Goslink

Goslink is providing you latest news, articles, reviews.

Tuesday, 19 January 2021

ಶಿಷ್ಯವತ್ಸಲ ರಾಮನ್

  Govt Orders Link       Tuesday, 19 January 2021

                                                             

  ಗದ್ಯಪಾಠ - 6                                                                                                                                        ಶಿಷ್ಯವತ್ಸಲ ರಾಮನ್

1.  ರಾಮನ್ ಅವರು ಯಾರೊಬ್ಬರ ಶಿಫಾರಸ್ಸು ನಂಬಿ ಶಿಷ್ಯರನ್ನು ಆಯ್ಕೆ ಮಾಡಿಕೊಳ್ಳುತ್ತಿರಲಿಲ್ಲ ಏಕೆ?

ರಾಮನ್   ಅವರು   ತಮ್ಮ   ಬಳಿ   ಶಿಷ್ಯವೃತ್ತಿಯನ್ನು   ಕೈಗೊಳ್ಳಲು   ಬಂದವರನ್ನು   ಕಠಿಣ   ಶಿಕ್ಷೆಗೆ ಒಳಪಡಿಸುತ್ತಿದ್ದರು.ಅವರಿಗೆ ವಿದ್ಯಾರ್ಥಿಯ ಅಂಕ ಮುಖ್ಯವಾಗಿರಲಿಲ್ಲ. ವಿದ್ಯಾರ್ಥಿಯು ವಿಷಯವನ್ನು ಚೆನ್ನಾಗಿ ತಿಳಿದುಕೊಂಡಿದ್ದಾನೆಯೇ,  ಅವನ ಬುದ್ಧಿ ಹರಿತವಾಗಿದೆಯೇ, ಅವನಲ್ಲಿ ಉತ್ಸಾಹವಿದೆಯೇ, ಕಷ್ಟಪಟ್ಟು ಕೆಲಸ ಮಾಡುವ  ದೃಢ  ನಿಶ್ಚಯ  ಅವನಲ್ಲಿ  ಕಾಣುವುದೇ  ಎಂದೆಲ್ಲ  ಪರೀಕ್ಷಿಸಿ  ನೋಡಿ  ಶಿಷ್ಯರನ್ನು  ಆಯ್ಕೆ ಮಾಡಿಕೊಳ್ಳುತ್ತಿದ್ದರು.

2.  ರಾಮನ್ ಅವರು ಸಂಶೋಧನೆಯ ವಿಚಾರದಲ್ಲಿ ತಮ್ಮ ಶಿಷ್ಯರಿಂದ ಏನನ್ನು ನಿರೀಕ್ಷಿಸುತ್ತಿದ್ದರು?

ರಾಮನ್   ಅವರು   ತಮ್ಮ   ಶಿಷ್ಯರು   ನಡೆಸುವ   ಸಂಶೋಧನೆ   ಅತ್ಯುತ್ತಮ   ಮಟ್ಟದಲ್ಲಿರಬೇಕೆಂದು ಬಯಸುತ್ತಿದ್ದರು.ಇತರರನ್ನು   ಸುಮ್ಮನೆ   ಅನುಕರಿಸುವುದು   ಸರ್ವಧಾ   ಕೂಡದು,   ಸ್ವಂತಿಕೆ   ಇರಬೇಕು, ಹೊಸದಾರಿಯನ್ನು  ಗುರುತಿಸಿ  ಮುಂದುವರಿಯಬೇಕು  ಎಂದು  ಒತ್ತಿ ಒತ್ತಿ ಹೇಳುತ್ತಿದ್ದರು.    ಈ ಬಗೆಯ ಸಂಶೋಧನೆಯನ್ನು ಅವರು ನಿರೀಕ್ಷಿಸುತ್ತಿದ್ದರು

3.  ರಾಮನ್ ಅವರು ಶಿಷ್ಯರ ಸೆಮಿನಾರುಗಳನ್ನು ಏಕೆ ತಪ್ಪಿಸಿಕೊಳ್ಳುತ್ತಿರಲಿಲ್ಲ?

ರಾಮನ್ ಅವರು ತಮ್ಮ ಶಿಷ್ಯರು ಯಾವ ರೀತಿ ಸಂಶೋಧನೆಯಲ್ಲಿ ಮುಂದುವರಿಯಬೇಕು ಎನ್ನುವ ಬಗ್ಗೆ ಸಲಹೆ ಕೊಡುತ್ತಿದ್ದರು.ಶಿಷ್ಯರ ಸಂದೇಹಗಳನ್ನು ಪರಿಹರಿಸುತ್ತಿದ್ದರು ಸೆಮಿನಾರ್ಗಳಲ್ಲಿ ಭಾಗವಹಿಸಿ ಮೈಯೆಲ್ಲ ಕಿವಿಯಾಗಿ, ಶಿಷ್ಯರು ಕೊಟ್ಟ ಪ್ರತಿ ವಿವರವನ್ನೂ ಗ್ರಹಿಸುತ್ತಿದ್ದರು.ಸಂದೇಹ  ಪರಿಹಾರ ಮಾಡಲು ತಮ್ಮದೇ ಸಲಹೆಗಳನ್ನು ಕೊಡುತ್ತಿದ್ದರು.

4.  ರಾಮನ್ ಅವರು ಭೌತಶಾಸ್ತ್ರ ವಿಶಾರದರಲ್ಲದೆ ಗಣಿತಜ್ಞರೂ ಆಗಿದ್ದರು ಎಂಬುದನ್ನು ಹೇಗೆ ತಿಳಿದುಕೊಳ್ಳಬಹುದು?

ರಾಮನ್  ಮತ್ತು  ಅವರ  ಶಿಷ್ಯರ  ನಡುವೆ  ನಡೆಯುತ್ತಿದ್ದ  ವಾದ  ವಿವಾದಗಳು  ಹೊಸತತ್ತ್ವವನ್ನು ಹೊರಗೆಡುಹುತ್ತಿದ್ದವು.ಗಣಿತದಲ್ಲಿ  ಗಣ್ಯರಾಗಿದ್ದ ರಾಮನ್ರ ಶಿಷ್ಯ ನರೇಂದ್ರನಾಥರೊಡನೆ  ಚರ್ಚಿಸುತ್ತಾ ನನ್ನ ಮನಸ್ಸಿಗೆ  ಹಾಗೆ  ತೋರುತ್ತದೆ,  ಇದನ್ನೇ  ಗುಣಿಸಿನೋಡು  ಎಂದರು.ಆತ  ಗುಣಾಕಾರ  ಮಾಡಿ,  ಗಣಿತದ ಸಾಕ್ಷ್ಯವನ್ನು ಒದಗಿಸಿದಾಗ ಅವರ ಆನಂದಕ್ಕೆ ಪಾರವೇ ಇರಲಿಲ್ಲ ಇದು ಮುಂದೆ ರಾಮನ್ನಾಥ್ ಸಿದ್ಧಾಂತ ಎಂದು ಪ್ರಸಿದ್ಧಿಯಾಯಿತು.ಇದರಿಂದ ತಿಳಿಯುತ್ತದೆ ಅವರು ಒಬ್ಬ ಗಣಿತಜ್ಞರೂ ಆಗಿದ್ದರೆಂದು.

                                                                        ಗದ್ಯಪಾಠ - 7

                                                                        ನನ್ನ ಗೋಪಾಲ                                                           

1.  ಮಗನು ಬೇಗನೆ ಏಳಬೇಕೆಂದು ತಾಯಿ ಬಯಸುವುದೇಕೆ?

ತನ್ನ ಮಗನು ಬೇಗ ಎದ್ದು ಸ್ನಾನ ಮಾಡಿ ಗೋಪಾಲನ ಪೂಜೆಗೆ ಹೂವು ತರಬೇಕು. ಸರಿಯಾದ ಸಮಯಕ್ಕೆ ಶಾಲೆಗೆ ಹೋಗಬೇಕು.ಆದ್ದದರಿಂದ ಬೇಗನೆ ಏಳಬೇಕೆಂದು ಗೋಪಾಲನ ತಾಯಿಯು ಬಯಸುತ್ತಾಳೆ.

2.  ತಾಯಿಯು ಜೊತೆಗಿದ್ದರೆ ಬನವೇ ಸೊಗಸು ಎಂದು ಮಗನಿಗನಿಸಿದ್ದು ಏಕೆ?

ಗೋಪಾಲನು ಬನದ ಸೊಗಸನ್ನು ವಣರ್ಿಸುತ್ತಾ ಎಷ್ಟು ಆನಂದವಾಗಿದೆ ಆ ಬನ. ಅಲ್ಲಿ ಮಲ್ಲಿಗೆ, ಕೇದಗೆ, ಸಂಪಿಗೆ,  ಪರ್ವತಬಾಳೆ  ಗೋರಂಟಿಯ  ಹೂಗಳು  ಸಮೃದ್ಧವಾಗಿ  ಅರಳಿ  ಪರಿಮಳವನ್ನು  ಬೀರುತ್ತವೆ.ಅವು ಸಾವಿರಾರು  ಕಾಮನಬಿಲ್ಲುಗಳು  ಸೇರಿ  ಕುಣಿದಂತೆ  ಕಾಣುತ್ತವೆ.  ಹಕ್ಕಿಗಳ  ಇಂಪಾದ  ಗಾನ,  ಸೂರ್ಯನ ಹೊಂಬೆಳಕು, ಹಸುರಾದ ಬನವೇ ಸೊಗಸೆಂದು ಭಾಸವಾಗಿ ನೀನು ಜೊತೆಗಿದ್ದರೆ ಸೊಗಸೆಂದು ಗೋಪಾಲನು ಹೇಳಿದ್ದಾನೆ.

3.  ತಾಯಿಗೆ ಬಡತನದ ನೆನಪಾದುದು ಯಾವಾಗ?

ಗೋಪಾಲನು ತನ್ನ ತಾಯಿಗೆ ಹೊಸ ಪಂಚೆಯೊಂದನ್ನು ಕೊಡಿಸಮ್ಮಾ ಎಂದು ಕೇಳಿದನು.ನನ್ನ ಗೆಳೆಯರು ಹೊಸ ಬಟ್ಟೆಯನ್ನು ಹಾಕಿಕೊಂಡು ಬರುತ್ತಾರೆ.ಅವರು ನನ್ನನ್ನು ನೋಡಿ ಹಾಸ್ಯ ಮಾಡುತ್ತಾರೆ ಆದ್ದರಿಂದ ನನಗೊಂದು ಹೊಸ ಪಂಚೆಯನ್ನು ಕೊಡಿಸೆಂದು ಕೇಳಿದಾಗ ತಾಯಿಗೆ ತನ್ನ ಬಡತನದ ನೆನಪಾಯಿತು.

4.  ದೇವರನ್ನು ತಿಳಿಯಲು ಕಷ್ಟಪಡುವವರು ಯಾರು?

ದೇವರನ್ನು ತಿಳಿಯಲು ಕಷ್ಟಪಡುವವರು ತಪಸ್ವಿಗಳು, ಯೋಗಿಗಳು.ತಪಸ್ವಿಗಳು ಜ್ಞಾನದ ಮೆಟ್ಟಿಲನ್ನು ಮುಟ್ಟಲು ಯುಗಗಳು ತಪಸ್ಸು ಮಾಡುವರು. ಯೋಗಿಗಳು ದೇವರನ್ನು ಕಾಣಲು ಜನುಮ ಜನುಮದಲಿ ಸಾಧನೆಯನ್ನು ಮಾಡುವರು ಆದರೆ ದೇವರನ್ನು ಕಾಣಲು ಒಲುಮೆ ಒಂದಿದ್ದರೆ ಸಾಕು.

                                                                        ಪೋಷಕ ಅಧ್ಯಯನ

                                                                ಜೋಯಿಸರ ಕುರ್ಚಿ(ಕಥೆ)

1.  ಯಾವಾಗ ಜೋಯಿಸರ ಮಾತು ವೇದವಾಕ್ಯವಾಗುತ್ತಿತ್ತು?

ಎರಡೋ ಮೂರೋ ತಲೆಮಾರುಗಳಷ್ಟು ಹಳೆಯ ಕುರ್ಚಿಯಲ್ಲಿ ಕುಳಿತು ಜೋಯಿಸರು ಒಂದು ಮಾತನಾಡಿದರೆ ಅವರ ಮಾತು ವೇದವಾಕ್ಯವಾಗುತ್ತಿತ್ತು.ಇದು ಅವರ ಅಜ್ಜನ ತಪಸ್ಸಿನ ಫಲ, ಅವರ ವಿದ್ವತ್ತಿನ ಫಲಶ್ರುತಿಯಂತೆ ಇತ್ತು.ಇದರಿಂದಾಗಿ ಅಜ್ಜನಿಗೆ ದೊರೆತ ಗೌರವ ಅವರ ಕುರ್ಚಿಗೂ ಸಲ್ಲುತ್ತಿತ್ತು.

2.  ಕುರ್ಚಿಯ ಬಗ್ಗೆ ಜೋಯಿಸರ ಹೆಂಡತಿಗೆ ಇರುವ ಭಾವನಾತ್ಮಕ ಸಂಬಂಧ ಎಂತಹುದು?

ಜೋಯಿಸರ ಹೆಂಡತಿಗೆ ಆ ಕುರ್ಚಿಯ ಮೇಲೆ ಬಹಳ ನಂಬಿಕೆ, ಯಾರಾದರೂ ನಿಮಿತ್ಯ ಕೇಳಿದರೆ ಜಾತಕತೋರಿಸಿದರೆ, ನಾಲ್ಕು ಒಳ್ಳೆಯ ಮಾತು ಹೇಳಿದರೆ 'ಅದೆಲ್ಲ ಹಿರಿಯರ ಪುಣ್ಯ' ಎಂದು ಹೇಳಿ ಮನಸ್ಸಿನಲ್ಲಿಯೇ ಆಕುರ್ಚಿಗೆ ನಮಸ್ಕರಿಸುತ್ತಿದ್ದರು.ಜೋಯಿಸರನ್ನು ಬಿಟ್ಟು ಯಾರಾದರು ಆ ಕುರ್ಚಿಯ ಮೇಲೆ ಕುಳಿತರೆ ಅವರನ್ನು ಕೋಪದಿಂದ ಎಬ್ಬಿಸಿಬಿಡುತ್ತಿದ್ದರು.

3.  ಹೆಗಡೆಯವರ ಹೆಂಡತಿ ಅನ್ನಪೂರ್ಣೆ ಕೆಟ್ಟವಳು ಎನಿಸಿದ್ದು ಏಕೆ?

ಅನ್ನಪೂರ್ಣೆ ಹೆಗಡೆಯವರಿಗೆ ಎರಡನೇ ಹೆಂಡತಿ.ಇವಳಿಗೆ ತಮ್ಮ ಪತಿಯ ಮೊದಲನೆ ಪತ್ನಿಯ ಮಗಳನ್ನು ಕಂಡರೆ  ಆಗುತ್ತಿರಲಿಲ್ಲ.  ಆ  ಹೆಣ್ಣು  ವು ಗಳಿಗೆ  ಕಿರುಕುಳ  ನೀಡಿ  ಶಪಿಸುತ್ತಿದ್ದಳು.ಸತ್ತಿರುವ  ಆ  ಹೆಣ್ಣುಮಗಳ ತಾಯಿಯನ್ನು ಸಹ ಬಯ್ಯುತ್ತಿದ್ದಳು.ಇದರಿಂದಾಗಿ ಅನ್ನಪೂರ್ಣೆ ಕೆಟ್ಟವಳೆನಿಸಿದ್ದಳು.

4.  ಲೇಖಕರು ಅನ್ನಪೂರ್ಣೆಗೆ ಹೇಳಿದ ಮಾತು ಕೇವಲ ಕೌನ್ಸಿಲಿಂಗ್ ಆಗಿತ್ತು. ಹೇಗೆ?

ಲೇಖಕರು    ಮೊದಲೇ    ಅವರ    ಅಕ್ಕಳಿಂದ    ಅನ್ನಪೂರ್ಣೆಯ    ಸಂಪೂರ್ಣ    ವಿಷಯವನ್ನು ತಿಳಿದುಕೊಂಡಿದ್ದರು.ಅನ್ನಪೂರ್ಣೆಯವರ ಮನೆ ವಿಚಾರ ಏನೂ ತಿಳಿಯದಂತೆ ವರ್ತಿಸಿ ಅವರ ಮನೆಯಲ್ಲಿರುವ ಹೆಣ್ಣುಮಗಳನ್ನು ಸರಿಯಾಗಿ ನೋಡಿಕೊಂಡರೆ ಮನೆಗೆ ಬಂದಿರುವ ದರಿದ್ರವೆಲ್ಲಾ ನಿವಾರಣೆಯಾಗುವುದೆಂದು  ಹೇಳಿದರು.ಅನ್ನಪೂರ್ಣೆ ಇದು ನಿಜವೆಂದು ನಂಬಿ ಆ ಹೆಣ್ಣುಮಗಳನ್ನು ಚೆನ್ನಾಗಿ ನೋಡಿಕೊಳ್ಳತೊಡಗಿದಳು.

5.  ನನ್ನ ಪಾಲಿನ ದೇವರು ನೀವು ಎಂದು ಅಪರಿಚಿತ ಹೆಣ್ಣೊಬ್ಬಳು ಲೇಖಕರಿಗೆ ನಮಸ್ಕರಿಸಿದ್ದೇಕೆ?

ಲೇಖಕರು  ಹೇಳಿದ  ಮಾತಿನಿಂದ  ಹೆಗಡೆಯವರ  ಎರಡನೆ  ಹೆಂಡತಿ  ಆ  ಹೆಣ್ಣುಮಗಳನ್ನು  ಚೆನ್ನಾಗಿ ನೋಡಿಕೊಳ್ಳತೊಡಗಿದಳು  ಇದರಿಂದ  ಮನೆಯಲ್ಲಿ  ಹೆಗಡೆಯವರು  ಮುಟ್ಟಿದ್ದೆಲ್ಲಾ  ಚಿನ್ನವಾಯಿತು. ಮೊದಲನೆ ಹೆಂಡತಿ ಮಗಳಿಗೆ ಮದುವೆ ಮಾಡಿದರು ಅವಳು ಬಹಳ ಸಂತೋಷದಿಂದ ಇದ್ದಳು.ನನ್ನ ಬಾಳನ್ನು ಹಸನು ಮಾಡಿದ  ಲೇಖಕರಿಗೆ  ಗೌರವವನ್ನು  ತೋರಿಸಲು  ಕೃತಜ್ಞತೆಯಿಂದ  ಆ  ಹೆಣ್ಣುಮಗಳು  ಅವರ  ಕಾಲಿಗೆ ನಮಸ್ಕರಿಸಿದಳು.

6.  ಜೋಯಿಸರ ಕುರ್ಚಿ ನಿಜವಾಗಿಯೂ ಅಸಾಮಾನ್ಯವೇ?

ಜೋಯಿಸರು  ಎರಡೋ ಮೂರೋ ತಲೆಮಾರುಗಳಷ್ಟು  ಹಳೆಯ ಕುರ್ಚಿಯಲ್ಲಿ ಕುಳಿತು ಒಂದು ಮಾತು ಹೇಳಿದರೆ ಆಸ್ತಿಕರಿಗೆಲ್ಲ ಅದು ವೇದವಾಕ್ಯ ಆಗುತ್ತಿತ್ತು. ಇದಕ್ಕೆ ಅಲ್ಲಿನ ಸ್ಥಳಪುರಾಣ ಅಜ್ಜನ ತಪಸ್ಸು, ಅವರ ವಿದ್ವತ್ತು ಕಾರಣವಾಗಿತ್ತು.ಅವರ ಮಾತು ಬಹಳ ತೂಕದಿಂದ ಕೂಡಿರುತ್ತಿತ್ತು. ಇದರಿಂದಾಗಿ ಅಜ್ಜನಿಗೆ ಸಲ್ಲುತ್ತಿದ್ದ ಗೌರವ ಆ ಕುರ್ಚಿಗೂ ಸಲ್ಲುತ್ತಿತ್ತು ಇದು ಜನರ ನಂಬಿಕೆಯ ವಿಚಾರವಾಗಿತ್ತು.

7.  ನಿಮಿತ್ಯ ಹೇಳುವಲ್ಲಿ ಲೇಖಕರ ಜಾಣ್ಮೆಯನ್ನು ಗುರುತಿಸಿ.

ಲೇಖಕರಿಗೆ ಕುರ್ಚಿಯ ಮೇಲೆ ಕುಳಿತು ನಿಮಿತ್ಯ ಹೇಳುವ ಅವಕಾಶ ದೊರೆಯಿತು.ಮಲೆನಾಡಿನ ಕಡೆ ಕೆಲವರಿಗೆ ನಿಮಿತ್ಯ  ಹೇಳುವುದು  ಅವರ  ಮನೆತನದಿಂದ  ಬಂದ  ರೂಢಿಯಾಗಿತ್ತು.ಲೇಖಕರು  ಈ  ಅವಕಾಶವನ್ನು ಬಳಸಿಕೊಂಡು ಬಹಳ ಜಾಣ್ಮೆಯಿಂದ ಕೌನ್ಸಿಲಿಂಗ್ ಮಾಡಿ ತಮ್ಮ ಮಾತಿನ ಜಾಣ್ಮೆಯಿಂದ ಜನರನ್ನು ಬದಲಾವಣೆ ಮಾಡುತ್ತಿದ್ದರು.

logoblog

Thanks for reading ಶಿಷ್ಯವತ್ಸಲ ರಾಮನ್

Previous
« Prev Post

No comments:

Post a comment