Goslink

Goslink is providing you latest news, articles, reviews.

Saturday, 9 January 2021

ಪಠ್ಯಕ್ರಮದ ಕ್ಷೇತ್ರಗಳು (ವ್ಯಾಪ್ತಿ)

  Govt Orders Link       Saturday, 9 January 2021

 ಪಠ್ಯಕ್ರಮದ ಕ್ಷೇತ್ರಗಳು (ವ್ಯಾಪ್ತಿ)

ಭಾಷಗಳ ಕಲಿಕೆ

ಮಗುವಿನ ಮಾತೃ ಭಾಷೆಯ ಪರಿಗಣನೆ ಮತ್ತು ಇಂಗ್ಲೀಷಿನ ಪಾವೀಣ್ಯಕ್ಕೆ ಉತ್ತೇಜನ ಕೊಡುವಂತೆಎನ್.ಸಿ.ಎಫ್-2005 ಸಲಹೆ ಮಾಡಿದೆ. ಇದಾಗುಮದು ಕಲಿಕೆಯು ಸದೃ ಢ ಭಾಷಾ ಬೋದನೆಯ ಬುನಾದಿಮೇಲೆ ರೂಪಿತವಾದಾಗ ಮಾತ್ರ. ಆಲಿಸುವುದು , ಮಾತುಗಾರಿಕೆ ಓದುವುದು, ಮತ್ತು ಬರೆಯುವುದು ಮಗುವಿನಪ್ರಗತಿಗೆ ಎಲ್ಲಾ ಪಠ್ಯಕ್ರಮ ಕ್ಷೇತ್ರಗಳಲ್ಲಿಯೂ ವ್ಯಾಪಿಸಿಕೊಳ್ಳುತ್ತ ನೆರವಾಗುತ್ತದೆ. ಪ್ರಾಥಮಿಕ ತರಗತಿಗಳ ಪರ್ಯಂತ ಓದುವಿಕೆಯನ್ನು ಅಭ್ಯಾಸ ಮಾಡಿದರೆ ಮಕ್ಕಳ ಇನ್ನಿತರ ವಿಷಯಗಳ ಕಲಿಕೆಗೂ ಸುಭದ್ರ ಬುನಾದಿಯಾಗುತ್ತದೆಂದು ಎನ್.ಸಿ.ಎಫ್-2005 ಒತ್ತಿ ಹೇಳುತ್ತದೆ. 

ಸರಿಸಮಾನ ಸಾಧಾರಣ ಮಟ್ಟದ ಬುದ್ಧಿಯ ಯಾವುದೇ ಮಗುವು ಪರಿಣಾಮಕಾರೀ ಶಿಕ್ಷಣದಿಂದಯಾವುದೇ ಭಾಷೆಯಲ್ಲೂ ಪಭುತ್ವ ಪಡೆಯುತ್ತದೆ. ಭಾಷಾಗ್ರಹಿಕೆಯ ಸಾವು ರ್ಥ್ಯವು ಅತ್ಯಂತ ಸಕ್ರಿಯವಾಗಿರುವ ಅವಧಿಯಲ್ಲಿರುವ ಐದರಿಂದ ಹದಿನೈದು ವರ್ಷದ ಮಕ್ಕಳು 

ಕಡೆಯ ಪಕ್ಷ ಆರು ಭಾಷೆಗಳನ್ನು ಕಲಿಯಬಲ್ಲರೆಂದುಪ್ರಪಂಚದಾದ್ಯಂತ ನಡೆದ ಪ್ರಯೋಗಗಳು ಸಾಬೀತು ಮಾಡಿವೆ.

ಆಲಿಸುವಿಕೆ, ಮಾತುಗಾರಿಕೆ, ಓದು, ಬರವಣಿಗೆ ಮತ್ತು ಪರಿಕಲ್ಪನೆಗಳ ಗ್ರಹಿಕೆಗಳು ಭಾಷೆ ಪ್ರಭುತ್ತ್ವದ ಆಧಾರಗಳಾಗಿವೆ. ಆದರೆ ಹೆಚ್ಚು ಮಕ್ಕಳು ನಿರೀಕ್ಷಿತ ಪ್ರಭುತ್ತ್ವ ವನ್ನು (ಪ್ರತಿ ಮಗುವು ಸಂಪಾದಿಸಲೇಬೇಕಾದಮೂಲಭೂತ ಸಾಮರ್ಥ್ಯಗಳು) ಗಳಿಸಿರುವುದಿಲ್ಲವೆಂದು

ಅನೇಕ ಅಧ್ಯಯನ ಮತ್ತು ಅನುಭವ ತೋರಿಸಿಕೊಟ್ಟಿವೆ.ಪರಿಶೀಲಿತ ಪಠ್ಯಕಮದ ಆಧಾರದ ಮೇಲೆ ಪಠ್ಯಪು ಸ್ತಕ ರಚನೆ ಮಾಡುವಾಗ್ಗೆ ಈ ಅಂಶವನ್ನು ಪಠ್ಯಪುಸ್ತಕ ಲೇಖಕರು ಗಮನಕ್ಕೆ ತಂದುಕೊಳ್ಳಬೇಕು.

ಇಂಗ್ಲೀಷ್ ಭಾರತಾದ್ಯಂತ ದ್ವಿತೀಯ ಭಾಷೆಯ ಸ್ಥಾನದಲ್ಲಿದೆ ಮತ್ತದು ಅತಿ ಮುಖ್ಯ ಸಂಪರ್ಕಭಾಷೆಯೂ ಆಗಿದೆ. ಇಂಗ್ಲೀಷನ್ನು ದ್ವಿತೀಯ ಭಾಷೆ ಎಂದು ಪರಿಗಣಿಸಿ ಕಲಿಸಲಾಗುತ್ತಿದೆ. ನಮ್ಮ ರಾಜ್ಯವು 2007- 2008ರಿಂದ ಮಕ್ಕಳು ಇಂಗ್ಲೀಷ್ ಭಾಷಾ ಕಲಿಕೆಗೆ ತೆರೆದುಕೊಳ್ಳಲು  ಸಾಧ್ಯವಾಗುವಂತೆ ಒಂದನೇ ತರಗತಿಯಿಂದಲೇ ಇಂಗ್ಲಿಷನ್ನು ಪರಿಚಯಿಸುವ ನಿರ್ಧಾರ ಮಾಡಿದೆ.

ದುರದೃಷ್ಟವಶಾತ್, ನಮ್ಮ ಇಂಗ್ಲೀಷ್ ಶಿಕ್ಷಕರ ದಕ್ಷತೆಯ ಮಟ್ಟ ಎಲ್ಲ ಹಂತಗಳಲ್ಲೂ ನಿರೀಕ್ಷಿತ ಮಟ್ಟದಲ್ಲಿಲ್ಲದೆ ದೂರವೇ ಉಳಿದು ಬಿಟ್ಟಿದೆ. ನಮಗೀಗ ಸಮುದಾಯ ಸಂವಹನ ಮಾಧ್ಯಮವನ್ನು ಬಳಸಿಕೊಳ್ಳುವ ಸಮರ್ಥ ಶಿಕ್ಷಕರು, ಉತ್ತಮ ಶಿಕ್ಷಣ ಸಾಮಗ್ರಿಗಳು , ಪರಿಣಾಮಕಾರೀ ವಿಧಾನಗಳು ಮತ್ತು ಬೋಧನ ತಂತ್ರಗಳ ಅವಶ್ಯಕತೆಯಿದೆ.

ಮಗುವಿನ ಮಾತೃಭಾಷೆಗೆ (ಪ್ರಥವು ಭಾಷೆ) ಪ್ರಾಮುಖ್ಯತೆ ಕೊಟ್ಟಿರುವ ತ್ರಿಭಾಷಾ ಸೂತ್ರವನ್ನು ನಮ್ಮರಾಜ್ಯವು ಅನುಸರಿಸುತ್ತಿದೆ. ಪಥಮ, ದ್ವಿತೀಯ ಮ ತೃತೀಯ ಭಾಷೆಗಳ ಪಠ್ಯಪುಸ್ತಕ ಸಿದ್ಧತೆಗೆ- ಇವುಗಳನ್ನುವಿಭಿನ್ನ ತರಗತಿಗಳಲ್ಲಿ ಆರಂಭಿಸುವುದನ್ನು ಗಮನದಲ್ಲಿರಿಸಿಕೊಂಡು- ಬೇರೆಯದೇ ಮಾರ್ಗದರ್ಶನವನ್ನು ನೀಡುವಂತೆ ಪಠ್ಯಕಮ ಮರುಪರಿಶೀಲನ ಕಾರ್ಯ ನಡೆಸಬೇಕಾಗಿದೆ.

ಗಣಿತದ ಕಲಿಕೆ

ವರ್ತಮಾನ ಸಮಾಜದಲ್ಲಿ ಈಗಾಗು ತ್ತಿರು ವ ಅಸಮಾನ್ಯ ಮತ್ತು ಅತಿವೇಗದ ಚಾಲಿತ ಬದಲಾವಣೆಗಳಸನ್ನಿವೇಶದಲ್ಲಿ ಗಣಿತದ ಆದ್ಯತೆಯನ್ನು ಎಷ್ಟು ಒತ್ತಿ ಹೇಳಿದರೂ ಸಾಲದಾಗಿದೆ. ಮುಂಬರಲಿರುವ ಜ್ಞಾನಸಮಾಜದಲ್ಲಿ ಗಣಿತವನ್ನು ಅರ್ಥಮಾಡಿಕೊಂಡು ಬಳಸು ವ ವ್ಯಕ್ತಿಗಳಿಗೆ ದೊರಕುವ ಅವಕಾಶಗಳು ಮತ್ತುಆಯ್ಕೆಗಳು ಗಣನೀಯವಾಗಿ ವರ್ಧಿಸುತ್ತದೆ. ಗಣಿತದ ಕಲಿಕೆ ಮಗುವಿನ ಆಲೋಚನೆ ಮತ್ತು ತಾರ್ಕಿಕ ಸಂಪತ್ತನ್ನುವರ್ಧಿಸಬೇಕು; ಅಮೂರ್ತವನ್ನು ದೃಷ್ಟಿಗೆ ತಂದುಕೊಂಡು ನಿರ್ವಹಿಸಲು ಅನುವಾಗಬೇಕು, ಸಮಸ್ಯೆಗಳನ್ನುಪ್ರಕಲ್ಪಿಸಿಕೊಂಡು ಬಿಡಿಸಲು   ಸಹಾಯಕಾರಿಯಾಗಬೇಕು . ಮಗುವಿನ ಅನುಭವಗಳ ಮುಖೇನ ಗಣಿತದ ಸೂಕ್ತ ಸಾರಾಂಶಗಳನ್ನು ಬೋಧಿಸಿದರೆ ಈ ಗುರಿಸಾಧನೆಯಾಗು ತ್ತದೆ. ಗಣಿತದ ಪರಿಕಲ್ಪನೆಗಳನ್ನು ಇನ್ನಿತರ ವಿಷಯಕ್ಷೇತ್ರಗಳಿಗೆ ಸಂಬಂಧಿಸುವಂತಹ ಪಾಠಕಮವನ್ನು ಶಿಕ್ಷಕರು ಅನ್ವೇಷಿಸಬೇಕಾಗಿದೆ.

ಗಣಿತ ಪಾಠಕಮದ ಎರಡು ಮುಖ್ಯೋದ್ದೇಶಗಳು ಯಾವುವೆಂದರೆ ಪತಿ ವಿದ್ಯಾರ್ಥಿಯ ಮನಸ್ಸನ್ನಾವರಿಸಿ ಆಕರ್ಷಿಸಲು ಗಣಿತ ಬೋಧೆ ಹೇಗೆ ಯತ್ನಿಸು ತ್ತದೆ ಮತ್ತು ಪ್ರತಿ ವಿದ್ಯಾರ್ಥಿಯ ಬೌದ್ಧಿಕ ಸಂಪದವನ್ನು ಅದು ಹೇಗೆ ಸಂವೃದ್ಧಿಗೊಳಿಸುತ್ತದೆ ಎನ್ನುವ ಕಾಳಜಿಗಳು . ಪಠ್ಯಕ್ರಮ ಮರು ಪರಿಶೀಲನೆ ಮತ್ತು ಹೊಸ ಗಣಿತ ಪಠ್ಯ ಪುಸ್ತಕಗಳು ಈ ಎರಡೂ ಅಂಶಗಳನ್ನು ಗಮನಿಸಬೇಕು .

ಇನ್ನಿತರ ಅಧ್ಯಯನ ವಿಷಯಗಳು ಮತ್ತು ಗಣಿತದ ನಡುವೆ ಸೇತು ಬಂದವನ್ನು ಏರ್ಪಡಿಸುವ ಅಗತ್ಯವೂಇದೆ. ಭೂವಿಜ್ಞಾನವೂ ಸೇರಿಕೊಂಡಂತೆ, ಮಕ್ಕಳು ನಕ್ಷೆಯನ್ನು ರಚಿಸುವಾಗ, ವಿಜ್ಞಾನದಲ್ಲಿರುವ ಕ್ರಿಯಾಂಶಗಳ ಪರಸ್ಪರ ಸಂಬಂಧ ಗ್ರಹಿಕೆಗೆ ಪ್ರೋತ್ಸಾಹಿಸಬೇಕು . ಗಣಿತವು ವಿಜ್ಞಾನದ ಅಧ್ಯಯನಕ್ಕೆ ಪರಿಣಾಮಕಾರಿ ಉಪಕರಣವೆನ್ನಿಸುತ್ತದೆ. ಅಲ್ಲದೆ ಕಲೆಗೂ ಗಣಿತಕ್ಕೂ ನಡುವೆ ಬಲವಾದ ಅನ್ಯೋನ್ಯ ಸಂಬಂಧವಿದೆ ಎಂಬುದನ್ನು ವಿದ್ಯಾರ್ಥಿಗಳು ಮನಗಂಡು  ಮೆಚ್ಚುವಂತಾಗಬೇಕು .

ವಿಜ್ಞಾನ ಕಲಿಕೆ

ಶಾಲಾ ಪಠ್ಯಕ್ರಮದಲ್ಲಿ ವಿಜ್ಞಾನ ಕಲಿಕೆ ಏಕೆ ಅಮ್ಯೂಲ್ಯವಾದದ್ದು ಎನ್ನುವ ಪ್ರಶ್ನೆಗೆ ಅನೇಕ ಉತ್ತರಗಳಿವೆ.ಗ್ರಹಿಸುವ, ಪಶ್ನಿಸುವ ಮತ್ತು ಸಾರವತ್ತಾಗಿ ಆಲೋಚಿಸುವ ಮಕ್ಕಳ ಬುದ್ಧಿ ಬೆಳವಣಿಗೆಯ ಸಾಮರ್ಥ್ಯಗಳಅಭಿವೃದ್ಧಿಗೆ ವಿಜ್ಞಾನ ಕಲಿಕೆ ಶಕ್ತಿ ಮತ್ತು ಪು ಷ್ಠಿಗಳನ್ನು ಕೊಡುತ್ತದೆ. ಅವಲೋಕನ, ಅಂತರ್ಗ್ರಹಿಕೆ, ಪ್ರಕಲ್ಪನ,ಪ್ರಯೋಗೀಕರಣ ಮತ್ತು ಸಾಬೀತಿಸುವ ಮಾದ್ಯವು ಗಳನ್ನು ವಿಜ್ಞಾನ ಬಳಸುತ್ತದೆ.

ಸುತ್ತಲಿನ ಪಪಂಚವನ್ನು ಅವಲೋಕಿಸಿ, ತಮ್ಮ ಪರ್ಯಾವರಣ ಪರಿಧಿಯೊಳಗಾಗುವ ಸಂಗತಿಗಳು, ನೋಟಗಳು, ಅದ್ಭುತಗಳನ್ನು ತಮ್ಮೊಳಗಿನ ಸಂವೇದನೆಗಳಲ್ಲಿ ಹೊಂದಿಸಿಕೊಂಡು ಈ ಪ್ರಕ್ರಿಯೆಗಳನ್ನುಅರ್ಥೈಸಿಕೊಳ್ಳುವ ಹಾಗೆ ಮಗುವಿನ ಅಂತರಂಗ ಹಾಗೂ ಪರ್ಯಾಯವಾಗಿ ಸಮಾಜವೇ ಬದಲಾಯಿಸುವಂತೆ ವಿಜ್ಞಾನ ಕಲಿಕೆ ಅಣಿಗೊಳಿಸುತ್ತದೆ. ಚಿಂತನ, ಪತಿಸ್ಪಂದನ ಕ್ರಿಯೆ ಮತ್ತು ಕ್ರಮಬದ್ಧ ಹಾಗೂ ವಸ್ತುನಿಷ್ಠ ಭಾವನೆಗಳನ್ನು ಮಕ್ಕಳಲ್ಲಿ ಅಭಿವೃದ್ಧಿಯಾಗುವಂತೆ ನೆರವಾಗು ತ್ತದೆ. ಸಮಾಜದಲ್ಲಿ ಬದಲಾವಣೆ ಮತ್ತು ಪಗತಿಗಳ ಅಗತ್ಯತೆಯನ್ನು ಮನವರಿಸಿಕೊಟ್ಟು ಅವರು ಶಕ್ತಿಯುತವಾಗಿ ನಿರ್ವಹಿಸು ವಂತೆ ವಿದ್ಯಾರ್ಥಿಗಳಿಗೆ ವಿಜ್ಞಾನ ಕಲಿಕೆ ಆವಕಾಶ ನೀಡುತ್ತದೆ

ವಿಜ್ಞಾನ ಕಲಿಕೆಯು ಸಮಾಜದಲ್ಲಿ ಬದಲಾವಣೆ ತರು ವ ಅಸ್ತ್ರವೆಂದು ಎನ್.ಸಿ.ಎಫ್-2005 ಪರಿಭಾವಿಸಿದೆ. ಯಾವುದೇ ರೀತಿಯ ಗುಣಾತ್ಮಕ ಬದಲಾವಣೆಯನ್ನು ತರಲು, ವಿಜ್ಞಾನ ಶಿಕ್ಷಣ ನಿರ್ದಿಷ್ಟ ದೆಸೆಯಲ್ಲಿ ಸಾಗಬೇಕಾಗಿದೆ.

ಈ ಸಂದರ್ಭದಲ್ಲಿ, ಮಗುವಿನ ತಕ್ಷಣದ ಪರ್ಯಾವರಣ ಮತ್ತು ಸುತ್ತಲಿನ ಸಮಾಜದೊಡನೆ ವಿಜ್ಞಾನಪಾಠಕಮವೂ ಅವಿನಾಭಾವ ಸಂಬಂಧ ಹೊಂದಿರುವಂತೆ ಎನ್.ಸಿ.ಎಫ್-2005 ವಿಜ್ಞಾನ ಕಲಿಕೆಯನ್ನುಪ್ರಗತಿಪರವಾಗಿ ಮೈಗೂಡಿಸಿಕೊಂಡಿದೆ. ಸಮಾಜದ  ಅಗತ್ಯಗಳಿಗೆ  ಅನುಗುಣವಾಗಿ ವಿಜ್ಞಾನ  ಕಲಿಕೆ ಅರ್ಥಪುಷ್ಠಿಯಿಂದ ಕೂಡಿಕೊಂಡ, ವಿಕಾಸಗೊಳ್ಳುವ ಗುರಿಗಳನ್ನು ಹೊಂದಿದೆ.

ದೈನಂದಿನ ಅನುಭವಗಳನ್ನು ಸ್ವತಃ ಪರೀಕ್ಷಿಸಿ ವಿಶ್ಲೇಷಿಸಿ, ಚಿಂತನ ಶೀಲ ವಿಧಾನಗಳು ವಿಕಾಸಗೊಳ್ಳುವಮಾರ್ಗಗಳು ಸಾರವತ್ತಾಗುವಂತೆ ಮಾಡಲು, ಕುತೂಹಲ  ವೃದ್ದಿಸಲು, ಸೃಜನಶೀಲವಾಗಲು ನೆರವಾಗುವಂತೆಮಕ್ಕಳ ವಿಜ್ಞಾನ ಶಿಕ್ಷಣವನ್ನು ಪುನರ್ರಚಿಸಬೇಕೆಂದು ಎನ್.ಸಿ.ಎಫ್-2005 ಸಲಹೆ ಮಾಡಿದೆ.

ಪರ್ಯಾವರಣ ಸಂಬಂಧಿತ ಆತಂಕಗಳು ಮತ್ತು ಕಾಳಜಿಗಳನ್ನು ವಿವಿಧ ಪ್ರಕಾರಗಳ ಯೋಜನಾ ಚಟುವಟಿಕೆಗಳಲ್ಲೂ (ಪ್ರಾಜೆಕ್ಟ್ ವರ್ಕ್), ಪ್ರತಿ ವಿಷಯದಲ್ಲೂ ಒತ್ತಿ ಹೇಳಬೇಕು.

ಸಮಾಜ ವಿಜ್ಞಾನಗಳ ಕಲಿಕೆ

ಸಮಾಜ ವಿಜ್ಞಾನಗಳ ಬೋಧನೆ ಒಂದು ಶಿಸ್ತಿನ ನೆಲಗಟ್ಟಿನಿಂದ ಆಗುವಂತೆ ಮಾಡಬೇಕೆಂದುಎನ್.ಸಿ.ಎಫ್-2005 ಒತ್ತಿ ಹೇಳುವುದಲ್ಲದೆ, ಪ್ರಧಾನ ವಿಷಯಗಳ ಪಾಠಗಳು ಸಮನ್ವಯ ವಿಧಾನದಲ್ಲಿಆಗಬೇಕೆಂದು ಆಗ್ರಹಿಸುತ್ತದೆ. ಆಲೋಚನಾಕಮಗಳ ವಿಕಾಸ, ನಿರ್ಧಾರಣಾ ಶಕ್ತಿ ಮತ್ತು ವಿಮರ್ಶಾತ್ಮಕ ಚಿಂತನೆಗಳಬೆಳವಣಿಗೆಗಳಿಗೆ ಸಜ್ಜುಗೊಳಿಸುವ ಬೋಧನಾ ಕ್ರಮಗಳಿಗೆ ಸಮಾಜ ವಿಜ್ಞಾನ ಪಠ್ಯಕ್ರಮ ಪುಷ್ಠಿ ನೀಡುತ್ತದೆ.

ಸಮಾಜದ ಮುಖ್ಯವಾಹಿನಿಯಿಂದ ಹೊರಗುಳಿದವರ ದೃಷ್ಟಿಕೋನದಿಂದಲೂ ಸಮಾಜ ವಿಜ್ಞಾನಗಳನ್ನು ಅಧ್ಯಯಿಸಬೇಕೆನ್ನುವ ಮಹತ್ತರ ತಿರುವನ್ನು ಎನ್.ಸಿ.ಎಪ್ -2005 ಬಲವಾಗಿ ಮಂಡಿಸಿದೆ. ಪೌರನೀತಿ0ಯನ್ನು ರಾಜನೀತಿ ಶಾಸ್ತ್ರ ಮತ್ತು ಸಮಾಜ ವಿಜ್ಞಾನಗಳಲ್ಲಿ  ಅಳವಡಿಸಬೇಕು; ಮತ್ತು ಗತಕಾಲದ ಪ್ರಕಲ್ಪನೆಗಳು ಮತ್ತು ಪೌರನ  ಸ್ಥಾನಮಾನಗಳು  ಮಗುವಿನ  ಮನಸ್ಸಿನಲ್ಲಿ  ನೆಲೆಗೊಂಡು  ಪಚೋದಿಸುವಂತೆ  ಚರಿತ್ರೆಯಪ್ರಧಾನೋದ್ದೇಶಗಳು ಪುನಾರಚಿತವಾಗಬೇಕು . ಗ್ರಾಮಾಂತರ ಪ್ರದೇಶ ಮತ್ತು ನಗರ ಪದೇಶದ ಸಾಮಾಜಿಕ,ಆರ್ಥಿಕ ದುರ್ಬಲ ವರ್ಗಗಳ ಹೆಚ್ಚುವರಿ ಮಕ್ಕಳು ಸಾಮಾಜಿಕ ಅಸಮಾನತೆಗಳನ್ನೆದುರಿಸಿರುತ್ತಾರೆ ಅಲ್ಲದೆ, ಎಷ್ಟೋವೇಳೆ ದೈಹಿಕ ಮತ್ತು ಮಾನಸಿಕ ಆಘಾತಗಳನ್ನು ಅನುಭವಿಸಿರುತ್ತಾರೆ.

ಮ್ಯಾನಿಟೋಬ ವಿಶ್ವವಿದ್ಯಾಲಯ, ಕೆನಡ ಇವರ ಆರ್ಥಿಕ ವಿಭಾಗವು 2004 ರಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಒಂದು ಅಧ್ಯಯನವನ್ನು ನಡೆಸಿತು . ಶಾಲೆಯಿಂದ ಹೊರಗುಳಿಯುವ ಮಕ್ಕಳಲ್ಲಿ ಶೇಖಡ 98% ಪಾಲು ಕೂಲಿ ದುಡಿಯುವ ಮಕ್ಕಳು ,ಮದ್ಯವ್ಯಸನಿ ಪೋಷಕರ ಮತ್ತು ಸಹೋದರರ ಬಲಿಪಶುಗಳುಎನ್ನುವ ಅಂಶ ಬೆಳಕಿಗೆ ಬಂತು. ಆದ್ದರಿಂದಮದ್ಯವ್ಯಸನ-ಮಕ್ಕಳ ದುಡಿಮೆ - ವರದಕ್ಷಿಣೆ ಸಂಕೊಲೆಯಲ್ಲಿಸಾರ್ವಜನಿಕವಾಗಿ ಮೇಲ್ನೋಟಕ್ಕೆ ಕಾಣಿಸುವುದಕ್ಕಿಂತ ಹೆಚ್ಚು ಆಳವಾದ ಸಂಬಂಧವಿದೆ. ಗ್ರಾಮಾಂತರ ಮತ್ತು ನಗರವಾಸಿ ಸಮಾಜಗಳ ಎಲ್ಲಾ ವರ್ಗಗಳಲ್ಲಿಯೂ ವರದಕ್ಷಿಣೆ ಹೊಕ್ಕು ಹಿರಿಯುತ್ತಿರುವ ಪ್ರಭಾವಗಳು ಪರ್ಯಾಯವಾಗಿ ಸಮುದಾಯದ ಲಿಂಗ ಅನುಪಾತದ ಕುಸಿತದಲ್ಲಿ ಎದ್ದು ಕಾಣುವ ಸ್ತ್ರೀ ಭ್ರೂಣಹತ್ಯೆಯವರೆಗೂ ವ್ಯಾಪಿಸಿಕೊಂಡಿದೆ. ಉತ್ತರ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಕಂಡುಬರುವ ಲಿಂಗ ಅಸಮತೆಯ ಪ್ರಮಾಣಈಗಾಗಲೇ ಆತಂಕಕ್ಕೆಡೆಗೊಡುತ್ತಿದೆ. ಆದ್ದರಿಂದ ನೆ ತಿಕವಾಗಿ ಉಚಿತವಾದ ನಡವಳಿಕೆಯನ್ನು ರೂಢಿಸುವುದು ಅತ್ಯಾವಶ್ಯಕವಾಗಿದ್ದು ಮತ್ತು ಕಾನೂನು, ಆರಕ್ಷಕ ಸುಭದ್ರತೆ ಮತ್ತು ನ್ಯಾಯಕ್ಕಾಗಿ ಹೋರಾಡುವ ಕ್ಷೇತಗಳಲ್ಲಿ ಸರ್ಕಾರದ ಮಧ್ಯ ಪ್ರವೇಶವನ್ನು ಆಗ್ರಹಿಸುವುದೂ , ಒಂದು ತಲೆಮಾರಿನ ಪೌರರು ಜವಾಬ್ದಾರಿಯುತವಾಗಿಯೂ ಸಕ್ರಿಯವಾಗಿಯೂ ವರ್ತಿಸುವಂತೆ ಪ್ರಭಾವ ಬೀರಬೇಕಾಗಿರುವುದು ಪರಮಾದ್ಯತೆಯಾಗುತ್ತದೆ.

ಬಹುತ್ತ್ವ ಶೀಲ ಸಂಪ್ರದಾಯವುಳ್ಳ ನಮ್ಮಂತಹ ಸಮಾಜದ ಮೇಲೆ ಜಾಗತೀಕರಣ ಬೀರುತ್ತಿರುವಪ್ರಭಾವಗಳ ಸನ್ನಿವೇಶದಲ್ಲಿ ಶಾಲಾಕಲಿಕೆಯಲ್ಲಳವಡಿಸಲಾಗುವ ಸಮಾಜ ವಿಜ್ಞಾನ ಪಠ್ಯಕ್ರಮದ ಪ್ರಾಧಾನ್ಯತೆಗೂ ಒತ್ತುಕೊಡಲಾಗಿದೆ. ಚರಿತೆ, ಭೂವಿವರಣೆ, ರಾಜನೀತಿ ಶಾಸ್ತ್ರ, ಸಮಾಜ ವಿಜ್ಞಾನ, ಆರ್ಥಿಕ ವಿಜ್ಞಾನ ಮತ್ತು ವಾಣಿಜ್ಯ ವಿಜ್ಞಾನಗಳ ಘಟಕಗಳಿರುವ ಸಮಾಜ ವಿಜ್ಞಾನವು ಕಲಿಯುವವರಿಗೆ ತಾವಿರುವ ಸಮಾಜವನ್ನುಅರ್ಥೈಸಿಕೊಳ್ಳಲು, ಸಾಮಾಜಿಕ ಮತ್ತು ಆರ್ಥಿಕ ಹಾಗೂ ಪರ್ಯಾವರಣಕ್ಕೆ ಸಂಬಂಧಿತ ಸಮಸ್ಯೆಗಳನ್ನು ಕುರಿತುಆಲೋಚಿಸಲು ನೆರವಾಗಿ, ಸವಾಲುಗಳನ್ನೆದುರಿಸುವಂತೆ ಸನ್ನದ್ಧಿಸುತ್ತದೆ. ಆರೋಗ್ಯಕರ ಸಮುದಾಯವನ್ನು ನಿರ್ಮಿಸಲು, ಶಕ್ತರಾದ ಜವಾಬ್ದಾರಿಯುತ ಪೌರರನ್ನು ಉತ್ಪಾದಿಸಲು ಸಾಮಾಜಿಕ ವಿಜ್ಞಾನ ಮತ್ತು ವಾಣಿಜ್ಯಗಳು ನೆರವೀಯುತ್ತವೆ. ಅಲ್ಲದೆ, 10ನೇ ತರಗತಿಯಲ್ಲಿ ತೇರ್ಗಡೆಯಾಗುವ ವಿದ್ಯಾರ್ಥಿಗಳ ಉದ್ಯೋಗಾರ್ಹತೆಯನ್ನುಉತ್ತಮ ಪಡಿಸುತ್ತವೆೆ. ಆದ್ದರಿಂದ 8-10ನೇ ತರಗತಿಗಳ ಸಮಾಜ ವಿಜ್ಞಾನ ಪಠ್ಯಕವು ವನ್ನು ಕೆಳಕಂಡ ಪರಿಮಾಣದಲ್ಲಿರುವಂತೆ ಒತ್ತು ಕೊಟ್ಟು ರಚಿಸಬೇಕು ;

ಚರಿತೆ        ಭೂಗೋಳ        ರಾಜ್ಯ ಶಾಸ್ತ್ರ        ಸಮಾಜ ಶಾಸ್ತ್ರ    ಆರ್ಥ ಶಾಸ್ತ್ರ        ವಾಣಿಜ್ಯಶಾಸ್ತ್ರ        

30%            15%                    15%                15%                   15%                10%               100%    

ಪ್ರಚಲಿತ ವಾಣಿಜ್ಯ ಶಾಸ್ತ್ರದ ಪಠ್ಯವಸ್ತುಗಳಲ್ಲಿ ಪಾಠಸೂಚಿಗಳಲ್ಲಿ ಕೃಷಿ ಮತ್ತು ಉದ್ಯೋಗಗಳ ಅನೇಕಅಧ್ಯಾಯಗಳು ಇದ್ದು ಅರ್ಥಶಾಸ್ತ್ರದಲ್ಲಿ ಕೂಡ ಅಳವಡಿಸಿಕೊಂಡಿರುವುದರಿಂದ ಭೂವಿವರಣೆಯ ಅನೇಕವಿಭಾಗಗಳನ್ನು ಮೊಟಕು ಮಾಡುವ ಸಾದ್ಯತೆಗಳಿವೆ. ಬೂಪಟದ (ನಕಾಶೆ) ಅಧ್ಯಯನವು ಭೂಗೋಳ ಶಾಸ್ತ್ರದ ಪ್ರಮುಖ ವಸ್ತುವಾಗಿರುವುದರಿಂದ ಅಂತೆಯೆ ಅದರ ಅಧ್ಯಯನದಿಂದ ಹೆಚ್ಚು ಶೀಘ ಹಾಗೂ ಸ್ಪಷ್ಟವಾಗಿ ಹೃದ್ಗತವಾಗುತ್ತದಾದ್ದರಿಂದ ಭೂಪಟದ ಅಧ್ಯಯನ, ಅದರೊಳಗಿನ ಮಾಪನ ಹಾಗೂ ವರ್ಣ ವಿದ್ಯತೆಯನ್ನು ಅಳವಡಿಸುವಲ್ಲಿ ಹೆಚ್ಚಿನ ಆದ್ಯತೆ ನೀಡಬೇಕಾಗಿರುತ್ತದೆ.

ಆರೂಗ್ಯ ಮತ್ತು ಶಾರೀರಿಕ ಶಿಕ್ಷಣ

1940ರ ದಶಕಕ್ಕಿಂತಲೂ ಮುಂಚೆ ಇದ್ದಂತಹ ಆರೋಗ್ಯದ ಬಗೆಗಿನ ಕಾಳಜಿ, ಶುಚಿತ್ವ, ಶಾಲಾ ಪರಿಸರದ ನೈರ್ಮಲ್ಯ, ಶಾಲಾವರಣದಲ್ಲಿನ ಆಹಾರ ಪದ್ದತಿ ಮತ್ತು ದೈಹಿಕ ಶಿಕ್ಷಣವನ್ನೊಳಗೊಂಡಂತೆ ಮಕ್ಕಳ ಸಾಮಾಜಿಕ,ಶಾರೀರಿಕ, ಬೌದ್ದಿಕ ಮತ್ತು ಸರ್ವತೋಮುಖ ಅಣಿವೃದ್ದಿಗೆ 

ಪೂರಕವಾದ ದೈಹಿಕ ಶಿಕ್ಷಣ ಮತ್ತು ಯೋಗಶಿಕ್ಷಣವನ್ನೊಳಗೊಂಡ ಶಿಕ್ಷಣ ವಿಧಾನವನ್ನು ಈ ಕ್ಷೇತ್ರವು ಅಳವಡಿಸಿಕೊಳ್ಳಬೇಕಾಗಿದೆ.

ಆರೋಗ್ಯ ಮತ್ತು ಶಾರೀರಿಕ ಶಿಕ್ಷಣವನ್ನು ಪ್ರಾಥಮಿಕ ಶಾಲಾ ಹಂತದ ನಂತರ ಪ್ರಧಾನ ವಿಷಯವನ್ನಾಗಿಪರಿಗಣಿಸಿ ಅಭ್ಯಾಸ ಮಾಡಿಸಿ 10ನೇ ತರಗತಿಯಿಂದ ಕಡ್ಡಾಯ ವಿಷಯವನ್ನಾಗಿಸಿ ಅಭ್ಯಾಸ ಮಾಡುವಂತೆಯೂಆನಂತರದ ವಿದ್ಯಾಭ್ಯಾಸಕ್ಕೆ ಐಚ್ಚಿಕ ವಿಷಯವನ್ನಾಗಿಯೂ ಅಭ್ಯಸಿಸಲು ಸಲಹೆ ಮಾಡಲಾಗಿದೆ.

ಇತರ ಪಠ್ಯಕ್ರಮ ಕ್ಷೇತ್ರಗಳು

ಎನ್.ಸಿ.ಎಫ್-2005 ಇನ್ನೂ ನಾಲ್ಕು ಪಠ್ಯಕವು ಕ್ಷೇತ್ರಗಳತ್ತ ಗಮನ ಹರಿಸುತ್ತದೆ, ಕೆಲಸ (ವೃತ್ತಿ), ಕಲೆಮತ್ತು ಪಾರಂಪರಿಕ ಕರಕುಶಲತೆಗಳು, ಅರೋಗ್ಯ ಮತ್ತು ದೈಹಿಕ ಶಿಕ್ಷಣ, ಮತ್ತು ಶಾಂತಿ. ಇವೆಲ್ಲ ಮುಖ್ಯಘಟಕಗಳಾಗಿ ಸೇರ್ಪಡೆಯಾಗುವಂತೆ ಶಾಲಾ ಪಠ್ಯಕ್ರಮದ ಮರು ಪರಿಶೀಲನೆಯಾಗಬೇಕಿದೆ. ಪರ್ಯಾವರಣ,ಶಾಂತಿ ಸಂಬಂಧಿತ ಕಾಳಜಿಗಳು, ಲಿಂಗ ಸಮಾನತೆಗಿರುವ ಸೂಕ್ಷ್ಮ ಸಂವೇದನೆಗಳು, ಪರಿಶಿಷ್ಟ ಕೋಮು / ವರ್ಗ / ಪಂಗಡ ಮತ್ತು ಅಲ್ಪ ಸಂಖ್ಯಾತರ ಆತಂಕಗಳ ಬಗೆಗೂ ಎನ್.ಸಿ.ಎಫ್-2005 ಕಾಳಜಿ ವಹಿಸುತ್ತದೆ. ಈ ಆತಂಕ ಮತ್ತು ಕಾಳಜಿಗಳನ್ನು ಸೂಕ್ತ ಎಡೆಗಳಲ್ಲಿಮತ್ತು ವಿಭಿನ್ನ ವಿಷಯದ ಪಾಠಗಳಲ್ಲಿ ಸೇರಿಸಬೇಕಾಗಿದೆ.

ಕಲೆ, ಪಾರಂಪರಿಕ ಕಸುಬುಗಳು, ಆರೋಗ್ಯ ಮತ್ತು ದೈಹಿಕ ಶಿಕ್ಷಣ ವಿಭಾಗಗಳಲ್ಲಿ ಪ್ರಚಲಿತಪಠ್ಯಗಳಲ್ಲಿರುವ ಮರುಪರಿಶೀಲಿಸಬೇಕು ಮತು ್ತ ಎನ್.ಸಿ.ಎಫ್-2005 ಸಲಹೆಗಳನ್ನಾದರಿಸಿ ಯಥೋಚಿತ ಬದಲಾವಣೆಗಳನ್ನು ಸಲಹೆ ಮಾಡಬೇಕಾಗಿದೆ.

ಹೊರೆರಹಿತ ಕಲಿಕ

ಎನ್.ಸಿ.ಎಫ್-2005 ಮತ್ತು ಸೆಮಿಸ್ಟರ್ ಪದ್ಧತಿಗಳೆರಡೂ ಹೊರೆರಹಿತ ಕಲಿಕೆಗೆ ಒತ್ತು ಕೊಡುತ್ತವೆ.ಪಠ್ಯಕ್ರಮವನ್ನು ರಚಿಸುವವರು ಅನವಶ್ಯಕ ಮತ್ತು ಅಸಂಗತ ಮಾಹಿತಿಗಳನ್ನು ಪಚಲಿತ ಪಠ್ಯವಸ್ತು ಮತ್ತು ಪರಿವಿಡಿಗಳಿಂದ ತೊಡೆದುಹಾಕಲು ವಿಶೇಷಾಸಕ್ತಿ ವಹಿಸಬೇಕಾಗಿದೆ.

ಉದಾಹರಣೆಗೆ, ಚರಿತ್ರೆಯಲ್ಲಿ ಮಕ್ಕಳು ಅನಗತ್ಯವೆಂದು ಕಾಣುವ ದಿನಾಂಕಗಳನ್ನು ಬಹುಸಂಖ್ಯೆಯಲ್ಲಿಬಾಯಿಪಾಠ ಮಾಡಬೇಕಾಗಿದೆ. ಇದನ್ನು ನಿವಾರಿಸಬೇಕು . ಹಾಗೆಯೇ ವಿಜ್ಞಾನ ಪುಸ್ತಕಗಳಲ್ಲಿ ವಿಜ್ಞಾನಿಗಳ ಜನ್ಮ ದಿನಗಳು, ಆವಿಷ್ಕರಿಸಿದ ದಿನಗಳನ್ನು ಕೊಡಲಾಗು ತ್ತಿದೆ. ಇವನ್ನೂ ತೆಗೆದುಹಾಕಬಹುದು. ಪಠ್ಯಕ್ರಮ ರಚನಕಾರರು ಮತ್ತು ಪಠ್ಯಪುಸ್ತಕ ಲೇಖಕರು ಈ ತೆರನಾದ ಅನಗತ್ಯ ಮಾಹಿತಿಗಳನ್ನು ಕತ್ತರಿಸಿ ತೆಗೆಯಲು ವಿಶೇಷಾಸಕ್ತಿವಹಿಸಬೇಕು. ಇಂತಹ ಮಾಹಿತಿಗಳಿಗಿಂತ ಜನಜೀವನ ಯಾವ ರೀತಿ ಬೆಳೆದು ಬಂದಿತು ,  ವಿಜ್ಞಾನಿಗಳ ಆವಿಷ್ಕಾರಗಳು ಪ್ರಪಂಚವನ್ನು ಯಾವ ರೀತಿ ಪ್ರಭಾವಿಸಿದವು, ವಿಜ್ಞಾನಿಗಳು ಯಾವ ರೀತಿ ಬದುಕಿದರು ಎಂಬಂತಹ ವಿವರಗಳು ಮಕ್ಕಳಿಗೆ ಹೆಚ್ಚು ಉಪಯುಕ್ತವಾಗುತ್ತವೆ ಹೆಚ್ಚು ಒಳನೋಟಗಳನ್ನು ಬೆಳೆಸುತ್ತವೆ.

 ವ್ಯವಸ್ಥೆಯ ಸುಧಾರಣೆಗಳು

ಶಾಲೆಗೆ ಕನಿಷ್ಠ ಪಮಾಣದ ಸಂಪನ್ಮೂಲ ಮತ್ತು ಸಾಧನ ಸಲಕರಣೆಗಳ ಸೌಕರ್ಯವನ್ನುಒದಗಿಸುವುದಷ್ಟೇ ಅಲ್ಲದೆ, ಎನ್.ಸಿ.ಎಫ್-2005 ಶಿಕ್ಷಕರ ಕಾರ್ಯಾಭಿವ್ಯಕ್ತಿಯ ಉತ್ತವು ಪಡಿಸು ವಿಕೆ ಮತ್ತುಸುಧಾರಣೆ ಮತ್ತು ಸ್ಥಳದ ಅವಶ್ಯಕತೆಗಳನ್ನು ಸರಿದೂಗುವ ಶಾಲಾ ದಿನಚರಿ ಮತ್ತು ವೇಳಾಪಟ್ಟಿಗೂ ಒತ್ತುಕೊಡುತ್ತದೆ.ನೂತನ ದೃಷ್ಟಿಕೋನಗಳಿಗೆ ತೆರೆದುಕೊಳ್ಳುವ ಬಗ್ಗೆ ಶಾಲಾ ಪಠ್ಯಪುಸ್ತಕಗಳು ಹಾಗೂ ಶಿಕ್ಷಕರ ಕೈಪಿಡಿಗಳು ಪರಮಾದ್ಯತೆ ನೀಡುತ್ತವೆ.

ಶಿಕ್ಷಕ ತರಬೇತಿಗಳ ಪುನಾರಚನೆ, ಔದ್ಯೋಯಗಿಕ ಶಿಕ್ಷಣ ಮತ್ತು ತರಬೇತಿಗಳು ಅತ್ಯಂತ ತತ್ಪರತೆಯಿಂದ ಜಾರಿಗೊಳಿಸಬೇಕಾಗಿರುವ ಕೆಲವು ಕ್ಷೇತ್ರಗಳಾಗಿವೆ.

ಮಾಹಿತಿ ಆಧಾರಿತ ಪರೀಕ್ಷೆಗಳಿಂದ, ಸವು ಸ್ಯಾ ಪರಿಹಾರ ಮತ್ತು ಪಟುತ್ವವನ್ನು ಆಧರಿಸಿದ ಮೌಲ್ಯಮಾಪನದೆಡೆಗೆ ಜರಗುವ ಹಾಗೆ ಪರೀಕ್ಷಾ ಸುಧಾರಣೆಗಳಾಗಬೇಕಾಗಿದೆ; ಪರೀಕ್ಷೆಗಳ ಅವಧಿಯೂ ಕಡಿಮೆಯಾಗಿಸೂಕ್ತ ನಿರ್ವಹಣಾ ರೀತಿಯ ಕಾಲಮಿತಿಗಳನ್ನು ಇರಿಸಬೇಕಾಗಿದೆ. ಸೆಮಿಸ್ಟರ್ ಪದ್ಧತಿಯಲ್ಲಿ ಇವೇ ಕೆಲವು ಸುಧಾರಣೆಗಳನ್ನು ಈಗಾಗಲೇ ರಾಜ್ಯದಲ್ಲಿ ಜಾರಿಗೊಳಿಸಲಾಗಿದೆ.

ಸಮಾಜದ ಇನ್ನಿತರ ಸಂಘ ಸಂಸ್ಥೆಗಳು , ಸರ್ಕಾರೇತರ ಸಂಸ್ಥೆಗಳು ಮತ್ತು ಶಿಕ್ಷಕರ ಸಹಕಾರ ಸಂಸ್ಥೆಗಳ ಹಾಗೂ ಶಾಲಾವ್ಯವಸ್ಥೆಯ ನಡುವೆ ಸಹಭಾಗಿತ್ವವನ್ನು ಎನ್.ಸಿ.ಎಫ್ -2005 ಅನುಮೋದಿಸುತ್ತ                                                             

logoblog

Thanks for reading ಪಠ್ಯಕ್ರಮದ ಕ್ಷೇತ್ರಗಳು (ವ್ಯಾಪ್ತಿ)

Previous
« Prev Post

No comments:

Post a comment