Goslink

Goslink is providing you latest news, articles, reviews.

Monday, 28 December 2020

ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ - ಒಂದು ಪಕ್ಷಿನೋಟ

  Govt Orders Link       Monday, 28 December 2020

                           

    ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ - ಒಂದು ಪಕ್ಷಿನೋಟ

                                                                                                                                -ಮಂಜುನಾಥ್ ಪಿ.ಎಂ
ನಮ್ಮ  ರಾಷ್ಟ್ರದಲ್ಲಿ   ಸಂವಿಧಾನಾತ್ಮಕ   ಹಾಗೂ   ಕೈಗಾರಿಕಾ ಆಧುನೀಕರಣ, ಆಡಳಿತಾತ್ಮಕ ವಿಕೇಂದ್ರೀಕರಣ ಸಾಧಿಸಿ ಜಾಗತಿಕ ಮಟ್ಟದಲ್ಲಿ ಸ್ಪರ್ಧೆಸಬೇಕಾದರೆ ಪ್ರಾಥಮಿಕ ಶಿಕ್ಷಣವು ಬುನಾದಿಪ್ರಾಯ ಮಾತ್ರವಾಗಿದ್ದು, 12 ನೇ ತರಗತಿಯವರೆಗೆ ಎಲ್ಲಾ ಮಕ್ಕಳೂ ಶಿಕ್ಷಣ ಪೂರೈಸುವಂತಾಗಬೇಕು,  ಎಂಬುದನ್ನು  ಮನಗಂಡ  ಭಾರತ ಸರ್ಕಾರ, ಪ್ರೌಢಶಿಕ್ಷಣ ಸಾರ್ವತ್ರೀಕರಣಗೊಳಿಸುವ ಬಗ್ಗೆ ಅನೇಕ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುತ್ತಾ ಬಂದಿದೆ. ಇವುಗಳ ಪ್ರಮುಖ ಉದ್ದೇಶ ಶಾಲಾ ಸೌಲಭ್ಯಗಳನ್ನು ಉತ್ತಮಪಡಿಸಿ ಎಲ್ಲಾ ಮಕ್ಕಳಿಗೂ ಸಮಾನ ಅವಕಾಶ ಕಲ್ಪಿಸಿ, ಗುಣಮಟ್ಟ ಶಿಕ್ಷಣ ಪಡೆಯವಂತೆ ಮಾಡುವುದು.ಇದಕ್ಕಾಗಿ ಈಗಾಗಲೇ ಈ ಕೆಳಗಿನ ಕಾರ್ಯಕ್ರಮಗಳನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಹಭಾಗಿತ್ವದಲ್ಲಿ ಅನುಷ್ಠಾನಗೊಳಿಸಿದೆ.

ಆಧುನೀಕರಣ,  ವಿಕೇಂದ್ರೀಕರಣ  ಹಾಗೂ  ರಾಷ್ಟ್ರದ  ಮತ್ತು ಜಾಗತೀಕರಣದ ಹಿನ್ನೆಲೆಯಲ್ಲಿ ವಿದ್ಯಾಥರ್ಿಗಳನ್ನು ಜಾಗತಿಕ ಮಟ್ಟದಲ್ಲಿ ಸವಾಲುಗಳನ್ನು ಎದುರಿಸಲು ಹಾಗು ಸ್ಪರ್ಧೆಸಲು ಸಬಲೀಕರಿಸುವ ನಿಟ್ಟಿನಲ್ಲಿ, ಪ್ರೌಢಶಿಕ್ಷಣ ಪ್ರಮುಖ ಪಾತ್ರವಹಿಸುತ್ತದೆ. ಇದುವರೆವಿಗೂ ಪ್ರಾಥಮಿಕ ಶಿಕ್ಷಣ ಸಾರ್ವತ್ರೀಕರಣಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಹಾಗು  ರಾಜ್ಯ  ಸರ್ಕಾರಗಳು  ಅನೇಕ  ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುತ್ತವೆ.  ಅವುಗಳ  ಯಶಸ್ಸಿನ  ಆಧಾರದ  ಮೇಲೆ ಪ್ರೌಢಶಾಲಾ ಶಿಕ್ಷಣ ಸಾರ್ವತ್ರೀಕರಣಗೊಳಿಸುವ ಉದ್ದೇಶದಿಂದ ಕೇಂದ್ರ  ಹಾಗೂ  ರಾಜ್ಯ  ಸರ್ಕಾರಗಳ  ಸಹಭಾಗಿತ್ವದೊಂದಿಗೆ ಅನುಷ್ಠಾನಗೊಳ್ಳುತ್ತಿರುವ ಕಾರ್ಯಕ್ರಮ ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ. ಈ ಕಾರ್ಯಕ್ರಮಕ್ಕೆ 11 ನೇ ಪಂಚವಾರ್ಷಿಕ ಯೋಜನೆ ಅವಧಿಯಲ್ಲಿ ಕೇಂದ್ರ ಹಾಗು ರಾಜ್ಯ ಸರ್ಕಾರಗಳ ಪಾಲು ಕ್ರಮವಾಗಿ 75 : 25 ಆಗಿರುತ್ತದೆ. 11 ನೇ ಪಂಚವಾರ್ಷಿಕ ಯೋಜನೆಯ ನಂತರ ಅಂದರೆ, 2013-14 ನೇ ಸಾಲಿನಿಂದ ಕೇಂದ್ರ ಹಾಗು ರಾಜ್ಯ ಸರ್ಕಾರಗಳ ಪಾಲು ಕ್ರಮವಾಗಿ 50:50 ಆಗಿರುತ್ತದೆ.

ಕಾರ್ಯಕ್ರಮದ ಉದ್ದೇಶಗಳು:-
* 5 ಕಿ.ಮೀ ವ್ಯಾಪ್ತಿಯಲ್ಲಿ ಸ್ಥಳೀಯ ಸನ್ನಿವೇಶಗಳಿಗನುಗುಣವಾಗಿ ಪ್ರೌಢಶಿಕ್ಷಣ   ಸೌಲಭ್ಯವನ್ನು   (9   ಮತ್ತು   10ನೇತರಗತಿ) ಒದಗಿಸುವುದು. 
* 2017 ರ ಒಳಗೆ ಪ್ರೌಢಶಿಕ್ಷಣ ಸೌಲಭ್ಯಗಳ ಸಾರ್ವತ್ರೀಕರಣ ಖಾತ್ರಿಪಡಿಸುವುದು ಹಾಗು ಒಟ್ಟಾರೆ ದಾಖಲಾತಿ ದರ ಶೇ. 100 ಮಾಡುವುದು.
* 2020 ರ ಒಳಗೆ ಶೇ. 100 ರಷ್ಟು ಸಾರ್ವತ್ರಿಕ ಉಳಿಯುವಿಕೆಯನ್ನು ಸಾಧಿಸುವುದು.
* ಸಮಾಜದ ಎಲ್ಲಾ ವರ್ಗಗಳಿಗೂ(ಪ.ಜಾ, ಪ.ಪಂ, ಆರ್ಥಿಕವಾಗಿ ಹಿಂದುಳಿದ ಹೆಣ್ಣುಮಕ್ಕಳು, ವಿಶೇಷ ಅಗತ್ಯವುಳ್ಳ ಮಕ್ಕಳು, ಇತರೆ ಹಿಂದುಳಿದ ಜಾತಿ, ವರ್ಗಗಳು, ಅಲ್ಪಸಂಖ್ಯಾತರು ಸೇರಿದಂತೆ) ಯಾವುದೇ  ವಿದ್ಯಾರ್ಥಿ  ಪ್ರೌಢಶಿಕ್ಷಣದಿಂದ  ವಂಚಿತರಾಗದಂತೆ ಕ್ರಮವಹಿಸುವುದು.
* ಎಲ್ಲಾ ಸರ್ಕಾರಿ ಪ್ರೌಢಶಾಲೆಗಳಲ್ಲಿ ಪರಿಣಾಮಕಾರಿ ಶಿಕ್ಷಣ ನೀಡಲು   ಪೂರಕವಾಗುವ   ಭೌತಿಕ   ಸೌಲಭ್ಯಗಳಿರುವಂತೆ ಸಬಲೀಕರಿಸುವುದು.
* ಎಲ್ಲಾ ವಿದ್ಯಾರ್ಥಿಗಳು ನಿರೀಕ್ಷಿತ ಮಟ್ಟದ ಗುಣಮಟ್ಟ ಶಿಕ್ಷಣವನ್ನು ಪಡೆಯುವಂತೆ ಪೂರಕ ಕಾರ್ಯಕ್ರಮಗಳನ್ನು ಆಯೋಜಿಸುವುದು. ಹಾಗೂ ಗುಣಮಟ್ಟದ ಶಿಕ್ಷಣವನ್ನು ಖಾತರಿಗೊಳಿಸುವುದು.

ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ ಕಾರ್ಯಕ್ರಮದಡಿಯಲ್ಲಿ ಆಯೋಜಿಸಬಹುದಾದ ಕಾರ್ಯಕ್ರಮಗಳು:
* 8 ನೇತರಗತಿ ಹೊಂದಿರುವ ಹಿರಿಯ ಪ್ರಾಥಮಿಕ ಶಾಲೆಗಳನ್ನು 9 ನೇ ತರಗತಿ ಪ್ರಾರಂಭಿಸುವುದರ ಮೂಲಕ ಉನ್ನತೀಕರಿಸುವುದು. 
* ಈ ರೀತಿ ಉನ್ನತೀಕರಿಸಿದ ಶಾಲೆಗಳಿಗೆ ಪೂರ್ಣಪ್ರಮಾಣದ ಭೌತಿಕ ಸೌಲಭ್ಯಗಳನ್ನು ಒದಗಿಸುವುದು    (ಶಿಕ್ಷಕರು, ತರಗತಿ ಕೋಣೆಗಳು, ಪ್ರಯೋಗಾಲಯ, ಗ್ರಂಥಾಲಯ, ಆರ್ಟ್ ಮತ್ತು ಕ್ರಾಫ್ಟ್ ಕೊಠಡಿ, ಹೆಣ್ಣುಮಕ್ಕಳ ಚಟುವಟಿಕಾ ಕೊಠಡಿ, ಶೌಚಾಲಯ
ಮತ್ತು ನೀರಿನ ಸೌಲಭ್ಯ ಇತ್ಯಾದಿ) 
*   ಪ್ರಸ್ತುತ   ಕಾರ್ಯನಿರ್ವಹಿಸುತಿರುವ   ಪ್ರೌಢಶಾಲೆಗಳನ್ನು ಸಬಲೀಕರಣ ಮಾಡುವುದು.(ಪ್ರಯೋಗಾಲಯ, ಗ್ರಂಥಾಲಯ, ಆರ್ಟ್ ಮತ್ತು ಕ್ರಾಫ್ಟ್ ಕೊಠಡಿ, ಹೆಣ್ಣುಮಕ್ಕಳ ಚಟುವಟಿಕಾ ಕೊಠಡಿ,  ಶೌಚಾಲಯ   ಮತ್ತು   ನೀರಿನ   ಸೌಲಭ್ಯಗಳನ್ನು ಅವಶ್ಯಕತೆಗಳಿಗನುಗುಣವಾಗಿ ನೀಡುವುದರ ಮೂಲಕ)
* ಪ.ಜಾ, ಪ.ಪಂ, ಇತರೆ ಹಿಂದುಳಿದ ವರ್ಗಗಳ ಹಾಗು ಮೈನಾರಿಟಿ ವರ್ಗಗಳ ವಿದ್ಯಾಥರ್ಿಗಳಿಗೆ ಉಚಿತ ಊಟ ಮತ್ತು ವಸತಿ ಸೌಲಭ್ಯ ಒದಗಿಸುವುದು.
* ಸರ್ಕಾರಿ ಶಾಲೆಗಳ ಕಾರ್ಯಚಟುವಟಿಕೆಗಳ ನಿರ್ವಹಣೆಗಾಗಿ, ಪ್ರತಿ ಶಾಲೆಗೆ ವಾಷರ್ಿಕ ರೂ, 40000/- ಶಾಲಾ ಅನುದಾನ. [ಗ್ರಂಥಾಲಯ,  ಪ್ರಯೋಗಾಲಯ,  ಕಾರ್ಯಾಲಯ,  ತರಗತಿ, ಇತರೆ ಕಾರ್ಯಕ್ರಮಗಳು]
* ಸ್ವಂತ ಕಟ್ಟಡ ಹೊಂದಿರುವ ಪ್ರತಿ ಸರ್ಕಾರಿ ಪ್ರೌಢಶಾಲೆಗೆ ವಾರ್ಷಿಕ  ರೂ. 25000/- ಸಣ್ಣ ಪ್ರಮಾಣದ ದುರಸ್ತಿ ಅನುದಾನ.
* ಎಲ್ಲಾ ಸರ್ಕಾರಿ ಶಾಲಾ ಶಿಕ್ಷಕರಿಗೆ ಕಡ್ಡಾಯವಾಗಿ ವಾರ್ಷಿಕ 5 ದಿನಗಳ ಸೇವಾನಿರತ ಶಿಕ್ಷಕರ ತರಬೇತಿ.
* ಕ್ಷಿಪ್ರಗತಿಯ ಆರ್ಥಿಕ ವಿಕಾಸದ ಕನಸು ಕಾಣುತ್ತಿರುವ ನಮ್ಮ ದೇಶಕ್ಕೆ ಕೈಗಾರಿಕಾ ಹಾಗೂ ಸೇವಾ ಕ್ಷೇತ್ರಗಳಲ್ಲಿ ಮಧ್ಯಸ್ತರದ ಕೌಶಲಗಳ ಅಗತ್ಯ ಅಗಾಧವಾಗಿದೆ. 
ಎಲ್ಲಾ ವಿದ್ಯಾರ್ಥಿಗಳಿಗೆ 5 ಕಿ.ಮೀ ವ್ಯಾಪ್ತಿಯಲ್ಲಿ ಪ್ರೌಢಶಿಕ್ಷಣ ಸೌಲಭ್ಯ ಕಾರ್ಯಕ್ರಮಗಳ ವಿವರ:


ಶಾಲಾ ಸೌಲಭ್ಯಗಳನ್ನು ನೀಡುವುದು:
ದೊರಕುವಂತೆ ಮಾಡಬೇಕಾಗಿದೆ. ಶಾಲಾ ಮ್ಯಾಪಿಂಗ್ ಮಾಡುವುದರ ಮೂಲಕ  ಅರ್ಹ  ಜನವಸತಿ  ಪ್ರದೇಶಗಳಲ್ಲಿ  8ನೇ  ತರಗತಿ ಹೊಂದಿರುವ ಹಿರಿಯ ಪ್ರಾಥಮಿಕ ಶಾಲೆಗಳನ್ನು ಅನುಕ್ರಮವಾಗಿ 9 ಹಾಗೂ 10 ನೇ ತರಗತಿಗಳಿಗೆ ಉನ್ನತೀಕರಿಸುವುದರ ಮೂಲಕ
ಪ್ರೌಢಶಾಲೆ ಸೌಲಭ್ಯ ಒದಗಿಸುವುದು. ಈ ರೀತಿ ಉನ್ನತೀಕರಿಸಿದ ಶಾಲೆಗಳಿಗೆ ಅವಶ್ಯ ಕಟ್ಟಡ, ಶಿಕ್ಷಕರು ಹಾಗು ಕಲಿಕೋಪಕರಣಗಳಿಗಾಗಿ (ಪ್ರಯೋಗಾಲಯ, ಗ್ರಂಥಾಲಯ) ಪ್ರತಿ ಉನ್ನತೀಕರಿಸಿದ ಶಾಲೆಗೆ ಸುಮಾರು 58.12 ಲಕ್ಷ ರೂ.ಗಳ(ನಾನ್ ರಿಕರಿಂಗ್) ಅನುದಾನ
ನೀಡಲಾಗುವುದು. ಪ್ರೌಢಶಾಲೆಗಳ ಬಲವರ್ಧನೆ.

ಪ್ರಸ್ತುತ  ಕಾರ್ಯನಿರ್ವಹಿಸುತ್ತಿರುವ  ಪ್ರೌಢಶಾಲೆಗಳಲಿ  ಶಾಲಾ ಯೋಜನೆ ಮಾಡಿಸುವುದರ ಮೂಲಕ ಲಭ್ಯ ಸಂಪನ್ಮೂಲಗಳನ್ನು ಹಾಗು ಅವಶ್ಯ ಸಂಪನ್ಮೂಲಗಳನ್ನು ಗುರ್ತಿಸಿ ಗುಣಮಟ್ಟದ ಶಿಕ್ಷಣ ನೀಡಲು ಹಾಗು ಪೂರ್ಣಪ್ರಮಾಣದ ಶಾಲೆಯಾಗಲು ಇರುವ ಕೊರತೆಗಳನ್ನು ಗುರ್ತಿಸಿ, ಕ್ರೋಡೀಕರಿಸಿ ವಾರ್ಷಿಕ ಯೋಜನೆಗಳನ್ನು ಸಿದ್ಧಪಡಿಸಲಾಗುವುದು.  ಹೀಗೆ  ಸಿದ್ಧಪಡಿಸಿದ  ಯೋಜನೆಗಳ ಆಧಾರದ  ಮೇಲೆ  ಒಂದು  ಬಾರಿಯ  (ನಾನ್  ರಿಕರಿಂಗ್) ಅನುದಾನವನ್ನು  ಶಾಲಾಭೌತಿಕ  ಸೌಲಭ್ಯಗಳಿಗಾಗಿ  ಸುಮಾರು
36.86 ಲಕ್ಷ ರೂ.ಗಳವರೆಗೆ ಶಾಲಾವಾರು ಅಗತ್ಯಗಳಿಗನುಗುಣವಾಗಿ ಅನುದಾನ ನೀಡಲಾಗುವುದು. (ಪ್ರಯೋಗಾಲಯ, ಗ್ರಂಥಾಲಯ, ಆರ್ಟ್ ಮತ್ತು ಕ್ರಾಫ್ಟ್ ಕೊಠಡಿ, ಹೆಣ್ಣುಮಕ್ಕಳ ಚಟುವಟಿಕಾ ಕೊಠಡಿ, ಶೌಚಾಲಯ ಮತ್ತು ನೀರಿನ ಸೌಲಭ್ಯ) ಇದರೊಂದಿಗೆ ಅವಶ್ಯ ಸಂಖ್ಯೆಯ ಶಿಕ್ಷಕರನ್ನು ನಿಯಮಾನುಸಾರ ನೀಡಲಾಗುವುದು. 

ರಿಕರಿಂಗ್ ಅನುದಾನ -
ಶಾಲಾ ಅನುದಾನ:


ಸರ್ಕಾರಿ  ಶಾಲೆಗಳ  ಕಾರ್ಯಚಟುವಟಿಕೆಗಳ  ಪರಿಣಾಮಕಾರಿ ನಿರ್ವಹಣೆಗಾಗಿ   ಅಂದರೆ,   [ಗ್ರಂಥಾಲಯ   ನಿರ್ವಹಣೆ, ಪ್ರಯೋಗಾಲಯ ನಿರ್ವಹಣೆ, ಕಾರ್ಯಾಲಯ ನಿರ್ವಹಣೆ, ತರಗತಿ ಕೊಠಡಿ ನಿರ್ವಹಣೆ ಹಾಗು ಶಾಲೆಯ  ಇತರೆ ಕಾರ್ಯಕ್ರಮಗಳ ನಿರ್ವಹಣೆಗಾಗಿ ಪ್ರತಿ ಸರ್ಕಾರಿ ಪ್ರೌಢಶಾಲೆಗೆ ವಾರ್ಷಿಕ ರೂ, 40000/- ಶಾಲಾ ಅನುದಾನ ನೀಡಲಾಗುತ್ತದೆ] 

ಸಣ್ಣ ಪ್ರಮಾಣದ ದುರಸ್ಥಿ ಅನುದಾನ:
ಶಾಲಾಕಟ್ಟಡ ನಿರ್ವಹಣೆ ಹಾಗು ಸಣ್ಣ ಪ್ರಮಾಣದ ದುರಸ್ಥಿಗಾಗಿ (ಸುಣ್ಣ ಬಣ್ಣ, ವಿದ್ಯುತ್ ಶುಲ್ಕ, ನೀರಿನ ಶುಲ್ಕ, ಟೆಲಿಫೋನ್ ಶುಲ್ಕ, ಬಾಗಿಲು, ಕಿಟಕಿ, ಕಪ್ಪುಹಲಗೆ, ಗೋಡೆ, ನೆಲ, ಶೌಚಾಲಯ ನಿರ್ವಹಣೆ, ಮುಂತಾದುವು) ಸ್ವಂತಕಟ್ಟಡ ಹೊಂದಿರುವ ಪ್ರತಿ ಸರ್ಕಾರಿ  ಶಾಲೆಗೆ  ವಾರ್ಷಿಕ  ರೂ.  25000/-  ಅನುದಾನ ನೀಡಲಾಗುತ್ತದೆ. 

ಶಿಕ್ಷಕರ ಸೇವಾನಿರತ ತರಬೇತಿ:

ಜಗತ್ತಿನ   ಅಭಿವೃದ್ಧಿಯಲ್ಲಿ   ನಿರಂತರವಾಗಿ   ಆಗುತ್ತಿರುವ ಬದಲಾವಣೆಗಳು ಹಾಗೂ ಅವುಗಳನ್ನಾಧರಿಸಿ ಆ ಸವಾಲುಗಳನ್ನು ವಿದ್ಯಾರ್ಥಿಗಳು ಎದುರಿಸುವ ನಿಟ್ಟಿನಲ್ಲಿ ಕಲಿಕೆಗೆ ಪೂರಕವಾಗುವಂತೆ ಶಿಕ್ಷಕರ ಸಬಲೀಕರಣದ ಅವಶ್ಯಕತೆಯನ್ನು ಗುರ್ತಿಸಿ ಪ್ರತಿ ವರ್ಷ
ಎಲ್ಲಾ ಸೇವಾನಿರತ ಶಿಕ್ಷಕರಿಗೆ ಕನಿಷ್ಠ 5 ದಿನಗಳ ತರಬೇತಿಯನ್ನು ನೀಡಲಾಗುತ್ತದೆ. ಇದಕ್ಕಾಗಿ ಒಂದು ದಿನಕ್ಕೆ ಒಬ್ಬ ಶಿಕ್ಷಕರಿಗೆ ರೂ. 200/-ರಂತೆ ಖರ್ಚು ಭರಿಸಬಹುದಾಗಿದ್ದು, ಪ್ರತಿ ಶಿಕ್ಷಕರಿಗೆ 5 ದಿನಗಳ ತರಬೇತಿಯನ್ನು  ಆಯೋಜಿಸಲಾಗುತ್ತದೆ.  ಈ  ತರಬೇತಿಗಳನ್ನು ಜಿಲ್ಲಾ  ಶಿಕ್ಷಣ  ತರಬೇತಿ  ಸಂಸ್ಥೆಗಳು,  ಡಿ.ಎಸ್.ಇ.ಆರ್.ಟಿಗಳ ಸಹಭಾಗಿತ್ವದೊಂದಿಗೆ ನೀಡಲಾಗುತ್ತದೆ.

ಎಮ್.ಎಮ್.ಇ.ಆರ್.(ಮ್ಯಾನೇಜ್ಮೆಂಟ್,ಮಾನಿಟರಿಂಗ್. ಇವ್ಯಾಲ್ಯೂಯೇಷನ್ ಅಂಡ್ ರಿಸರ್ಚ್)


ಈ ಮೇಲಿನ ಎಲ್ಲಾ ಕಾರ್ಯಕ್ರಮಗಳ ಯಶಸ್ವಿ ಯೋಜನೆ, ಅನುಷ್ಠಾನ,  ಅನುಪಾಲನೆ  ಹಾಗು  ಮೌಲ್ಯಮಾಪನಗಳಿಗಾಗಿ ಒಟ್ಟಾರೆ ಆಯವ್ಯಯದ ಪ್ರತಿಶತ 1.5 ನ್ನು ನೀಡಲಾಗುವುದು. ಈ ಅನುದಾನದಲ್ಲಿ ರಾಜ್ಯ ಕಛೇರಿ ನಿರ್ವಹಣೆ, ಜಿಲ್ಲಾ ಕಛೇರಿಗಳ ನಿರ್ವಹಣೆಯು ಸೇರಿದ್ದು ಮೌಲ್ಯಮಾಪನ ಹಾಗು ಸಂಶೋಧನೆಗಳಿಗೆ ಅನುದಾನದ  ಕೊರತೆ  ಉಂಟಾಗುತ್ತದೆ.  ಆದ್ದರಿಂದ  ಕೇಂದ್ರ ಸರ್ಕಾರಕ್ಕೆ ಎಲ್ಲಾ ಕಾರ್ಯಕ್ರಮಗಳ ಒಟ್ಟಾರೆ ಹಣಕಾಸಿನ ಗಾತ್ರದ ಮೇಲೆ ಹೆಚ್ಚುವರಿಯಾಗಿ 06 ಪ್ರತಿಶತ ಅನುದಾನವನ್ನು ಎಮ್.ಎಮ್.ಇ.ಆರ್ಗೆ ನೀಡುವಂತೆ ರಾಜ್ಯಸರ್ಕಾರವು ಪ್ರಸ್ತಾವನೆ ಕಳುಹಿಸಬೇಕಾಗಿದೆ. ಪ್ರೌಢಶಿಕ್ಷಣ   ಸಾರ್ವತ್ರೀಕರಣಕ್ಕೆ   ಪೂರಕವಾಗಿ   ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ ಕಾರ್ಯಕ್ರಮದೊಂದಿಗೆ ಇನ್ನೂ ಕೆಲವು ಹೆಚ್ಚುವರಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲಾಗಿದ್ದು ಅವುಗಳ ವಿವರ ಈ ಕೆಳಗೆ ನೀಡಲಾಗಿದೆ.

1.     ಮಾಡಲ್ ಶಾಲೆಗಳು:-
ರಾಷ್ಟ್ರದ ಎಲ್ಲಾ ಶೈಕ್ಷಣಿಕವಾಗಿ ಹಿಂದುಳಿದ ಬ್ಲಾಕು(ಇಬಿಬಿ)ಗಳಲ್ಲಿ ಕೇಂದ್ರೀಯ ವಿದ್ಯಾಲಯ ಮಾದರಿಯಲ್ಲಿ ಮಾದರಿ ಶಾಲೆಗಳನ್ನು ಪ್ರಾರಂಭಿಸುವುದು.  ರಾಷ್ಟ್ರದಲ್ಲಿ  ಇಂತಹ  6000  ಶಾಲೆಗಳಿಗೆ ಮಂಜೂರಾತಿ ದೊರಕಿದ್ದು, ಕರ್ನಾಟಕ ರಾಜ್ಯಕ್ಕೆ ಇಂತಹ 74 ಶಾಲೆಗಳು ಮಂಜೂರಾಗಿರುತ್ತವೆ. ಈ ಶಾಲೆಗಳಲ್ಲಿ 6 ರಿಂದ 10 ನೇ ತರಗತಿಯವರೆಗೆ ಕಲಿಯಲು ಅವಕಾಶವಿದ್ದು ಇವುಗಳಿಗೆ ಪೂರ್ಣ ಮಟ್ಟದ ಸೌಲಭ್ಯಗಳನ್ನು ಕೇಂದ್ರೀಯ ವಿದ್ಯಾಲಯ/ನವೋದಯ ಶಾಲೆಗಳ ಮಾದರಿಯಲ್ಲಿ ನೀಡಲಾಗುತ್ತದೆ.
logoblog

Thanks for reading ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ - ಒಂದು ಪಕ್ಷಿನೋಟ

Previous
« Prev Post

No comments:

Post a comment