Goslink

Goslink is providing you latest news, articles, reviews.

Monday, 25 January 2021

ಪ್ರತಿ ಹೆಣ್ಣು ಮಗುವಿಗೂ ವಿದ್ಯೆಯ ಮೂಲಕ ಬದುಕು ಕಲ್ಪಿಸಿಕೊಡಿ

  Govt Orders Link       Monday, 25 January 2021


ಪ್ರತಿ ಹೆಣ್ಣು ಮಗುವಿಗೂ ವಿದ್ಯೆಯ ಮೂಲಕ ಬದುಕು ಕಲ್ಪಿಸಿಕೊಡಿ

- ಕೆ. ಸುಜಾತ ಹೆಗ್ಡೆ, ಸಮಾಜ ವಿಜ್ಞಾನ ಶಿಕ್ಷಕರು

ಪ್ರಶಸ್ತಿ ಪಡೆಯುತ್ತಿರುವ 10ನೇ ತರಗತಿ ವಿದ್ಯಾರ್ಥಿಗಳು ಫಾತಿಮ ಸಫಾಹತ್ ಸನಾ, ಕೃತಿ, ಸ್ವಾತಿ ಮತ್ತು ಆಯಿಷಾ ಮುಸ್ರಿಯಾ.ಪ್ರತಿ ಹೆಣ್ಣು ಮಗುವಿಗೂ ವಿದ್ಯೆಯ ಮೂಲಕ ಬದುಕು ಕಲ್ಪಿಸಿಕೊಡುವುದು ಮನುಕುಲದ ಆದ್ಯ ಕರ್ತವ್ಯ. ವಿದ್ಯಾರ್ಜನೆ ಮೂಲಕ ಬದುಕು ರೂಪಿಸಿಕೊಳ್ಳುವುದು ಸಾಧ್ಯ ಎಂಬುದನ್ನು ತೋರಿಸಿಕೊಟ್ಟಿದ್ದಾರೆ ಮಂಗಳೂರಿನ ಸರಕಾರಿ ಹೆಣ್ಣುಮಕ್ಕಳ ಪ್ರೌಢಶಾಲೆ, ರಥಬೀದಿಯ ಮಕ್ಕಳು. ಹೆಣ್ಣುಮಕ್ಕಳ ಶಿಕ್ಷಣದ ಮಹತ್ವವನ್ನು ಮನಗಂಡ ಈ ಸಂಸ್ಥೆಯಲ್ಲಿ, ಶೇಕಡಾ 75 ರಷ್ಟು ವಿದ್ಯಾರ್ಥಿನಿಯರು ಮುಸ್ಲಿಂ ಸಮುದಾಯಕ್ಕೆ ಸೇರಿದವರು. ಹೆಣ್ಣು ಮಕ್ಕಳ ಹಕ್ಕುಗಳು ಎಂಬ ವಿಷಯದ ಕುರಿತಂತೆ ಯೋಜನೆ ರೂಪಿಸಿ, ಕಾರ್ಯಗತಗೊಳಿಸಿ, ಪ್ರಸ್ತುತಪಡಿಸಿದ ವಿದ್ಯಾರ್ಥಿನಿಯರಿಗೆ, ಇಂಟೆಲ್ ಸಂಸ್ಥೆ ಮತ್ತು ಡಿ.ಎಸ್.ಆರ್.ಟಿ.ಸಿ ವತಿಯಿಂದ 2010ನೆ ಸಾಲಿನ ವಾರ್ಷೀಕ ಪ್ರಶಸ್ತಿ ದೊರೆತಿದೆ. ನಮ್ಮ ಕನಸು ಎಂಬ ಶೀರ್ಷೀಕೆಯಡಿಯಲ್ಲಿ ಯೋಜನೆ ರೂಪಿಸಿದ ವಿದ್ಯಾರ್ಥಿನಿಯರ ತಂಡ ತಮ್ಮ ಯೋಜನೆ ಅನುಷ್ಠಾನದ ಬಗ್ಗೆ ಹೆಮ್ಮೆಯಿಂದ ಹೇಳಿಕೊಳ್ಳುವುದು ಹೀಗೆ:ಮಕ್ಕಳ ಹಕ್ಕುಗಳು ಎಂಬ ಪಾಠ ಆರಂಭಿಸಿದ ಸಂದರ್ಭ, ನಮ್ಮ ಸಮಾಜ ವಿಜ್ಞಾನ ಶಿಕ್ಷಕಿ, ಸಂವಮಕ್ಕಳ ಪೋಷಣೆ ಮತ್ತು ರಕ್ಷಣೆಗಳ ಉಲ್ಲಂಘನೆಯ ಕುರಿತಂತೆ ವರದಿಯಾಗುವ ಪ್ರಕರಣಗಳನ್ನು ಉಲ್ಲೇಖಿಸುತ್ತಾ, ನಮ್ಮ ನಗರದಲ್ಲಿಯೇ ನಡೆದ ಒಂದು ಮನಕಲಕುವ ಘಟನೆಯನ್ನು ಹೇಳಿದರು. ಮನೆಕೆಲಸಕ್ಕಿದ್ದ ಸಣ್ಣ ಪ್ರಾಯದ ಹೆಣ್ಣು ಮಗಳೊಬ್ಬಳು ಮನೆಯೊಡತಿಯಿಂದ ಹೊಡೆಸಿಕೊಂಡ ಘಟನೆಯ ಬಗ್ಗೆ ಇನ್ನಷ್ಟು ಚಿತ್ರಣ ವೃತ್ತಪತ್ರಿಕೆ ಹಾಗೂ ದೂರದರ್ಶನದಲ್ಲಿ ಬಿತ್ತರಗೊಂಡಿತ್ತು. ಇದರಿಂದ ಪ್ರಭಾವಿತರಾದ ನಾವು ಹೆಣ್ಣು ಮಕ್ಕಳ ಹಕ್ಕುಗಳು ಎಂಬ ವಿಷಯದ ಕುರಿತು ಯೋಜನೆಯನ್ನು ಕೈಗೊಳ್ಳಲು ನಿಶ್ಚಯಿಸಿ, ಶಿಕ್ಷಕರಿಂದ ಮಾರ್ಗದರ್ಶನ ಪಡೆದೆವು. ಅವರ ಸಲಹೆಯಂತೆ ಶಾಲೆಯ ಮಕ್ಕಳ ಹಕ್ಕು ಸಂಘದ ಸದಸ್ಯರ ರೀತಿಯಲ್ಲಿ ಕ್ರಿಯಾಯೋಜನೆ ರಚಿಸಿ, ಚಟುವಟಿಕೆ ಆರಂಭಿಸಿದೆವು. ಅಂತರ್ಜಾಲದಲ್ಲಿ ಈ ಬಗ್ಗೆ ನಿಖರ ಮಾಹಿತಿ ಸಂಗ್ರಹಿಸಿ, ಪೂರ್ವ ತಯಾರಿ ಮಾಡಿಕೊಂಡು, ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಭೇಟಿ ನೀಡಿ ಮಕ್ಕಳಿಗೆ ಲಭ್ಯವಿರುವ ಸೌಲಭ್ಯಗಳ ಕುರಿತು ಮಾಹಿತಿ ಸಂಗ್ರಹಿಸಿದೆವು. ಇನ್ನಷ್ಟು ಮಾಹಿತಿಗಾಗಿ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಸದಸ್ಯರ ಜೊತೆ ಸಂದರ್ಶನ ನಡೆಸಿದೆವು. ಹನ ಮಾಧ್ಯಮಗಳಲ್ಲಿಮೊದಲ ಬಾರಿಗೆ ಪತ್ರಕರ್ತರಂತೆ ಧ್ವನಿಗ್ರಾಹಕ(Voice Recorder) ಬಳಸಿ, ಕಂಪ್ಯೂಟರ್ನಲ್ಲಿ ಮಾಹಿತಿ ಸಂಯೋಜಿಸಿದ್ದು, ನಮ್ಮ ಕೆಲಸಕ್ಕೆ ಹುರುಪು ನೀಡಿತು. ಕಾನೂನು ರೀತಿಯ ಜ್ಞಾನ ಪಡೆದ ನಾವು, ನಮ್ಮ ಸುತ್ತಮುತ್ತಲಿನ ಮನೆಗಳಿಗೆ ಭೇಟಿ ನೀಡಿ, ಪಾಲಕರಿಗೆ ಹೆಣ್ಣು ಮಕ್ಕಳ ಶಿಕ್ಷಣದ ಬಗ್ಗೆ ಅರಿವು ಮೂಡಿಸಿ, ಶಾಲೆ ಬಿಟ್ಟ 4 ಹೆಣ್ಣುಮಕ್ಕಳನ್ನು ಪುನ: ಶಾಲೆಗೆ ಸೇರಿಸುವಲ್ಲಿ ಯಶಸ್ವಿಯಾದೆವು. ನಮ್ಮಲ್ಲಿಯೇ ಕಾರ್ಯಪಡೆ ರಚಿಸಿ, ಹತ್ತಿರದ ಶಾಲೆಗಳಿಗೆ ಭೇಟಿ ನೀಡಿ ಮಕ್ಕಳ ಹಾಜರಾತಿಯನ್ನು ಪರಿಶೀಲಿಸಿದೆವು. ಗೈರುಹಾಜರಾದ ಮಕ್ಕಳ ಮನೆಗಳಿಗೆ ತೆರಳಿ ಶಿಕ್ಷಣದ ಮಹತ್ತ್ವದ ಬಗ್ಗೆ ಅವರಲ್ಲಿ ಅರಿವು ಮೂಡಿಸಿ, ಸರಕಾರದಿಂದ ಸಿಗುವ ಸೌಲಭ್ಯಗಳ ಬಗ್ಗೆ ಅವರ ಪೋಷಕರಿಗೆ ಮಾಹಿತಿ ನೀಡಿ ಪ್ರೇರೇಪಿಸುವ ಮೂಲಕ ಶಾಲೆಗಳಲ್ಲಿ ಮಕ್ಕಳ ಹಾಜರಾತಿ ಗಣನೀಯವಾಗಿ ಹೆಚ್ಚುವಂತಾಯಿತು. ಶಾಲೆ ಬಿಟ್ಟ ಮಕ್ಕಳಿಗೆ, ಅವರು ಈ ತನಕ ಅಧ್ಯಯನ ಮಾಡದೇ ಇರುವ ಪಾಠಗಳನ್ನು ಹೇಳಿಕೊಡುವ ಮೂಲಕ ಅವರು ವಿದ್ಯಾಭ್ಯಾಸ ಮುಂದುವರಿಸಲು ಅನುವು ಮಾಡಿಕೊಟ್ಟೆವು. ಮಹಿಳಾ ಸಂಘ ಸಂಸ್ಥೆಗಳ ಮೂಲಕ ಮಕ್ಕಳಿಗೆ ಉಚಿತ ಪುಸ್ತಕ, ಚೀಲ, ಕೊಡೆ ಇತ್ಯಾದಿ ಸೌಲಭ್ಯಗಳನ್ನು ಕೊಡಿಸಿದೆವು. ನಾವೆಲ್ಲರೂ ನಮ್ಮ ಕೈಲಾದಷ್ಟು ದಾನ ನೀಡಿದೆವು ಮತ್ತು ಆ ಮೂಲಕ ಊರ ದಾನಿಗಳನ್ನು ಪ್ರೋತ್ಸಾಹಿಸಿ, ಅವರಿಂದ 6 ಬಡ ಹೆಣ್ಣು ಮಕ್ಕಳನ್ನು ದತ್ತು ತೆಗೆದುಕೊಳ್ಳುವಂತೆ ಮಾಡಿದೆವು. ಕಲ್ಯಾಣ ಇಲಾಖೆಗೆ ಪತ್ರ ಬರೆದು ಶಾಲೆ ಬಿಟ್ಟ ವಿದ್ಯಾರ್ಥಿಗಳಿಗೆ ವೃತ್ತಿ ಶಿಕ್ಷಣ ನೀಡುವಂತೆ ವಿನಂತಿಸಿದೆವು. ಪೋಷಕರು, ಮಕ್ಕಳು ಮತ್ತು ಶಿಕ್ಷಕರ ಸಮಸ್ಯೆಗಳನ್ನು ಆಲಿಸಿ ಅವರ ಬೇಡಿಕೆಗಳನ್ನು ಮನವಿ ರೂಪದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ನಿರ್ದೇಶಕರಿಗೆ ನೀಡಿದೆವು.

ನಮ್ಮ ಶಾಲೆಯಲ್ಲಿ ಯೋಜನೆಗೆ ಸಂಬಂಧಿಸಿದಂತೆ ಅನೇಕ ಜನ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡೆವು.

1. ಮಕ್ಕಳ ಸಹಾಯವಾಣಿ ಸಂಸ್ಥೆಯವರಿಂದ ಮಾಹಿತಿ

2. ಪೋಷಕರಿಗೆ ಹಾಗೂ ಜನರಿಗೆ ತಿಳುವಳಿಕೆ ಮೂಡಿಸಲು ಜಾಥಾ ಕಾರ್ಯಕ್ರಮ

3. ಅಪರಾಧ ತಡೆ ಕಾರ್ಯಕ್ರಮ - ಪೋಲೀಸರಿಂದ ಮಾಹಿತಿ

4. ಯೋಗ, ನೃತ್ಯ, ಕರಕುಶಲ, ಇಂಗ್ಲಿಷ್ ಸ್ಪೀಕಿಂಗ್, ಸಂಗೀತ ಇತ್ಯಾದಿ ಕಲೆಗಳ ಉಚಿತ ತರಬೇತಿಈ ಯೋಜನೆಯಲ್ಲಿ ತಂತ್ರಜ್ಞಾನವನ್ನು ಯಥೇಚ್ಛವಾಗಿ ಉಪಯೋಗಿಸಿದ ನಾವು MS-Word, Publisher, Excel, PowerPoint ಮತ್ತು Interne ಮೂಲಕ ಮಾಹಿತಿ ಸಂಗ್ರಹಣೆ ಮತ್ತು ಸಂಯೋಜನೆ ಮಾಡಿಕೊಂಡು, ಮನವಿ, ಭಿತ್ತಿ ಮತ್ತು ಕರಪತ್ರಗಳನ್ನು ತಯಾರಿಸಲು ಮತ್ತು ಯೋಜನೆ ಪ್ರಸ್ತುತಪಡಿಸಲು(Presentation) ಕಂಪ್ಯೂಟರ್ಗಳನ್ನು ಬಳಸಿಕೊಂಡೆವು. ಇದು ನಮ್ಮಲ್ಲಿ 21ನೇ ಶತಮಾನದ ಕೌಶಲ್ಯಗಳನ್ನು ಬೆಳೆಸುವ ಮುಖಾಂತರ, ಮುಂದಿನ ಜೀವನವನ್ನು ಆತ್ಮವಿಶ್ವಾಸದಿಂದ ಸ್ವೀಕರಿಸುವಂತೆ ಮಾಡಿದೆ. ಈ ಎಲ್ಲಾ ಬದಲಾವಣೆಗಳಿಗೆ ಕಾರಣೀಭೂತರಾದ, ಈ ಯೋಜನೆಯ ಬೆನ್ನೆಲುಬಾದ, ನಮ್ಮ ಸಂಸ್ಥೆಯ ಮುಖ್ಯ ಶಿಕ್ಷಕಿ ಶ್ರೀಮತಿ ಶೋಭಾ ಎನ್ ಮತ್ತು ಸಮಾಜ ವಿಜ್ಞಾನ ಶಿಕ್ಷಕಿ ಕೆ. ಸುಜಾತ ಹೆಗ್ಡೆಯವರಿಗೆ ನಾವು ಚಿರಋಣಿಗಳು. ಅವರನ್ನು ಈ ರೀತಿಯಲ್ಲಿ ತರಬೇತುಗೊಳಿಸಿದ ಮತ್ತು ಇದೇ ಮಾದರಿಯಲ್ಲಿ ವಿಶ್ವದಾದ್ಯಂತ ಇಂಟೆಲ್ ಟೀಚ್ ಪ್ರೋಗ್ರಾಮ್ ಮೂಲಕ ಉತ್ತಮ ಶಿಕ್ಷಕರನ್ನು ರೂಪಿಸುತ್ತಿರುವ ಇಂಟೆಲ್ ಸಂಸ್ಥೆಗೆ ವಿದ್ಯಾರ್ಥಿ ಸಮುದಾಯ ಕೃತಜ್ಞರಾಗಿರಬೇಕು.

  

logoblog

Thanks for reading ಪ್ರತಿ ಹೆಣ್ಣು ಮಗುವಿಗೂ ವಿದ್ಯೆಯ ಮೂಲಕ ಬದುಕು ಕಲ್ಪಿಸಿಕೊಡಿ

Previous
« Prev Post

No comments:

Post a comment