Goslink

Goslink is providing you latest news, articles, reviews.

Friday, 15 January 2021

ಮಕ್ಕಳಲ್ಲಿ ಓದುವ ಹವ್ಯಾಸ ಬೆಳೆಸುವುದು ಹೇಗೆ

  Govt Orders Link       Friday, 15 January 2021
                                            

     ಮಕ್ಕಳಲ್ಲಿ ಓದುವ ಹವ್ಯಾಸ ಬೆಳೆಸುವುದು ಹೇಗೆ?
                                                                                                                         - ಡಾ.ಎಂ.ಎಸ್. ಶ್ರೀಧರ್
ಓದುವ ಹವ್ಯಾಸ ಕೆಲವೇ ವಿದ್ಯಾವಂತರಲ್ಲಿ ಮಾತ್ರ ವ್ಯಾಪಕವಾಗಿದೆ ಎನ್ನುವುದು ವಿಷಾದನೀಯ. ನಮ್ಮದು ಓದುವ ಮತ್ತು ಲಿಖಿತ ಸಂಹವನ ಸಮಾಜ ಎನ್ನುವುದಕ್ಕಿಂತ ಮಾತಿನ/ಹರಟೆ ಸಮಾಜ ಎನ್ನುವುದು ಹೆಚ್ಚು ಸೂಕ್ತ. ಸಾಮಾಜಿಕ ಘನತೆಗಾಗಿ ಮತ್ತು ಹರಟೆಗಾಗಿ ಜನಪ್ರಿಯ ಪುಸ್ತಕಗಳನ್ನು ಮತ್ತು ಘನತೆ ವ್ಯಕ್ತವಾಗುವಂತಹ classicಗಳನ್ನು ಇತರರಿಗೆ  ಹೇಳುವುದಕ್ಕಾಗಿಯೆ ಓದುವ ಒಂದು ವರ್ಗ ಈ ಮೂಲಕ ತಮ್ಮ ಸಾಮಾಜಿಕ ಗೌರವವನ್ನು ಹೆಚ್ಚಿಸಿಕೊಳ್ಳಬಯಸುತ್ತದೆ.

ಇ-ಮಾಧ್ಯಮಗಳ  ಆಕರ್ಷಣೆ,  ಓದುವ  ಹವ್ಯಾಸದ ಅನಿವಾರ್ಯತೆಯನ್ನು ಸೃಷ್ಟಿಸದ ಶಿಕ್ಷಣ ಕ್ರಮ ಹಾಗೂ ವಾಚನ ಸಾಮಗ್ರಿ ಮತ್ತು ಓದುಗ ಸ್ನೇಹಿ ಗ್ರಂಥಾಲಯಗಳ ಕೊರತೆ ಎಲ್ಲವೂ ಸೇರಿ ಬಹುಪಾಲು ಅಕ್ಷರಸ್ಥರನ್ನು ಕ್ರಮಬದ್ಧ ಓದಿನಿಂದ ದೂರವಿಟ್ಟಿವೆ. ಕಾರ್ಯಾನುಕೂಲಾರ್ಥ ಅಥವ ಉದ್ಯೋಗ ನಿಮಿತ್ತ ಓದುವವರನ್ನು ಹೊರತುಪಡಿಸಿದರೆ,  ಜ್ಞಾನಾರ್ಜನೆಗಾಗಿ  ವೈಯಕ್ತಿಕ  ಓದಿನಲ್ಲಿ ತೊಡಗುವವರು ಬಹಳ ಕಡಿಮೆ. ಈ ನಿಟ್ಟಿನಲ್ಲಿ ಮೂಲ ಪ್ರಯತ್ನ ಮನೆಯಿಂದ ಆರಂಭವಾಗಿ, ಶಾಲೆ, ಗ್ರಂಥಾಲಯ, ಮಾಧ್ಯಮಗಳೆಲ್ಲ ಸಕ್ರಿಯ ಪಾತ್ರವಹಿಸಬೇಕಿದೆ. ಮಕ್ಕಳಲ್ಲಿ 8 ರಿಂದ 13 ವಯೋಮಾನ ಓದುವ ಹವ್ಯಾಸ ಚಿಗುರೊಡೆಯಲು ಸುವರ್ಣಕಾಲ. ಈ ವಯಸ್ಸಿನಲ್ಲಿ ಓದಲು ಮತ್ತು ಗ್ರಂಥಾಲಯಗಳಿಗೆ ಭೇಟಿ ನೀಡಲು ಮಕ್ಕಳು ಅತೀವ ಆಸಕ್ತಿ ಹೊಂದಿರುತ್ತಾರೆ. ನಂತರದ ದಿನಗಳಲ್ಲಿ ಶಾರೀರಿಕ ಮತ್ತು ಮಾನಸಿಕ ಬದಲಾವಣೆ ಹಾಗೂ ಬೆಳವಣಿಗೆಗಳಿಂದಾಗಿ ಆಸಕ್ತಿ ಮತ್ತು ಅಭಿರುಚಿಗಳಲ್ಲಿ ಬದಲಾವಣೆಗಳಾಗಿ ಓದಿನೆಡೆಗಿನ ಅದಮ್ಯ ಕುತೂಹಲ ಪ್ರೀತಿ, ಸಾಹಸ ಇತ್ಯಾದಿಗಳಲ್ಲಿ ಚದುರಿಹೋಗಿ ಓದಿನ ಹಂಬಲದ ಪ್ರೇರಣೆ ದುರ್ಬಲವಾಗಬಹುದು. ಇದೇ ವಯಸ್ಸಿನಲ್ಲಿ ಶಾಲೆಯ ಪಾಠ ಪ್ರವಚನಗಳಿಗೂ ಓದಿಗೂ ನಿಖರ ಸಂಬಂಧ ಬೆಳೆದು ಶೈಕ್ಷಣಿಕ ಮತ್ತು ಮನರಂಜನಾ ಚಟುವಟಿಕೆಗಳಿಗೂ ಓದು ಪೂರಕವೆನಿಸುತ್ತದೆ.

ಓದುವ ಕೌಶಲ್ಯ ಹೆಚ್ಚಿದಂತೆ ಮಕ್ಕಳಲ್ಲಿ ಕಲಿಕಾ ಸಾಮರ್ಥ್ಯವೂ ವೃದ್ಧಿಸುತ್ತದೆ. ಓದುವ ಹವ್ಯಾಸವುಳ್ಳ ಶಿಕ್ಷಕರು ಮಕ್ಕಳಿಗೆ ಆದರ್ಶಗಳಾಗುತ್ತಾರೆ. ಮಕ್ಕಳಲ್ಲಿ ಓದುವ ಹವ್ಯಾಸ ಬೆಳೆಸಲು ಈ ಅಘೋಷಿತ ರೋಲ್ ಮಾಡೆಲ್ಗಳು ಆವಶ್ಯಕ. ಮತ್ತೊಂದು ವೈಶಿಷ್ಟ್ಯವೆಂದರೆ ಪುಸ್ತಕಗಳ ಆಯ್ಕೆಯಲ್ಲಿ ಬಲವಂತ ಹೇರುವುದನ್ನು ಮಕ್ಕಳು ತಿರಸ್ಕರಿಸುವುದರಿಂದ ಮನೆ, ಶಾಲೆ, ಗ್ರಂಥಾಲಯ ಅಥವಾ ಪುಸ್ತಕದ ಅಂಗಡಿಗಳಲ್ಲಿ ಮಕ್ಕಳಿಗೆ ಮುಕ್ತ ಆಯ್ಕೆಯ ಸ್ವಾತಂತ್ರ್ಯ ನೀಡಬೇಕೆನ್ನುವುದನ್ನು ಮನಗಾಣಬೇಕು. ಓದುವ ಹವ್ಯಾಸ ಬೆಳೆಸುವಲ್ಲಿ ಮುಖ್ಯ ಅಂಶಗಳಾದ 'ಪ್ರೇರಣೆ' ಮತ್ತು 'ಆಸಕ್ತಿ'ಗಳನ್ನು ವ್ಯಕ್ತಿಯ ಆರ್ಥಿಕ ಮತ್ತು ಸಾಮಾಜಿಕ ಹಿನ್ನೆಲೆಯಲ್ಲಿ ವಿಶ್ಲೇಷಿಸಿದರೆ ವ್ಯಕ್ತಿಗಳ ಅನುಭವ, ವಿದ್ಯೆ ಮತ್ತು ವರ್ತನೆಗಳು ಓದುವ ಹವ್ಯಾಸ ಬೆಳೆಸುವ ಪರಿಸರಕ್ಕೆ ಹೇಗೆ ತೆಕ್ಕೆ ಹಾಕಿಕೊಂಡಿವೆ ಎಂದು ತಿಳಿಯುತ್ತದೆ. ಅಂದರೆ ಮಕ್ಕಳ ಶಾಲಾಪೂರ್ವ ಮತ್ತು ಶಾಲೆಯ ಹೊರಗಿನ ಅನುಭವ ಓದಿಗೆ ಋಣಾತ್ಮಕವಾಗಿದ್ದರೆ ಅಂತಹ ಮಕ್ಕಳಿಗೆ ವಿಶೇಷ ಸಹಾಯದ ಅಗತ್ಯವಿರುತ್ತದೆ.

ಹತ್ತು ವರ್ಷ ವಯಸ್ಸಿನ ಮಕ್ಕಳ ಓದುವ ಹವ್ಯಾಸದ ಮೇಲೆ ಮಹತ್ವದ ನಿರ್ಣಾಯಕ ಪರಿಣಾಮ ಬೀರಬಹುದಾದ ನಾಲ್ಕು ಪ್ರಭಾವೀ ಅಂಶಗಳು ಅವುಗಳ ಪ್ರಭಾವಿ ಶಕ್ತಿಯ ಇಳಿಮುಖ ಕ್ರಮದಲ್ಲಿ ಹೀಗಿವೆ. ಮೊದಲನೆಯದಾಗಿ ಮಕ್ಕಳಲ್ಲಿ ಓದುವ ಹವ್ಯಾಸದ ಮೇಲೆ ಅತ್ಯಂತ ಹೆಚ್ಚು ಪ್ರಭಾವ ಬೀರುವ ಅಂಶವೆಂದರೆ ಮಗುವಿಗೆ ಪರಿಚಯವಿರುವ ಪುಸ್ತಕಗಳ ಸಂಖ್ಯೆ. ಅಂದರೆ ಎಷ್ಟು ಹೆಚ್ಚು ಪುಸ್ತಕಗಳು ಮಗುವಿಗೆ ಪರಿಚಯವಿದೆಯೊ ಆ ಪ್ರಮಾಣಕ್ಕೆ ಅನುಗುಣವಾಗಿ ಮಗುವಿನ ಓದುವ ಹವ್ಯಾಸ ವೃದ್ಧಿಸಿ ಬಲಗೊಳ್ಳುತ್ತದೆ. ಈ ಅಂಶದ ಪರಿಣಾಮ ವ್ಯಾಪ್ತಿ ಬಹಳ ದೊಡ್ಡದು. ಮಕ್ಕಳಿಗೆ ಸೀಮಿತ ಸಂಖ್ಯೆಯ ಪುಸ್ತಕಗಳನ್ನು ಪುನರಾವರ್ತಿತವಾಗಿ ಬಾಯಿಪಾಠ ಮಾಡಿಸುವ ಪರಿಪಾಠ ಪರೀಕ್ಷಾ ದೃಷ್ಟಿಯಿಂದ ಸಮಂಜಸವಾದರೂ ಓದುವ ಪ್ರಯತ್ನ ಬೆಳೆಸುವ ದೃಷ್ಟಿಯಿಂದ ಅಪಾಯಕಾರಿ. ಎಲ್ಲ ಪುಸ್ತಕಗಳನ್ನೂ ಕೂಲಂಕುಶವಾಗಿ ಓದುವ ಅವಶ್ಯಕತೆ ಇಲ್ಲವಾದರೂ (ಅದು ಸಾಧ್ಯವೂ ಇಲ್ಲ) ಹೆಚ್ಚು ಹೆಚ್ಚು ಪುಸ್ತಕಗಳ ಶೀರ್ಷಿಕೆ, ಸಂಕ್ಷಿಪ್ತ ಪರಿಚಯ ಮಾಡಿಸುವಲ್ಲಿ ಪೋಷಕರ, ಉಪಾಧ್ಯಾಯರ ಮತ್ತು ಶಾಲಾ ಗ್ರಂಥಾಲಯಗಳ ಪಾತ್ರ ಬಹಳ ಮುಖ್ಯವಾದುದು. ಪುಸ್ತಕ ಪ್ರದರ್ಶನ, ಪುಸ್ತಕ ಮಳಿಗೆ ಮತ್ತು ಗ್ರಂಥಾಲಯಗಳಲ್ಲಿ ವಿವಿಧ ಪುಸ್ತಕಗಳ ಪರಿಶೀಲನೆಗೆ (ಕೈಗೆತ್ತಿಕೊಂಡು ತಿರುವಿ ಹಾಕಲು) ಮುಕ್ತ ಅವಕಾಶ ಕಲ್ಪಿಸಿದರೆ ಮಗು ಹೆಚ್ಚು ಪುಸ್ತಕಗಳ ಪರಿಚಯ ಪಡೆಯಲು ಸಾಧ್ಯವಾಗುತ್ತದೆ. ಒಳ್ಳೆಯ ಸಚಿತ್ರ ಪುಸ್ತಕಗಳು ಮಕ್ಕಳನ್ನು ಓದಲಾರಂಭಿಸಲಾಗದ ವಯಸ್ಸಿನಿಂದಲೇ ಬಹಳವಾಗಿ ಆಕರ್ಷಿಸುತ್ತವೆ. ವಿಷಾದದ ಸಂಗತಿಯೆಂದರೆ ಅಂತಹ ಪುಸ್ತಕಗಳ ಪ್ರಕಟಣೆ ದುಬಾರಿ, ಪ್ರಾದೇಶಿಕತೆಗೆ ಒತ್ತುಕೊಟ್ಟರೆ ಮಾರುಕಟ್ಟೆ ಸೀಮಿತ ಮತ್ತು ಬೆಲೆ ಕಡಿತ ಸಾಧ್ಯವಾಗದಾಗಿ ಅವುಗಳ ಸಂಖ್ಯೆ ಕಡಿಮೆ. ಪುಸ್ತಕ ಪರಿಚಯ ಅಕ್ಷರ ಮಾಧ್ಯಮದಲ್ಲಿಯೇ ಆಗಬೇಕಿಲ್ಲ. ಗೀತಗಾಯನ, ನಾಟಕ, ಪ್ರವಚನ, ಕಥೆ ಹೇಳುವುದು ಇತ್ಯಾದಿ ಆಕರ್ಷಕ ಮನರಂಜನೆಯ ರೂಪದಲ್ಲಿಯೂ ಆಗಬಹುದು. ಹಾಗೆ ಮಾಡಿದಾಗ ಕೊನೆಯಲ್ಲಿ ಪುಸ್ತಕದ ಮತ್ತು ಕೃತಿಕಾರನ ಬಗ್ಗೆ ತಿಳಿಸುವುದರಿಂದ ಮಗು ಆ ಪುಸ್ತಕವನ್ನು ಮುಂದೆ ಗುರುತಿಸಬಲ್ಲದು.

ಮಗುವಿನ ಭಾಷಾ ಬೆಳವಣಿಗೆ ಯಾವ ಹಂತದಲ್ಲಿದೆ ಎನ್ನುವುದು ಎರಡನೆಯ ಮುಖ್ಯ ಅಂಶ. ಅಂದರೆ ಮಗು ಭಾಷೆಯನ್ನು ಎಷ್ಟು ಚೆನ್ನಾಗಿ ಬಲ್ಲುದೊ ಅಷ್ಟೂ ಓದುವ ಹವ್ಯಾಸಕ್ಕೆ ಒಲಿಯುತ್ತದೆ. ಮಗುವಿನ ಭಾಷಾ ಕಲಿಕೆಯ ಯಾವುದೇ ಹಂತದಲ್ಲೂ ಅದಕ್ಕೆ ಓದಲು ದೊರೆಕಿಸುವ ಪುಸ್ತಕ ಭಾಷಾಜ್ಞಾನಕ್ಕೆ ಮೀರದೆ ಪೂರಕವಾಗಿರಬೇಕಾದದ್ದು ಮುಖ್ಯ. ಇಲ್ಲವಾದಲ್ಲಿ ಪುಸ್ತಕಗಳು ಕಬ್ಬಿಣದ ಕಡಲೆಯಾಗಿ ಮಗುವಿನ ದ್ವೇಷಕ್ಕೆ ತುತ್ತಾಗುತ್ತವೆ. ಪುಸ್ತಕಗಳನ್ನು ಪ್ರಕಟಿಸುವಾಗ, ಖರೀದಿಸುವಾಗ, ಶಾಲಾಗ್ರಂಥಾಲಯಗಳಲ್ಲಿ ವಿತರಿಸುವಾಗ ಈ ಅಂಶವನ್ನು ಬಹಳ 

ಎಚ್ಚರಿಕೆಯಿಂದ ನಿಭಾಯಿಸಬೇಕಾಗುತ್ತದೆ. ಮಗುವಿನ ಭಾಷಾಜ್ಞಾನ ನಿಯಮಿತವಾಗಿ ವೃದ್ಧಿಸುವಂತೆ ನೋಡಿಕೊಳ್ಳುವುದು ಆವಶ್ಯಕ. ಒಟ್ಟಿನಲ್ಲಿ ಭಾಷಾಜ್ಞಾನಕ್ಕೂ ಓದುವ ಹವ್ಯಾಸಕ್ಕೂ ಒಂದು ಅವಿನಾಭಾವ ಸಂಬಂಧವಿರುತ್ತದೆ. ಅದನ್ನು ಗಮನದಲ್ಲಿರಿಸಿ ಪೂರಕ ಪುಸ್ತಕಗಳ ಸರಬರಾಜಿನ ವ್ಯವಸ್ಥೆ ಆಗಬೇಕಾಗುತ್ತದೆ. ಈ ಸಂಬಂಧವಾಗಿ ಭಾಷಾತಜ್ಞ ಜಿ. ವಿ. ಹೇಳುತ್ತಾರೆ:

ಓದುವ ಹವ್ಯಾಸ (ವಾಚನಶೀಲತೆ) ಬೆಳೆಸುವುದು ಶಿಕ್ಷಣ ಕ್ರಮದ ಒಂದು ಮುಖ್ಯ ಗುರಿಯಾಗಬೇಕು, ಉಪಾಧ್ಯಾಯರು ಓದುವ ಕೌಶಲ್ಯವನ್ನು ಮಕ್ಕಳಿಗೆ ಕಲಿಸಿ ತರಬೇತಿ ನೀಡಬೇಕು, ವಾಚನ
ಬೋಧನೆಯ ಹಂತಗಳಲ್ಲಿ ಶಬ್ದೋಚ್ಚಾರಣೆ, ಶಬ್ದಾರ್ಥ ಗ್ರಹಣ, ವಾಕ್ಯಗಳ ಅರ್ಥ ಚಿಂತನೆ, ವಿಶಿಷ್ಟ ಉದ್ದೇಶಕ್ಕಾಗಿ ವಾಚನ, ಹೆಚ್ಚು ಹೆಚ್ಚು ಪದಗಳನ್ನು ಕಣ್ಣಿನ ನೋಟಕ್ಕೆ ಒಳಪಡಿಸುವುದು, ಮಾತಿನ ಏರಿಳಿತಕ್ಕೆ ಒತ್ತು ಕೊಟ್ಟು ಗಟ್ಟಿಯಾಗಿ ಓದುವುದು, ಓದುವ ವೇಗ ಮತ್ತು ಅರ್ಥಗ್ರಹಣಶಕ್ತಿಯನ್ನು ಸಮೀಕರಿಸುವುದು, ಹಾಗೂ ವಿಚಾರ ಸಂಗ್ರಹಕ್ಕಾಗಿ 'ವಿಶಾಲ ಓದು' ಮತ್ತು ಭಾಷಾ ಪ್ರಭುತ್ವಕ್ಕೆ 'ಆಳವಾದ ಓದು' ಅವಶ್ಯಕ. ಓದುವ ಹವ್ಯಾಸ ವೃದ್ಧಿಸಲು ನಂತರ ನೆರವಾಗುವ ಮೂರನೆಯ ಅಂಶ ಮಗುವಿನ ಬುದ್ಧಿಶಕ್ತಿ. ಅಂದರೆ ಮಗುವು ತನ್ನ ಬುದ್ಧಿಶಕ್ತಿಗನುಗುಣವಾಗಿ ಓದುವ ಹವ್ಯಾಸವನ್ನು ರೂಪಿಸಿಕೊಳ್ಳುತ್ತಾ ಹೋಗುತ್ತದೆ. ಓದುವ ಹವ್ಯಾಸಕ್ಕೆ ಪೂರಕವಾದ ನಾಲ್ಕನೆಯ ಅಂಶ ತಂದೆಯ ವೃತ್ತಿ. ಅಂದರೆ ತಂದೆಯ ವೃತ್ತಿ ಮಗುವಿನ ಓದುವ ಹವ್ಯಾಸ ಬೆಳೆಸಲು ಪೂರಕವಾಗಿ ಅಥವಾ ಪ್ರತೀಕೂಲವಾಗಿರುವ ಸಾಧ್ಯತೆಗಳಿದ್ದರೂ ಮೇಲಿನ ನಾಲ್ಕು ಅಂಶಗಳಲ್ಲಿ ಇದು ಅತ್ಯಂತ ದುರ್ಬಲ ಅಂಶ ಎಂಬುದು ಗಮನಾರ್ಹ. ಒಂದು ಮಹತ್ವದ ವಿಚಾರವೆಂದರೆ ಮೊದಲನೆ ಅಂಶವಾದ ಪುಸ್ತಕಗಳ ಪರಿಚಯವು `ಉಪಾಧ್ಯಾಯರ ಪ್ರಭಾವ' ದ ಪರಿಣಾಮಕ್ಕೆ ಸಂಬಂಧಿಸಿದ ಅಂಶ. ಮಕ್ಕಳಲ್ಲಿ ಓದುವ ಆಸಕ್ತಿ ಮೂಡಿಸಿ ಸರಿಯಾದ ಪುಸ್ತಕಗಳನ್ನು ಪರಿಚಯಿಸುವಲ್ಲಿ  ಉಪಾಧ್ಯಾಯರ  ಪಾತ್ರ  ವಿಶಿಷ್ಟವಾದದ್ದು. ಈ ಅಂಶದ ಕಡೆ ಗಮನವೀಯಲು ಪೋಷಕರು ಮನೆಯಲ್ಲಿ ಒಳ್ಳೆಯ ಪುಸ್ತಕ ಭಂಡಾರ ಬೆಳೆಸಬೇಕು. ಹಾಗೆಯೇ ಸಾರ್ವಜನಿಕ ಗ್ರಂಥಾಲಯಗಳಿಗೆ, ಪುಸ್ತಕ ಮಳಿಗೆಗಳಿಗೆ ಮತ್ತು ಉತ್ಸವಗಳಿಗೆ ಮಕ್ಕಳೊಂದಿಗೆ ಭೇಟಿ ಕೊಡುವುದು, ಮಕ್ಕಳಿಗೆ ಹೆಚ್ಚಿನ ಪುಸ್ತಕಗಳ ಪರಿಚಯವಾಗಲು ಸಹಾಯಕ. ಮಕ್ಕಳ ಸಾಮಾಜಿಕ-ಆರ್ಥಿಕ ಅನನುಕೂಲಗಳೇನೇ ಇದ್ದರೂ ಅದನ್ನು ಮೀರಿ ಓದುವ ಹವ್ಯಾಸ ಬೆಳೆಸುವುದು ಉಪಾಧ್ಯಾಯರ ಮತ್ತು ಸಮುದಾಯದ ಸ್ವಲ್ಪ ಹೆಚ್ಚಿನ ಶ್ರಮದಿಂದ ಸಾಧ್ಯ. ಅಲ್ಲದೆ ಓದುವ ಹವ್ಯಾಸದಿಂದ ಮಕ್ಕಳ ಮೇಲೆ ಆಗುವ ಸಾಮಾಜಿಕ ವರ್ಗ ವ್ಯತ್ಯಾಸಗಳನ್ನು ಉಪಾಧ್ಯಾಯರ ವಿಶೇಷ ಆಸ್ಥೆ ಮತ್ತು ಹೆಚ್ಚು ಪುಸ್ತಕಗಳನ್ನು ಸುಲಭವಾಗಿ ದೊರೆಯುವಂತೆ ಮಾಡುವ ಮೂಲಕ ತಗ್ಗಿಸಬಹುದು. ಕಡೆಯದಾಗಿ ಓದುವ ಹವ್ಯಾಸದ ಗಂಭೀರ ಅಧ್ಯೆಯನಗಳು ನಮ್ಮಲ್ಲಿ ಅಷ್ಟಾಗಿ ಇಲ್ಲದಿರುವುದು ಒಂದು ವಿಷಾದಕರ ಸಂಗ 
logoblog

Thanks for reading ಮಕ್ಕಳಲ್ಲಿ ಓದುವ ಹವ್ಯಾಸ ಬೆಳೆಸುವುದು ಹೇಗೆ

Previous
« Prev Post

No comments:

Post a comment