು ಮೂಡಿಸುವ ಸೇತುವೆಯಾಗುವ, ಎಲ್ಲ ಮತಗಳು ಸಾಧನೆಯ ದಾರಿಗಳು ಎಂಬ ಎಚ್ಚರದಲ್ಲಿ ಬದುಕುವ, ಭಯ ಹಾಗೂ ಸಂಶಯಗಳಿಂದ ಮಸುಕಾದ ಕಣ್ಣುಗಳಲ್ಲಿ ಭವಿಷ್ಯದ ಹೊಂಗನಸು ಕಾಣುವಂತೆ ಮಾಡುವ ದೃಢಸಂಕಲ್ಪವನ್ನು ಕೈಗೊಳ್ಳಬೇಕು ಎಂಬುದು ಕವಿ ಜಿ.ಎಸ್. ಶಿವರುದ್ರಪ್ಪ ಅವರ ಆಶಯವಾಗಿದೆ.

2. ಸಂಕಲ್ಪ ಮತ್ತು ಅನುಷ್ಟಾನದ ಕುರಿತು ಕವಿ ಶಿವರುದ್ರಪ್ಪನವರ ಅಭಿಪ್ರಾಯವನ್ನು ವಿವರಿಸಿ.

ನಾವು ಜೀವನದಲ್ಲಿ ಪ್ರೀತಿಯ ದೀಪವನ್ನು ಹಚ್ಚುವ ಸಂಕಲ್ಪ ಕೈಗೊಳ್ಳುವುದರಿಂದ ದ್ವೇಷರಹಿತ ಸಮಾಜ ನಿರ್ಮಾಣ ಮಾಡಬಹುದು.ನಾವು ಬದುಕಿನಲ್ಲಿ ಎಚ್ಚರಿಕೆಯಿಂದ ಮುನ್ನಡೆಯುವ ಸಂಕಲ್ಪ ಕೈಗೊಳ್ಳುವುದರಿಂದ ಎಂತಹ ಸವಾಲುಗಳನ್ನು ಧೈರ್ಯವಾಗಿ ಎದುರಿಸಬಹುದು.ನಾವು ಮುಂಗಾರಿನ ಮಳೆಯಂತೆ ಪರಿಸರ ಸಂರಕ್ಷಿಸುವ ಸಂಕಲ್ಪ ಕೈಗೊಳ್ಳುವುದರಿಂದ ನದೀಜಲಗಳನ್ನು ಶುದ್ಧವಾಗಿ ಇಟ್ಟುಕೊಳ್ಳಬಹುದು.ನಾವು ವನಸಂರಕ್ಷಣೆಯ ಸಂಕಲ್ಪ ಕೈಗೊಳ್ಳುವುದರಿಂದ ಕಾಡುಗಳು ಹಚ್ಚಹಸುರಿನಿಂದ ಸಂವೃದ್ಧವಾಗುವಂತೆ ಮಾಡಬಹುದು.ನಾವು ಹೊಸ ಭರವಸೆಯನ್ನು ಮೂಡಿಸುವ ಸಂಕಲ್ಪ ಕೈಗೊಳ್ಳುವುದರಿಂದ ಸಮಾಜದ ನೈತಿಕ ಅಧಃಪತನವನ್ನು ತಡೆಯಬಹುದು.ನಾವು ಸಮಾನತೆ ಮನೋಭಾವನೆಯುಳ್ಳವರಾಗುವ ಸಂಕಲ್ಪ ಕೈಗೊಳ್ಳುವುದರಿಂದ ಮನುಜ ಮನುಜರ ನಡುವಿನ ಅಸಮಾನತೆಯ ಅಡ್ಡಗೋಡೆಗಳನ್ನು ಕೆಡುಹಬಹುದು.ಎಲ್ಲ ಮತಗಳು ಸಾಧನೆಯ ದಾರಿಗಳು ಎಂಬ ಎಚ್ಚರದಲ್ಲಿ ಬದುಕುವ ಸಂಕಲ್ಪ ಕೈಗೊಳ್ಳುವುದರಿಂದ ದೇಶದಲ್ಲಿ ಶಾಂತಿಯು ನೆಲೆಸುವಂತೆ ಮಾಡಬಹುದು.ಭಯ ಹಾಗೂ ಸಂಶಯಗಳಿಂದ ಮುಕ್ತರಾಗುವ ಸಂಕಲ್ಪ ಕೈಗೊಳ್ಳುವುದರಿಂದ ಭವಿಷ್ಯದ ಹೊಂಗನಸನ್ನು ಕಾಣಬಹುದು. ಹೀಗೆ ಕವಿ ಶ್ರೀ ಜಿ.ಎಸ್.ಶಿವರುದ್ರಪ್ಪನವರು ಸಂಕಲ್ಪ ಮತ್ತು ಅನುಷ್ಟಾನವನ್ನು ಕುರಿತು ತಮ್ಮ ಅಭಿಪ್ರಾಯವನ್ನುವ್ಯಕ್ತಪಡಿಸುತ್ತಾರೆ.

ಈ] ಸಂದರ್ಭಾನುಸಾರ ಸ್ವಾರಸ್ಯ ಬರೆಯಿರಿ.

1. ಪ್ರೀತಿಯ ಹಣತೆಯ ಹಚ್ಚೋಣ

ಆಯ್ಕೆ :-ಈ ವಾಕ್ಯವನ್ನು ಕವಿ ಶ್ರೀ ಜಿ. ಎಸ್. ಶಿವರುದ್ರಪ್ಪ ಅವರು ರಚಿಸಿರುವ 'ಎದೆತುಂಬಿ ಹಾಡಿದೆನು' ಕವನ ಸಂಕಲನದಿಂದ ಆಯ್ದ 'ಸಂಕಲ್ಪಗೀತೆ' ಎಂಬ ಕವಿತೆಯಿಂದ ಆರಿಸಲಾಗಿದೆ.

ಸಂದರ್ಭ :- ಕವಿಗಳು ಜೀವನದಲ್ಲಿ ಧನಾತ್ಮಕ ಮನೋಭಾವನೆಯ ಧೃಡಸಂಕಲ್ಪವನ್ನು ಹೊಂದಿರಬೇಕು ಎಂದು ಹೇಳುವ ಸಂದರ್ಭದಲ್ಲಿ ಈ ಮಾತನ್ನು ಹೇಳುತ್ತಾರೆ.

ಸ್ವಾರಸ್ಯ :- ನಾವು ಜೀವನದಲ್ಲಿ ಪ್ರೀತಿಯ ದೀಪವನ್ನು ಹಚ್ಚುವ ಸಂಕಲ್ಪ ಕೈಗೊಳ್ಳುವುದರಿಂದ ದ್ವೇಷರಹಿತ ಸಮಾಜ ನಿರ್ಮಾಣ ಮಾಡಬಹುದು ಎಂದು ಕವಿಗಳು ಸ್ವಾರಸ್ಯಪೂರ್ಣವಾಗಿ ತಮ್ಮ ಭಾವನೆಯನ್ನು ಅಭಿವ್ಯಕ್ತಪಡಿಸುತ್ತಾರೆ.

2. ಮುಂಗಾರಿನ ಮಳೆಯಾಗೋಣ

ಸಂದರ್ಭ :- ಕವಿಗಳು ಜೀವನದಲ್ಲಿ ಧನಾತ್ಮಕ ಮನೋಭಾವನೆಯ ಧೃಡಸಂಕಲ್ಪವನ್ನು ಹೊಂದಿರಬೇಕು ಎಂದು ಹೇಳುವ ಸಂದರ್ಭದಲ್ಲಿ ಈ ಮಾತನ್ನು ಹೇಳುತ್ತಾರೆ.

ಸ್ವಾರಸ್ಯ :- ನಾವು ಮುಂಗಾರಿನ ಮಳೆಯಂತೆ ಪರಿಸರ ಸಂರಕ್ಷಿಸುವ ಸಂಕಲ್ಪ ಕೈಗೊಳ್ಳುವುದರಿಂದ ನದೀಜಲಗಳನ್ನು ಶುದ್ಧವಾಗಿ ಇಟ್ಟುಕೊಳ್ಳಬಹುದು ಎಂದು ಕವಿಗಳು ಸ್ವಾರಸ್ಯಪೂರ್ಣವಾಗಿ ತಮ್ಮ ಭಾವನೆಯನ್ನು ಅಭಿವ್ಯಕ್ತಪಡಿಸುತ್ತಾರೆ.

3. ಹೊಸ ಭರವಸೆಗಳ ಕಟ್ಟೋಣ

ಸಂದರ್ಭ :- ಕವಿಗಳು ಜೀವನದಲ್ಲಿ ಧನಾತ್ಮಕ ಮನೋಭಾವನೆಯ ಧೃಡಸಂಕಲ್ಪವನ್ನು ಹೊಂದಿರಬೇಕು ಎಂದು ಹೇಳುವ ಸಂದರ್ಭದಲ್ಲಿ ಈ ಮಾತನ್ನು ಹೇಳುತ್ತಾರೆ.

ಸ್ವಾರಸ್ಯ :- ನಾವು ಹೊಸ ಭರವಸೆಯನ್ನು ಮೂಡಿಸುವ ಸಂಕಲ್ಪ ಕೈಗೊಳ್ಳುವುದರಿಂದ ಸಮಾಜದ ನೈತಿಕ ಅಧಃಪತನವನ್ನು ತಡೆಯಬಹುದು ಎಂದು ಕವಿಗಳು ಸ್ವಾರಸ್ಯಪೂರ್ಣವಾಗಿ ತಮ್ಮ ಭಾವನೆಯನ್ನು ಅಭಿವ್ಯಕ್ತಪಡಿಸುತ್ತಾರೆ.

4. ಹೊಸ ಎಚ್ಚರದೊಳು ಬದುಕೋಣ

ಸಂದರ್ಭ :- ಕವಿಗಳು ಜೀವನದಲ್ಲಿ ಧನಾತ್ಮಕ ಮನೋಭಾವನೆಯ ಧೃಡಸಂಕಲ್ಪವನ್ನು ಹೊಂದಿರಬೇಕು ಎಂದು ಹೇಳುವ ಸಂದರ್ಭದಲ್ಲಿ ಈ ಮಾತನ್ನು ಹೇಳುತ್ತಾರೆ.

ಸ್ವಾರಸ್ಯ :- ಎಲ್ಲ ಮತಗಳು ಸಾಧನೆಯ ದಾರಿಗಳು ಎಂಬ ಎಚ್ಚರದಲ್ಲಿ ಬದುಕುವ ಸಂಕಲ್ಪ ಕೈಗೊಳ್ಳುವುದರಿಂದ ದೇಶದಲ್ಲಿ ಶಾಂತಿಯು ನೆಲೆಸುವಂತೆ ಮಾಡಬಹುದು ಎಂದು ಕವಿಗಳು ಸ್ವಾರಸ್ಯಪೂರ್ಣವಾಗಿ ತಮ್ಮ ಭಾವನೆಯನ್ನು ಅಭಿವ್ಯಕ್ತಪಡಿಸುತ್ತಾರೆ.

ಈ] ಬಿಟ್ಟಸ್ಥಳವನ್ನು ಸೂಕ್ತ ಉತ್ತರದಿಂದ ತುಂಬಿರಿ.

1) 'ಸಂಕಲ್ಪಗೀತೆ' ಪದ್ಯವನ್ನು ' ಎ ದೆತುಂ ಬಿ ಹಾಡಿದೆನು' ಕವನಸಂಕಲನದಿಂದ ಆರಿಸಿಕೊಳ್ಳಲಾಗಿದೆ.

2) ಕತ್ತಲೆಯೊಳಗೆ ಪ್ರೀತಿಯ ಹಣತೆಯ ಹಚ್ಚೋಣ.

3) ಬಿದ್ದುದನ್ನು ಮೇಲೆಬ್ಬಿಸಿ ನಿಲ್ಲಿಸಿ ಹೊಸ ಭರವಸೆಗಳ ಕಟ್ಟೋಣ.

4) ನಾಳಿನ ಕನಸನು ಭಯ-ಸಂಶಯದೊಳು ಕಂಡಿದ ಕಣ್ಣಿನಲ್ಲಿ ಬಿತ್ತೋಣ.

5) ಜಿ.ಎಸ್.ಶಿವರುದ್ರಪ್ಪನವರು ದಾವಣಗೆರೆಯಲ್ಲಿಸಮಾವೇಶಗೊಂಡಿದ್ದ ಅಖಿಲಭಾರತ ಕನ್ನಡ ಸಾಹಿತ್ಯಸಮ್ಮೇಳನದ ಅಧ್ಯಕ್ಷರಾಗಿದ್ದರು.

ಭಾಷಾಚಟುವಟಿಕ

1) ನೀಡಿರುವ ಪದಗಳ ಧಾತುಗಳನ್ನು ಗುರುತಿಸಿ ಬರೆಯಿರಿ.

ನಿಲ್ಲಿಸು-ನಿಲ್ಲು;  ನಡೆಸು-ನಡೆ; ಹಚ್ಚುವುದು-ಹಚ್ಚು; ಮುಟ್ಟೋಣ-ಮುಟ್ಟು; ಕಟ್ಟುವುದು-ಕಟ್ಟು; ಆಗೋಣ-ಆಗು

2) ವಿಭಕ್ತಿ ಪ್ರತ್ಯಯಗಳನ್ನು ಪ್ರತ್ಯೇಕಿಸಿ ಬರೆಯಿರಿ.

ಪ್ರೀತಿಯ - ಷಷ್ಟಿ ವಿಭಕ್ತಿ ಪ್ರತ್ಯಯ 'ಅ'

ಬಿರುಗಾಳಿಗೆ - ಚತುರ್ಥಿ ವಿಭಕ್ತಿ ಪ್ರತ್ಯಯ 'ಗೆ'

ಜಲಕ್ಕೆ - ಚತುರ್ಥಿ ವಿಭಕ್ತಿ ಪ್ರತ್ಯಯ 'ಕ್ಕೆ'

ಬಿದ್ದುದನ್ನು - ದ್ವಿತೀಯ ವಿಬಕ್ತಿ ಪ್ರತ್ಯಯ 'ಅನ್ನು 

logoblog

Thanks for reading ಸಂಕಲ್ಪಗೀತೆ

Previous
« Prev Post

No comments:

Post a comment