ಗುರಿ
1. 'ಮಸಗುವಂಬುಜದಂತೆ ಧ್ಯೇಯದ ಆಳ್ವಿಸಕೆ ಬಸವಾಗು' ಎಂದರೇನು?
ಕೆಸರಿನಲ್ಲಿರುವ ತಾವರೆಯು ಸೂರ್ಯನನ್ನು ನೋಡಿ ವಿಜೃಂಭಿಸುವಂತೆ ಮಾನವನು ಧ್ಯೇಯ ಸಾಧನೆಗೆ ಸಿದ್ಧನಾಗಬೇಕು ಎಂಬುದನ್ನು ಸೂಚಿಸುತ್ತದೆ.
2. ಒಂದು ಬಾಣಕೆ ಒಂದು ಗುರಿ ಎಂಬುದು ಯಾವುದಕ್ಕೆ ಹೋಲಿಕೆಯಾಗಿ ಬಂದಿದೆ?
ಜೀವನದಲ್ಲಿ ಒಂದೇ ಗುರಿ ಇರಬೇಕು ಎಂಬುದಕ್ಕೆ ಹೋಲಿಕೆಯಾಗಿದೆ.
3. ಯಾವುದಕ್ಕಾಗಿ ಹಗಲಿರುಳು ಹೋರಾಡಬೇಕು?
ಒಂದೇ ಹಿರಿದಾದ ಗುರಿಗೆ ಹಗಲಿರುಳು ಹೋರಾಡಬೇಕು.
4. ಪ್ರತಿಯೊಬ್ಬನ ಜೀವನಕ್ಕೂ ಒಂದು ಗುರಿ ಇರಬೇಕು ಏಕೆ?
ಜೀವನದಲ್ಲಿ ಒಂದುಗುರಿ ಇಲ್ಲದಿದ್ದರೆ ಅದು ಎಲ್ಲಗೆ ಹೋಗಬೇಕೆಂಬ ನಿಶ್ಚಿತತೆ ಇಲ್ಲದ ಸಮುದ್ರದಲ್ಲಿನ ನೌಕೆಯಂತಾಗುತ್ತದೆ.ಆದ್ದರಿಂದ ಜೀವನಕ್ಕೆ ಒಂದುಗುರಿ ಇರಬೇಕು.
ಪದ್ಯ - 6
ಮಗು
1. ಬರಡಾಕಳೆಲ್ಲ ಹೈನಾಗೆ ಎಂದರೇನು?
ಹಾಲುಕೊಡದಿರುವ ಹಸು ಹಾಲು ಕೊಡುವಂತೆ ಆಗುವುದು ಎಂದರ್ಥ.
2. ಮಗುವಿನ ಚೆಲುವನ್ನು ಜನಪದರು ಯಾವುದಕ್ಕೆ ಹೋಲಿಸಿದ್ದಾರೆ?
ಬಾಳೆಯ ಹಣ್ಣಿನ ಮಾಟಕ್ಕೆ, ಬಾದಾಮಿ ಎಲೆಯ ತೋಟಕ್ಕೆ ಹೋಲಿಸಿದ್ದಾರೆ.
3. ಮಕ್ಕಳ ಹಸಿವನ್ನು ಬಲ್ಲವರು ಯಾರು?
ಮಕ್ಕಳ ಹಸಿವನ್ನು ಬಲ್ಲವರು ತಾಯಿ.
4. ಹೆಣ್ಣಿದ್ದ ಮನೆಗೆ ಯಾವುದು ಬೇಡ?
ಹೆಣ್ಣಿದ್ದ ಮನೆಗೆ ಕನ್ನಡಿ ಬೇಡ.
ಪದ್ಯ - 7
ವಚನಗಳು
1. ಯಾರು ಕೂಡಲಸಂಗಮನನ್ನು ಅರಿಯಲಾರರು?
ಬತ್ತುವ ಜಲ, ಒಣಗುವ ಮರವನ್ನು ಮೆಚ್ಚಿದವರು ಕೂಡಲಸಂಗಮನನ್ನು ಅರಿಯಲಾರರು.
2. ವೇಷ ಧರಿಸಿದ ಮೇಲೆ ಹೇಗಿರಬೇಕು?
ವೇಷ ಧರಿಸಿದ ಮೇಲೆ ವೇಷಕ್ಕೆ ತಕ್ಕ ಆಚರಣೆ ಇರಬೇಕು.
3. ಧನವಿದ್ದವರಲ್ಲಿ ಇರಬೇಕಾದ ಗುಣ ಯಾವುದು?
ಧನವಿದ್ದವರಲ್ಲಿ ಇರಬೇಕಾದ ಗುಣ 'ದಯೆ'.
4. ಯಾವಾಗ ಕೆರೆಯನ್ನು ತೋಡಿದ್ದು ನಿಷ್ಫಲವಾಗುತ್ತದೆ?
ನೀರು ಬರದಿದ್ದರೆ ಕೆರೆಯನ್ನು ತೋಡಿದ್ದು ನಿಷ್ಫಲವಾಗುತ್ತದೆ.
ಪದ್ಯ - 8
ನಿಟ್ಟೋಟದಲಿ ಹಾಯ್ದನು ಬಿಟ್ಟಮಂಡೆಯಲಿ
1. ಉತ್ತರನ ಮಾತಿನಂತೆ ಅದ್ಭುತವನ್ನು ಕಾಣಲು ಮೊದಲಿಗೆ ಇರಬೇಕಾದುದೇನು?
ಉತ್ತರನ ಮಾತಿನಂತೆ ಅದ್ಭುತವನ್ನು ಕಾಣಲು ಮೊದಲಿಗೆ ಇರಬೇಕಾದುದು ದೇಹ.
2. ಕೌರವನ ಸೇನೆಯು ಉತ್ತರನಿಗೆ ಹೇಗೆ ಕಾಣಿಸಿತು?
ಕೌರವನ ಸೇನೆಯು ಉತ್ತರನಿಗೆ ವಿಶಾಲವಾದ ಸಮುದ್ರದಂತೆ ಕಾಣಿಸಿತು
3. ಉತ್ತರನು ನಿಟ್ಟೋಟದಲಿ ಓಡಿದ್ದು ಏಕೆ?
ಬಲವಾದ ಕೌರವ ಸೇನೆಯನ್ನು ನೋಡಿ ಹೆದರಿ ಉತ್ತರನು ನಿಟ್ಟೋಟದಲಿ ಓಡಿದನು.
4. ಧುರಕ್ಕೆ ಬೆನ್ನು ಹಾಕಿದರೆ ಏನು ಪ್ರಾಪ್ತಿಯಾಗುತ್ತದೆ?
ಧುರಕ್ಕೆ (ಯುದ್ಧ) ಬೆನ್ನು ಹಾಕಿದರೆ ಪಾಪವು ಪ್ರಾಪ್ತಿಯಾಗುತ್ತದೆ.
5. ಇಲ್ಲಿ ಯಾರು ನಾಡನರಿಯಾಗಿದ್ದಾರೆ?
ಇಲ್ಲಿ ಉತ್ತರನು ನಾಡನರಿಯಾಗಿದ್ದಾನೆ.
6. ಉತ್ತರನಿಗೆ ಇಂದ್ರಪದವಿಯು ಏಕೆ ಬೇಕಿಲ್ಲ?
ಉತ್ತರನಿಗೆ ತನ್ನ ಅರಸುತನವೇ ಸಾಕಾಗಿರುವುದರಿಂದ ಇಂದ್ರಪದವಿಯು ಬೇಕಾಗಿಲ್ಲ.
7. ಸುರರ ಸತಿಯರ ಸ್ಥಾನವನ್ನು ಯಾರು ತುಂಬುತ್ತಾರೆ?
ಸುರರ ಸತಿಯರ ಸ್ಥಾನವನ್ನು ಅರಮನೆಯ ನಾರಿಯರು ತುಂಬುತ್ತಾರೆ.
No comments:
Post a comment