Goslink

Goslink is providing you latest news, articles, reviews.

Thursday, 24 December 2020

ಶಾಲಾ ಸ್ಪಂದನ

  Govt Orders Link       Thursday, 24 December 2020

                                                      

      ಶಾಲಾ ಸ್ಪಂದನ

                                                                                                           - ಎನ್.ಹೆಚ್.ನಾಗೂರ
1. ಕಾರ್ಯಕ್ರಮದ ಹಿನ್ನೆಲೆ: ಇದೊಂದು ವಿನೂತನ ಶೈಕ್ಷಣಿಕ ಕಾರ್ಯಕ್ರಮ. ನಾವು ಈಗಾಗಲೇ ಜನಸ್ಪಂದನ ಮತ್ತು ಗುರುಸ್ಪಂದನ ಕಾರ್ಯಕ್ರಮಗಳ ಬಗ್ಗೆ ಕೇಳಿದ್ದೇವೆ ಹಾಗೂ ತಿಳಿದಿದ್ದೇವೆ. ಇದು ಶಾಲೆಯಲ್ಲಿರುವ ಮಗುವಿಗೆ ಮತ್ತು ಶಿಕ್ಷಕರಿಗೆ ಇರುವ ಶೈಕ್ಷಣಿಕ ಸಮಸ್ಯೆಗಳಿಗೆ ಪರಿಹಾರವನ್ನು ಪೂರೈಸುವ ಒಂದು ಪ್ರಯತ್ನ. ಅಂದರೆ  ಈಗಾಗಲೇ ಸಾರ್ವಜನಿಕ ಶಿಕ್ಷಣ ಇಲಾಖೆಗೆ ಡಿಪಿಇಪಿ ಮತ್ತು ಸರ್ವಶಿಕ್ಷಣ ಅಭಿಯಾನದ ಮೂಲಕ ಶಿಕ್ಷಕರಿಗೆ ಹಲವಾರು ತರಬೇತಿಗಳನ್ನು ನಡೆಸಿ ಅವರ ಬೋಧನಾ ಸಾಮಥ್ರ್ಯವನ್ನು ಬಲವರ್ಧನೆ ಮಾಡಲಾಗಿದೆ ಹಾಗೂ ಮೂಲಭೂತ ಸೌಲಭ್ಯಗಳನ್ನು ಒದಗಿಸಿದೆ. ಆದರೆ ಇನ್ನೂ ನಮ್ಮ ಶಾಲೆಗಳಲ್ಲಿ ಕಂಡು ಬರುವ ಕೊರತೆಗಳಿಗೆ ಶಿಕ್ಷಕರು ನಿರೀಕ್ಷಿತ ಮಟ್ಟದಲ್ಲಿ ಉತ್ತಮವಾಗಿ ಮಕ್ಕಳಿಗೆ ಪಾಠಬೋಧನೆ ಮಾಡುವಲ್ಲಿ ಹಿಂದುಳಿದಿದ್ದಾರೆ. ಅದಕ್ಕೆ ಸಾಕಷ್ಟು ಪ್ರಮಾಣದಲ್ಲಿ ಶಾಲೆಗೆ ಮೇಲ್ವಿಚಾರಣಾಧಿಕಾರಿಗಳಿಂದ ಫಲಪ್ರದ ಸಂದರ್ಶನಗಳು ಆಗದಿರುವುದೇ ಕಾರಣವಾಗಿದೆ ಎನ್ನಬಹುದು. 


2. ಕಾರ್ಯಕ್ರಮದ ಪ್ರಮುಖ ಧ್ಯೇಯೋದ್ದೇಶಗಳು: 1. ಎಲ್ಲ ಮೇಲ್ವಿಚಾರಣಾಧಿಕಾರಿಗಳು ಶಾಲೆಗಳಿಗೆ ನಿರಂತರ ಸಂದರ್ಶನಗಳನ್ನು ನೀಡುವಂತೆ ಮಾಡುವುದು. 2. ಇಲಾಖೆಯ ಶೈಕ್ಷಣಿಕ  ಕಾರ್ಯಕ್ರಮಗಳನ್ನು  ಅನುಷ್ಠಾನಗೊಳಿಸಿರುವುದನ್ನು ಪರಿಶೀಲಿಸುವಂತೆ ಮಾಡುವುದು. 3. ಸಂದರ್ಶನಾಧಿಕಾರಿಗಳು ಮಾರ್ಗದರ್ಶನದ ಪೂರ್ವಸಿದ್ಧತೆಗಳೊಂದಿಗೆ ಶಾಲೆಗೆ ಭೇಟಿ ನೀಡುವಂತೆ ಮಾಡುವುದು. 4. ಶಿಕ್ಷಕರು ಪಾಠ ಬೋಧನೆಯನ್ನು ವ್ಯವಸ್ಥಿತವಾಗಿ ಮಾಡುವಂತೆ ಮಾಡಲು ಮನವೊಲಿಸುವುದು. 5. ಮಗುವಿಗೆ ಗುಣಾತ್ಮಕ ಶಿಕ್ಷಣ ಸಿಗುವಂತೆ ನೋಡಿಕೊಳ್ಳುವುದು. 6. ನಿರಂತರ ಸಂದರ್ಶನಗಳಲ್ಲಿ ನೀಡಿದ ಸಲಹೆ-ಸೂಚನೆಗಳಿಗೆ ಅನುಪಾಲನೆ ಮಾಡುವಂತೆ ನೋಡಿಕೊಳ್ಳುವುದು. 7. ಕಲಿಕೆಯಲ್ಲಿ ಹಿಂದುಳಿದ ಮಗುವಿನ ವಿಶೇಷ ಕಾಳಜಿ (ಮಗುವಿನ ಹೆಸರು ಸಹಿತ) ಮಾಡುವಂತೆ  ನೋಡಿಕೊಳ್ಳುವುದು. 8. ಶಿಕ್ಷಕರಿಗೆ ಇರುವ ಬೋಧನಾ ಆತಂಕಗಳಿಗೆ ಉತ್ತಮ ಸಲಹೆ ಮಾರ್ಗದರ್ಶನಗಳನ್ನು ಒದಗಿಸುವುದು. 


3. ಕಾರ್ಯಕ್ರಮದ ಸ್ವರೂಪ: ತಾಲೂಕು ಹಂತದಲ್ಲಿರುವ ಎಲ್ಲ ಮೇಲುಸ್ತುವಾರಿ ಮಾಡುವ ಅಧಿಕಾರಿಗಳು ಮತ್ತು ತಂಡದವರು ವಾರದ ಎರಡು ದಿನಗಳು ಅಂದರೆ ಮಂಗಳವಾರ ಮತ್ತು ಶುಕ್ರವಾರಗಳಂದು ಎಲ್ಲರೂ  (ಬಿ.ಇ.ಓ., ಬಿ.ಆರ್.ಪಿ., ಸಿ.ಆರ್.ಪಿ.,  ಐ.ಇ.ಆರ್.ಟಿ., ಬಿಜಿ.ಸಿ.ಗಳು) ತಮ್ಮ ವಲಯಗಳ ವ್ಯಾಪ್ತಿಯಲ್ಲಿ ಬರುವ ಒಂದು ಶಾಲೆಗೆ ಇಡೀ ಒಂದು ದಿನ ಸಂದರ್ಶನ ನೀಡಿ ಅಲ್ಲಿನ ಶೈಕ್ಷಣಿಕ ಚಟುವಟಿಕೆಗಳನ್ನು ಪರಿಶೀಲಿಸುವುದು ಮತ್ತು ಮಕ್ಕಳ ಹಾಗೂ ಶಿಕ್ಷಕರ ಶೈಕ್ಷಣಿಕ ಆತಂಕಗಳಿಗೆ ಸ್ಪಂದಿಸಿ ಮಕ್ಕಳ ಕಲಿಕಾ ಕಂದರಗಳನ್ನು ಕಡಿಮೆ ಮಾಡುವುದು ಹಾಗೂ ಬೋಧಕರ ಬೋಧನಾ ದೋಷಗಳನ್ನು ಸರಿಪಡಿಸುವುದು. 

4 ಈ ಕಾರ್ಯಕ್ರಮದಿಂದ ಯಾರಿಗೇನು ಲಾಭ? 
* ಎಲ್ಲ ವ್ಯಾಪ್ತಿಗಳ ಮೇಲ್ವಿಚಾರಣಾಧಿಕಾರಿಗಳಿಗೆ ತಮ್ಮ ಶಾಲೆಗಳ ಸಮಗ್ರ ಮಾಹಿತಿಯೊಂದಿಗಿರಲು ಪೂರಕ. * ಪಾಲಕ ಸಮುದಾಯಕ್ಕೆ ಧೈರ್ಯದಿಂದ ಶಾಲೆಯ ಪ್ರಗತಿನೋಟವನ್ನು ಒಪ್ಪಿಸಲು ಸಹಕಾರಿ. * ಬಾಲಕ, ಪಾಲಕ, ಶಿಕ್ಷಕ, ಪೋಷಕ ಮತ್ತು  ಮೇಲ್ವಿಚಾರಕರುಗಳಿಗೆ ಉತ್ತಮ ಸಹಸಂಬಂಧವನ್ನು ನೀಡುವುದು. * ತಾಲೂಕಿನಲ್ಲಿ ಉತ್ತಮ ಶೈಕ್ಷಣಿಕ ನೆಲಗಟ್ಟನ್ನು ಕಂಡುಕೊಳ್ಳಲು ಈ ಕಾರ್ಯಕ್ರಮವು ಸಂಪೂರ್ಣ ಸಹಕಾರಿ. 

5. ಶಾಲೆಗೆ ಯಾವಾಗ ಸಂದರ್ಶಿಸಬೇಕು? 
ತಾಲೂಕಿನಲ್ಲಿರುವ ಎಲ್ಲ ಮೇ ಲ್ವಿಚಾರಣಾಧಿಕಾರಿಗಳು ಶಾಲೆ ಆರಂಭವಾಗುವ ಮುನ್ನವೇ ಅಂದರೆ ಬೆಳಿಗ್ಗೆ 9.30ಕ್ಕೆ ಶಾಲೆಯಲ್ಲಿರಬೇಕು. ಆ ದಿನ ಪೂರ್ಣ ಅದೇ ಶಾಲೆಯಲ್ಲಿದ್ದು ಶೈಕ್ಷಣಿಕ ಮಾರ್ಗದರ್ಶನ/ಮಾದರಿ ಪಾಠ ಬೋಧನೆ ಮಾಡಿ ಸಾಯಂಕಾಲ 5.30ಕ್ಕೆ ಹಿಂದಿರುಗಬೇಕು.  

6. ಶಾಲೆಯಲ್ಲಿ ಏನೇನು ನೋಡಬೇಕು?
ಮಕ್ಕಳು ಮಾಡುವ ಶಾಲೆಯ ಆವರಣ ಸಫಾಯಿ ಕಾರ್ಯವನ್ನು, ಶಾಲೆ ಪ್ರಾರಂಭದ ವೇಳೆಯನ್ನು ಗಮನಿಸುವುದು. ಶಿಕ್ಷಕರು ಶಾಲೆಗೆ ಬರುತ್ತಿರುವ ವೇಳೆಯನ್ನು ಅವಲೋಕಿಸುವುದು ಮತ್ತು ದಾಖಲಿಸುವುದು. ಬೆಳಗಿನ ಅವಧಿಯಲ್ಲಿ ಮಾಡುತ್ತಿರುವ ಪ್ರಾರ್ಥನೆಯನ್ನು (ಪ್ರಾರ್ಥನೆಗೆ ಹಾಜರಿರುವ ಮಕ್ಕಳ ಸಂಖ್ಯೆ ತೆಗೆದುಕೊಳ್ಳುವುದು. ಮಕ್ಕಳು ಹಾಡುವ ನಾಡಗೀತೆಯನ್ನು, ರಾಷ್ಟ್ರಗೀತೆಯನ್ನು, ಮಕ್ಕಳು ಹೇಳುವ ಪಂಚಾಂಗ ಪಠಣವನ್ನು, ಅಮರವಾಣಿಯನ್ನು ನಾಳೆಯ ಕಾರ್ಯ ಹಂಚಿಕೆಯನ್ನು, ಸುದ್ದಿ ಸಾರಾಂಶವನ್ನು, ಮುಂದಿನ ಅಂಶಗಳನ್ನು ಗಮನಿಸುವುದು) ಮಾಡುವ ವಿಧಾನವನ್ನು ಅವಲೋಕಿಸುವುದು ಈ ಹಂತದಲ್ಲಿರುವ ಸೂಕ್ಷ್ಮ ಲೋಪಗಳಿಗೆ ಸಲಹೆ ನೀಡುವುದು. ಶಿಕ್ಷಕರು ಪಾಠ ಬೋಧನೆಗಾಗಿ ಮಾಡುವ ವರ್ಗ ಪ್ರವೇಶದ ಸಿದ್ಧತೆಯನ್ನು ಅವಲೋಕಿಸುವುದು. (ವರ್ಗದ ಹಾಜರಿ ಪುಸ್ತಕ ತೆಗೆದುಕೊಳ್ಳವುದು, ತಮ್ಮ ದಿನಚರಿ, ಪಾಠದ ಬೋಧನೋಪಕರಣಗಳನ್ನು ತೆಗೆದುಕೊಂಡು ಹೋಗುವುದನ್ನು ನೋಡುವುದು) ತರಗತಿ ವೀಕ್ಷಣೆ ಮಾಡುವುದು ಇಲ್ಲಿ ಎಲ್ಲ ತರಗತಿಗಳ ಎಲ್ಲ ಶಿಕ್ಷಕರ ಒಂದೊಂದು ಅವಧಿಯ ಪಾಠ ಬೋಧನೆಯ ವೀಕ್ಷಣೆ ಮಾಡಿ ಅಲ್ಲಿ ಅವರು ಮಾಡುವ ಉತ್ತಮ ಬೋಧನಾಂಶಗಳನ್ನು ದಾಖಲಿಸುವುದು. ನಿಮಗೆ ಕಾಣುವ ಬೋಧನಾ ಕೊರತೆಗಳನ್ನು ದಾಖಲಿಸಿಕೊಳ್ಳುವುದು. ಸಾಧ್ಯವಾದರೆ ಶಿಕ್ಷಕರು ಎದುರಿಸುವ ಸಮಸ್ಯೆಗೆ ಅಲ್ಲಿಯೇ  ಮಾದರಿಯಾಗಿ ಬೋಧನೆಯನ್ನು ನೀಡುವುದು. ಮಕ್ಕಳು ಕಲಿಕಾ ಚಟುವಟಿಕೆಯಲ್ಲಿ ಪಾಲ್ಗೊಳ್ಳ್ಳುವುದನ್ನು ಅವಲೋಕಿಸುವುದು. ಈಗಾಗಲೇ ಅವರು ಮಕ್ಕಳಿಗೆ ನೀಡಿದ ಗೃಹ ಪಾಠಗಳನ್ನು ನೋಡುವುದು. ಪ್ರತಿ ತರಗತಿಯಲ್ಲಿ ಕಲಿಕೆಯಲ್ಲಿ ಹಿಂದುಳಿದ ಮಕ್ಕಳನ್ನು ಗುರುತಿಸಿ ಅವರ ಹೆಸರುಗಳನ್ನು ಅವರು ಹಿಂದುಳಿದ ಕಲಿಕಾ ವಿಷಯಗಳನ್ನು ದಾಖಲಿಸಿಕೊಳ್ಳುವುದು. ಈ ಪಟ್ಟಿಯನ್ನು ದಿನದ ಕೊನೆಗೆ ಮು.ಗು.ಗಳಿಗೆ ಕೊಟ್ಟು ಅನುಪಾಲನಾ ವರದಿ ನಿರ್ವಹಣೆ ಮಾಡಲು ತಿಳಿಸುವುದು. ಶಿಕ್ಷಕರು ಬರೆದಿರುವ ದಿನಚರಿ, ಅಂದಾಜು ಪಟ್ಟಿಗಳನ್ನು ಪರಿಶೀಲಿಸುವುದು. 

ಮಧ್ಯಾಹ್ನದ ಉಪಹಾರಕ್ಕಾಗಿ ನೀಡಿದ ಮಕ್ಕಳ ಸಂಖ್ಯೆಯನ್ನು ಪರಿಶೀಲಿಸುವುದು. ಅಂದು ನೀಡಿದ ಆಹಾರ ಮತ್ತು ಅದರ ಗುಣಮಟ್ಟವನ್ನು ಪರಿಶೀಲನೆ ಮಾಡುವುದು. ಅಡುಗೆ ಮನೆಯ ಸ್ವಚ್ಛತೆಯನ್ನು, ಬಾಂಡೆಗಳ ಸ್ವಚ್ಛತೆಯನ್ನು, ಬಳಸುವ ತರಕಾರಿ, ದಾನ್ಯಗಳ ಗುಣಮಟ್ಟವನ್ನು ಪರಿಶೀಲನೆ ಮಾಡುವುದು. ರೇಶನ್ ಶಿಲ್ಕು ಪುಸ್ತಕಗಳನ್ನು ಪರಿಶೀಲಿಸಿ, ಶಾಲೆಯಲ್ಲಿರುವ ರೇಷನ್ ಪರಿಶೀಲನೆ ಮಾಡುವುದು. ನೈಜತೆಯನ್ನು ದಾಖಲಿಸುವುದು. ಅಡುಗೆಯವರ ಹೆಸರುಗಳನ್ನು ದಾಖಲಿಸಿಕೊಳ್ಳುವುದು.

ನಲಿ-ಕಲಿತರಗತಿಗಳಲ್ಲಿ ನಿರ್ವಹಿಸಲೇಬೇಕಾಗಿರುವದಾಖಲೆಗಳನ್ನು (ತಟ್ಟೆಗಳಲ್ಲಿ ಮಕ್ಕಳ ವಿಂಗಡಣೆ, ತರಗತಿ ವಿಷಯಗಳನ್ವಯ ಕಲಿಕಾ ಏಣಿಗಳ ಅನಾವರಣ ಕಾಡರ್ುಗಳ ನಿರ್ವಹಣೆ ಅವುಗಳ ಬಳಕೆ ಮಕ್ಕಳು ಸ್ವಯಂಬಳಕೆ ಮತ್ತು ಕಲಿಕೆಯನ್ನು  ಅವಲೋಕಿಸುವುದು. ಕಲಿಕಾ ಚಪ್ಪರ (ಹಂದರ) ಹಾಕಿರುವುದನ್ನು ನೋಡುವುದು, ದಾಖಲಿಸುವುದು. ಮಕ್ಕಳ ಪ್ರಗತಿ ನೋಟದಲ್ಲಿ ದಾಖಲಿಸಿರುವಂತೆ ಅವರಲ್ಲಿ ಕಲಿಕೆ ಆಗಿರುವುದನ್ನು ಮಕ್ಕಳೊಂದಿಗೆ ಖುದ್ದಾಗಿ ಮಾತನಾಡಿ ಅವರ ಭಾಷೆ, ಗಣಿತ ಮತ್ತು
ಪರಿಸರ ಅಧ್ಯಯನದ ವಿಷಯಗಳನ್ನು ಕೇಳಿ ಆನಂದಿಸಿ, ಪರಿಶೀಲನೆ ಮಾಡುವುದು. ಅಲ್ಲಿ ಬಳಸಿರುವ ಹಾಡುಗಳು, ಚಟುವಟಿಕೆಗಳನ್ನು ಅವಲೋಕಿಸುವುದು, ಕೇಳುವುದು. ಇತರೆ (3 ರಿಂದ 7)ತರಗತಿಯಲ್ಲಿ ಪ್ರಗತಿ ಪತ್ರದಲ್ಲಿ ಭತರ್ಿ ಮಾಡಿರುವಂತೆ ಕಲಿಕೆ ಆಗಿರುವುದನ್ನು ಮಕ್ಕಳನ್ನು ಕೇಳಿ ಪರಿಶೀಲನೆ ನಡೆಸುವುದು. ಭಾಗ-ಬಿ.ನಲ್ಲಿ ಯೋಜನಾ ಕಾರ್ಯಗಳನ್ನು ನಿರ್ವಹಿಸಿರುವುದನ್ನು ಪರಿಶೀಲನೆ ಮಾಡುವುದು. ಮಕ್ಕಳ ವೈಯಕ್ತಿಕ ವಿವರ(ಡೈರಿ)ಭರ್ತಿ ಮಾಡಿರುವುದನ್ನು ನೋಡಿ ಮಕ್ಕಳಲ್ಲಿ ಆಗಿರುವ ಬದಲಾವಣೆಯನ್ನು ಅವಲೋಕಿಸುವುದು. ಕೇಳಿ-ಕಲಿ ಕಾರ್ಯಕ್ರಮಗಳನ್ನು (ಚುಕ್ಕಿ-ಚಿನ್ನ, ಚಿಣ್ಣರ ಚುಕ್ಕಿ), ಮಕ್ಕಳಿಗೆ ನಿಗದಿಯಾಗಿರುವ ಅವಧಿಯಲ್ಲಿ ಕೇಳಿಸಿ ಉಜಳಣೆ ಮಾಡುತ್ತಿರುವುದನ್ನು ಮತ್ತು ದಾಖಲಿಸಿರುವುದನ್ನು ಪರಿಶೀಲನೆ ಮಾಡುವುದು. ಘಟಕ ಪರೀಕ್ಷೆ, ಕಿರುಪರೀಕ್ಷೆ ಮತ್ತು ಸೆಮಿಸ್ಟರ್ 1 ರ ಪ್ರಶ್ನೆಪತ್ರಿಕೆ ಮತ್ತು ತಿದ್ದಿದ ಉತ್ತರಪತ್ರಿಕೆಗಳನ್ನು ಪರಿಶೀಲನೆ  ಮಾಡುವುದು.  ಈ  ಪರೀಕ್ಷೆಗಳ  ಕ್ರೋಢೀಕೃತ ಅಂಕವಹಿಗಳನ್ನು ತರಗತಿವಾರು, ವಿಷಯವಾರು ನಿರ್ವಹಿಸಿರುವುದನ್ನು ಪರಿಶೀಲನೆ ಮಾಡುವುದು. ಈ ಅಂಕವಹಿಗಳನುಸಾರ ಮಕ್ಕಳ ಪ್ರಗತಿ ಪತ್ರದಲ್ಲಿ ದಾಖಲಿಸಿರುವುದನ್ನು ತಾಳೆ ನೋಡುವುದು. ನಿರಂತರ ಮೌಲ್ಯಮಾಪನವಿರುವ (1 ರಿಂದ 4ನೇ) ತರಗತಿಗಳಲ್ಲಿ ಸಾಮಥ್ರ್ಯ ಸಾಧನೆ ಆಗಿರುವುದಕ್ಕೆ ಮಕ್ಕಳಿಗೆ ಕೇಳಲಾದ ಪ್ರಶ್ನೆಗಳು ನೀಡಲಾದ ಅಂಶಗಳ ಲಿಖಿತ ದಾಖಲೆಗಳನ್ನು ಇಟ್ಟಿರುವುದನ್ನು ಪರಿಶೀಲನೆ ಮಾಡುವದು. ಓದುವೆ ನಾನು ಕಾರ್ಯಕ್ರಮದ ಉತ್ತಮ ಅನುಷ್ಠಾನ ಮಾಡುತ್ತಿರುವ ಬಗೆಗೆ ಪರಿಶೀಲನೆ ಮಾಡುವುದು. ಓದುವೆ ನಾನು ಕಾರ್ಯಕ್ರಮಕ್ಕೆ ಒಳಪಟ್ಟಿರುವ ಮಕ್ಕಳ ಪಟ್ಟಿ ಪಡೆದು ಅವರಲ್ಲಿ ಒ.ಎಲ್.ಡಬ್ಲ್ಯೂ  ಹಂತಗಳಲ್ಲಿರುವವರನ್ನು  ಗುರುತಿಸಿಕೊಂಡು ಆಗಿರುವ ಪ್ರಗತಿಯನ್ನು ಪರಿಶೀಲನೆ ಮಾಡುವುದು. ಈ ಮಕ್ಕಳ ಪ್ರಗತಿ ಬಗ್ಗೆ ಇಟ್ಟಿರುವ ದಾಖಲೆಗಳನ್ನು ಪರಿಶೀಲನೆ ಮಾಡುವುದು. ಗ್ರೇಡ್ ಬಿ.ದಿಂದ ಎ.ಗ್ರೇಡ್ಗೆ ಬಂದಿರುವ ಮಕ್ಕಳ ಪಟ್ಟಿಯನ್ನು ಪಡೆದು ಅವರು ನಿಜವಾಗಿಯೂ ಪ್ರಗತಿ ಸಾಧಿಸಿರುವುದಕ್ಕೆ ಪುನಃ ಕಲಿಕಾ ಮೌಲ್ಯಮಾಪನ ಮಾಡಿ  ಖಚಿತಪಡಿಸಿಕೊಳ್ಳುವುದು. ಈ ಎಲ್ಲಾ ಶೈಕ್ಷಣಿಕ ಕಾರ್ಯಕ್ರಮಗಳನ್ನು ಪರಿಶೀಲನೆ ನಡೆಸಿ ಪ್ರತಿ ಹಂತದಲ್ಲಿ ಸಂದರ್ಶಕರು ಕಂಡಿರುವ ಅಂಶಗಳನ್ನು ನಿಖರವಾಗಿ ದಾಖಲಿಸುವುದು.

ಶಾಲೆಯಲ್ಲಿ ನಡೆದಿರುವ ಎಸ್.ಎಸ್.ಎ.ದಿಂದ ಮತ್ತು ಇತರೆ  ಯೋಜನೆಗಳಿಂದ  ನಡೆದ  ಸಿವಿಲ್  ಕಾಮಗಾರಿಗಳ ಪ್ರಗತಿಯನ್ನು ದಾಖಲಿಸುವುದು. ಎಸ್.ಡಿ.ಎಂ.ಸಿ ರಚನೆಗಾಗಿ ಅವಧಿ ಪೂರ್ಣಗೊಳಿಸಿರುವನ್ನು ಪರಿಶೀಲಿಸಿ, ದಾಖಲಿಸಿ, ವರದಿ ಮಾಡುವುದು. ಶಾಲೆಯಲ್ಲಿರುವ ಉತ್ತಮ ಕೊಠಡಿಗಳ ಸಂಖ್ಯೆ, ಪ್ರಮುಖ ದುರಸ್ತಿ ಇರುವ ಕೊಠಡಿಗಳ ಸಂಖ್ಯೆ, ಇನ್ನೂ ಬೇಡಿಕೆ ಇರುವ ಕೊಠಡಿಗಳ ಸಂಖ್ಯೆಗಳನ್ನು ದಾಖಲಿಸಿ ವರದಿ ಮಾಡುವುದು. ಹಿರಿಯ ಪ್ರಾಥಮಿಕ ಶಾಲೆಯಾಗಿದ್ದಲ್ಲಿ 100 ಮಕ್ಕಳಿರುವಲ್ಲಿ ವಿಜ್ಞಾನ ಶಿಕ್ಷಕರು,  200 ಮಕ್ಕಳಿರುವಲ್ಲಿ ಇಂಗ್ಲಿಷ್ ಶಿಕ್ಷಕರು ಮತ್ತು 300 ಮಕ್ಕಳಿರುವಲ್ಲಿ ಹಿಂದಿ ಶಿಕ್ಷಕರು ಕಾರ್ಯನಿರ್ವಹಿಸುತ್ತಿರುವ ಬಗೆಗೆ ಪರಿಶೀಲಿಸಿ ವರದಿ ಮಾಡುವುದು. ಶೈಕ್ಷಣಿಕವಾಗಿ ವಿಶೇಷವಾಗಿ ಮಾಡಿರುವ ಸಾಧನೆ ಮತ್ತು ಹಾಕಿಕೊಂಡಿರುವ ವಿಶೇಷ ಶೈಕ್ಷಣಿಕ ಕಾರ್ಯಕ್ರಮಗಳ ಬಗೆಗೆ ದಾಖಲಿಸಿ ವರದಿ ಮಾಡುವುದು. ಡ್ರಾಪೌಟ್ ಮಕ್ಕಳ ದಾಖಲಾತಿ ಮತ್ತು ಕಲಿಕೆಯನ್ನು ಪರಿಶೀಲಿಸಿ ವರದಿ ಮಾಡುವುದು. 

7. ದಿನದ ಕೊನೆಗೆ ಏನು ಮಾಡಬೇಕು?

ದಿನದ ಕೊನೆಗೆ ಎಲ್ಲ ಶಿಕ್ಷಕರ ಸಭೆಯನ್ನು ಕರೆದು ತಾವು ಇಡೀ ದಿನದಲ್ಲಿ ವಿವಿಧ ಹಂತಗಳಲ್ಲಿ ಕಂಡಿರುವ ಅಂಶಗಳನ್ನು ತರಗತಿವಾರು, ವಿಷಯವಾರು ಶಿಕ್ಷಕರವಾರು ಇರುವ ಉತ್ತಮ ಅಂಶಗಳನ್ನು ಮತ್ತು ಆಗುತ್ತಿರುವ ಲೋಪಗಳನ್ನು ಮುಕ್ತವಾಗಿ ಚರ್ಚಿಸಿ, ತಿಳಿಸಿ, ಅವರು ಮುಂಬರುವ ದಿನಗಳಲ್ಲಿ ಸುಧಾರಣೆ ಮಾಡಿಕೊಳ್ಳಲು ಸಲಹೆ ಮತ್ತು ಸೂಚನೆಗಳನ್ನು ನೀಡುವುದು. ತರಗತಿವಾರು ಕಲಿಕೆಯಲ್ಲಿ ಅತೀ ಹಿಂದುಳಿದ ಮಕ್ಕಳ ಪಟ್ಟಿ, ಅವರು ಹಿಂದುಳಿದ ವಿಷಯಗಳನ್ನು ಬರೆದು ಒಂದು ಪಟ್ಟಿಯನ್ನು ಮು.ಗು.ಗಳಿಗೆ ನೀಡಿ ಅನುಪಾಲನಾ ವರದಿ ನೀಡಲು ತಿಳಿಸಿ ಸ್ವೀಕೃತಿ ಪಡೆದುಕೊಳ್ಳುವುದು. ತಿಂಗಳಿನ 2ನೇ ಸಂದರ್ಶನ ಆ ಶಾಲೆಗೆ ಆಗಿದ್ದಲ್ಲಿ ಕಲಿಕೆಯಲ್ಲಿ ಹಿಂದುಳಿದಿರುವ ತಂದೆ ತಾಯಿಗಳ ಮತ್ತು ಪೋಷಕರ ಸಭೆಯನ್ನು ಕರೆದು ಅವರ ಕಲಿಕೆ ಸುಧಾರಣೆಗೆ ಸಹಕರಿಸಲು ಕೋರುವುದು. ತಿಂಗಳಿನ ಕೊನೆಯಲ್ಲಿ ಎಸ್.ಡಿ.ಎಂ.ಸಿ ಸದಸ್ಯರ ಸಭೆ ಕರೆಯುವುದು ಅಲ್ಲಿ ಶಾಲೆಯ ಶೈಕ್ಷಣಿಕ ಪ್ರಗತಿ ಮತ್ತು ಕೊರತೆಗಳನ್ನು ಪೂರ್ಣಗೊಳಿಸುವ ಭರವಸೆಯನ್ನು ನೀಡುವುದು.

ಚಿಕ್ಕ ಶಾಲೆಗಳಿಗೆ ಅಂದರೆ ಮಕ್ಕಳು ಮತ್ತು ಶಿಕ್ಷಕರ ಸಂಖ್ಯೆ ಕಡಿಮೆ ಇದ್ದಲ್ಲಿ ಶಾಲಾ ಭೇಟಿಯನ್ನು ಒಬ್ಬರೇ ಅಧಿಕಾರಿ ಮಾಡಬಹುದು. ಆದರೆ ದೊಡ್ಡ ಶಾಲೆಗಳಿಗೆ ಅಂದರೆ ಮಕ್ಕಳು ಮತ್ತು ಶಿಕ್ಷಕರ ಸಂಖ್ಯೆ ಹೆಚ್ಚಿದ್ದರೆ ಅಧಿಕಾರಿಗಳು 3-4ಜನರ ತಂಡದಲ್ಲಿ ಭೇಟಿ ನೀಡಬೇಕಾಗುತ್ತದೆ. 

8. ವರದಿ ಹೇಗೆ ಮಾಡಬೇಕು?
ಶಾಲಾ ಸ್ಪಂದನ ಕಾರ್ಯಕ್ರಮದ ಸಂದರ್ಶನ, ವರದಿ ಪುಟಗಳಲ್ಲಿ ಎಲ್ಲವನ್ನು ದಾಖಲಿಸಿ ಅಗತ್ಯ ಬಿದ್ದಲ್ಲಿ ಬೇರೆ ಪುಟಗಳಲ್ಲಿ ವಿವರವಾಗಿ ಬರೆದು ಒಂದು ಪ್ರತಿಯನ್ನು ಶಾಲೆಯ ಮು.ಗು.ಗಳಿಗೆ ನೀಡಿ ಒಂದು ಪ್ರತಿಯನ್ನು ಬಿ.ಇ.ಓ ರವರ ಹೆಸರಿಗೆ ತಮ್ಮ ಸಂದರ್ಶನದ  ಮಾರನೆಯ ದಿನವೇ ತಲುಪಿಸಲು ತಿಳಿಸಿದೆ.

logoblog

Thanks for reading ಶಾಲಾ ಸ್ಪಂದನ

Previous
« Prev Post

No comments:

Post a comment