Goslink

Goslink is providing you latest news, articles, reviews.

Friday, 1 January 2021

ರಾಜ್ಯ ಮಟ್ಟದ ಕ್ಲೇ ಮಾಡೆಲಿಂಗ್ ಶಿಬಿರ

  Govt Orders Link       Friday, 1 January 2021

                                           

  ರಾಜ್ಯ ಮಟ್ಟದ ಕ್ಲೇ ಮಾಡೆಲಿಂಗ್ ಶಿಬಿರ

                                                                                                                                   -ರಾಮಪ್ಪ.ವಿ
 
ಕರ್ನಾಟಕ ರಾಜ್ಯ ಸರ್ಕಾರಿ ಚಿತ್ರಕಲಾ ಶಿಕ್ಷಕರ ಸಂಘ ರಿ, ಹಾಗೂ ಕೆನರಾ ಬ್ಯಾಂಕ್ ಸಹಯೋಗದಲ್ಲಿ ದಿನಾಂಕ 24-08-10 ರಿಂದ 27-08-10 ರವರೆಗೆ ರಾಜ್ಯಮಟ್ಟದ ಕ್ಲೇ ಮಾಡೆಲಿಂಗ್ ಶಿಬಿರವನ್ನು ಕೆನರಾಬ್ಯಾಂಕ್ ಕರಕುಶಲಕೇಂದ್ರ, ಕಾರ್ಕಳದ ಮಿಯಾರ್ನಲ್ಲಿ ಹಮ್ಮಿಕೊಳ್ಳಲಾಗಿತ್ತು. ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಹಿರಿಯ ಹಾಗೂ ಕಿರಿಯ ಚಿತ್ರಕಲಾ ಶಿಕ್ಷಕರು ಉತ್ಸಾಹದಿಂದ ಪಾಲ್ಗೊಂಡರು. ಈ ಕಾರ್ಯಕ್ರಮದ ಸಂಚಾಲಕತ್ವವನ್ನು ಕರಕುಶಲ ಕೇಂದ್ರದ ಹಿರಿಯ ಉಪನ್ಯಾಸಕರು, ರಾಜ್ಯಪ್ರಶಸ್ತಿ ವಿಜೇತ ಶಿಲ್ಪಿಗಳೂ ಆದ ಗುಣವಂತೇಶ್ವರಭಟ್ ಮತ್ತು ನಿವೃತ್ತ ಉಪನ್ಯಾಸಕರು ಹಾಗೂ ಖ್ಯಾತ ಕಲಾವಿಮರ್ಶಕರೂ ಆದ ಶ್ರೀಧರಮೂತರ್ಿ ಹುಂಚ ಇವರು ವಹಿಸಿದ್ದರು.

ದಿನಾಂಕ 24-08-10 ರ ಬೆಳಿಗ್ಗೆ 11-30ಕ್ಕೆ ಕೇಂದ್ರದ ನಿರ್ದೇಶಕರಾದ ಮಾನ್ಯ ಮೋಹನ್ ನಾಯಕ್ ಹಾಗೂ ಉದ್ಯಮಿ ನಿತ್ಯಾನಂದ ಪೈ ಅವರಿಂದ ಉದ್ಘಾಟಿಸಲ್ಪಟ್ಟಿತು. ಕೇಂದ್ರದ ಕ್ಲೇ ಮಾಡೆಲಿಂಗ್ ವಿಭಾಗದ ಉಪನ್ಯಾಸಕರಾದ ಗಣೇಶಪ್ಪಹಾಗೂ ಕಡಲತೀರದ ಖ್ಯಾತ ಮರಳು ಹಾಗೂ ಮಣ್ಣಿನ ಶಿಲ್ಪಿ ವೆಂಕಿಪೆಲಿಮಾರ್ ಇವರು ಶಿಬಿರದ ಸಂಪನ್ಮೂಲವ್ಯಕ್ತಿಗಳಾಗಿ ಉತ್ತಮ ಮಾರ್ಗದರ್ಶನ ನೀಡಿದರು. ಮಣ್ಣಿನ ಗುಣ, ಸಿಗುವ ಸ್ಥಳ, ಸಂಗ್ರಹಿಸುವ ರೀತಿ, ಹದಗೊಳಿಸುವ ಕ್ರಮ ಹಾಗೂ ತಾಂತ್ರಿಕವಾಗಿ (ಬಿಸ್ಕೆಟ್ ಫೈಯರಿಂಗ್)ಸುಡುವ ಕ್ರಮ ಇತ್ಯಾದಿಗಳನ್ನು ಸಂಪನ್ಮೂಲದ್ವಯರು, ಹಂತ ಹಂತವಾಗಿ ಸೊಗಸಾಗಿ ವಿವರಿಸಿದರು ಹಾಗೂ ಮಕ್ಕಳಿಗೆ ಸುಲಭವಾಗಿ ಕಲಿಸುವ ತಂತ್ರಗಳನ್ನು ಪ್ರಾತ್ಯಕ್ಷಿಕೆಗಳ ಮೂಲಕ ತಿಳಿಸಿಕೊಟ್ಟರು. ನಾಲ್ಕು ದಿನಗಳ ಈ ಶಿಬಿರವನ್ನು ಚಿತ್ರಕಲಾ ಶಿಕ್ಷಕರು ಸಮರ್ಥವಾಗಿ ಉಪಯೋಗಿಸಿಕೊಂಡರು. ಸ್ವತಃ ಕಲಾವಿದರಾದ ಶಿಕ್ಷಕರು ಅದ್ಭುತವಾದ ನೂರಾರು ಕಲಾಕೃತಿಗಳನ್ನು ತಯಾರಿಸಿ ಶಿಬಿರದ ಸಂಪೂರ್ಣ ಯಶಸ್ಸಿಗೆ ಕಾರಣರಾದರು. ಕರಕುಶಲ ಕೇಂದ್ರದಲ್ಲಿ ಸಾಂಪ್ರದಾಯಿಕ ಶಿಲ್ಪಕಲೆಯನ್ನು ಕಲಿಯುತ್ತಿರುವ ಮಕ್ಕಳು ಈ ಶಿಬಿರದಲ್ಲಿ ರಚಿಸಿದ ಮೂರ್ತ, ಅಮೂರ್ತ ಹಾಗೂ ಜನಪದದಂತಹ ಶೈಲಿಗಳನ್ನು ನೋಡಿ ಹೊಸಬಗೆಯ ಅನುಭವ ಗಳಿಸಿಕೊಡರು. ಈ ಶಿಬಿರದ ಮೂಲ ಆಶಯ ಕೆನರಾಬ್ಯಾಂಕ್ ಗ್ರಾಮೀಣ ಪ್ರದೇಶದ ನಿರುದ್ಯೋಗಿ ಯುವಕರಿಗೆ ಉಚಿತ ಸಾಂಪ್ರದಾಯಿಕ ಶಿಲ್ಪಕಲೆಯನ್ನು ಕಲಿಸುವ ಈ ಯೋಜನೆಯನ್ನು ರಾಜ್ಯದ ಚಿತ್ರಕಲಾ ಶಿಕ್ಷಕರಿಗೆ ಪರಿಚಯಿಸುವ ಮೂಲಕ ಈ ಕೇಂದ್ರಗಳಿಗೆ ಕಲಾಸಕ್ತ ಮಕ್ಕಳನ್ನು ಕಳಿಸುವಂತೆ ಮಾಡುವುದು ಹಾಗೂ ಈ ಮಕ್ಕಳಿಗೆ

ನಾಡಿನ ವಿವಿಧ ಜಿಲ್ಲೆಗಳ ಕಲಾವಿದ/ಕಲಾಶಿಕ್ಷಕರನ್ನು ಹಾಗೂ ಕಲಾ ಶೈಲಿಗಳನ್ನು ಪರಿಚಯಿಸುವುದು ಆಗಿತ್ತು. ಈ ದೃಷ್ಟಿಯಿಂದಲೂ ಈ ಶಿಬಿರ ತುಂಬಾ ಉಪಯುಕ್ತವಾಯಿತು. ಶಾಲಾಕೊಠಡಿಗಳಲ್ಲಿ ದಶಕಗಳಿಂದ ಚಿತ್ರಕಲೆಯನ್ನು ಕಲಿಸುತ್ತಾ ಬರುತ್ತಿರುವ ನಮ್ಮ ಚಿತ್ರಕಲಾ ಶಿಕ್ಷಕರಿಗೆ ಇಂತಹ ಶಿಬಿರಗಳು ಪುನ:ಶ್ಚೇತನ ನೀಡುವುದರ ಜೊತೆಗೆ ಕಲಿಸುವಿಕೆಯ ಏಕತಾನತೆಯನ್ನು ಹೋಗಲಾಡಿಸಿ ಹೊಸತನಕ್ಕೆ ದಾರಿಯಾಗುತ್ತದೆ. ಕನಿಷ್ಠ ವರ್ಷಕ್ಕೆ 2 ಬಾರಿಯಾದರೂ ಇಂತಹ ಶಿಬಿರಗಳ ಅಗತ್ಯವಿದೆ ಎಂಬುದು ಶಿಬಿರಾರ್ಥಿಗಳ ಅಭಿಪ್ರಾಯ. ಶಿಬಿರದುದ್ದಕ್ಕೂ ಕರಾವಳಿಯ ಧಾರಾಕಾರ ಮಳೆ, ಒಳಾಂಗಣ ಚಟುವಟಿಕೆಯಾದ್ದರಿಂದ ಮಳೆಯಿದ್ದರೂ ಶಿಬಿರದ ಚಟುವಟಿಕೆಗಳಿಗೆ ಎನೂ ತೊಂದರೆಯಾಗಲಿಲ್ಲ. ಉತ್ತರ ಕರ್ನಾಟಕದ ಗೆಳೆಯರಿಗೆ ಮಳೆಯ ಆರ್ಭಟ ನೋಡಿ ಹೊಸಬಗೆಯ ಉಲ್ಲಾಸ. ಆಶ್ರಮದ ವಾತಾವರಣ, ಸೊಗಸಾದ ಆತಿಥ್ಯ, ಸಂಜೆ  ಕಾಲೇಜು ಮಕ್ಕಳ ಮನರಂಜನಾ ಕಾರ್ಯಕ್ರಮಗಳು, ಗುರುರಾಜ ಸನಿಲ್ರವರಿಂದ ಉರಗಗಳ ಪ್ರಾತ್ಯಕ್ಷಿಕೆ, ಕಲಾಶಿಕ್ಷಣದ ಬಗ್ಗೆ ಚರ್ಚೆ ಮನಕ್ಕೆ ಮುದನೀಡಿದವು.

27 ರ ಮಧ್ಯಾಹ್ನ ಶಿಬಿರದ ಸಮಾರೋಪ ಸಮಾರಂಭ, ಹಾಗೂ ಕಲಾಪ್ರದರ್ಶನದ ಉದ್ಘಾಟನೆ. ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಛೇರ್ಮನ್ 'ಆಳ್ವಾಸ್ ನುಡಿಸಿರಿ'ಯ ಮೂಲಕ ಕರ್ನಾಟಕದಲ್ಲಿ ಹಾಗೂ ರಾಷ್ಟ್ರದಾದ್ಯಂತ ಹೆಸರುಮಾಡಿರುವ ಡಾ.ಮೋಹನ ಆಳ್ವ ಅವರಿಂದ ಕಾರ್ಯಕ್ರಮದ ಉದ್ಘಾಟನೆ. ಸ್ವಯಂ ಕಲಾವಿದರೂ ಕಲಾಪೋಷಕರೂ ಆಗಿರುವ ಡಾ.ಆಳ್ವರವರು ತಮ್ಮ ಅಧ್ಯಕ್ಷ ಭಾಷಣದಲ್ಲಿ  ಯಾವ ಮನುಷ್ಯನಲ್ಲಿ ಸೌಂದರ್ಯಪ್ರಜ್ಞೆ ಜಾಗೃತವಾಗಿರುವುದಿಲ್ಲವೋ ಆ ವ್ಯಕ್ತಿ ಸಮಾಜ ಘಾತುಕನಾಗುತ್ತಾನೆ. ಸಮಾಜದ ಜಾಗೃತಿಗೆ ಕಲಾಶಿಕ್ಷಣ ಅತೀ ಅಗತ್ಯವೆಂದರು. ಭುವನೇಂದ್ರ ಕಾಲೇಜಿನ ಪ್ರಾಂಶುಪಾಲರಾದ ಪದ್ಮನಾಭಗೌಡರು, ಕೆನರಾಬ್ಯಾಂಕಿನ ಮಂಗಳೂರು ವೃತ್ತ  ಕಚೇರಿಯ ಉಪಮಹಾಪ್ರಬಂಧಕರಾದ ಕೆ.ಎಸ್. ಬಾಲಚಂದ್ರರಾವ್ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಶ್ರೀಧರಮೂರ್ತಿ ಹುಂಚ ವಂದಿಸಿದರು
 

logoblog

Thanks for reading ರಾಜ್ಯ ಮಟ್ಟದ ಕ್ಲೇ ಮಾಡೆಲಿಂಗ್ ಶಿಬಿರ

Previous
« Prev Post

No comments:

Post a comment