Goslink

Goslink is providing you latest news, articles, reviews.

Saturday, 2 January 2021

ಟ್ಯಾಗೋರ್ ಮತ್ತು ಶಿಕ್ಷಣ

  Govt Orders Link       Saturday, 2 January 2021

  ಟ್ಯಾಗೋರ್ ಮತ್ತು ಶಿಕ್ಷಣ

ಪರಮೇಶ್ವರಯ್ಯ ಸೊಪ್ಪಿಮಠ

ರವೀಂದ್ರನಾಥ ಟ್ಯಾಗೋರ್ರರು ಆಧುನಿಕ ಜಗತ್ತಿನ ಶೇಷ್ಠ ಸಾಹಿತಿಗಳೂ ಕಲಾವಿದರೂ ಆಗಿದ್ದಂತೆ ಪಗತಿಪರ ಶಿಕ್ಷಣತತ್ವ ದೃಷ್ಟಿಯುಳ್ಳವರೂ ಆಗಿದ್ದರು. ಅಲ್ಲದೆ ತಮ್ಮ ಆ ಧೋರಣೆಗಳನ್ನು ಕಾರ್ಯರೂಪಕ್ಕಿಳಿಸಿದರು. ಅವರು ಹೊಸತನಕ್ಕೆ ನಾಂದಿ ಹಾಡಲು ಬಾಲ್ಯದಲ್ಲಿನ ಕಹಿ ಅನುಭವಗಳೆ ಪ್ರೇರಣೆಯಾದವು. ಅದರ ಫಲವಾಗಿ ಪಪಂಚವೇ ಹೆಮ್ಮೆಪಡುವಂಥ ಶಿಕ್ಷಣತಜ್ಞರಾಗಿ ಹೊರಹೊಮ್ಮಿದರು.

ಟ್ಯಾಗೋರ್ ಅವರ ಬಾಲ್ಯದ ಶಾಲಾ ಅನುಭವಗಳು:

ರವೀಂದ್ರ್ರರು ಶಾಲೆಗೆ ಹೋಗಲು ಪ್ರಾರಂಭಿಸಿದ ಮೇಲೆ ಮೊದಲು ಸೇರಿದ್ದು ಓರಿಯಂಟಲ್ ಸೆಮಿನರಿ ಶಾಲೆಗೆ. ಅಲ್ಲಿ ಉಪಾಧ್ಯಾಯರಿಗೆ ಹುಡುಗರ ಮೇಲೆ ಸಂಪೂರ್ಣ ಅಧಿಕಾರ. ಮಾತೆತ್ತಿದರೆ ಹುಡುಗರ ಕೈಯಲ್ಲಿ ಸ್ಲೇಟು, ಪುಸ್ತಕಗಳನ್ನು ಹೊರೆಸಿ, ಬೆಂಚಿನ ಮೇಲೆ ಬಹಳ ಹೊತ್ತು ನಿಲ್ಲಿಸುತ್ತಿದ್ದರು. ವಿದ್ಯಾಭ್ಯಾಸದ ಈ ಮೊದಲ ಕಹಿ ಅನುಭವ ರವೀಂದ್ರರ ಎಳೆಯ ವಯಸ್ಸಿನ ಮೇಲೆ ಆಳವಾದ ಪರಿಣಾಮ ಬೀರಿತು. ನಂತರ ಅವರು ನಾರ್ಮಲ್ ಸ್ಕೂಲ್ಗೆ ಸೇರಿದರು. ಅಲ್ಲಿ ಸಹಪಾಠಿಗಳ ಕಿರುಕುಳ ಜೊತೆಗೆ ಶಿಕ್ಷಕರ ಪೀತಿ ದೊರೆಯದೇ ಹೋಯಿತು. ಛಡಿ ಛಮ್ ಛಮ್ ವಿದ್ಯೆ ಘಮ್ ಘಮ್ ಎನ್ನುವಂತೆ, ಶಿಕ್ಷೆಯಿಂದ ಶಿಕ್ಷಣ ಪದ್ಧತಿಯಿತ್ತು. ರವೀಂದ್ರ್ರರಿಗೆ ಇದು ಸರಿ ಎನಿಸದೇ ಶಾಲೆ ಮತ್ತು ತರಗತಿ ಸೆರೆಮನೆವಾಸ ಎಂಬ ಮನೋಭಾವ ಬೆಳೆಯತೊಡಗಿತು. ಅಲ್ಲದೇ ಈ ಶಾಲೆಯಲ್ಲಿ ವಿದ್ಯಾರ್ಥಿಗಳನೆಲ್ಲಾ ಒಂದೆಡೆ ಕೂಡಿಸಿ ಪದ್ಯಗಳನ್ನು ಹಾಡಿಸುತ್ತಿದ್ದರು .


ಶಾಂತಿನಿಕೇತನ:ತಮ್ಮ ಅನುಭವದಿಂದ ಮುಂದೆ ಅವರು ,ದೇಶದ ದೋಷಪೂರ್ಣ ಶಿಕ್ಷಣ ಪದ್ಧತಿಯನ್ನು ಆದಷ್ಟುಬೇಗ ಶುದ್ಧೀಕರಿಸಬೇಕೆಂದು ಯೋಚಿಸಿದರು. ಈ ರಚನಾತ್ಮಕ ಕಾರ್ಯವನ್ನು ಅವರು ತಮ್ಮ ಮನೆಯಿಂದಲೇ ಆರಂಭಿಸಿದರು. ತಮ್ಮ ಮಕ್ಕಳನ್ನು ಬೇರೆ ಯಾವುದೆ ಶಾಲೆಗಳಿಗೆ ಕಳಿಸದೆ ಅವರಿಗಾಗಿ ತಮ್ಮ ಮನೆಯಲ್ಲೆ ಶಾಲೆಯೊಂದನ್ನು ಆರಂಭಿಸಿದರು. ಇದೇ ಕಾಲಕ್ಕೆ ತಪೋವನ ಶಾಲೆಯ ಕಲ್ಪನೆ ಮೂಡಿತು. ಪ್ರಾಚೀನ ಗುರುಕುಲಪದ್ಧತಿಯಂತೆ ಪ್ರಕೃತಿಯ ಸುಂದರ ತಾಣದ ಮಧ್ಯೆ ಸ್ವಚ್ಛಂದ ವಾತಾವರಣದಲ್ಲಿ ಜೀವನ ಶಿಕ್ಷಣ ಪಡೆಯುವ ಸೌಲಭ್ಯವನ್ನು ಕುರಿತು ಯೋಚಿಸತೊಡಗಿದರು.


ರವೀಂದ್ರ್ರರು ಪಕೃತಿ ಮಡಿಲಿನ ಸನ್ನಿವೇಶ ಶಿಕ್ಷಣಕ್ಕೆ ಬಹುಸೂಕ್ತವಾದ್ದೆಂದು ಭಾವಿಸಿದ್ದರು. ಪ್ರಶಾಂತ ವಾತಾವರಣದಲ್ಲಿ ನೂತನ ರೀತಿಯ ಶಾಲೆಯನ್ನು ಏರ್ಪಡಿಸುವ ಆಲೋಚನೆ ಮಾಡುತ್ತಿದ್ದರು. ಅಂತಿಮವಾಗಿ 1901ರ ಡಿಸೆಂಬರ್ 22ರಂದು ಪಶ್ಚಿಮ ಬಂಗಾಳದ ಬೋಲ್ಟುರ ರೈಲ್ವೆ ನಿಲ್ದಾಣಕ್ಕೆ ಎರಡು ಮೈಲಿ ದೂರದಲ್ಲಿ ಒಂದು ಶಾಲೆಯನ್ನು ಆರಂಭಿಸಿದರು. ಆಗ ಶಾಲೆಯಲ್ಲಿ ಐದಾರು ಮಕ್ಕಳಿದ್ದರು. ಮಕ್ಕಳಿಗೆ ಉಚಿತವಾಗಿ ಊಟ, ವಸತಿಗಳನ್ನು ಏರ್ಪಡಿಸಿದರು. ನಂತರದ ದಿನಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಗಣನೀಯವಾಘಿ ಏರಿತು.


ಮರಗಿಡಗಳಿಂದ ಆವೃತವಾಗಿ ನಗರದಿಂದ ದೂರವಿದ್ದು ಆಶ್ರಮಗಳನ್ನು ನೆನಪಿಗೆ ತರುತ್ತಿತ್ತು ಶಾಂತಿನಿಕೇತನ. ಅಲ್ಲಿನದು ಪಾಚೀನ ಭಾರತದ ಋಷ್ಯಾಶಮ ಗುರುಕುಲಗಳ ಸನ್ನಿವೇಶ.

ಬೆಳಗು ಜಾವದಲ್ಲಿ ವಿದ್ಯಾರ್ಥಿಗಳು ಏಳಬೇಕು. ನಿತ್ಯಕರ್ಮಗಳನ್ನು ಮುಗಿಸಿಕೊಂಡ ಮೇಲೆ ಹತ್ತು ನಿಮಿಷಗಳ ಕಾಲ ಪ್ರಾರ್ಥನೆ. ತರಗತಿಗಳು ಮರದಡಿಯಲ್ಲಿ ನಡೆಯುತ್ತಿದ್ದವು .ನಿಯಮ ಬದ್ಧವಾಗಿರಬೇಗಿದ್ದರೂ ಮಕ್ಕಳ ಸ್ವಾತಂತ್ಯಕ್ಕೆ ಧಕ್ಕೆ ಇರಲಿಲ್ಲ.ಮಕ್ಕಳು ಅತ್ಯಂತ ಆಸಕ್ತರಾಗಿರುವುದನ್ನು ಜಗತ್ತಿಗೆ ತೋರಿಸಿಕೊಟ್ಟಇವರು, ಮರಗಳಲ್ಲಿ ಪಕ್ಷಿಗಳ ಕಲರವ ಧ್ವನಿ ಕೇಳಿದಾಗ, ಪಾಠವನ್ನು ನಿಲ್ಲಿಸಿ ಆ ಹಕ್ಕಿಗಳ ಧ್ವನಿಯನ್ನು ತಾವೂ ಆಲಿಸಿ ಮಕ್ಕಳಿಗೂ ಆ ಕಡೆ ಲಕ್ಷ್ಯ ಬರುವಂತೆ ಮಾಡುತ್ತಿದ್ದರು.


ತರಗತಿಯ ಕಾರ್ಯಕಮದಲ್ಲಿ ಸಂಗೀತಕ್ಕೆ ಆದ್ಯತೆ. ಬೆಳಿಗ್ಗೆ ಸಂಗೀತದೊಡನೆ ಕಾರ್ಯಕ್ರಮದ ಆರಂಭ. ಕ್ರಮವಾಗಿ ತರಗತಿಗಳು ನಡೆಯುತ್ತಿದ್ದರೂ ವ್ಯಾಸಂಗ ವಿಷಯದಲ್ಲಿ ಮಕ್ಕಳಿಗೆ ಸ್ವಾತಂತ್ಯವಿತ್ತು. ಸೂರ್ಯಾಸ್ತದ ಮುನ್ನ ಮತ್ತೆ ಹತ್ತು ನಿಮಿಷ ಪ್ರಾರ್ಥನೆ,ರಾತ್ರಿ ಕಥೆ ಹೇಳುವುದು, ನಾಟಕ, ನೃತ್ಯ, ಸಂಗೀತ ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮಗಳು. ಆಶ್ರಮದ ಕೆಲಸಗಳನ್ನೆಲ್ಲ ಮಕ್ಕಳೇ ಮಾಡುತ್ತಿದ್ದರು. ಅದೆಲ್ಲ ತಮ್ಮ ಕೆಲಸವೆಂದು ಸಂತೋಷದಿಂದ ನಿರ್ವಹಿಸುತ್ತಿದ್ದರು. ಶಾಂತಿನಿಕೇತನ ಪಾಚೀನ ಭಾರತದ ಶಿಕ್ಷಣ ಪದ್ಧತಿಯನ್ನು ಬಹುಮಟ್ಟಿಗೆ ಅನುಸರಿಸಿದಂತಿತ್ತು.


ರವೀಂದ್ರ್ರರು ತಮ್ಮ ಶೈಕ್ಷಣಿಕ ಘನ ಉದ್ದೇಶವನ್ನು ಸಾಧಿಸಲು ಭಾರತದ ಜನಜೀವನ, ಸಂಸ್ಕೃತಿ ಹಾಗೂ ಆಧ್ಯಾತ್ಮಿಕ ಅಂಶಗಳನ್ನು ಭೋಧಿಸಬೇಕೆಂದು ಹಾಗೂ ತಾತ್ವಿಕ ಅಂಶಗಳನ್ನು ಕಾರ್ಯರೂಪಕ್ಕೆ ತರಲು, ಶಾಂತಿನಿಕೇತನ ಕಲ್ಪನೆಯನ್ನು ಸಾಕಾರರೂಪಕ್ಕೆ ತಂದರು.ವಿಶ್ವಭಾರತಿ: ಭಾರತ ದ ಶಿಕ್ಷಣ ಭಾರತ ಸಂಸ್ಕೃತಿ ಸಂಪ್ರದಾಯಗಳ ಬುನಾದಿಯ ಮೇಲೆ ನಿಲ್ಲಬೇಕು. ಅದು ವಿಶ್ವದ ಇತರ ಸಂಸ್ಕೃತಿಗಳ ಉತ್ತಮಾಂಶಗಳನ್ನು ಸ್ವೀಕರಿಸಬೇಕು. ಈ ಉದ್ದೇಶ ಸಾಧನೆಗಾಗಿ ರವೀಂದ್ರ್ರರು ವಿಶ್ವಭಾರತಿ ಎಂಬ ಉನ್ನತ ಶಿಕ್ಷಣ ಸಂಸ್ಥೆಯನ್ನು ಆರಂಭಿಸಿದರು. ಭಾರತದ ಎಲ್ಲ ಕಡೆಯಿಂದ ಹಾಗೂ ವಿಶ್ವದ ಇತರ ದೇಶಗಳಿಂದ ವಿದ್ಯಾರ್ಥಿಗಳು ಬಂದು ಅಲ್ಲಿ ವ್ಯಾಸಂಗ ಮಾಡುವ ಅವಕಾಶ ಕಲ್ಪಿಸಿದರು . ವಿದ್ಯಾರ್ಥಿಗಳಂತೆ ವಿದ್ವಾಂಸರು ಸಹ ಭಾರತದ ವಿವಿಧ ಭಾಗಗಳಿಂದಲೂ, ಪ್ರಪಂಚದ ಇತರ ದೇಶಗಳಿಂದಲೂ ಬಂದು ಅಲ್ಲಿ ಸಂಶೋಧನೆ ನಡೆಸಲು ವ್ಯವಸ್ಥೆ ಮಾಡಿದರು. ಆ ಮೂಲಕ ಭಾರತೀಯ ಸಂಸ್ಕೃತಿ, ಸಾಹಿತ್ಯ, ಕಲೆ ಮುಂತಾದವನ್ನು ಪಾಶ್ಚಾತ್ಯರು ಅರಿಯುವುದಕ್ಕೂ, ವಿದೇಶಿಯರ ಜೀವನದಲ್ಲಿನ ಉತ್ತಮಾಂಶಗಳನನ್ನಿ ಭಾರತಿಯರು ಅರಿಯುವುದಕ್ಕೂ ಅವಕಾಶವಾಗಬೇಕೆಂದು ರವೀಂದ್ರರು ಪ್ರತಿಪಾದಿಸಿದರು. ಪಾಶ್ಚಾತ್ಯ ಮತ್ತು ಪೌರಸ್ತ್ಯಸಂಸ್ಕೃತಿಗಳ ಸಂಗಮವಾಗಬೇಕೆಂಬ ಘನವಾದ ಉದ್ದೇಶದಿಂದ ಸ್ಥಾಪನೆಯಾದ ಈ ಸಂಸ್ಥೆಗೆ ವಿಶ್ವಭಾರತಿ ಎಂಬ ಬಹು ಸೂಕ್ತವಾದ ಹೆಸರನ್ನಿಟ್ಟರು. ವಿಶ್ವಕವಿ ತಮ್ಮ ಆಸ್ತಿಪಾಸ್ತಿಯನ್ನೆಲ್ಲ ಸಂಸ್ಥೆಯ ಮುನ್ನಡೆಗಾಗಿ ಧಾರೆಯೆದರು. ನೊಬೆಲ್ ಬಹುಮಾನದಿಂದ ಬಂದಅಪಾರ ಹಣವನ್ನೂ ಇದಕ್ಕಾಗಿಯೇ ವಿನಿಯೋಗಿಸಿದರು.


ಒಂದನೆಯ ಮಹಾಯುದ್ಧದಲ್ಲಿ ಸಾವು ನೋವಿಗೀಡಾದವರ ಬಗ್ಗೆ ಟ್ಯಾಗೋರರ ಮನಸ್ಸು ನೊಂದಿತು. ಮಾನವನ ಅಪಾರ ಶ್ರಮದಿಂದ ರೂಪಿಸಿದ ಕಲೆ ಸಂಸ್ಕೃತಿ ನಾಗರಿಕತೆಗಳೆಲ್ಲ ಯುದ್ಧದಿಂದ ನಾಶವಾಗುವುದನ್ನು ತೆಡೆಯುವುದರ ಕುರಿತು ಚಿಂತಿಸಿದರು. ಅದಕ್ಕಾಗಿ, ಜನಾಂಗಗಳಲ್ಲಿ ವೈರ ಅಳಿದು ಜನರಲ್ಲಿ ಪ್ರೀತಿ, ಐಕಮತ್ಯ, ಸಹಕಾರ ಇವುಗಳ ಮಧುರ ಬಾಂಧವ್ಯ ಮೂಡಿಸುವ ಅಗತ್ಯವನ್ನು ಕಂಡುಕೊಂಡರು. 1918ರಲ್ಲಿ ಸ್ಥಾಪಿಸಿದ ವಿಶ್ವಭಾರತಿ ವಿಶ್ವವಿದ್ಯಾಲಯ ಆ ಉದ್ದೇಶವನ್ನು ಸಾಧಿಸುವುದೆಂದು ಕನಸು ಕಂಡರು. ಪಾಶ್ಚಾತ್ಯರಿಂದ ನಾವು ವಿಜ್ಞಾನವನ್ನು ಕಲಿಯುವಂತೆ ಅವರು ನಮ್ಮಿಂದ ಆಧ್ಯಾತ್ಮವನ್ನು ಅರಿಯಬೇಕೆಂಬುದು ಠಾಕೂರರು ಆರಂಭಿಸಿ ದ ವಿಶ್ವಭಾರತಿ ವಿಶ್ವವಿದ್ಯಾಲಯದ ಮೂಲಮಂತವಾಗಿತ್ತು.ಆ ಆಶಯವನ್ನು ಈಡೇರಿಸುವಂತೆ ಅದನ್ನು ವ್ಯವಸ್ಥೆಗೊಳಿಸಿದ್ದರು.


ರವೀಂದ್ರ್ರರ ಶಿಕ್ಷಣದ ಕನಸು: ಶಿಕ್ಷಣ ಮಾನವನ ಪರಿಪೂರ್ಣ ವ್ಯಕ್ತಿತ್ವವನ್ನು ಪೆೋಷಿಸಿ ಬೆಳೆಸಬೇಕೆಂದರು. ವ್ಯಕ್ತಿ ಕೇವಲ ಜ್ಞಾನವೊಂದನ್ನು ಸಾಧಿಸಿದರೆ ಸಾಲದು . ಅವನ ಶೀಲಸಂಪನ್ನತೆಯೂ ವೃದ್ಧಿಯಾಗಬೇಕು. ವ್ಯಕ್ತಿ ತನ್ನ ದೇಶಕ್ಕೂ ಪಪಂಚಕ್ಕೂ ತನ್ನ ವಿಶಿಷ್ಟ ಕಾಣಿಕೆಯನ್ನು ಸಲ್ಲಿಸುವ ಶಕ್ತಿಯನ್ನೂ ಪಡೆಯಬೇಕು. ಆಗ ಮಾತ್ರ ಶಿಕ್ಷಣ ತನ್ನ ನಿಜವಾದ ಗುರಿಯನ್ನು ಸಾಧಿಸುತ್ತದೆ. ಇಂಥ ಶಿಕ್ಷಣಕ್ಕೆ ಪ್ರಾಚೀನ ಗುರುಕುಲ ಪದ್ಧತಿ ಆದರ್ಶವಾಯಿತು. ಆ ಕನಸು ನನಸಾದದ್ದು ಶಾಂತಿನಿಕೇತನದಲ್ಲಿ. ಸಾಹಿತ್ಯ, ಸಂಸ್ಕೃತಿ, ಕಲೆ, ಧರ್ಮ-ಇವುಗಳ ಮೇಲೆ ಅಪಾರ ಪ್ರೇಮ ಹೊಂದಿದ್ದರು. ಅವುಗಳಿಗೆ ತಮ್ಮ ವಿದ್ಯಾಲಯದಲ್ಲಿ ಪ್ರಧಾನ ಸ್ಥಾನ ಕಲ್ಪಿಸಿದರು. ವಿಜ್ಞಾನ ಮತ್ತು ಆಧ್ಯಾತ್ಮ ಪರಸ್ಪರ ವಿರುದ್ಧ ಪಂಥಗಳಲ್ಲವೆಂದೂ ಅವು ಜೀವನದ ಎರಡು ಕಣ್ಣುಗಳೆಂದೂ ಅವರು ಭಾವಿಸಿದ್ದರು. ಸರ್ವಾಧಿಕಾರ ಪ್ರವೃತ್ತಿಯನ್ನು ಅವರು ಸಹಿಸುತ್ತಿರಲಿಲ್ಲ. ರಾಷ್ಟ್ರದಲ್ಲಿ ವ್ಯಕಿಗೆ ತಕ್ಕಷ್ಟು ಸ್ವಾತಂತ್ರ್ಯವಿರುವುದು ಅಗತ್ಯವೆಂದು ಭಾವಿಸಿದ್ದ ಅವರು ಶಿಕ್ಷಣ ಸಂಸ್ಥೆ ಮಕ್ಕಳಿಗೆ ಸ್ವಾತಂತ್ರ್ಯವೀಯುವಂತೆ ಅಧ್ಯಾಪಕರಿಗೂ ಜ್ಞಾನಸ್ವಾತಂತ್ರ್ಯವನ್ನು ನೀಡಬೇಕೆಂದು ವಾದಿಸಿ, ತಮ್ಮ ಸಂಸ್ಥೆಗಳಲ್ಲಿ ಅದನ್ನು ಕಾರ್ಯರೂಪಕ್ಕಿಳಿಸಿದರು.


ಅವರು ಆರಂಭಿಸಿದ ವಿಶ್ವಭಾರತಿ 1956ರಿಂದ ಕೇಂದೀಯ ವಿಶ್ವವಿದ್ಯಾಲಯವಾಗಿ ಪರಿವರ್ತನೆಯಾಗಿ ಅದರ ಜನ್ಮದಾತರ ಆಶಯವನ್ನು ಈಡೇರಿಸುವಂತೆ ವ್ಯವಸ್ಥೆಗೊಂಡಿದೆ.


ಶಿಕ್ಷಕರು ಮತ್ತು ತರಬೇತಿ: ಉತ್ತಮ ಶಿಕ್ಷಕರಿಂದಲೇ ಮಕ್ಕಳ ಭವಿಷ್ಯವು ಸುಂದರವಾಗುವುದೆಂದು ತಿಳಿದ ಟ್ಯಾಗೋರ್ ಶಿಕ್ಷಕರಿಗೆ ತರಬೇತಿ ನೀಡಲು 'ವಿನಯ ಭವನ'ವನ್ನು ನಿರ್ಮಿಸಿದರು. ಶಿಕ್ಷಕರ ನ್ಶೆತಿಕ ಮಟ್ಟ, ಜ್ಞಾನದ ಹಂಬಲ, ಉತ್ತಮ ಹವ್ಯಾಸಗಳು, ಪ್ರಾಮಾಣಿಕತೆ ಮುಂತಾದವುಗಳು ವಿದ್ಯಾರ್ಥಿಗಳ ಉನ್ನತಿಗೆ ಸಾಧಕಗಳಾಗುವವು. ಹೊಸ ಶಿಕ್ಷಕರಿಗೆ ಮಕ್ಕಳ ಮನೋವೈಜ್ಞಾನಿಕ ಸ್ಥಿತಿಗತಿಗಳನ್ನು ಪರಿಚಯಿಸಬೇಕೆಂದು ಒತ್ತಿ ಹೇಳಿದರು. ಸರಿಯಾದ ಪದ್ಧತಿಯಿಂದ ಮಕ್ಕಳಿಗೆ ಕಲಿಸಬೇಕಾಗಿರುವುದರಿಂದ ರವೀಂದ್ರ್ರರು ತರಬೇತಿ ಪಡೆದ ಶಿಕ್ಷಕರನ್ನೇ ನೇಮಿಸಿದ್ದರು.


ಶಿಕ್ಷಕರಿಗೆ ತರಬೇತಿ ನೀಡುವಾಗ ಕಲೆ, ವಿಜ್ಞಾನಗಳಲ್ಲದೆ ಸಂಗೀತ, ಸಾಹಿತ್ಯ, ಚಿತ್ರಕಲೆ, ಸಂಸ್ಕೃತಿ, ನಾಟ್ಯಕಲೆ, ಶಿಲ್ಪಕಲೆ, ಕೈಗೆಲಸ, ಕಸೂತಿ ಮುಂತಾದವುಗಳ ಬಗ್ಗೆ ಮಾಹಿತಿ ನೀಡುವುದನ್ನು ಅನಿವಾರ್ಯವಾಗಿಸಿದರು. ಅದಕ್ಕೆ ಪೂರಕವಾದ ತರಬೇತಿ ಶಾಲೆಯನ್ನು ಆರಂಭಿಸಿದರು. ಪರಂಪರಾಗತ ಪದ್ಧತಿಗಳನ್ನು ವೈಜ್ಙಾನಿಕ ಪದ್ಧತಿಗಳನ್ನು ಸಮಾಲೋಚಿಸಿ, ವಿದ್ಯಾರ್ಥಿಗಳ  ಬುದ್ಧಿಮಟ್ಟ ಸುಧಾರಿಸಲು ಯೋಗ್ಯ ಪದ್ಧತಿ ರೂಪಿಸಲು ಶಿಕ್ಷಕರನ್ನು ತಯಾರು ಮಾಡಿದರು.


ಶಿಕ್ಷಕರು ಸಹ ವಿದ್ಯಾರ್ಥಿಗಳ ಜೊತೆ ವಾಸ ಮಾಡುವುದನ್ನು ಕಡ್ಡಾಯಗೊಳಿಸಿದರು. ಜೀವನದ ವ್ಯವಹಾರಗಳನ್ನು ವಿದ್ಯಾರ್ಥಿಗಳು ತಮ್ಮ ಪರಿಸರದಲ್ಲಿಯೇ ತಿಳಿಯುವಂಥ ವ್ಯವಸ್ಥೆ ಮಾಡಿದ್ದರು. ಮೌಲ್ಯಮಾಪನದ ಬಗೆಗೂ ಖಚಿತ ನಿಲುವನ್ನು ಹೊಂದಿದ್ದರು. ಸತ್ಯ, ನ್ಯಾಯ, ಔಚಿತ್ಯ, ಪ್ರಾಮಾಣಿಕತೆ, ಸರಳತೆಯುಳ್ಳ ಶಿಕ್ಷಕ ಮಾತ್ರವೇ ವಿದ್ಯಾರ್ಥಿಗಳಲ್ಲಿ ಮೌಲ್ಯಮಾಪನ ಮಾಡಬಲ್ಲನು. ಭಾಷಾ ಶುದ್ಧಿ, ನೇರ ಉತ್ತರಗಳು, ಖಚಿತ ಬರಹಗಳು ಕೇವಲ ಅಂಕಗಳಿಕೆಗಾಗಿ,ಪದವಿಗಾಗಿ ಇರದೆ ಜೀವನ ಮೌಲ್ಯ ಸಾಧಿಸುವುದಕ್ಕೆ ಸಾಧಕಗಳಾಗ ಬೇಕೆಂದು ಅವರು ಬಯಸಿದರು . ಜ್ಞಾನದ ದೇಗುಲದಲ್ಲಿ ನಿಮ್ಮ ಬುದ್ಧಿಮತ್ತೆಯಿಂದ ಕಂಗೊಳಿಸಿರಿ. ನಿಮ್ಮ ಸ್ಥಾನವನ್ನು ಗಳಿಸಿಕೊಳ್ಳಿರಿ, ನಿಮ್ಮ ಶಾಶ್ವತ ಬದುಕನ್ನು ಈ ರೀತಿಯಿಂದ ಪಡೆಯಿರಿ ಎಂಬುದು ಶಿಕ್ಷಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಟ್ಯಾಗೋರ್ ನೀಡಿದ ಸಂದೇಶವಾಗಿತ್ತು.


ವಿದ್ಯಾಸಂಸ್ಥೆಗಳಿಗೆ ಬಹುದೊಡ್ಡ ಕಟ್ಟಡಗಳು ಅನಗತ್ಯವೆಂದರು. ನಿಸರ್ಗದ ಮಡಿಲಲ್ಲಿ ಮರದ ನೆರಳೊ ಗುಡಿಸಲೊ ಆದರೂ ಸಾಕು. ಪ್ರಯೋಗಾಲಯ, ಮಳೆಬಿಸಿಲುಗಳಿಂದ ರಕ್ಷಣೆ-ಇವುಗಳಿಗೋಸ್ಕರ ಸರಳ ಕಟ್ಟಡಗಳ ಅಗತ್ಯ. ಅಷ್ಟೇ ಸರಳ ಭಾವನೆ ಅಲ್ಲಿನ ವಿದ್ಯಾರ್ಥಿಗಳ ಮತ್ತು ಅಧ್ಯಾಯಪಕರ ಜೀವನದ ಬಗ್ಗೆಯೂ ಅವರಿಗಿತ್ತು. ವಿದ್ಯಾರ್ಥಿಗಳು ಬ್ರಹ್ಮಚರ್ಯ ಜೀವನವನ್ನು ನಡೆಸಬೇಕು.ಅಧ್ಯಾಪಕರು ಮಕ್ಕಳನ್ನು ಗುರುಕುಲದ ಗುರುಗಳಂತೆ ಮಮತೆಯಿಂದ ನೋಡಬೇಕು . ಈ ಮಧುರ ಬಾಂಧವ್ಯ ಶಿಕ್ಷಣಕ್ಕೆ ತೀರಾ ಅಗತ್ಯವೆಂದು ಪ್ರತಿಪಾದಿಸಿದರು.


ಶಿಕ್ಷಣ ಸಂಸ್ಥೆಗಳಲ್ಲಿ ಮಕ್ಕಳ ಮೇಲೆ ಶಿಸ್ತಿನ ಹೆಸರಿನಲ್ಲಿ ಯಾವುದೇ ರೀತಿಯ ಕಟು ಒಲುಮೆಯನ್ನಾಗಲಿ ಒತ್ತಾಯವನ್ನಾಗಲಿ ಹೇರಲು ಒಪ್ಪಲಿಲ್ಲ. ನಿಷ್ಠೆಯ ಜೀವನವನ್ನು ಅನುಷ್ಠಾನಕ್ಕೆ ತಂದಿದ್ದರೂ ನಿಜವಾದ ಮಾನಸಿಕ ಸ್ವಾತಂತ್ರ್ಯಕ್ಕೆ ಅವಕಾಶ ಕಲ್ಪಿಸಿದ್ದರು. ಅಂಥ ಸ್ವಪೇರಣೆ ಮತ್ತು ಸ್ವಾತಂತ್ಯಗಳಿಂದಲೇ ನಿಜವಾದ ಮತ್ತು ಫಲದಾಯಕವಾದ ಶಿಸ್ತು ನೆಲಸಬಲ್ಲದೆಂದು ಅವರು ಭಾವಿಸಿದ್ದರು.ಆದ್ದರಿಂದಲೆ ಶಾಂತಿನಿಕೇತನದಲ್ಲಿ ಅಧ್ಯಯನದ ಬಗ್ಗೆ ಮಕ್ಕಳಿಗೆ ಅಂಥ ಸ್ವಾತಂತ್ರ್ಯಕ್ಕೂ ಸ್ವಪ್ರೇರಣೆಯಿಂದ ಚಟುವಟಿಕೆಗಳಲ್ಲಿ ತೊಡಗುವುದಕ್ಕೆ ಮುಕ್ತ ಅವಕಾಶ ನೀಡಿದರು.


ಬೋಧನ ಕ್ರಮದ ಬಗ್ಗೆಯೂ ಅವರು ತಮ್ಮದೇ ಆದ ನೀತಿಯನ್ನು ಅನುಷ್ಠಾನಕ್ಕೆ ತಂದಿದ್ದರು. ತೀರ ಎಳೆಯ ಮಕ್ಕಳಿಗೆ ಅಧ್ಯಾಪಕರು ಸಿದ್ಧಪಡಿಸಿಕೊಂಡು ಬಂದ ಪಾಠವನ್ನು ಕಲಿಸಲು ಯತ್ನಿಸುವುದು ತರವಲ್ಲ.  ಮಕ್ಕಳಿಗೆ ಬೇಸರವಾಗುವುದೆಂದು ಭಾವಿಸಿ ಅವರ ಆಸಕ್ತಿ, ಕುತೂಹಲ, ಉತ್ಸಾಹಗಳನ್ನು ಅನುಸರಿಸಿ ಕಲಿಯಲು ಅವಕಾಶವಿರಬೇಕೆಂದು ಅಲ್ಲಿನ ಪಾಠಪ್ರವಚನಗಳಲ್ಲಿ ಕಲಿಯುವ ವಿಷಯದ ಬಗ್ಗೆ ತಕ್ಕಷ್ಟು ಸ್ವಾತಂತ್ಯ ನೀಡಿದ್ದರು. ವೇಳಾಪಟ್ಟಿಯಿದ್ದರೂ ಮಕ್ಕಳು ಬೇಸರ ಜಿಗುಪ್ಸೆಗಳಿಂದ ಆಸಕ್ತಿ ಕಳೆದುಕೊಳ್ಳುವರೆಂದು ಅದನ್ನು ಕಡ್ಡಾಯ ಮಾಡಿರಲಿಲ್ಲ. ಕಲಿಯುವುದರ ಮುಂದೆ ಕೃತಕ ಉದ್ದೇಶಗಳು ಇರಬಾರದು. ಮಕ್ಕಳು ಸ್ವಾಭಾವಿಕ ಆಸಕ್ತಿಗಳಿಂದ ಪೇರಿತರಾಗಿ ಕಲಿಯಬೇಕು.ಸುಮ್ಮನೆ ಕುಳಿತುಕೊಳ್ಳುವುದಕ್ಕಿಂತ ಮಾಡಿ, ನೋಡಿ, ಆಡಿ, ಹಾಡಿ ಕಲಿಯುವುದು ಹೆಚ್ಚು ಪರಿಣಾಮಕಾರಿಯಾದುದು . ಪಠ್ಯಪುಸಕ್ತಗಳನ್ನು ಬರೆಯುವಾಗ, ಅದನ್ನು ಬಳಸುವಾಗ ವಿದ್ಯಾರ್ಥಿಗಳ ಮುಂದೆ ದ್ವೇಷಾಸೂಯೆಗಳ ಕ್ಷುಲ್ಲಕ ವಿಷಯಗಳನ್ನು ಬಿತ್ತಬಾರದು. ವಿಶ್ವಬಾಂಧವ್ಯ ಬೆಳಸಲು ಅದು ಅಡ್ಡಿಯಾಗುವುದರಿಂದ ಮಕ್ಕಳ ಮನಸ್ಸು ಮುಂದೆ ಮಹಾಯುದ್ಧಗಳತ್ತ ಹರಿಯುತ್ತದೆ ಎಂದು ಭಾವಿಸಿದ್ದರು. ರವೀಂದ್ರ್ರರು ಆಧ್ಯಾತ್ಮಿಕಕ್ಕೆ ಹೆಚ್ಚು ಒತ್ತು ಕೊಟ್ಟಿದ್ದರು. ಆದರೆ ಅವರು ಎಂದೂ ಪಲಾಯನಸೂತ ಹಿಡಿದವರಲ್ಲ. ಅವರು ನಿಜವಾದ ಅರ್ಥದಲ್ಲಿ ಕರ್ಮವಾದಿಗಳು. ಪ್ರತಿಯೊಬ್ಬರೂ ಕಾರ್ಯತತ್ಪರರಾಗಿರಬೇಕೆಂಬ ದೃಷ್ಟಿ ಅವರದು. ಈ ತತ್ತ್ವವನ್ನು ಬೋಧನಕ್ರಮಕ್ಕೂ ಅವರು ಅನ್ವಯಿಸಿದರು.

 

ಬೋಧನ ಯ ವಿಧಾನದಲ್ಲಿ ನಿಸರ್ಗವಾದಿಗಳಾಗಿದ್ದ ರವೀಂದ್ರರು ,ಶಿಕ್ಷಣದ ಗುರಿ ಮಾಜಿಕವಾದುದೆಂದು ಭಾವಿಸಿದ್ದರು. ಸಮಾಜ ಶಿಕ್ಷಣದಿಂದ ವ್ಯಕ್ತಿಯ ಪರಿಪೂರ್ಣ ಬೆಳವಣಿಗೆಗೆ ಅವಕಾಶ ಕಲ್ಪಿಸಬೇಕೆಂಬುದು ಅವರ ಅಭಿಲಾಷೆ. ಜೊತೆಗೆ ತನ್ನ ಸಿದ್ಧಿಸಂಸ್ಕಾರಗಳೆಲ್ಲ ಸಮಾಜದ ಅಭಿವೃದ್ಧಿಗಾಗಿ ಎಂದು ಭಾವಿಸಿ, ಕೆ ಲಾದಕಾಣಿಕೆಯನ್ನು ಸಲ್ಲಿಸಬೇಕು ಎಂದರು.


ಬೋಧನ ಮಾಧ್ಯಮದ ಬಗ್ಗೆ ಇಂದಿಗೂ ವಾದವಿವಾದಗಳು ನಡೆಯುತ್ತಿವೆ. ರವೀಂದ್ರ್ರರು ಅದರ ಬಗ್ಗೆ ಖಚಿತವಾದ ಅಭಿಪ್ರಾಯ ತಳೆದಿದ್ದರು. ಮಕ್ಕಳು ಮೊದಲಿನಿಂದಲೂ ಮಾತೃಭಾಷೆಯಲ್ಲಿ ಕಲಿಯಬೇಕು. ವಿಶ್ವವಿದ್ಯಾಲಯದಲ್ಲೂ ಅದು ಭೋದನ ಮಾಧ್ಯಮವಾಗಬೇಕು. ಮಾತೃಭಾಷೆಯಲ್ಲಿ ತಕ್ಕ ಪಠ್ಯಪುಸ್ತಕಗಳಿಲ್ಲ ಎಂದು ವಿರೋಧಿಸಬಾರದು. ಅನ್ಯಭಾಷೆಯ ಮೂಲಕ ಬೋಧಿಸುವುದಾಗಲಿ, ಕಲಿಯುವುದಾಗಲಿ ಸತ್ತ್ವಹೀನವೂ ಪರಿಣಾಮರಹಿತವೂ ಆಗುವುದೆಂದು ತಮ್ಮ ಅನುಭವದಿಂದ ಅರಿತಿದ್ದರು. ಬಾಲ್ಯದಲ್ಲಿ, ತಾರುಣ್ಯದಲ್ಲಿ ಹೆಚ್ಚಿನ ಪುಸ್ತಕಗಳನ್ನು ಓದಲು ವಿದ್ಯಾರ್ಥಿಗಳಿಗೆ ಕೊಡಬೇಕು.  ಭಾಷಾಬೋಧನೆಗೆ ತೊಡಗುವಾಗ ಭಾಷೆಯನ್ನು ಮೊದಲು ಕಲಿಸಿ ಅದರ ವ್ಯಾಕರಣ, ಭಾಷಾಶಾಸ್ತ್ರಗಳನ್ನು ನಂತರ ಕಲಿಸುವಂತೆ ಹೇಳುತ್ತಿದ್ದರು. ಮಾತೃಭಾಷೆಯಲ್ಲಿರುವ ರಾಮಾಯಣ ಮಹಾಭಾರತಾದಿ ಗ್ರಂಥಗಳ ಅಧ್ಯಯನದಿಂದ ವಿದ್ಯಾರ್ಥಿಗಳು ಧರ್ಮ , ಸಂಸ್ಕೃತಿ, ತತ್ವ ದೃಷ್ಟಿಗಳಲ್ಲಿ ಅಭಿಮಾನ ತಾಳುವರೆಂದು ನಂಬಿದ್ದರು. ಪ್ರೀತಿ, ಸತ್ಯ, ಉಪಕಾರ, ಮಾನವೀಯತೆ- ಇವುಗಳ ಮಹತ್ವವನ್ನು ಮಕ್ಕಳಿಗೆ ತಿಳಿಸಿ ಕೊಡುವುದೇ ಶಿಕ್ಷಣದ ಮಹತ್ವವೆಂದು ತಿಳಿಸಿದರು.


ಟ್ಯಾಗೂರೆ ಶಿಕ್ಷಣ ದೃಷ್ಟಿ ಆಧುನಿಕ ಭಾರತದಲ್ಲಿ ರಾಷ್ಟ್ರೀಯತೆಯ ಹೊಸ ತಿರುವನ್ನು ಮೂಡಿಸಿತು. ಭಾರತೀಯ ಧರ್ಮ, ಸಂಸ್ಕೃತಿ, ಸಾಹಿತ್ಯಗಳ ಬುನಾದಿಯ ಮೇಲೆ ಶಿಕ್ಷಣವನ್ನು ವ್ಯವಸ್ಥೆಗೊಳಿಸುವ ನೂತನ ಪ್ರವೃತ್ತಿ ಆರಂಭ ಮಾಡಿದರು. ಇದು ಭಾರತೀಯ ಶಿಕ್ಷಣ ರಂಗದಲ್ಲಿ ಪರಿವರ್ತನೆಗಳಿಗೆ ಅವಕಾಶ ಒದಗಿಸಿತು. ಸಂಕುಚಿತ ಉದ್ದೇಶಗಳ ಬದಲು, ವಿಶಾಲ ಉದ್ದೇಶದ ಆಧಾರದ ಮೇಲೆ ವಿಶ್ವಬಾಂಧವ್ಯವನ್ನು ಶಿಕ್ಷಣ ಬೆಳೆಸಬೇಕೆಂಬ ನೂತನ ಉದ್ದೇಶವನ್ನು ಪಸರಿಸಿದರು. ಈ ಎಲ್ಲಾ ಅಂಶಗಳನ್ನು ಗಮನಿಸಿದಾಗ ಟ್ಯಾಗೋರ್ ಭಾರತದಲ್ಲೇ ಅಲ್ಲದೇ ವಿಶ್ವದಲ್ಲಿಯೇ ಒಬ್ಬ ಶ್ರೇಷ್ಠ ಶಿಕ್ಷಕ, ಚಿಂತಕ, ಶಿಕ್ಷಣ ಪ್ರೇಮಿ, ತಜ್ಞ, ಹಾಗೂ ಮಕ್ಕಳ ಮಿತ್ರ ಎನಿಸಿದ್ದಾರೆ.

logoblog

Thanks for reading ಟ್ಯಾಗೋರ್ ಮತ್ತು ಶಿಕ್ಷಣ

Previous
« Prev Post

No comments:

Post a comment